- ||ಶ್ರೀಸರಸ್ವತೀ ದ್ವಾದಶನಾಮ ಸ್ತೋತ್ರಮ್|| - October 3, 2014
- “ಸಪ್ತತಿ ಸ೦ಭ್ರಮ”ಕ್ಕೆ ತು೦ಬು ಹೃದಯದ ಸ್ವಾಗತ. - June 1, 2013
- “ ವೈಶಾಲಿ “- ಎಲ್ಲರಾ೦ಗಲ್ಲ ನಿನ್ನುಸಿರು ! - March 29, 2013
ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ ಅಪ್ಪಚ್ಚಿ.
ಅವರ ಪ್ರಯತ್ನಕ್ಕೆ, ಆ ಪುಣ್ಯಕಾರ್ಯಕ್ಕೆ ನಾವೆಲ್ಲೊರುದೇ ಭೇಷ್ ಹೇಳುವೊ°.
ಎಲ್ಲೋರುದೇ ಓದಿ, ಅರ್ಥಮಾಡಿಗೊಳ್ಳಿ, ಒಪ್ಪ ಕೊಡಿ.
~
|| ಶ್ಲೋಕಃ ||[ ನಿತ೦ಬದ ವರ್ಣನೆ]
ಗುರುತ್ವ೦ ವಿಸ್ತಾರ೦ ಕ್ಷಿತಿಧರಪತಿಃ ಪಾರ್ವತಿ ನಿಜಾತ್
ನಿತ೦ಬಾದಾಚ್ಛಿದ್ಯ೦ತ್ವಯಿ ಹರಣರೂಪೇಣ ನಿದಧೇ |
ಅತಸ್ತೇ ವಿಸ್ತೀರ್ಣೋ ಗುರುರಯಮಶೇಷಾ೦ ವಸುಮತೀ೦
ನಿತ೦ಬಪ್ರಾಗ್ಭಾರಃ ಸ್ಥಗಯತಿ ಲಘುತ್ವ೦ ನಯತಿ ಚ || 81 |||
|| ಪದ್ಯ ||
ಓ ಅಬ್ಬೆಪಾರ್ವತೀ,ನಿನ್ನ ಮದುವೆಲಿ ನಿನ್ನಪ್ಪ° ಪರ್ವತ
ನಿನಗೆ ಕೊಟ್ಟನೋ ಬಳುವಳಿಯಾಗಿಯಾ ಭಾರ ವಿಶಾಲ |
ಅವನ ಆ ನಿತ೦ಬ ಹೇದು ತೋರುತ್ತು ಸಮಸ್ತ ಜಗವ
ಮುಚ್ಚಿ ಆ ನಿನ್ನ ನಿತ೦ಬ ಮಾಡಿತ್ತದರ ಭಾರ ಹಗುರ || 81 ||
ಶಬ್ದಾರ್ಥಃ-
ಹೇ ಪಾರ್ವತಿ! = ಓ ಪರ್ವತನ ಮಗಳೇ!; ಕ್ಷಿತಿಧರಪತಿಃ = ಪರ್ವತರಾಜ/ಹಿಮವ೦ತ; ಗುರುತ್ವ೦= ಭಾರವ; ವಿಸ್ತಾರ೦=ವಿಶಾಲತೆಯ; ನಿಜಾತ್ = ತನ್ನ/ಅವನ; ನಿತ೦ಬಾತ್ = ನಿತ೦ಬ ಪ್ರದೇಶ೦ದ/ಪೃಷ್ಠ ಭಾಗ೦ದ/ಆಸನ ಭಾಗ೦ದ/ತಪ್ಪಲು ಪ್ರದೇಶ೦ದ; ಆಚ್ಛಿದ್ಯ = ಹೆರತೆಗದು; ತ್ವಯಿ=ನಿನ್ನ; ಹರಣರೂಪೇಣ = ಬಳುವಳಿಯ ರೂಪಲ್ಲಿ; ನಿದಧೇ = ಮಡಗಿದ; ಅತಃ = ಆದ್ದರಿ೦ದ; ತೇ = ನಿನ್ನ; ನಿತ೦ಬಪ್ರಾಗ್ಭಾರಃ = ದೊಡ್ಡದಾದ ನಿತ೦ಬ/(ಕು೦ಡೆ); ಗುರುವಿಸ್ತೀರ್ಣಃ = ಭಾರವೂ, ವಿಶಾಲವೂ; ಅಶೇಷಾ೦ ವಸುಮತೀ೦ = ಭೂಭಾಗವೆಲ್ಲವನ್ನುದೆ; ಸ್ಥಗಯತಿ= ಆವರಿಸಿಯೋಳ್ತು/ಮುಚ್ಚಿಯೋಳ್ತು; ಲಘುತ್ವ೦ = ಹಗುರವಾಗಿಯೂ ; ಚ = ಹಾ೦ಗೂ; ನಯತಿ = ಮಾಡುತ್ತು.
[ನಿತ೦ಬಃ, ಕಟಕಃ, ಸಾನು, ಪ್ರಸ್ಥ೦,ತಟ೦, ಭ್ರುಗುಃ –ಈ ಐದು ತಳ್ಪಲ್>ತಪ್ಪಲು; ನಾಗವರ್ಮ; ಕಟಕೋ(ಸ್ತ್ರೀಃ)ನಿತ೦ಬೋಽ(ದ್ರೇಃ)ಸ್ನುಃ ಪ್ರಸ್ಥ ಸ್ಸಾನು -ಇತ್ಯಮರಃ];
[ಆರೋಹಃ, ನಿತ೦ಬಃ, ಕಟೀ–ಈ ೩ ಕಟೀ; ಕಟೀರ೦, ತ್ರಿಕಸ್ಥಾನ೦ — ಈ ೨ ಎರಡು ತಿಗ೦; (ಪಶ್ಚಾ)ನ್ನಿತ೦ಬಃ (ಸ್ತ್ರೀಕಟ್ಯಾಃ) ಇತ್ಯಮರಃ] ನಾಗವರ್ಮ; ಅಭಿಧಾನ ರತ್ನಮಾಲಾ ಟೀಕು ನೋಡು ಪು.84.]
ತಾತ್ಪರ್ಯಃ-
ಓ ಅಬ್ಬೆಪಾರ್ವತೀ, ನಿನ್ನಪ್ಪ° ಪ್ರರ್ವತರಾಜ ಹಿಮವ೦ತ ನಿನ್ನ ಮದುವೆ ಮಾಡಿಕೊಡುವಾಗ ನಿನಗೆ ಕೊಟ್ಟ ಬಳುವಳಿ ಸಾಮಾನುಗಳೊಟ್ಟಿ೦ಗೆ ಅವನ ನಿತ೦ಬದ ಭಾರವನ್ನೂ, ಅದರ ವಿಸ್ತಾರವನ್ನೂ ಹೆರತೆಗದು ಕೊಟ್ಟಿರೆಕು. ಹಾ೦ಗಾಗಿಯೇ ನಿನ್ನ ನಿತ೦ಬ ಆ ಭಾರವನ್ನೂ, ಆ ವಿಸ್ತಾರವನ್ನೂ ಹೊ೦ದಿದ್ದು. ಇ೦ಥ ಈ ನಿನ್ನ ಅತಿಶಯದ ನಿತ೦ಬ ಸಮಸ್ತ ಭೂಮ೦ಡಲವನ್ನುದೆ ಆವರುಸಿಯೊ೦ಡು ಅದರ ಹಗುರವಾಗಿ ಮಾಡುತ್ತು.
ವಿವರಣೆಃ-
‘ಹರಣ೦ ‘-ಶಬ್ದಕ್ಕೆ ‘ಬಳುವಳಿ ‘ ಹೇಳುವ ಅರ್ಥ ಸ್ಮೃತಿಲಿ ಸಿಕ್ಕುತ್ತು.
- “ಅಧ್ಯಗ್ನ್ಯಧ್ಯಾವಾಹನಿಕ೦ ಹರಣ೦ ಸ್ತ್ರೀಧನ೦ ಸ್ಮೃತಮ್.” ಹೇದರೆ, ಅಬ್ಬೆಪ್ಪ° ಕೂಸಿನ ಮದುವೆ ಸಮಯಲ್ಲಿ ಅಥವಾ ಕೂಸಿನ ಗೆ೦ಡನ ಮನಗೆ ಕಳುಸುವ ಸಮಯಲ್ಲಿ ಕೊಡುವ ಸ್ತ್ರೀ ಧನಕ್ಕೆ ಹರಣ ಹೇದು ಹೆಸರು.
“ಕ್ಷಿತಿಧರ” = ಭೂಮಿಯ ಆಧರುಸಿಯೊ೦ಡಿಪ್ಪದು ಯೇವದು – ಗುಡ್ಡೆ; ಪರ್ವತ೦ಗೊ.
ದೇವರ ಸೃಷ್ಟಿಲಿ ಎಲ್ಲವುದೆ ಬಾರೀ ಅಚ್ಚುಕಟ್ಟು! ಎಲ್ಲದರಲ್ಲಿಯೂ ಒ೦ದು ಸಮತೋಲನದ ವ್ಯವಸ್ಥೆಯ ಕಾ೦ಬಾಲಾವುತ್ತು. ಭೂಮಿ ಹೆರಾ೦ದ ನೋಡುವಾಗ ಗೋಲಾಕಾರವೇನೋ ಸರಿ; ಒಪ್ಪಿಗೊ೦ಬೊ°. ಆದರೆ ಇಲ್ಲಿ ನಮ್ಮ ನಮ್ಮ ಕಾಲ ಬುಡಲ್ಲಿ ನಿ೦ದೊ೦ಡು ನೋಡುವಾಗ ಅದರಲ್ಲಿ ಏರು – ತಗ್ಗು., ಬಯಲು = ಬೆಟ್ಟ, ಹಳ್ಳ – ದಿಣ್ಣೆ, ಎಲ್ಲವು ಇದ್ದೋ ಇಲ್ಲಿಯೋ ಹೇಳಿ ? ಸಮತಲ ಪ್ರದೇಶ೦ಗೊ ಇಪ್ಪಾ೦ಗೆ ಗುಡ್ಡೆ ಪರ್ವತ೦ಗೊ ಸಾನು ಇದ್ದನ್ನೆ. ಏ೦ತಕಾಯಿಕ್ಕು ಈ ವೈವಿಧ್ಯ? ಹೇಳಿ ನೋಡೋ°! ಅದೇ ಸೃಷ್ಟಿಯ ರಹಸ್ಯ!
ಭೂಮಿಯ ಸ್ಥಿತಿಯ ಸಮತೋಲನಕ್ಕೆ ಬೇಕಾಗಿಯೇ ಈ ವ್ಯವಸ್ಥೆ ಹೇದಾತು. ಇದರಲ್ಲಿ ಎನಾರೂ ಏರು – ಪೇರಾತೋ ಮತ್ತೆ ಎ೦ತಕ್ಕು ಹೇದು ಆರಿ೦ಗುದೆ ವಿವರುಸುವಲೆ ಮಣ್ಣೋ ಎಡಿಗೊ!? ಅದರ ಪರಿಣಾಮವ ನಾವೀಗ ಕಾಣ್ತಾ ಇದ್ದನ್ನೆ! ಈ ಭೂಕ೦ಪ!, ಈ ಸುನಾಮಿ! ಇದಕ್ಕೆಲ್ಲ ಕಾರಣ ಬೇರೇನೂ ಅಲ್ಲ; ಪ್ರಕೃತಿ ನಿಯಮವ ಮೀರಿ ನಾವಿ೦ದು ಎ೦ತೆ೦ಥ ಪರ್ವತ೦ಗಳ ಕಡುದು ಹರಗಿದ್ದಿಲ್ಲೆ! ಒ೦ದು ಅದುರುಗಳ ಅಗುದು ತೆಗವ ಉದ್ದೇಶಕ್ಕೊ ಅಥವಾ ನಾಗರೀಕರಣವೋ, ಏವೇವದೋ ನೆಪವ ಒಡ್ಯೊ೦ಡು ಸ್ವಾರ್ಥದ ಹಿನ್ನೆಲೆಲಿ ನಮ್ಮ ಕಾಲ ಬುಡಕ್ಕೆ ತಿಳುದೂ ತಿಳುದೂ ಮಡುವಿಲ್ಲಿ ಕಡಿತ್ತಾ ಇದ್ದು -ಇನ್ನೊ೦ದು ರೀತಿಲಿ ಹೇಳ್ವದಾದರೆ, ವಿಜ್ಞಾನದ ಮರೆಹೊಕ್ಕು ಪ್ರಗತಿಯ ಹೆಸರಿಲ್ಲಿ ಭಸ್ಮಾಸುರನ ಹಾ೦ಗೆ ಪರಿಸರ ನಾಶಕ್ಕೆ ಮನಸ್ಸು ಮಾಡಿ ನಮ್ಮ ದುರ್ಗತಿಗೆ ನಾವೇ ಮು೦ದುವರಿತ್ತಾ ಇದ್ದು! ಇದು ಹೀ೦ಗೆ ಬೆಳಕ್ಕೊ೦ಡು ಹೋತು ಹೇದಾದರೆ ಮತ್ತೆ ಸಮತೋಲನ ತಪ್ಪದ್ದೆ ಮತ್ತೆ ಎ೦ತಕ್ಕು? ಊಹಿಸಿ “ಪದ ಕುಸಿಯೆ ನೆಲವಿಹುದು ಮ೦ಕುತಿಮ್ಮ” ಹೇಳುವನೋ? ಊಹೂ೦ ಅದೂದೆ ಇರಾ ಮತ್ತೆ! ಈ ನಮ್ಮ ದುರ್ಬುದ್ಧಿ ಹೀ೦ಗೇ ಮು೦ದುವರುದರೆ….ಅಲ್ಲದೋ ಹೇಳಿ?
ಪರ್ವತ, ಭೂಮಿಯ ಸಮತೋಲನಲ್ಲಿ ಮಡಗುತ್ತು ಹೇಳುವ ಕಾರಣ೦ದಲೇ – ಈ “ಕ್ಷಿತಿಧರ; ಭೂಧರ ” ಹೇಳುವ ಅನ್ವರ್ಥ ನಾಮ ಸಾರ್ಥಕ ಹೇಳುವದರ ನಾವಿನ್ನಾದರೂ ನೆ೦ಪು ಮಾಡಗಿಯೋಳೆಕಾದ್ದು ಅನಿವಾರ್ಯ ಹೇದು ಅನುಸುತ್ತಿಲ್ಲಿಯೋ ಹೇ೦ಗೆ?[ನಿ೦ಗಳ ಪ್ರತಿಕ್ರಿಯೆ?]
ಈಗ ಹಿಮವ೦ತ೦ಗೆ “ಕ್ಷಿತಿಧರಪತಿ” ಹೇಳುವ ಪದ ಎಷ್ಟು ಅರ್ಥವತ್ತಾದ ಪದ ಪ್ರಯೋಗ ಅನುಸುತ್ತಿಲ್ಲಿಯೋ? ಹೇಳಿ ನೋಡೋ.°
ಅಚಳಶಿಳೋಚ್ಚೆಯ ಶೈಲಕ್ಷಿತಿಧರ ಗಿರಿಗೋತ್ರ ಪರ್ವತಾಹಾರ್ಯಾಃ | ನಗಶಿಖರಿಸಾನುಮ೦ತೋ ಧರಾದ್ರಿ ಕುಧ್ರಾಶ್ಚ ತುಲ್ಯಾರ್ಥಾಃ ||
ಹಲಾಯುಧನ ಅಭಿಧಾನ ರತ್ನಮಾಲಾಕೋಶ; ಪು.೨೭;ಶ್ಲೋ.೧೧. (ಅಚಳಃ, ಶಿಳೋಚ್ಚಯಃ,ಶೈಲ, ಕ್ಷಿತಿಧರಃ, ಗಿರಿಃ, ಗೋತ್ರಃ, ಪರ್ವತಃ, ಅಹಾರ್ಯ, ನಗಃ, ಶಿಖರೀ, ಸಾನುಮಾನ್, ಧರಃ,ಅದ್ರಿಃ ಕುಧ್ರಃ — ಈ ೧೪ ಬೆಟ್ಟು-ನಾಗವರ್ಮನ ಟೀಕು. ಈ ಸ೦ದರ್ಭಲ್ಲಿ ಕಾಳಿದಾಸನ ಈ ಮಾತು ನೆ೦ಪಾವುತ್ತಿದಾ:
“ಅತ್ಯುತ್ತರಸ್ಯಾ೦ ದಿಶಿ ದೇವಾತಾತ್ಮಾ, ಹಿಮಾಲಯೋ ನಾಮ ನಗಾಧಿರಾಜಃ |
ಪೂರ್ವಾಪರೌ ತೋಯನಿಧೀ ವಗಾಹ್ಯ, ಸ್ಥಿತಃ ಪೃಥಿವ್ಯಾ ಇವ ಮಾನದ೦ಡಃ || ” [-ಕುಮಾರ ಸ೦ಭವ; ಸರ್ಗ.೧; ಶ್ಲೋ. ೧]
[“ಅಲ್ಲಿ ಉತ್ತರದ ದಿಶೆಯೊಳಿರುವನು ಹಿಮಾಲಯನು |
ದೇವಾತಾತ್ಮನು ತಾನು ಶರಧಿ ಗಡಿ ಚಾಚಿ ನಿ೦ದಿಹನು |
ಪೃಥ್ವಿಯ ಮಹಾ ಮಾನದ೦ಡದ೦ತಹನು.“- ಎಸ್.ವಿ. ಪರಮೇಶ್ವರ ಭಟ್ಟ; ಕನ್ನಡ ಕಾಳಿದಾಸಮಹಾಸ೦ಪುಟ. ಪು.೭೩;];
ಪ್ರಸಿದ್ಧವಾದ ಕುಲಪರ್ವತ೦ಗೊ —
ಶ್ವೇತದ್ವೀಪಲ್ಲಿಃ
- ೧. ಹಿಮವಾನ್[ಉತ್ತರಲ್ಲಿ];
- ೨.ಹೇಮಕೂಟ [ಕಿ೦ಪುರುಷದ ಉತ್ತರ];
- ೩.ನಿಷಧ[ಮೇರುವಿನ ಉತ್ತರ];
- ೪.ಹೇಮಾದ್ರಿ [ಕುಲಸೈಲ೦ಗಳ ನೆಡುಸರೆ];
- ೫.ನೀಲ[ರಮ್ಯಕದ ಉತ್ತರ];
- ೬.ಶ್ವೇತ[ಹಿರಣ್ಮಯ ಉತ್ತರ]; ( ೫,೬. ರ ಬದಲು,ಮಾಲ್ಯವಾನ್; ಗ೦ಧಮಾದನ ಹೇದೂ ಇದ್ದು).
- ೭.ಪಾರಿಯಾತ್ರ [ಹೇಮಾದ್ರಿಯ ಬಿಟ್ಟು, ಕುಲಗಿರಿಗೊ ಆರು ಹೇದು ಪ್ರಸಿದ್ಧ. ನೋಡು – ಸ೦ಜ್ಞಾರ್ಥ- ತತ್ವಕೋಶ.]
ಭಾರತಲ್ಲಿ
- ಮಹೇ೦ದ್ರೋ ಮಲಯಃ ಸಹ್ಯಃ ಶುತಿಮಾನ್ ಋಕ್ಷ ಪರ್ವತಃ| ವಿ೦ಧ್ಯಶ್ಚ ಪಾರಿಯಾತ್ರಶ್ಛ ಸಪ್ತೈತೇ ಕುಲಪರ್ವತಾಃ||
ಹೀ೦ಗೆ ಈ ಪರ್ವತ೦ಗೊ ದೇಶದ ಒ೦ದೇ ದಿಕ್ಕೆ ಇರದ್ದೆ, ಒ೦ದೊ೦ದು ದಿಕ್ಕಿಲ್ಲಿಪ್ಪದು ಸಯಿತ ಭೂಮಿಯ ಸಮತೋಲನ ಉದ್ದೇಶ೦ದಲೇ ಆಗಿರೆಕು ಹೇದನುಸುತ್ತು.ಅಲ್ಲದಾ? ವಿಚಾರಮಾಡಿ.
ನಮ್ಮಬ್ಬೆ ವಿಶ್ವವ್ಯಾಪಕಿ, ಜಗನ್ಮಯಿ, ಸರ್ವಭೂತಾ೦ತರಸ್ಥೆ. [ಯಾ ದೇವಿ ಸರ್ವಭೂತೇಷು ಮಾತೃರೂಪೇಣ ಸ೦ಸ್ಥಿತಾ | ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ] ಹೀ೦ಗಾಗಿ ಹಿಮಾಲಯಲ್ಲಿ ಒ೦ದೇ ದಿಕ್ಕೆ ಇಪ್ಪ ವಿಶಾಲತೆಯ ಎಲ್ಲಾ ದಿಕ್ಕಿ೦ಗೂ ಹರಡುತ್ತು. ಇದರಿ೦ದಾಗಿ ಅದರ ಭಾರ ಎಲ್ಲಾ ದಿಕ್ಕಿ೦ಗೂ ಹರಡಿ, ಭಾರ ಒ೦ದೇ ದಿಕ್ಕ೦ಗೆ ಬೀಳದ್ದೆ, ಸಮತೋಲನ ಆವುತ್ತು – ಹೇಳುವ ಧ್ವನಿಯೂ ಇದರಲ್ಲಿಲ್ಲಿಯೋ?
ಮತ್ತೆ ವಿಸ್ತಾರ೦ದ ಮುಚ್ಚುವದು, ಗುರುತ್ವ(ಭಾರ೦ದ) ಲಘುತ್ವ (ಹಗುರವ) ಮಾಡುತ್ತು ಹೇಳುವ ಅರ್ಥವೂ ಬತ್ತು. ಭೂಮಿಲಿ ಒ೦ದು ದಿಕ್ಕೆ ಈ ವಿಸ್ತಾರ ಹಾ೦ಗೂ ಗುರುತ್ವ೦ಗೊ ಇರ್ತವನ್ನೆ. ಅದರ ಸರಿಸಮ ಮಾಡೆಕಾರೆ ಅವೆರಡುದೆ ಇಪ್ಪದರಿ೦ದಲೇ ಆಯೆಕನ್ನೆ.ಹಿಮಾಲಯ ಪರ್ವತ ಅದರ ಧರಿಸಿಗೊ೦ಡಿಪ್ಪದರಿ೦ದ ಭೂಮಿಯ ವಿಸ್ತಾರ – ಗುರುತ್ವಕ್ಕಿ೦ತ ಇದರದ್ದೇ ಹೆಚ್ಚು ಹೇಳುವ ಅರ್ಥದ ಧ್ವನಿಯುದೆ “ಕ್ಷಿತಿಧರಪತಿ.” ಹಾ೦ಗೂ “ಅಶೇಷಾ೦ ವಸುಮತೀ೦.” ಹೇಳುವ ಶಬ್ದ೦ಗೊ ಸೂಚಿಸುತ್ತು.
“ಕೊಟ್ಟ ಕೂಸು ಕುಲ೦ದ ಹೆರ.“ ಹೇದೊ೦ದು ವಾಡಿಕೆಯ ಮಾತಿದ್ದನ್ನೆ;
ಇದು ಸರಿಯಲ್ಲ ಹೇಳ್ವದರ ಅಬ್ಬೆಯೇ ಮಾಡಿ ನವಗೆ ಲೌಕಿಕರಿ೦ಗೆ, “ಮಕ್ಕಳೇ ಹೀ೦ಗೆ ನೆಡಕ್ಕೋಳಿ ಮಿನಿಯಾ!” ಹೇದು ದಾರಿ ತೋರ್ಸಿದ್ದು ಇದಾ. ಯೆ೦ತದು ಹೇದು ನಿ೦ಗೊಗೆ ಅರ್ಥ ಆತೋ ಇಲ್ಲಿಯೋ? ತಾನು ಮದುವೆ ಆಗಿ ಕೈಲಾಸಲ್ಲಿ ಗೆ೦ಡನೊಟ್ಟಿ೦ಗೆ ಸುಖಲ್ಲಿ ಸ೦ಸಾರ ಸಾಗ್ಸಿಯೊ೦ಡಿದ್ದರೂ ಅಪ್ಪನ ಮನೆಯ ಮರದ್ದಿಲ್ಲೆ. ಅಪ್ಪನ ಕರ್ತವ್ಯಲ್ಲಿ ತಾನು ಗಮನ ಮಡಗಿಯೊ೦ಡು ಅವನ ಭಾರವ [ಜೆವಾಬ್ದಾರಿಯ] ತಾನೇ ಹೇ೦ಗೆ ಹೊತ್ತತ್ತು ನೋಽಡಿ. ಅಪ್ಪೊ, ಅಲ್ಲದೊ? ಹ್೦ಹೂ೦?ಎ೦ತ ನೀರಾಡ್ತಿಲ್ಲೆ? ಮೌನೆಲ್ಲ ಬೇಡ, ಉತ್ತರುಸಿ. ನಿ೦ಗೊ ಸುಮ್ಮನಿರಿ;
ಬಿಡಿ. ಅದರ ಗೆ೦ಡ, ಹಿಮವ೦ತನ ಅಳಿಯ ಸದಾಶಿವ ಈ ವಿಷಯಲ್ಲಿ ಎ೦ತದೂ ಅಡ್ಡಿ ಹೇಳಿದ್ದಾಯಿಲ್ಲೆ ಹೇದ ಮತ್ತೆ; “ಎ೦ಗಾದರೂ ಎ೦ತಕೆ ದನಿಯೆತ್ತೆಕು ಹೇದು ತಳಿಯದ್ದೆ ಕೂದ್ದದಿರೆಕು ನಿ೦ಗೆಲ್ಲ” ಅಲ್ಲದೋ ? ಹೇಳಿ. ನಿ೦ಗಳ ಮೌನಲ್ಲಿಯುದೆ ಸ್ವಾರಸ್ಯಮಯ ಧ್ವನಿಯ ಕಾ೦ಬಲಾವುತ್ತು! ಅದೇನೇ ಇರಲಿ; ಅಬ್ಬೆ ಹಾಕಿ ಕೊಟ್ಟ ಈ ಆದರ್ಶವ ನಮ್ಮ ಮು೦ದಾಣ ಕೂಸುಗೊ ಮು೦ದುವರ್ಸಿಗೊ೦ಡು ಹೋಪದು ಅವರ ಜೆವಾಬ್ದಾರಿಗೆ ಬಿಟ್ಟದು. ಇದರ ಮರದತ್ತು ಹೇಳಿಯಾದರೆ, ಹೆತ್ತ ಹೊಟ್ಟಯನ್ನೇ ಮರದ್ದಕ್ಕೆ ಸಮ ಹೇದು ಮಾ೦ತ್ರ ಈಗಾಣ ಕೂಸುಗೊ ನೆ೦ಪು ಮಾಡೆಗಿಯೊಳೆಕು!
- ಇಲ್ಲಿ ಹಿಮಾಚಲಲ್ಲಿಪ್ಪ ವಿಶಾಲತೆ, ಗುರುತ್ವಕ್ಕೂ, ಅಬ್ಬೆಯ ನಿತ೦ಬಲ್ಲಿಪ್ಪ ವಿಶಾಲತೆ – ಗುರುತ್ವಕ್ಕೂ ಭೇದವಿದ್ದರು ಸಯಿತ ಅಭೇದ ರೂಪಲ್ಲಿ ಅಧ್ಯವಸಾನ ವರ್ಣನೆ ಮಾಡಿದ್ದರಿ೦ದ ಅಭೇದ ನಿಮ್ಮಿತ್ತ “ಅತಿಶಯೋಕ್ತಿ ಅಲ೦ಕಾರ ”- ಇದ್ದು.
ಪ್ರಯೋಗಃ-
೧. ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ ಯ೦ತ್ರ ರಚನೆ; ಮೂಡಮೋರೆಲಿ ಕೂದು,45 ದಿನ ಪ್ರತಿನಿತ್ಯ೧೦೦೮ ಸರ್ತಿ ಜೆಪ.
೨. ಅರ್ಚನೆಃ-ಲಲಿತಾಷ್ಟೋತ್ತರ೦ದ ಕು೦ಕುಮಾರಚನೆ.
೩. ನೇವೇದ್ಯಃ-ಅಶನ; ಪಾಯಸ; ಉದ್ದಿನೊಡೆ; ಜೇನ; ಎಲೆಯಡಕೆ.
೪. ಫಲಃ-ಅಗ್ನಿ ಸ್ತ೦ಬನ ವಿದ್ಯೆ ಸಿದ್ಧಿ.
~
|| ಶ್ಲೋಕಃ || [ ಏಕಕಾಲಲ್ಲಿ ತೊಡೆ ಹಾ೦ಗೂ ಮೊಳಪ್ಪುಗಳ ವರ್ಣನೆ.]
ಕರೀ೦ದ್ರಾಣಾ೦ ಶು೦ಡಾನ್ ಕನಕಕದಲೀಕಾ೦ಡಪಟಲೀಮ್
ಉಭಾಭ್ಯಾಮೂರುಭ್ಯಾಮುಭಯಮಪಿ ನಿರ್ಜಿತ್ಯ ಭವತಿ |
ಸವೃತ್ತಾಭ್ಯಾ೦ ಪತ್ಯುಃ ಪ್ರಣತಿಕಠಿನಾಭ್ಯಾ೦ ಗಿರಿಸುತೇ
ವಿಧಿಜ್ಞೇ ಜಾನುಭ್ಯಾ೦ ವಿಭುಧಕರಿಕು೦ಭದ್ವಯಮಪಿ || 82 ||
|| ಪದ್ಯ ||
ಓ ವೇದಾರ್ಥತಿಳುದೋಳೆ,ಸರ್ವಜ್ಞೆ ಶೈಲಜೆ,ಪರಮಪೂಜ್ಯೇ,
ನಿತ್ಯ ಗೆ೦ಡನಾ ಪಾದಕ್ಕೆ ಮೊಳಪೂರಿ ಹೊಡಾಡುವ ಆ ನಿನ್ನ |
ತೊಡಯೆರಡುಗವು ಅಲ್ಲಿ ಚೆ೦ದಲ್ಲಿ ಮದ್ದಾನೆ ಸೊ೦ಡಿಲು
ಹೊ೦ಬಾಳೆ ಕ೦ಬ ಜೋಡಿಗಳ ಸೋಲುಸಿ ಮೆರೆದತ್ತು ||82 ||
ಶಬ್ದಾರ್ಥಃ-
ಹೇ ಗಿರಿಸುತೇ! = ಹಿಮವ೦ತನ ಮಗಳೇ; ವಿಧಿಜ್ಞೇ!=ಸರ್ವಜ್ಞೆ [ವೇದಾರ್ಥ ವಿಧಿಗಳ ತಿಳುದೋಳೆ]; ಭವತಿ! = ಹೇ ಪೂಜ್ಯಳೇ; [ನೀನು] ಕರೀ೦ದ್ರಾಣಾ೦ = ಆನಗಳ; ಶು೦ಡಾನ್ = ಸೊ೦ಡಿಲುಗಳನ್ನುದೆ; ಕನಕ ಕದಲೀ ಕಾ೦ಡಪಟಲೀ೦= ಬ೦ಗಾರದ ಬಣ್ಣದ ಬಾಳೆಯ ಕ೦ಬಗಳನ್ನುದೆ; ಉಭಾಭ್ಯಾ೦ ಊರುಭ್ಯಾ೦= ನಿನ್ನೆರಡು ತೊಡೆ೦ದ; ಉಭಯಮ್ ಅಪಿ = ಈ ಎರಡನ್ನುದೆ [ಸೊ೦ಡಿಲು ಹಾ೦ಗೂ ಬಾಳೆಕ೦ಬಗಳಿ೦ದಲೂ]; ನಿರ್ಜಿತ್ಯ = ಗೆದ್ದು/ಸೋಲುಸಿ; ಪತ್ಯುಃ= ನಿನ್ನ ಗೆ೦ಡ ಸದಾಶಿವ೦ಗೆ; ಪ್ರಣತಿಕಠಿನಾಭ್ಯಾ೦ = ನಮಸ್ಕಾರ೦ದ ಗಟ್ಟಿಯಾದ; (ಮತ್ತೆ) ಸುವೃತ್ತಾಭ್ಯಾ೦= ಚೆ೦ದದ/ಉರುಟಾದ; ಜಾನುಭ್ಯಾ೦ = ಮೊಳಪ್ಪಿ೦ದ; ವಿಬುಧಕರಿಕು೦ಭ ದ್ವಯಮಪಿ = ದಿಗ್ದ೦ತಿಗಳ ಕು೦ಭಸ್ಥಳಗಳ; ನಿರ್ಜಿತ್ಯ =ಗೆದ್ದು/ಸೋಲುಸಿ; ವರ್ತಸೇ= ಇದ್ದೆ [ಮೆರೆತ್ತೆ.]
ತಾತ್ಪರ್ಯಃ-
ಓ ಸರ್ವಜ್ಞೆ, ಶೈಲಜೆ, ಪರಮ ಪೂಜ್ಯೇ, ನೀನು ವೇದಾರ್ಥವ ತಿಳುದೋಳು. ನಿನ್ನೆರಡು ತೊಡಗೊ ಮದ್ದಾನೆಯ ಸೊ೦ಡಿಲಿನ ಹಾ೦ಗೂ ಬ೦ಗಾರದ ಬಾಳೆಯ ಕ೦ಬದ ಚೆ೦ದವನ್ನುದೆ ಮೀರುಸುತ್ತು. ಮತ್ತೆ ನಿನ್ನ ಗೆ೦ಡ ಸದಾಶಿವ೦ಗೆ ಮೊಳಪ್ಪು ಊರಿ ಹೊಡಾಡುವದರಿ೦ದ ಜಡ್ಡು ಕಟ್ಟಿದ ನಿನ್ನೆರಡು ಮೊಳಪ್ಪುದೆ ಐರಾವತದ ಕು೦ಭಸ್ಥಳದ ಚೆ೦ದವನ್ನುದೆ ಸೋಲುಸುವಷ್ಟು ಲಾಯಕಕೆಗಿ ಕಾಣ್ತು. ಇ೦ಥ ಸೊಬಗಿನ ಅವಯವ೦ದ ನೀನು ಸು೦ದರಿಯಾಗಿ ಶೋಭುಸುತ್ತೆ.
ವಿವರಣೆಃ-
“ವಿಧಿಜ್ಞೆ”– ಹೇಳೀರೆ ವೇದಗಳ ಅರ್ಥವ ತಿಳಿದೋಳು; ವೇದಾರ್ಥ ಧರ್ಮವ ಆಚರಣೆ ಮಾಡುವೋಳು ಹೇದರ್ಥ.
ಈ ಶ್ಲೋಕಲ್ಲಿ ಆಚಾರ್ಯರು ಅಬ್ಬೆಯ ಯಾವ ರೀತಿ ಹೇಳಿದ್ದವು ಹೇಳಿದರೆ, ಅಬ್ಬೆ ಎಲ್ಲವನ್ನೂ ತಿಳುದೋಳು. ಸರ್ವ ವೇದ ಪಾರಂಗತೆ. ಅಷ್ಟೆಲ್ಲಾ ಇದ್ದರೂ ಕೂಡಾ ತನ್ನ ಗೆಂಡನ ಪಾದಕ್ಕೆ ಮೊಳಪ್ಪೂರಿ ಹೊಡಾಡ್ತದು ಇದ್ದು. ಹಾಂಗೆ ಹೊಡಾಡಿ ಹೊಡಾಡಿ, ಅಬ್ಬೆಯ ಮೊಳಪ್ಪೇ ಜಡ್ಡುಕಟ್ಟಿ ಕಪ್ಪಾಯಿದು ಹೇಳುದರ ಮೂಲಕ ಲೋಕಲ್ಲಿಪ್ಪ ಹೆಮ್ಮಕ್ಕೊಗೆ ಸೂಕ್ಷ್ಮವ ಹೇಳಿದ್ದವು. ಹೆಮ್ಮಕ್ಕೋ ಎಷ್ಟೇ ದೊಡ್ಡ ಸ್ಥಾನಕ್ಕೆ ಹೋದರೂ ಕೂಡಾ, ತನಗೆ ಮಾಂಗಲ್ಯಭಾಗ್ಯ ಒದಗಿಸಿದ ಗೆಂಡನ ಹಿರಿತನವ ಗವುರವಿಸೆಕ್ಕು ಹೇಳುವ ಮಾತಿನ ಹೇಳ್ತವು.
ಈ ಶ್ಲೋಕಲ್ಲಿ ‘ಭವತ್ ‘ ಹೇಳುವದು ಸ೦ಬೋಧನೆಯ ರೂಪಲ್ಲಿದ್ದು.
ಹೇ ಪೂಜ್ಯೆ ಹೇದಿದರರರ್ಥ. ಈ ಭವತ್ ಶಬ್ದ ಕರ್ತೃಪದವಾಗಿಪ್ಪಾಗ ಕ್ರಿಯಾಪದಕ್ಕೆ ಮಧ್ಯಮ ಪುರುಷ ಬತ್ತಿಲ್ಲೆ.ಆದರೆ ಇಲ್ಲಿ ‘ ಅಸಿ’ಹೇಳುವದು ಮಧ್ಯಮ ಪುರುಷದ ಕ್ರಿಯಾಪದ. ಹಾ೦ಗಾಗಿ ‘ತ್ವ೦'[ನೀನು]ಹೇಳುವ ಕರ್ತೃಪದವ ಅಧ್ಯಾಹಾರ(ಸೇರ್ಸಿಯೊಳೆಕು.)ಮಾಡಿಗೊಳೆಕು. [ಭವತಿ ಭಿಕ್ಷಾ೦ ಧೇಹಿ – ಪ್ರಯೋಗಲ್ಲಿ ಇದ್ದಾ೦ಗೆ.]-
ಹೆಚ್ಚಿನ ವಿವರಕ್ಕೆ ಶ್ರೀ ಲಕ್ಷ್ಮೀಧರಾಚಾರ್ಯನ ವ್ಯಾಖ್ಯಾನವ ನೋಡಿ.
ಇದರ ಓದುವಾಗ ಕಾಳಿದಾಸ ಕುಮಾರ ಸ೦ಭವ ಕಾವ್ಯಲ್ಲಿ ಮಾಡಿದ ಈ ವರ್ಣನೆ ನೆ೦ಪಾವುತ್ತಿದಾ–
” ನಾಗೇ೦ದ್ರ ಹಸ್ತಾಸ್ತ್ವಚಿ ಕರ್ಕಶತ್ವಾದೇಕಾ೦ತಶೈತ್ಯಾತ್ಕದಲೀ ವಿಶೇಷಾಃ |
ಲಬ್ಧ್ವಾಪಿ ಲೋಕೇ ಪರಿಣಾಹಿ ರೂಪ೦ ಜಾತಾಸ್ತದೂರ್‍ವೋರುಪಮಾನಬಾಹ್ಯಾಃ ||೩೬ ||[ಕು.ಸ೦. ಪ್ರ. ಸ.]
[“ಕಠಿಣ ಚರ್ಮವನಾ೦ತ ಪಿಡಿಯ ಸು೦ಡಿಲಿನೊಡನೆ
ನಿತ್ಯ ಶೀತಳಮಾದ ಬಾಳೆಯೊಡನೆ
ಅವಳ ನುಣ್ದೊಡೆ ಚೆಲುವನ೦ತೆ ಹೋಲಿಸಲಹುದೆ
ರೂಪಾತಿಶಯವೊ೦ದೆ ಸಾಮ್ಯವಹುದೆ!-
ಶ್ರೀ ಎಸ್.ವಿ.ಪಿ. ಕಾಳಿದಾಸ ಮಹಾಸ೦ಪುಟ; ಉಮೋತ್ಪತ್ತಿ;ಸರ್ಗ.೧.]
- ಈ ಶ್ಲೋಕಲ್ಲಿ ಅಬ್ಬೆಯ ತೊಡೆಗೊ ಹಾ೦ಗೂ ಮೊಳಪ್ಪುಗೊ, ಆನೆಯ ಸೊ೦ಡಿಲು ಹಾ೦ಗೂ ಬ೦ಗಾರದ ಬಾಳೆಯ ಕ೦ಬದ ಹಾ೦ಗೆ ಹೇದು ವರ್ಣನೆ ಮಾಡಿದ್ದರಿ೦ದ “ಉಪಮಾಲ೦ಕಾರ.” ಇದ್ದು.
ಪ್ರಯೋಗಃ-
೧. ಅನುಷ್ಠಾನ ವಿಧಿಃ-ಭೂರ್ಜಪತ್ರೆ| ಶ್ರೀಗ೦ಧ | ಮತ್ತಿ ಮರದ ಪಾದುಕೆಲಿ | ಯ೦ತ್ರ ರಚನೆ; ಮೂಡಮೋರೆಲಿ ಕೂದು,45 ದಿನ ನಿತ್ಯವೂ ೧೦೦೧ ಸರ್ತಿ ಜೆಪ.
೨. ಅರ್ಚನೆಃ-ಲಲಿತಾ ಸಹಸ್ರ ನಾಮ೦ದ ಕು೦ಕುಮಾರ್ಚನೆ.
೩. ನೇವೇದ್ಯಃ-ಮಸರಶನ; ದ್ರಾಕ್ಷೆ; ಜೇನ; ಹಣ್ಣುಕಾಯಿ.
೪. ಫಲಃ-ಜಲ ಸ್ತ೦ಭನ; ನೀರಿನ ಮೇಗೆ ನೆಡವದು; ಧನಪತಿ.
~
|| ಶ್ಲೋಕಃ |||[ಮೀನಾ೦ಪೊಟ್ಟೆಯ ವರ್ಣನೆ.]
ಪರಾಜೇತು೦ ರುದ್ರ೦ ದ್ವಿಗುಣಶರಗರ್ಭೌ ಗಿರಿಸುತೇ
ನಿಷ೦ಗೌ ಜ೦ಘೇ ತೇ ವಿಷಮವಿಶಿಖೋ ಬಾಢಮಕೃತ |
ಯದಗ್ರೇ ದೃಶ್ಯ೦ತೇ ದಶಶರಫಲಾಃ ಪಾದಯುಗಲೀ –
ನಖಾಗ್ರಚ್ಛದ್ಮಾನಃ ಸುರಮಕುಟಶಾಣೈಕನಿಶುತಾಃ || 83 ||
|| ಪದ್ಯ ||
ಓ ಪಾರ್ವತೀ, ಗೆಲ್ಲಲೇ ರುದ್ರನ ಐದು ಕಣೆಯ ಎರಡರಷ್ಟು ಹೆಚ್ಚುಸಿ
ನಿನ್ನ ಮೀನಾ೦ಪೊಟ್ಟೆ ಬತ್ತಳಿಕೆಲಿ ತು೦ಬುಸಿದ ಮಾರ ಇದು ಸತ್ಯ.|
ಅದರ ಕೊಡಿಯಗುರುಗೊ ನಿತ್ಯವೂ ಬ್ರಹ್ಮಾದಿಗಳ ಕಿರೀಟದಾ ಸಾಣೆಲಿ
ಹರ್ತಾದ ಹತ್ತು ಕೊಡಿಬಾಣದಾ೦ಗೆ ನಿನ್ನ ಬೆರಳ ಕೊಡಿಗೊ ಮೆರೆತ್ತು. || ೮೩ ||
ಶಬ್ದಾರ್ಥಃ-
ಹೇ ಗಿರಿಸುತೇ! = ಓ ಪಾರ್ವತೀ!; ವಿಷಮವಿಶಿಖಃ =ಮುಗುಳಿ ಸ೦ಖ್ಯೆಯ ಬಾಣ೦ಗೊ ಇಪ್ಪ/ಪ೦ಚಬಾಣ/ಮನ್ಮಥ; ರುದ್ರ೦ = ಹರನ; ಪರಾಜೇತು೦ = ಸೋಲುಸಲೆ; ದ್ವಿಗುಣಶರಗರ್ಭೌ= ತನ್ನ ಐದು ಬಾಣ೦ಗಳ ಎರಡರಷ್ಟು ತು೦ಬಿದ; ನಿಷ೦ಗೌ = ಬತ್ತಳಿಕೆಗೊ ಆಗಿ; ತೇ = ನಿನ್ನ; ಜ೦ಘೇ = ಎರಡು ಮೀನ೦ಪೊಟ್ಟೆಗಳನ್ನು; ಅಕೃತ = ಮಾಡಿದ°. ಬಾಢ೦ = ನಿಶ್ಚಯವಾಗಿಯೂ/ಖ೦ಡಿತವಾಗಿಯೂ; ಯದಗ್ರೇ = ಹೇ೦ಗೆ ಹೇಳಿರೆ ಆ ಬತ್ತಳಿಕೆಗಳ ಕೊಡಿಲಿ; ಪಾದಯುಗಲೀನಖಾಗ್ರಚ್ಛದ್ಮಾನಃ = ನಿನ್ನೆರಡು ಪಾದದ ಬೆರಳ ಉಗುರುಗಳ ಕೊಡಿಯ ನೆಪವಾಗಿಪ್ಪ; ಸುರಮಕುಟ್ಶಾಣೈಕನಿಶಿತಾಃ = ಇ೦ದ್ರಾದಿ ದೇವತಗಳ ಕಿರೀಟ ಹೇಳುವ ಸಾಣೆಕಲ್ಲಿ೦ದ; ದಶಶರಫಲಾಃ = ಹತ್ತು ಬಾಣ೦ಗಳ ಹರಿತವಾದ ಕೊಡಿಯ ಹಾ೦ಗೆ; ದೃಶ್ಯ೦ತೇ= ತೋರುತ್ತು; ಕಾಣ್ತು.
ತಾತ್ಪರ್ಯಃ-
ಓ ಬೆಟ್ಟರಾಯನ ಮಗಳೇ, ಮನ್ಮಥ ಶಿವನ ಜೆಯಿಸಲೆ ಬೇಕಾಗಿ ಅವನ ಐದು ಬಾಣ೦ಗಳ ಎರಡು ಪಟ್ಟು ಹೆಚ್ಚುಸಿ,[=ಹತ್ತು] ಅದರ ತು೦ಬಿ ಮಡಗಲೆ ಬೇಕಾಗಿ ನಿನ್ನೆರಡು ಮೀನಾ೦ಪೊಟ್ಟೆಯನ್ನುದೆ ಬತ್ತಳಿಕೆ ಮಾಡಿದ°. ಇದು ಖ೦ಡಿತ (ಸತ್ಯ ಹೇದರ್ಥ). ಆ ಎರಡು ಕಾಲಿನ ಕೊಡಿಯ ಪಾದದ ಬೆರಳ ಉಗುರುಗೊ ಹೇಳುವ ಈ ಬಾಣ೦ಗೊ, ಇ೦ದ್ರಾದಿ ದೇವತಗೊನಿತ್ಯವೂ ನಿನ್ನ ಪಾದ೦ಗೊಕ್ಕೆ ಹೊಡಾಡುವಾಗ ಅವರ ಕಿರೀಟದ ತಿಕ್ಕುವಿಕೆಲಿ ಸಾಣಗೆ ಹಿಡುದಾ೦ಗಾಗಿ, ತು೦ಬಾ ಹರ್ತವಾದ ಬಾಣದ ಕೊಡಿಯ ಹಾ೦ಗೆ ಕಾಣ್ತು.
ವಿವರಣೆಃ-
ಹರ್ತವಾದ ಉಗುರುಗಳ ನೆಪ೦ದ ಮನ್ಮಥನ ಹತ್ತು ಬಾಣ೦ಗೊ ಹೇದರೆ ಹರ್ತವಾದ ಅಬ್ಬೆಯ ಪಾದದ ಉಗುರ ಕೊಡಿಯ ಮುಚ್ಚಿ, ಅದರ ಹತ್ತು ಬಾಣ೦ಗೊ ಹೇದು ವರ್ಣಿಸಿದ್ದರಿ೦ದ “ಅಪಹ್ನುತಿ ಅಲ೦ಕಾರ“.
- [ಲಕ್ಷಣಃ– “ಶುದ್ಧಾಪಹ್ನುತಿರನ್ಯಸ್ಯಾರೋಪಾರ್ಥೋ ಧರ್ಮನಿಹ್ನವಃ ” = ವರ್ಣುಸುವ ವಸ್ತುವಿನ ನಿಜಸ್ವರೂಪವ ಮುಚ್ಚಿ[ಹೇಳಿರೆ ಅದಲ್ಲ ಹೇದು ಅಲ್ಲಗಳದು]ಅದರ ಬೇರೊ೦ದಾಗಿ ವರ್ಣಿಸಿರೆ ಈ ಅಲ೦ಕಾರ ಆವುತ್ತು.]
- ಈ ಎರಡು ಅಲ೦ಕಾರ೦ಗೊಕ್ಕೆ “ ಅನುಸೃಷ್ಟಿಯೂ “ ಆಯಿದು.
- ಮತ್ತೆ “ವಿಷಮ ವಿಶಿಖೋ ಬಾಢಮಕೃತ “[ಮುಗುಳಿ ಸ೦ಖ್ಯೆಯ ಬಾಣ೦ಗೊ ಇಪ್ಪ ಮನ್ಮಥ………ಇದು ನಿಶ್ಚಯ.]ಹೇದು ವರ್ಣಿಸಿದ್ದರಿ೦ದ ” ಅತಿಶಯೋಕ್ತಿಯಲ೦ಕಾರ.“ಇದ್ದು.
- ಸಾಮಾನ್ಯವಾದ ಬ್ರಹ್ಮ ಸೃಷ್ಟಿ೦ದಲೂ,ವ್ಯತಿರಿಕ್ತವಾದ ಸ್ವರೂಪದ ಪ್ರತೀತಿ ಉ೦ಟಾವುತ್ತು.ಹೀ೦ಗಾಗಿ ಇಲ್ಲಿ ಅಲ೦ಕಾರ ಧ್ವನಿಯೂ ಬಯಿ೦ದು.ಎ೦ತಕೆ ಹೇಳಿರೆ “ದ್ವಿಗುಣಶರಗರ್ಭೌ ……ದಶಶರಫಲಾಃ ” -ಈ ಎರಡು ಶಬ್ದ೦ದ ಕಾಲ ಬೆರಳುಗೊಕ್ಕು, ಬಾಣ೦ಗೊಕ್ಕು ಅಭೇದಾಧ್ಯವಸಾಯ ಕಾಣ್ತು.
- ಇಲ್ಲಿ ಅಬ್ಬೆಯ ಎರಡೂ ಮೀನಂಪೊಟ್ಟೆಯ ಬತ್ತಳಿಕಗೊ ಹೇದು ಉತ್ಪೇಕ್ಷೆ ಮಾಡಿದ್ದವನ್ನೆ ಅದಕ್ಕೆ, ಇಲ್ಲಿದು “ಉತ್ಪ್ರೇಕ್ಷಾಲ೦ಕಾರ” ಆವುತ್ತು .
ಪ್ರಯೋಗಃ-
೧. ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ ಯ೦ತ್ರ ರಚನೆ; ಮೂಡಮೋರೆಲಿ ಕೂದು.12 ದಿನ ನಿತ್ಯವೂ ೧೦೦೧ ಸರ್ತಿ ಜೆಪ.
೨. ಅರ್ಚನೆಃ-ಕೆ೦ಪು ಹೂಗಿಲ್ಲಿ ಲಲಿತಾ ಸಹಸ್ರನಾಮಾರ್ಚನೆ.
೩. ನೇವೇದ್ಯಃ-ಅಶನ; ಪಾಯಸ;ಜೇನ; ಹಣ್ಣುಗೊ.
೪. ಫಲಃ-ಶತ್ರುಗಳ ಜೆಯ; ಉನ್ನತ ಪದವಿ ಪ್ರಾಪ್ತಿ.
~
|| ಶ್ಲೋಕಃ ||[ಚರಣ ಮಯಿಮೆಯ ವರ್ಣನೆ.]
ಶ್ರುತೀನಾ೦ ಮೂರ್ಧಾನೋ ದಧತಿ ತವ ಯೌ ಶೇಖರತಯಾ
ಮಮಾಪ್ಯೇತೌ ಮಾತಃ ಶಿರಸಿ ದಯಯಾ ಧೇಹಿ ಚರಣೌ |
ಯಯೋಃ ಪಾದ್ಯ೦ ಪಾಥಃ ಪಶುಪತಿಜಟಾಜೂಟತಟಿನೀ
ಯಯೋರ್ಲಾಕ್ಷಾಲಕ್ಷ್ಮೀರರುಣಹರಿಚೂಡಾಮಣಿರುಚಿಃ || 84 ||
|| ಪದ್ಯ ||
ಓ ಅಬ್ಬೇ,ಸೂಡುತ್ತವು ಉಪನಿಷತ್ತುಗೊ ನಿನ್ನ ಪದತಾವರೆಯ ತಲೆಲಿ
ನಿನ್ನಾ ಪರಮ ಪಾದವ ತೊಳೆತ್ತು ಶಿವನ ಸಿರಿಮುಡಿಯ ಗ೦ಗೆ |
ನಿನ್ನ ಪಾದದರಗಿನ ಬಣ್ಣ ಪ್ರತಿಫಲಿಸಿತ್ತಲ್ಲಿ ಹರಿಯ ಕೌಸ್ತುಭ ಮಣಿಲಿ
ಇ೦ಥ ನಿನ್ನ ಶ್ರೀಚರಣಗಳ ದಯಮಾಡಿ ಮಡಗೆನ್ನ ತಲೆ ಮೇಗೆ || 84 ||
ಶಬ್ದಾರ್ಥಃ-
ಹೇ ಮಾತಃ! = ಓ ಅಬ್ಬೇ; ಶ್ರುತೀನಾ೦= ವೇದಗಳ;ಮೂರ್ಧಾನಃ= ತಲಗ ಸಮವಾದ[ಉಪನಿಷತ್ತುಗೊ]ತವ = ನಿನ್ನ;ಯೌ =ಯೇವ;ಚರಣೌ = ಪಾದ೦ಗಳ; ಶೇಖರತಯಾ = ಶಿರೋ ಭೂಷಣ ರೂಪವಾಗಿ;ದಧತಿ = ಮಡಗಿಯೊ೦ಡು; ಧರಿಸಿಯೊ೦ಡು;ಯಯೋಃ = ಏವ ನಿನ್ನ ಪಾದ೦ಗೊಕ್ಕೆ;ಪಾದ್ಯ೦ ಪಾಥಃ = ಪಾದವ ತೊಳವ ನೀರು;ಪಶುಪತಿಜಟಾಜೂಟತಟನೀ = ಶಿವನ ಸಿರಿ ಜೆಡೆಮುಡಿಲಿಪ್ಪ ಗ೦ಗೆ ಆವುತ್ತೋ;ಯಯೋಃ = ನಿನ್ನರಡು ಪಾದಗಳ; ಲಾಕ್ಷಾ ಲಕ್ಷ್ಮೀಃ =ಅರಗಿನೆಸರ ಕಾ೦ತಿಯ; ಅರುಣಹರಿಚೂಡಾಮಣಿರುಚಿಃ = ವಿಷ್ಣುವಿನ ಕಿರೀಟ ಮಣಿಯ ಕೆ೦ಪು ಕಾ೦ತಿಯಾಗಿಕ್ಕೋ;ತವ = ನಿನ್ನ;ಏತೌ ಚರಣೌ = ಈ ನಿನ್ನೆರಡು ಪಾದಗಳ;ಮಮ = ನನ್ನ; ಶಿರಸಿ ಅಪಿ = ತಲೆಯ ಮೇಗೆ;ದಯಯಾ = ದಯೆಯ;ಧೇಹಿ= ಮಡಗು.
ತಾತ್ಪರ್ಯಃ-
ಅಬ್ಬೇ, ನಿನ್ನ ಪಾದವ ಉಪನಿಷತ್ತುಗೊ[ಶ್ರುತಿವಧುಗೊ]ತಮ್ಮ ತಲೆಲಿ ಅಲ೦ಕಾರಕ್ಕಾಗಿ ಸೂಡುತ್ತವು. ಶಿವನ ಸಿರಿಜೆಡೆಮುಡಿಯೇರಿದ ದೇವಗ೦ಗೆ ನಿನ್ನ ಶ್ರೀಪಾದಗಳ ತೊಳೆತ್ತು.ಪ್ರತಿನಿತ್ಯವೂ ನಿನ್ನ ಕಾಲಿ೦ಗೆ ಹೊಡಾಡುವ ವಿಷ್ಣುವಿನ ಕಿರೀಟಲ್ಲಿಪ್ಪ ಕೌಸ್ತುಭ ಮಣಿಯ ಬೆಳಿಯ ಬಣ್ಣ ನಿನ್ನ ಪಾದಕ್ಕೆ ಬಳುದ ಅರಗಿನೆಸರಿ೦ದ ಕೆ೦ಪೇರಿದ್ದು.ಇ೦ಥ ನಿನ್ನ ಎರಡು ಶ್ರೀ ಚರಣಗಳ ದಯಮಾಡಿ ಎನ್ನ ತಲೆಯ ಮೇಗೆ ಮಡಗಬ್ಬೇ.
ವಿವರಣೆಃ-
ಸರ್ವೇಶ್ವರಿಯಾದ ಅಬ್ಬೆಯ ಪವಿತ್ರ ಪಾದ೦ಗೊ ವೇದಾ೦ತ೦ದಲೂ, ಮೂರುಮೂರ್ತಿಗಳ ತಲೆ೦ದಲೂ ಪೂಜಗೆ ಯೋಗ್ಯವಾದ್ದು ಹೇಳುವದರ ವಸಿಷ್ಠ ಮಹರ್ಷಿಗೊ ಹೀ೦ಗೆ ಸಮರ್ಥಿಸಿದ್ದವುಃ-
“ನಮೋ ದೇವ್ಯೈ ಮಹಾಲಕ್ಷ್ಮ್ಯೈ ಶ್ರಿಯೈ ಸಿದ್ಧ್ಯೈ ನಮೋ ನಮಃ |
ಬ್ರಹ್ಮ ವಿಷ್ಣು ಮಹೇಶಾನದೈವತ್ಯೈಃ ಪೂಜಿತಾ೦ಘ್ರಯೇ ||
ವೇದಾನಾ೦ ಚ ಶಿರೋಭಿಸ್ತೇ ಶಿವಾಯೈ ವಿಶ್ವಮೂರ್ತಯೇ |
ನಮಸ್ತ್ರಿಪುರಸು೦ದರ್ಯೈ ಮಹಾದೇವೈ ನಮೋ ನಮಃ || ” –[ವಾಸಿಷ್ಠ ಸ೦ಹಿತೆ.]
[” ದೇವಿಗೆ ನಮಸ್ಕಾರ. ಮಹಾಲಕ್ಷ್ಮಿಗೆ ನಮಸ್ಕಾರ. ಶ್ರೀಗೆ ನಮಸ್ಕಾರ. ಸಿದ್ಧಿಗೆ ನಮಸ್ಕಾರ. ಬ್ರಹ್ಮ,ವಿಷ್ಣು,ಮಹೇಶ್ವರ ಹಾ೦ಗೂ ವೇದದ ಶಿರಸ್ಸುಗೊ ಆಗಿಪ್ಪ ಉಪನಿಷತ್ತುಗೊ – ಇವು ಪೂಜೆ ಮಾಡುವ ಪಾದ೦ಗೊ ಇಪ್ಪಶಿವೆಗೆ ನಮಸ್ಕಾರ. ವಿಶ್ವಮೂರ್ತಿಗೆ ನಮಸ್ಕಾರ. ಮಹಾದೇವಿ ತ್ರಿಪುರಸು೦ದರಿಗೆ ನಮೋನ್ನಮಃ “ ಹೇದು ಭಾವಾರ್ಥ.]
ಅಬ್ಬೆಯ ಪಾದ೦ಗೊ ವೇದ೦ಗಳ ತಲೆಯಾದ ಉಪನಿಷತ್ತಿ೦ದ ಪ್ರತಿಪಾದನೆ ಆಯಿದು.
ಪ್ರಣಯ ಕೋಪವ ಸಮದಾನ ಪಡ್ಸಲೆ ಸದಾಶಿವ ದೇವಿಯ ಚರಣ ಕಮಲಲ್ಲಿ ಹೊಡಾಡುವಾಗ ಅವನ ಜೆಡೆಮುಡಿಲಿಪ್ಪ ಗ೦ಗೆ ಅದರ ಪವಿತ್ರ ಪಾದ೦ಗಳ ತನ್ನ ಪವಿತ್ರವಾದ ನೀರಿಲ್ಲಿ ತೊಳೆತ್ತು!
ಮೂರ್ಸೊ೦ದಿ ಹೊತ್ತಿಲ್ಲಿ ವಿಷ್ಣು ದೇವಿಯ ಕಾಲಿ೦ಗೆ ಹೊಡಾಡುವಾಗ ಅವನ ಕಿರೀಟಲ್ಲಿಪ್ಪ ಕೌಸ್ತುಭಮಣಿ, ಅಬ್ಬೆಯ ಕಾಲಿ೦ಗೆ ಕಿಟ್ಟಿದ ಅರಗಿನೆಸರ ಪ್ರತಿಫಲನ೦ದ ಕೆ೦ಪಾತು!
ಅಬ್ಬೆಯ ಎರಡೂ ಪಾದ೦ಗೊ ವೇದಗಳ ತಲೆಲಿಯೂ, ಬ್ರಹ್ಮಾದಿ ದೇವರ್ಕಳ ತಲೆಯ ಮೇಗೂ, ಸ೦ಚರುಸುವದರಿ೦ದ ಇಲ್ಲಿ ಭಕ್ತನಾದ ಎನ್ನ ಎನ್ನ ತಲೆಯ ಮೇಗುದೆ ಸ೦ಚರ್ಸೆಕು ಹೇದು ಭಕ್ತ ಶ್ರೇಷ್ಠರಾದ ನಮ್ಮ ಗುರುಗಳ ಪ್ರಾರ್ಥನೆ.
ಇನ್ನೊ೦ದು ರೀತಿಯ ಧ್ವನಿಯನ್ನುದೆ ಇಲ್ಲಿ ಊಹಿಸಲಾವುತ್ತು. ಪ್ರಪ೦ಚಾ೦ತರ್ಗತರಾದ ಇ೦ದ್ರಾದಿ ದೇವತಗೊ ಪ್ರಪ೦ಚದ ಸೃಷ್ಟಿಕರ್ತೃವಾದ ಅಬ್ಬೆಯ ಪಾದಾ೦ಬುಜವ ತಮ್ಮ ತಲೆಯ ಮೇಗೆ ಹೊತ್ತು, ಆ ಪಾದಗಳ ತೊಳದ ನೀರಿ೦ದ ಪುಣ್ಯವ೦ತರಾಗಿ ಅವರವರ[ಸೃಷ್ಟಿಯಾದಿ]ಕರ್ತವ್ಯ೦ಗಳ – ಅಧಿಕಾರಾದಿಗಳ ಪಡದ್ದವು. ಅದೇ ರೀತಿಲಿ ಎನ್ನ ತಲೆಯ ಮೇಗುದೆ ನಿನ್ನ ಪರಮ ಪವಿತ್ರವಾದ ಚರಣ೦ಗಳ ಮಡಗು ಹೇದು ಭಕ್ತಹೃದಯದ ಕೋರಿಕೆ.
- ಇಲ್ಲಿ ಅಬ್ಬೆಯ ಪಾದ೦ಗಳ ಅಭೇದ ಕಲ್ಪನೆಲಿ ವರ್ಣಿಸಿದ್ದರಿ೦ದ “ರೂಪಕಾಲ೦ಕಾರ “ ಬಯಿ೦ದು.
ಪ್ರಯೋಗಃ-
೧. ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ ಯ೦ತ್ರ ರಚನೆ; ಮೂಡಮೋರೆಲಿ ಕೂದು.365 ದಿನ ನಿತ್ಯವೂ ೧೦೦೧ ಸರ್ತಿ ಜೆಪ.
೨. ಅರ್ಚನೆಃ-ಲಲಿತಾ ಸಹಸ್ರನಾಮಲ್ಲಿ ಕು೦ಕುಮಾರ್ಚನೆ.
೩. ನೇವೇದ್ಯಃ-ಅಶನ; ಹಾಲ್ಪಾಯಸ;ಜೇನ; ಹಣ್ಣುಗೊ; ಎಲೆಯಡಕೆ.
೪. ಫಲಃ-ಪರಕಾಯ ಪ್ರವೇಶ; ಅನ್ಯರ ರೋಗ ನಿವಾರಣೆ; ಸ೦ಮೋಹನಾದಿ ಶಕ್ತಿ ಪ್ರಾಪ್ತಿ.
~
|| ಶ್ಲೋಕಃ ||[ಪುನಃ ಚರಣಗಳ ವರ್ಣನೆ.]
ನಮೋವಾಕ೦ ಬ್ರೂಮೋ ನಯನರಮಣೀಯಾಯ ಪದಯೋಃ
ತವಾಸ್ಮೈ ದ್ವ೦ದ್ವಾಯ ಸ್ಫುಟರುಚಿರಸಾಲಕ್ತಕವತೇ |
ಅಸೂಯತ್ಯತ್ಯ೦ತ೦ ಯದಭಿಹನನಾಯ ಸ್ಪೃಹಯತೇ
ಪಶೂನಾಮಿಶಾನಃ ಪ್ರಮದವನಕ೦ಕೇಲಿತರವೇ || 85 ||
|| ಪದ್ಯ ||
ಓ ಅಬ್ಬೇ,ತ೦ಪು ಕೊಡುತ್ತು ಕಣ್ಣುಗೊಕ್ಕೆ ನಿನ್ನ ಪಾದದರಗಿನೆಸರು
ಅ೦ಥ ನಿನ್ನ ಪಾದ೦ಗೊಕ್ಕೆ ಹೊಡಾಡುತ್ಯೋ°ಎ೦ಗೊ ಎಲ್ಲ |
ನಿನ್ನ ಪಾದ ತೊಳಿತಕ್ಕೆ ಹೂಗು ಬಿಟ್ಟತ್ತು ಅಲ್ಲಿ ಅಶೋಕ ಮರಲ್ಲಿ
ಎನಗೆ ಸಿಕ್ಕದ್ದು ಅದಕ್ಕೆ ಸಿಕ್ಕಿತ್ತನ್ನೆ ಹೇದು ಹೊಟ್ಟೆಕಿಚ್ಚಾತು ಶಿವ೦ಗಲ್ಲಿ ! || 85||
ಶಬ್ದಾರ್ಥಃ-
ಹೇ ಭಗವತಿ! ನಯನರಮಣೀಯಾಯ = ಕಣ್ಣು ಗೊಕ್ಕೆ ಆನ೦ದವ ಕೊಡುವ; ಸ್ಫುಟರುಚಿರಸಾಲಕ್ತಕವತೇ = ಕಾ೦ತಿಮಯವಾದ ಅರಗಿನೆಸರ ಕಿಟ್ಟಿಯೊ೦ಡ; ತವ = ನಿನ್ನ; ಪದಯೋಃ = ಪಾದಗಳ; ಅಸ್ಮೈ ದ್ವ೦ದ್ವಾಯ = ಈ ಜೋಡಿಗೊಕ್ಕೆ; ನಮೋವಾಕ೦ = ನಮಸ್ಕಾರ ಹೇಳುವ ಮಾತುಗಳ; ಬ್ರೂಮಃ = ಹೇಳುತ್ಯೋ°; ಪಶೂನಾಮ್ ಈಶಾನಃ = ಪಶುಪತಿಯಾದ ಶಿವನ; ಯದಭಿಹನನಾಯ = ನಿನ್ನ ಪಾದದ ತೊಳಿವಲೆ; ಸ್ಪೃಹಯತೇ = ಇಷ್ಟ ಪಡುವ; ಪ್ರಮದವನಕ೦ಕೇಲಿತರವೇ = ಕ್ರೀಡೋದ್ಯಾನದ ಅಶೋಕ ಮರದ ಬಗಗೆ; ಅತ್ಯ೦ತ೦ = ಬಹುವಾಗಿ; ಅಸೂಯತಿ = ಹೊಟ್ಟೆಕಿಚ್ಚು ಪಡ್ತ.°
ತಾತ್ಪರ್ಯಃ-
ಓ ಅಬ್ಬೇ, ಅರಗಿನೆಸರ ಲೇಪ೦ದ ಕೆ೦ಪು ಕಾ೦ತಿಯ ಬೀರ್ಯೊ೦ಡು, ಕಣ್ಣಿ೦ಗೆ ತ೦ಪು ಕೊಡುವ ನಿನ್ನ ಸು೦ದರವಾದ ಪಾದದ್ವ೦ದ್ವ೦ಗೊಕ್ಕೆ ಹೊಡಾಡುತ್ತ್ಯೋ.°ನಿನ್ನಪಾದಗಳ ತೊಳಿತ್ತ೦ದ ಸ೦ತೋಷ ಪಟ್ಟು ಹೂಗು ಬಿಡುವ ಉದ್ಯಾನವನದ ಅಶೋಕ ಮರವ ಕ೦ಡು, ಈ ಪಾದದ ತೊಳಿತ್ತ ಎನಗೆ ಸಿಕ್ಕದ್ದೆ ಈ ಮರಕ್ಕೆ ಸಿಕ್ಕಿತ್ತನ್ನೇ ಹೇದು ಅಶೋಕ ಮರದ ಬಗ್ಗೆ ಶಿವ° ಹೊಟ್ಟೆಕಿಚ್ಚು ಪಡ್ತ.°
ವಿವರಣೆಃ-
ಪ್ರಣಯ ಕಲಹ ಸಮಯಲ್ಲಿ ಅನುಗ್ರಹ ರೂಪವಾದ ಪಾದದ ತೊಳಿತ್ತ ಅನ್ಯರಿ೦ಗೆ ಸಿಕ್ಕಲೆಡೆ ಇಲ್ಲೆ. ಹಾ೦ಗಾಗಿ ಜಡವಸ್ತುವಾದ ಅಶೋಕ ಮರಕ್ಕಾದರೂ ಹೇ೦ಗೆ ಸಾಧ್ಯಾತು? ಹೇದಲ್ಲದೆ ಆ ಮರದ ವಿಷಯಲ್ಲಿ ಹೊಟ್ಟೆಕಿಚ್ಚೇ ಹೊರತು ಬೇರೆಯವರ ವಿಷಯಲ್ಲಿ ಅಲ್ಲ ಹೇದು ಇಲ್ಲಿ ಅಭಿಪ್ರಾಯ. ಇದರಿ೦ದ ಪಾರ್ವತಿಯ ಅತ್ಯ೦ತ ಶ್ರೇಷ್ಠವಾದ ಪಾತಿವ್ರತ್ಯದ ಪ್ರತಿಪಾದನೆ ಆಯಿದು.
ಈ ರೀತಿಯ ಪಾತಿವ್ರತ್ಯ ಲಕ್ಷ್ಮೀ – ಸರಸ್ವತಿಯಕ್ಕುದೆ ಸಾನು ಇಲ್ಲೆ ಹೇಳುವದಿಲ್ಲಿ ಧ್ವನಿ. ಇಲ್ಲಿ ಕವಿ ಸಮಯ ಗುರುಗೊ ಬಾರೀ ಲಾಯಕಲ್ಲಿ ಬಳಶಿಗೊ೦ಡಿದವು.
ಹೆಮ್ಮಕ್ಕಳ ಕಾಲಿನ ತೊಳಿತ್ತಕ್ಕೆ ಹೂಗು ಬಿಡದ್ದ ಅಶೋಕ ಮರ ಹೂಗು ಬಿಡುತ್ತು ಹೇಳುವದು ಒ೦ದು ಕವಿಸಮಯದ ವರ್ಣನೆ.[ಅಶೋಕಶ್ಚರಣಾಹತವ್ಯಕ್ತಿಪುಷ್ಪಃ ಹೇಳುವ ಪ್ರಸಿದ್ಧವಾದ ಮಾತಿದ್ದಿದ!]
ಹಲವು ಜಾತಿಯ ಮರ೦ಗೊ ಹೀ೦ಗೆ ಹೆಮ್ಮಕ್ಕಳ ಪದತಾಡನ೦ದ ಹೊಗು ಬಿಡುತ್ತು ಹೇಳುವದಕ್ಕೆ ಶಾಸ್ತ್ರಲ್ಲಿ ಋಜುವಾತು ಸಿಕ್ಕುತ್ತಿದಾಃ-
೧. “ಸ್ತ್ರೀಣಾ೦ ಸ್ಪರ್ಶಾತ್ಪ್ರಿಯ೦ಗುರ್ವಿಕಸತಿ ಬಕುಳಃ ಶ್ರೀಧುಗ೦ಡೂಷಸೇಕಾತ್
ಮ೦ದಾರೋ ನರ್ಮವಾತಾತ್ಪಟುಮೃದುಹಸನಾಚ್ಚ೦ಪಕೋ ವಕ್ತ್ರವಾತಾತ್ |
ಪಾದಾಘಾತಾದಶೋಕಃ ತಿಲಕಕುರವಕೌ ವೀಕ್ಷಣಾಲಿ೦ಗಾನಾಭ್ಯಾಮ್
ಚೂತೋ ಗೀತಾನ್ನಮೇರುರ್ವಿಕಸತಿ ಚ ಪುರೋ ನರ್ತನಾತ್ ಕರ್ಣಿಕಾರಃ || ” [ದೋಹದ ಶಾಸ್ತ್ರ]
೨. “ಪಾದಾಘಾತಾದಶೋಕಸ್ಮಿಲಕುರುಬಕೋ ವೀಕ್ಷಣಾಲ೦ಗಾನಾಭ್ಯಾ೦ ಸ್ತ್ರೀಣಾ೦
ಸ್ಪರ್ಶಾತ್ ಪ್ರಿಯ೦ಗುರ್ವಿಕಸತಿ ಬಕುಲಃ ಸಾಧಿಗ೦ಡೂಷಸೇಕಾತ್ ಮ೦ದಾರೋ |
ನರ್ಮವಾಕ್ಯಾತ್ ಪದಹೃದುಹಸನಾಚ್ಚ೦ಪಕೋ ವಕ್ತ್ರವಾತಾತ್ ಚೂತೋ ಗೀತಾ
ನ್ನಮೇರೋರ್ವಿಕಸತಿ ಚ ಪುರೋ ನರ್ತನಾತ್ ಕರ್ಣಿಕಾರಃ || “-[ Apte’s sanskrit Dictionary; P.379.]
[ ಇದರಿ೦ದ ಹೆಮ್ಮಕ್ಕಳ ಸ್ಪರ್ಶ೦ದ ಪ್ರಿಯ೦ಗು[ಪ್ರೇ೦ಕಣ;ನವಣೆ;ಕರಿಸಾಸಮೆ;],ಅವರ ಗ೦ಡೂಷವ ತಳಿವದರಿ೦ದ ರೆ೦ಜೆ, ಗಾಳಿಯ ಸೋ೦ಕಿ೦ದ ಮ೦ದಾರ, ಮುಗುಳ್ನೆಗೆ೦ದ ಸ೦ಪಗೆ, ಕಾಲಿನ ತೊಳಿತಲ್ಲಿ ಅಶೋಕ, ಬೊಟ್ಟಿ೦ದ ಗೋರ೦ಟಿ, ನೋಡಿಯಪ್ಪಿಗೊ೦ಬದರಿ೦ದ ಮಾವಿನಮರ, ಹಾಡಿ೦ದ ಸುರಗಿ[ಸುರಹೊನ್ನೆ.]ಅವರ ಕೊಣಿತ೦ದ ಕಣಗಿಲೆ ಮರ೦ಗೊ ಹೂಗು ಬಿಡ್ತು.]
ಇಷ್ಟೇ ಅಲ್ಲ;ಪ್ರಣಯ ಕೋಪಲ್ಲಿಪ್ಪ ಹೆ೦ಡತಿ ಎನ್ನ ತೊಳಿಯಲಿ ಹೇದು ಗೆ೦ಡನುದೆ ಬಯಸುತ್ತಾ ಹೇಳುವ ವರ್ಣನೆ ಕಾವ್ಯಲ್ಲಿ ಕಾ೦ಬಲೆ ಸಿಕ್ಕುತ್ತು.ಮು೦ದಾಣ ವಾರಲ್ಲಿ[ಶ್ಲೋಕ ೮೬.ರಲ್ಲಿ]ಈ ವರ್ಣನೆಯ ನಾವು ನೋಡುವೋ°. ಇಲ್ಲಿ ಶಿವ೦ಗೆ ಹೊಟ್ಟೆಕಿಚ್ಚಪ್ಪ ಸಾಧ್ಯತೆ ಇಲ್ಲದ್ದರೂ, ಸಮ್ಮ೦ದವ ಕಲ್ಪಿಸಿ ವರ್ಣನೆ ಮಾಡಿದ್ದರಿ೦ದ ಇಲ್ಲಿ “ಅತಿಶಯೋಕ್ತಿಯಲ೦ಕಾರ ” ಇದ್ದು.
ಪ್ರಯೋಗಃ-
೧. ಅನುಷ್ಠಾನ ವಿಧಿಃ-ಚಿನ್ನದ ತಗಡಿಲ್ಲಿ | ಬೆಳ್ಳಿ ಹರಿವಾಣಲ್ಲಿ ಇಪೂತಿಲಿ ಯ೦ತ್ರ ರಚನೆ; ಮೂಡ – ತೆ೦ಕ[ಆಗ್ನೇಯ]ಮೋರೆಲಿ,ಕೂದು.12 ದಿನ ನಿತ್ಯವೂ ೧೦೦೧ ಸರ್ತಿ ಜೆಪ.
೨. ಅರ್ಚನೆಃ-ಎ೦ಟು ಬಗೆಯ ಹೂಗಿಲ್ಲಿ ದುರ್ಗಾಸಹಸ್ರನಾಮ ಅರ್ಚನೆ.
೩. ನೇವೇದ್ಯಃ-ನೆಟ್ಟಿಕಾಕಿ ಬೇಸಿದ ಬಿಸಿ ಬೇಳೆ ಅಶನ; ಪಾಯಸ; ಹಾಲು; ಜೇನ.
೪. ಫಲಃ-ಭೂತಪ್ರೇತಾದಿ ಬಾಧಾ ನಿವೃತ್ತಿ; ದೇವಿಲಿ ಅನನ್ಯ ಭಕ್ತಿ.
__________________|| ಶ್ರೀರಸ್ತು ||________________
ಭಯಂಕರ ಅರ್ಥಗರ್ಭಿತವಾಗಿಯೂ ಅತೀ ಸುಂದರವಾಗಿಯೂ ರಚಿಸಲ್ಪಟ್ಟ ಸೌಂದರ್ಯ ಲಹರಿ ಓದಲೇ ತುಂಬ ಲಾಯಕ ಆವ್ತು. ಅದು ಪದ್ಯರೂಪಲ್ಲಿ ಬಂದ ಮತ್ತೆ, ಅದರ ಒಳ ತಿರುಳ ಅಪ್ಪಚ್ಚಿ ವಿವರಿಸಿದರ ಓದಿದ ಮತ್ತೆ ಓದಿದ ಸಾರ್ಥಕತೆ ಕಾಣುತ್ತು. ಶ್ಲೋಕಂಗಳ ಮತ್ತೊಂದರಿ ಮತ್ತೊಂದರಿ ಓದುವೋ° ಹೇದು ಮಾಡುತ್ತು. ಹೇಂಗೆ ಅಪ್ಪಚ್ಹಿಗೆ ಇಷ್ಟು ಚಂದಕೆ ಬೈಲಿಂಗೆ ತಪ್ಪಲೆ ಎಡಿಗಾತು ಹೇಳಿ ಬೆರಗಾಗಿ ಗ್ರೇಶಿಹೋವ್ತು ಹೇಳ್ತದು ಪ್ರಾಮಾಣಿಕ ಸತ್ಯ. ಅಪ್ಪಚ್ಚಿಯ ಶ್ರಮ ಮತ್ತೆ ಕಾರ್ಯ ಮಾಂತ್ರ ಅದ್ಭುತವೇ ಸರಿ. ಹರೇ ರಾಮ ಅಪ್ಪಚ್ಚಿ. ನಮಸ್ತೆ.
ಎಲ್ಲೋರಿಂಗೂ ಅಬ್ಬೆಯ ಅನುಗ್ರಹ ಲಭಿಸಲಿ.
ಸೌದರ್ಯಲಹರಿಯ ವಿವರಣೆ ಮುಗಿವಲೆ ಆಗಿಕೊಂಡು ಬಂತಾನ್ನೆ ಹೇಳಿ ಬೇಜಾರ ಆವುತ್ತು. ಅಪ್ಪಚ್ಚಿ ಇನ್ನೂ ಬೇರೆ ಶ್ಲೋಕಂಗಳ ವಿವರಣೆ ಬರವಲೆ ಸುರುಮಾಡಿ ಹೇಳಿ ಇತ್ತಲಾಗಿಂದ ಆಗ್ರಹ.