Oppanna.com

ಒಂದು ಮಳೆ, ಒಂದು ಕೊಡೆ

ಬರದೋರು :   ಸುಬ್ಬಣ್ಣ ಭಟ್ಟ, ಬಾಳಿಕೆ    on   18/03/2013    2 ಒಪ್ಪಂಗೊ

ಸುಬ್ಬಣ್ಣ ಭಟ್ಟ, ಬಾಳಿಕೆ
Latest posts by ಸುಬ್ಬಣ್ಣ ಭಟ್ಟ, ಬಾಳಿಕೆ (see all)

ಮಳೆಗಾಲ ಬಂದರೆ ಕೊಡೆ ನೆಂಪಾವುತ್ತು. ಜೋರು ಬೆಶಿಲು ಇಪ್ಪಗ ಬೇಸಗೆಲ್ಲೂ ಕೊಡೆ ಬೇಕಾವುತ್ತು.
ಆದರೆ ಮಳೆಗಾಲಲ್ಲಿ ಕೊಡೆ ಬಿಟ್ಟೋನು ಹೆಡ್ಡನೇ ಸರಿ.ಕೈಲ್ಲೊಂದು ಕೊಡೆ ಇದ್ದರೆ ಧೈರ್ಯ.ಕೆಲವು ಜನ ಇಂದು ಮೋಡವೇ ಇಲ್ಲೆ ಮಳೆ ಎಲ್ಲಿಂದ ಬರೆಕ್ಕು? ಹೇಳಿ ಕೊಡೆ ಹಿಡುಕ್ಕೊಂಬಲೆ ಉದಾಶೀನ ಆದೋರು ಹೆರ ಹೋಪಗ ಬಿಟ್ಟಿಕ್ಕಿ ಹೋವುತ್ತವು.
ಬಸ್ಸಿಲ್ಲಿ ಹೋಪದಾದರೆ ಬಸ್ ಇಳುದು ರಜ ನಡೆಯೆಕ್ಕಾದರೂ ಮಳೆ ಬಂದೊಂಡಿದ್ದರೆ ಕೊಡೆ ಬೇಕಾವುತ್ತು.
ಕೆಲವು ಜನ ಏವಗಾದರೂ ಮನೆಗೆ ಎತ್ತಿದರೆ ಸಾಕು ಹೇಳಿ ಇದ್ದೋರು ಸಣ್ಣ ಸಣ್ಣ ಮಳೆಯ ಎಲ್ಲ ಗಣ್ಯ ಮಾಡುತ್ತವಿಲ್ಲೆ. ಮಾಂತ್ರ ಅಲ್ಲ ಮಳೆಯೇ ಇಲ್ಲದ್ದಿಪ್ಪಗ ಕೈಲ್ಲಿ ಕೊಡೆ ಇದ್ದರೆ ರಗಳೆಯೂ ಅಪ್ಪು!

ಬಸ್ಸಿಲ್ಲಿ ಬಾಕಿ ಅಪ್ಪದೂ ಇದ್ದು. ಎನಗೆ ತುಂಬಾ ಸರ್ತಿ ಹಾಂಗೆ ಆಗಿ ಬಸ್ಸಿಲ್ಲಿ ಬಿಟ್ಟಿಕ್ಕಿ ಹೋದ ಕೊಡೆ ಮತ್ತೆ ಸಿಕ್ಕಿದ್ದಿಲ್ಲೆ.
ಕೆಲವು ಕಂಡಕ್ಟರುಗೊ ಕೊಡೆ ನಮ್ಮದು ಹೇಳಿ ಗೊಂತಾದರೆ ತೆಗೆದು ಮಡುಗಿ ಕೇಳಿದರೆ ಮತ್ತೆ ಕೊಡುತ್ತವು. ಕೆಲವು ಜನ ಹಾಂಗೆ ಬಾಕಿ ಆದ ವಸ್ತುಗಳನ್ನೇ ನೋಡಿಗೊಂಡು ಆರಿಂಗೂ ಗೊಂತಾಗದ್ದ ಹಾಂಗೆ ಅವರ ಮನೆಗೇ ಕೊಂಡು ಹೋಕು.
ಅಂತೂ ಕೈಲ್ಲಿ ಕೊಡೆ ಇಪ್ಪದು ನಮ್ಮ ನೆಂಪಿಲ್ಲಿದ್ದರೆ ಬಿಟ್ಟು ಹೋವುತ್ತಿಲ್ಲೆ.
ತಲೆಲ್ಲಿ ಸಾವಿರಾರು ಯೋಚನೆಗೊ ಇಪ್ಪಗ ಕೆಲವೊಂದರಿ ಮರದು ಹೋಪದಿದ್ದು.ನಮ್ಮ ನೆನಪಿನ ಶಕ್ತಿಯ ಅಳವಲೆ ಕೊಡೆಯೂ ಒಟ್ಟಿಂಗೇ ಇರೆಕ್ಕು.
ಕೆಲವು ಜನಕ್ಕೆ ಬದಲಿ ಹೋಪದು ಸಾಮಾನ್ಯ! ಮೆಟ್ಟು ಬದಲಿ ಹೋಪದು ಕೊಡೆ ಬದಲಿ ಹೋಪದು ಕೆಲವು ಜನg ಅಭ್ಯಾಸ!
ಅವಕ್ಕೆ ಲಾಭವೂ ಇದ್ದು.ತನ್ನ ಕೊಡೆಯ ಬದಲಿಂಗೆ ಬೇರೆ ಕೊಡೇ,ಬೇರೆ ಮೆಟ್ಟುಹೀಂಗೆ ಕೈಕೊಡುವ ಅಭ್ಯಾಸ ಇದ್ದೋರಿಂಗೆ ಯಾವಾಗಲೂ ಅದುವೇ ಚಿಂತೆ.

ದೇವಸ್ಥಾನದ ಒಳ ಹೋಪಗ ಪಾದರಕ್ಷೆ ಮಡಗುಲೆ ಒಂದು ಕೌಂಟೆರ್ ಇರುತ್ತು. ಕೊಡೆ ಮಾಂತ್ರ ಕೈಲ್ಲೇ ಹಿಡುಕೊಳ್ಳೆಕ್ಕಾವುತ್ತು.
ಅಕಸ್ಮಾತ್ ಮಡುಗಿದಿರೋ ಅಲ್ಲೇ ಕಾದುಗೊಂಡಿಪ್ಪೋರು ಕೊಂಡು ಹೋಕು. ಮತ್ತೆ ನಮ್ಮ ಕೈಲ್ಲಿ ಕೊಡೆ ಹಿಡುಕ್ಕೊಂಡಿದ್ದರೆ ಗುರ್ತದೋರು ಕೊಡೆ ತಾರದ್ದೋರು “ಇದಾ ಈಗ ತಂದು ಕೊಡುತ್ತೆ ಓ ಅಲ್ಲಿ ವರೆಗೆ ಹೋಗಿ ಬತ್ತೆ ಒಂದರಿ ನಿಂಗಳ ಕೊಡೇ ಕೊಡಿ ಹೇಳಿದರೆ ಕೊಡದ್ದೆ ಇಪ್ಪಲೆ ಆವುತ್ತಿಲ್ಲೆ
ಹಾಂಗೆ ಕೊಂಡು ಹೋದೋನು ಬಪ್ಪಲ್ಲಿ ವರೆಗೆ ನಾವು ಕಾದು ಕೂರೆಕ್ಕಾವು. ಕೊಡದ್ದರೆ ಕೊಡೆ ಕೇಳಿದೆ ಕೊಟ್ಟ ಇಲ್ಲೆ ಹೇಳಿಯೋ ಅವನ ಕೊಡೆ ತಳದು ಹೋಕೋ? ಎಂಥ ಮನುಷ್ಯರಪ್ಪ! ಹೇಳಿಗು.
ನಾವು ಒಳ್ಳೆಯೋರು ಹೇಳುಸೆಕ್ಕಾದರೆ ಕೊಡೆ ಕೊಡೆಕ್ಕಾವುತ್ತು. ಇಲ್ಲದ್ದರೆ ಅವಂಗೆ ಕಾಣದ್ದ ಹಾಂಗೆ ಆಯೆಕ್ಕಾರೆ ಇಲ್ಲೆ ಎನಗೆ ಅರ್ಜೆಂಟ್ ಹೋಪಲಿದ್ದು ಹೇಳಿ ಅವನ ಕಣ್ಣು ತಪ್ಪುಸೆಕ್ಕಾವುತ್ತು.
ಅಂತೂ ಈ ಕೊಡೆ ನಮ್ಮ ವ್ಯಕ್ತಿತ್ವವನ್ನೇ ಪ್ರಶ್ನೆ ಮಾಡುವದೂ ಇದ್ದು. ಕೆಲವು ಜನ ದಾಕ್ಷಿಣ್ಯ ಇಲ್ಲದ್ದೆ ಎನ್ನ ಕೊಡೆಯ ಆನು ಆರಿಂಗೂ ಕೊಡೆ ಹೇಳಿ ಎಂತ ಹೇಳಿದರೂ ಕೇಳದ್ದ ಹಾಂಗೆ ಮಾಡುವೋರೂ ಇದ್ದವು.

ಕೇಳುತ್ತು ಎನ್ನ ಕೆಮಿಯಲ್ಲ. ನೋಡುತ್ತು ಎನ್ನ ಕಣ್ಣಲ್ಲ ಹೇಳಿ ಆರು ಎಂತ ಹೇಳಿದರೂ ಕೇಳುಸಿಗೊಳ್ಳದ್ದೆ ತಾನು ಪರೋಪಕಾರಿಯಾಯೆಕ್ಕು, ಜನರಿಂದ ಹೊಗಳುಸಿಗೊಳ್ಳೆಕ್ಕು ಹೇಳುವ ಆಸೆ ಇದ್ದೋರು ಮಾಂತ್ರ ಸಿಕ್ಕಿ ಬೀಳೆಕ್ಕಾವುತ್ತು.
ಬೆಶುಲಿಂಗೆ ಹಿಡಿವಲೂ ಕೊಡೆ ಬೇಕಾದರೂ ಮುಖ್ಯವಾಗಿ ಕೊಡೆ ಬೇಕಾದ್ದು ಮಳೆಗೇ ಅಲ್ಲದೋ?
ಎಂತಾದರೂ ಈ ಕೊಡೆಯ ನೆಂಪಪ್ಪದೇ ಮಳೆಗಾಲಲ್ಲಿ.

ಸಣ್ಣಾಗಿಪ್ಪಗ ಶಾಲೆಗೆ ಹೋಪಲೆ ಕೈಲ್ಲಿ ಕೆಣುಂಜೆಲು ಕೊಡುಗು. ಎಲ್ಲೋರೂ ಕೊಂಡು ಹೋಪಗ ನಾಚಿಕೆ ಇಲ್ಲೆ. ಈಗ ಕೆಣುಂಜೇಲು ಕಾಂಬಲೇ ಇಲ್ಲೆ.
ಮೇಲಾಣ ಶಾಲೆಗೆ ಹೋಪಗ ಒಂದು ಹಳೆ ಕೊಡೆ ಸಿಕ್ಕಿತ್ತು. ಹಳತ್ತಾದ ಮೇಲೆ ಕಟ್ಟೆ ಹೋಪದು ಹೀಂಗೆಲ್ಲ ರಿಪೇರಿ ಬಂದರೆ ಅಪ್ಪನತ್ರೆ ಹೇಳಿ ಕಟ್ಟ ಹಾಕುಸಿಗೊಂಡರೆ ಸರಿಯಕ್ಕು.
ಈಗ ನಾನಾ ನಮೂನೆಯ ಬಣ್ಣದ ಕೊಡೆಗೊ ಲೇಡೀಸ್, ಜಂಟ್ಸ್ಕಿಡ್ಡೀಸ್ ಹಿಂಗೆಲ್ಲ ತರ ತರದ ಕೊಡೆಗೊ ಮಾರ್ಗದ ಕರೆಲ್ಲಿಯೂ ಮಾರಾಟಕ್ಕೆ ಇರುತ್ತು.
ಮರದ ಕಾಲಿನ ಕೊಡೆ ಹಿಡುಕ್ಕೊಂಡು ಹೋಪಗಮುಂದೆ ಇದ್ದೋರ ಕಾಲಿಂಗೆ ಸಿಕ್ಕುಸಿ ಎಳವ ಕುಸೃಟಿಯೂ ಇತ್ತು.
ಹಾಂಗೆ ಎಳವಗ ಗೊಂತಿಲ್ಲದ್ದೆ ಬಿದ್ದ ಒಂದು ಹುಡುಗನ ಸರಕಾರಿ ಆಸ್ಪತ್ರೆಗೆ ಎಂಗೊ ಮಾಷ್ಟ್ರಕ್ಕಳೇ ಸೇರುಸೆಕ್ಕಾಗಿಯೂ ಬಯಿಂದು.

ಎನಗೆ ರಜ ಸುಮ್ಮನೆ ಖರ್ಚು ಮಾಡುಲೆ ಮನಸ್ಸಿಲ್ಲೆ. ಈಗ ಮದಲಾಣ ಹಾಂಗೆ ಮಳೆಯೂ ಇಲ್ಲೆ. ಮದಲು ಊರಿಲ್ಲಿಪ್ಪಗ ಎನಗೆ ಮಕ್ಕೊಗೆ ಹೀಂಗೆ ಕೊಡೆಗಳೇ ಬೇಕಾಗಿತ್ತು.
ಆದಷ್ಟು ಹಳೆ ಕೊಡೆಗಳನ್ನೇ ರಿಪೇರಿ ಮಾಡುವದು.ಕೊಡೆ ಒಂದು ಅಲಂಕಾರದ ವಸ್ತು ಅಲ್ಲನ್ನೆ.ಮಳೆಗೆ ಹಿಡಿವಲೆ ಬಾಕಷ್ಟೆ. ನಾಲ್ಕು ಮೈಲ್ ದಾರಿ ನಡೆದು ಶಾಲೆಗೆ ಹೋಯ್ಕೊಂಡಿದ್ದದು ೩೦ ವರ್ಷದ ಅಭ್ಯಾಸ!
ಅಕಸ್ಮಾತ್ ಮಳೆ ಬಂದರೂ ಹೇಂಗೋ ಸುಧಾರಿಸಿಗೊಂಡು ಆ ಕಾಲಲ್ಲಿ ನಡತ್ತು. ಈಗಾಣ ಮಕ್ಕಳು ಕೇಳವು.
ಎನಗೆ ಹೊಸ ಕೊಡೆ ತೆಗದು ಕೊಡದ್ದರೆ ಶಾಲಗೇ ಹೋವುತ್ತಿಲ್ಲೆ ಹೇಳಿ ಹಟ ಹಿಡುದರೆ ಎಂತ ಮಾಡುವದು?
ಎನ್ನ ಸಹೋದ್ಯೋಗಿಯ ಮಗ ಅವನ ಅಪ್ಪನತ್ರೆ ಶಾಲೆಲ್ಲೇ ಹಟ ಮಾಡುವದರ ಆನು ಕಣ್ಣಾರೆ ಕಂಡಿದೆ.ಒಂದರಿ ಆನು ಮಂಗ್ಳೂರಿಂಗೆ ಹೋಗಿ ಬಸ್ಸಿಲ್ಲಿ ವಾಪಾಸು ಬಪ್ಪಗ ಬಂದ್ಯೋಡಿಲ್ಲಿ ಕೆಳ ಇಳುದೆ, ಎನ್ನ ಕೊಡೆ ಎನ್ನ ಕೈಲ್ಲೆ ಅಲ್ಲ ಚೀಲದೊಳದಿಕ್ಕೆ ಭದ್ರವಾಗಿತ್ತು.
ಆದರೆ ಬಸ್ ನೊಳಗಿದ್ದವರು ಬಸ್ ಹೊರಡುತ್ತಿದ್ದಂತೆ‌ಇದೋ ನಿಮ್ಮ ಕೊಡೆ ಬಾಕಿಯಾಗಿದೆ ಎನ್ನುತ್ತ ಕೊಡೆಯೊಂದರ ಇಡುಕ್ಕಿದವು ಬಸ್ ಹೋಗಿ ಆತು.

ಕೊಡೆಗೆ ಗತಿಯಿಲ್ಲದ್ದೆ ಅಪ್ಪದು ಬೇಡ ಹೇಳಿ ತೆಕ್ಕೊಂಡೆ.ಆರದ್ದೋ ಎಂತದೋ! ಮತ್ತೆರಡು ವರ್ಷ ಎನಗೆ ಉಪಯೋಗಕ್ಕೆ ಬಂತು.
ಕೊಡೆಯ ನಿಜವಾದ ಒಡಮಸ್ತ ಮತ್ತೆಂತ ಮಾಡಿದನೋ?ಎನ್ನ ಕೊಡೆಯೂ ಹಿಂಗೆ ಬೇರೆಯೋರ ಕೈಗೆ ಹೋದ್ದೂ ಇದ್ದು ಅದರ ಆರತ್ರೂ ಹೇಳಿದ್ದಿಲ್ಲೆ.ಅಂತೂ ಮೂಲೆಲ್ಲಿದ್ದ ಕೊಡೆಗಳೋ ಹೊಸ ಕೊಡೆಗಳೋ ಬೆಣುಚ್ಚಿಗೆ ಬಪ್ಪದು ಮಳೆಗಾಲಲ್ಲಿ!
ಮಳೆಗಾಲ ಓ ಅಲ್ಲಿ ಬತ್ತು ಹೇಲಿ ಅಪ್ಪಗ ಮಾರ್ಗದ ಕರೆಲ್ಲಿ ಕೂದೊಂಡು ಕೊಡೇ ರಿಪೇರಿ ಮಾಡುತ್ತೋವು ಬಂದೆತ್ತುತ್ತವು.
ಈಗಾಣೋರಿಂಗೆ ಕಟ್ಟ ಹಾಕುಲೋ ಕಡ್ಡಿ ಸರಿ ಮಾಡುಲೋ ಪುರುಸೊತ್ತೂ ಇಲ್ಲೆ ವ್ಯವಧಾನವೂ ಇಲ್ಲೆ.
ರಿಪೇರಿಯೊವಕ್ಕೆ ಒಂದು ಅಶನದ ದಾರಿಯಾವುತ್ತು. ಆದರೆ ಹೊಸ ಕೊದೆಗಳೂ ಮಾರಗದ ಕರೆಲ್ಲಿ ಮಾರಾಟಕ್ಕಿಪ್ಪದು ಕಮ್ಮಿಗಿರುತ್ತು.
ಅಂಗುಡಿಯೊಳದಿಕ್ಕೆ ಇಪ್ಪದರ ಅರ್ಧ ಕ್ರಯ.ಎರಡು ಮಡುಸುವದು, ನಾಲ್ಕು ಮಡುಸುವದು (ಕೈಚೀಲದೊಳದಿಕ್ಕೆ ಮಡುಗುಲೂ ಆವುತ್ತು) ಉದ್ದ ಕಾಲಿಂದು ಪ್ರಾಯದೋವಕ್ಕೆ ವಾಕಿಂಗ್ ಸ್ಟಿಕ್ನ್‌ನ ಬೇರೆ ಹಿಡಿವದು ಬೇಡ.
ಆದರೆಜವ್ವನಿಗರೂ ಅದರ ತೆಕ್ಕೊಂಬದಿದ್ದು.ಮದಲಾಣೋರ ಒಂದು ಗಾದೆ ಒಂದು ಮಳೆಗೆ ಒಂದು ಕೊಡೆ ಹರಿವದೋ? ಒಳ್ಳೆ ಪ್ರಶ್ನೆ.
ಕೊಡೆ ಹರಿವದಲ್ಲದ್ದರೂ ಜಾಗ್ರತೆ ಮಾಡದ್ದೆ ಚೆಂಡಿ ಕೊಡೆಯ ಇರುಳು ಬಿಡುಸಿ ಮಡಗಿ ಒಣಗುಸದ್ದರೆ ಮತ್ತೆ ಮರದಿನ ಬಿಡುಸುವಗ ಕಟ್ಟ ಹೋಗಿಕ್ಕು( ನೂಲು ಕುಂಬಾಗಿ) ಅಥವಾ ಕಡ್ಡಿ ಒಂದಕ್ಕೊಂದು ಅಂಟಿಗೊಂಡಿದ್ದರ ಬಿಡುಸುಲೆ ಹೋಗಿ ಕಡ್ಡಿಯೇ ತುಂಡಪ್ಪದೂ ಇದ್ದು.
ಒಟ್ಟಾರೆ ಕೊಡೆಯ ಜಾಗ್ರತೆ ಮಾಡಿದರೆ ಐದಾರು ವರ್ಷವೂ ಉಪಯೋಗಕ್ಕೆ ಬಪ್ಪದಿದ್ದು.

ಹಾಂಗೆ ನಮ್ಮ ನಮ್ಮ ಸಂಬಂಧಂಗಳ, ಔದ್ಯೋಗಿಕ ವಿಷಯಂಗಳನ್ನೂ ಬರೇ ಕ್ಷುಲ್ಲಕ ಕಾರಣಕ್ಕಾಗಿ ಬಿಡುತ್ತೋರೂ ಇದ್ದವನ್ನೇ!
ಅದನ್ನೇ ಇಲ್ಲಿ‌ಎಲ್ಲ ಸಂಬಂಧಗಳನ್ನೂ ಜಾಗ್ರತೆಂದ ಕಾಪಾಡೆಕ್ಕು ಹೇಳುವದರ ಒಂದು ಮಾಳೆಗೆ ಒಂದು ಕೊಡೆ ಹೇಳಿದ್ದು.
ಹಿಂದುಮುಂದು ಆಲೋಚನೆ ಮಾಡದ್ದೆ ಕೋಪ ಬಂತು ಹೇಳಿ ಒಂದರಿ ಕೊಯ್ಕೊಂಡ ಮೂಗು ಮತ್ತೆ ಚಿಗುರುಗೋ ಜೀವನಲ್ಲಿ ಸಹನೆ ತಾಳ್ಮೆ ಇಲ್ಲದ್ದರೆ ಮೂಗಿಲ್ಲಿ ಕೋಪ ಇಪ್ಪೋರು ಎಷ್ಟೋ ಸಂಬಂಧಂಗಳ ಕಳಕ್ಕೋಳ್ಳುತ್ತವು.
ನಾವು ಮುಂದೆ ಮಡಗುವ ಹಜೆಗಳ ತುಂಬ ತುಂಬಾ‌ಆಲೋಚನೇ ಮಾಡಿ ಮಡಗೆಕ್ಕು ಹೇಳುವದರ ಹಿಂದಾಣೋರು ಬರೇ ಸಣ್ಣ ಕಾರಣಕ್ಕಾಗಿ ಸಮಾಜದ ಸಂಪರ್ಕ ಕಳಕೊಂಬ ಜನಂಗೊಕ್ಕೆ ಗೊಂತಪ್ಪಲೆ ಹೀಂಗೆ ಗಾದೆ ಮಾಡಿದ್ದವು.
ಹಿಂದಾಣೋರ ಅನುಭವದ ನುಡಿ ಮುತ್ತುಗೊ ನಮಗೆ ಆದರ್ಶವಾದರೂ ಅದರ ತಿಳುಕ್ಕೊಂಬಲೆ ತಲೆ ಉ‌ಉಉಪಯೋಗಿಸಿಗೊಂಡಿತ್ತಿದ್ದವು.

ಅಂತಾರ್ರಾಷ್ಟ್ರೀಯ ಒಪ್ಪಂದವ ಮೀರಿ, ಪಾಕಿಸ್ಥಾನದ ಹಾಂಗಿಪ್ಪ,ಅಥವಾ ಚೀನದ ಹಾಂಗಿಪ್ಪ ದೇಶವಾಗಲಿ ನಡಕ್ಕೊಂಡರೆ ನಾವು ತಾಳ್ಮೆ ತೆಕ್ಕೊಳ್ಳದಿದ್ದರೆ ನಿತ್ಯ ಯುದ್ಧ ಮಾಡಿಗೊಂಡಿರೆಕ್ಕಕ್ಕು.
ಮಕ್ಕೊ ಹೇಳಿದ್ದು ಕೇಳುತ್ತವಿಲ್ಲೆ ಹೇಳಿ ಮನೆಂದಲೋ ಶಾಲೆಂದಲೋ ಹೆರ ಹಾಕಿದ ಕೂಡಲೇ ನಮ್ಮ ಜವಾಬ್ದಾರಿ ಮುಗಿತ್ತಿಲ್ಲೆ.
ಸಣ್ಣಾಗಿಪ್ಪಗ ಸಾಕಾಷ್ಟು ಬುದ್ಧಿ ಹೇಳಿ ತಿದ್ದಿದರೆ ಉತ್ತi ಸಮಾಜದ ಪ್ರಜೆಗಳಾಗಿಕ್ಕು. ಎಲ್ಲವನ್ನೂ ಹೊಂದುಸಿಕೊಂಡು ಹೋಪ ಚಾಕಚಕ್ಯತೆ ನಮ್ಮಲ್ಲಿದ್ದರೆ ಸುಮ್ಮನೆ ತಲೆ ಬೆಶಿ ಮಾಡ್ಯೊಂಡು ಬಿ ಪಿ ಏರುಸಿಗೋಳ್ಳೆಕ್ಕಾಗಿ ಬಾರ‌ಎಲ್ಲವನ್ನೂ ಸಮಾಧಾನಂದ ಸರಿದೀಗುಸಿಗೊಂಡು ಹೋದರೆ ಈ ಲೋಕವೇ ನಮಗೆ ಸ್ವರ್ಗಾನಂದ ಕೊಡುಗು!

ಮಳೆಂದ ರಕ್ಶಣೆಗೆ ಕೊಡೆಯೇ ಆಯೆಕ್ಕು. ಬೆಶಿಲಿಂದಲೂ ಕೊಡೆ ನಮ್ಮ ಕಾಪಾಡುತ್ತು. ಶ್ರೀಮಂತರಿಂಗೆ ಒಂದು ಕೊಡೆ ಕ್ಷುಲ್ಲಕ್ಕವಾಗಿಕ್ಕು.
ಒಂದು ಮಳೆಗಾಲಲ್ಲಿ ತುಂಬಾ ಕೊಡೆಗಳ ತೆಗೆವ ಸಾಮರ್ತ್ಯವೂ ಅವಕ್ಕಿದ್ದು. ಆದರೆ ಇದ್ದ ವಸ್ತುವಿನ ಉಪಯೋಗುಸದ್ದೆ ಮೂಲಗೆ ಹಾಕಿ ಬೇರೊಂದು ತೆಕ್ಕೊಂಬದು ಮೂರ್ಖತೆ.
ಕಂಪೆನಿಗೆ ವ್ಯಾಪಾರ ಅಕ್ಕಷ್ಟೆ. ಹಾಂಗೆ ಮನಸ್ಸಿದ್ದರೆ ಕೊಡೆ ತೆಗವಲೆ ಪೈಸೆ ಇಲ್ಲದ್ದೋರಿಂಗೆದಾನ ಮಾಡಿದರೆ ಅವಕ್ಕೂ ಹೊಸ ಕೊಡೆ ಹಿಡುದ ಆನಂದ ಸಿಕ್ಕುಗು!.
ಮಕ್ಕೊಗೆ ನಾವು ತೆಗದು ಕೊಡುವ ಆಟದ ವಸ್ತುಗಳ ಹಾಂಗೆ ತೆಗದು ಮೂಲೆಲ್ಲಿ ಹಾಕಿದರೆ ದಾನ ಮಾಡಿದ ಧನ್ಯತೆ ಬಕ್ಕೋ?

ಎನಗೆ ಬಿಟ್ಟು ಹೋಪ ಕ್ರಮವೇ ಇಲ್ಲೆ. ಕೈಲ್ಲಿ ಕೊಡೆ ಇದ್ದರೆ ಕೆಲವೊಂದು ಉಪಯೋಗೆ ಆವುತ್ತು.
ನಾಯಿಯಾದರೂ ನಮ್ಮ ಮೇಲಂಗೆ ಹಾರುಲೆ ಬಪ್ಪಗ ಒಂದರಿ ಕೈ ಬೇರಿದರೆ ಸಾಕು ಓಡಿ ಹೋವುತ್ತು.
ಕೊಡೆಯ ಒಂದು ಆಯುಧವಾಗಿಯೂ ಉಪಯೋಗುಸುವೋರು ಇದ್ದವು.ಹೆದರುಸುಲೆ ಅಭಿನಯ ಮಾಡುಲಕ್ಕೇ ಹೊರತು ಕೊಡೆಯ ಎದುರಿದ್ದೋರಿಂಗೆ ಬಡಿವ ಬಡಿಗೆಯಾಗಿ ಉಪಯೋಗುಸುಲಾಗ.
ನಮಗೆ ಕೊಡೆ ಮರದು ಹೋಪ ಅಭ್ಯಾಸವಿದ್ದರೆ,ಕೈಂದ ಒಂದೆರಡು ಕೊಡೆ ಕಳದು ಹೋದರೆ ಮತ್ತೆ ಜಾಗ್ರತೆ ಬಂದು ಹೋವುತ್ತು.
ಯಾವುದೋ ಒಂದುವಸ್ತುವಿನ ಮರದು ಹೋದ್ದರಿಂದ ಹೋದ ಕೆಲಸ ಕೆವ್ಟ್ಟು ಹೋತು ಹೇಳಿ ಬಪ್ಪಲಾಗ.
ಇನ್ನೊಬ್ಬನ ಕೈಲಿ ಒಳ್ಳೆ ಕೊಡೆ ಕಂಡಪ್ಪಗ ತನಗೂ ಹಾಂಗಿಪ್ಪದೇ ಕೊಡೆ ತೆಗೆಯೆಕ್ಕು ಹೇಳಿ ತೋರುವದಿದ್ದು.
ಹಾಂಗೆಲ್ಲ ನಮ್ಮ ಮನಸ್ಸಿನ ಅನಿಸಿಕೆಗಳೆಲ್ಲ ಪೂರೈಸಿಗೊಳ್ಳೆಕ್ಕು ಹೇಳುವದು ಭ್ರಮೆಯಕ್ಕಷ್ಟೆ!

~*~*~

2 thoughts on “ಒಂದು ಮಳೆ, ಒಂದು ಕೊಡೆ

  1. ಲೇಖನ ಪಷ್ಟಾಯಿದು. ಓದಿಯಪ್ಪಗ ಸಣ್ಣಾದಿಪ್ಪಗ ಹೇಳಿಕೊಂಡಿತ್ತ ಪದ್ಯ ನೆಂಪಾತು.
    “ಪಿರಿ ಪಿರಿ ಮಳೆಗೆ ಕೊಡೆ ಯಾಕೆ..?
    ಪೋಲೀಸನ ತಲೆಗೆ ಟೊಪ್ಪಿ ಯಾಕೆ..?”
    ಆರಿಂಗಾದರೂ ಗೊಂತಿದ್ದಾ..? 🙂 🙂

  2. ಕೊಡೆ ಕೊಡೆ ಕೊಡೆ. ‘ಕೊಡೆಯ ಬಗ್ಗೆ ಯಾವ ವಿಷಯವೂ ಬಿಟ್ಟು ಕೊಡೆ’ ಹೇದು ಮಾಡಿದಿ.

    ಅಕೇರಿಗೆ [ಕೈಲ್ಲಿ ಕೊಡೆ ಇದ್ದರೆ ಕೆಲವೊಂದು ಉಪಯೋಗೆ ಆವುತ್ತು.] ಇಷ್ಟು ಓದಿಯಪ್ಪಗ ನಾಯಿ ಹತ್ರೆ ಬಪ್ಪಗ ಹೆದರುಸಲೂ ಆವ್ತು ಹೇಳಿ ಒಪ್ಪ ಬರವೋಳಿ ಗ್ರೇಶಿ ಮುಗುಶೆಕ್ಕಾರೆ ಮತ್ತಾಣ ವಾಕ್ಯಲ್ಲಿ ಅದನ್ನೂ ಹೇಳಿ ಆಯ್ದು ನಿಂಗೊ. 😀

    ಅಪ್ಪಪ್ಪು…ಹರ್ಕಟೆ ಕೊಡೆ, ಅದರ ಕಡ್ಡಿ, ಕಾಲು, ವಸ್ತ್ರ ಸಾನ ನವಗೆ ಹಲವು ಉಪಯೋಗಕ್ಕೆ ಬೇಕಾವ್ತು. ಶುದ್ದಿ ಪಷ್ಟಾಯ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×