ಬರದೋರು :   ಸುಬ್ಬಣ್ಣ ಭಟ್ಟ, ಬಾಳಿಕೆ    on   25/03/2013    1 ಒಪ್ಪಂಗೊ

ಸುಬ್ಬಣ್ಣ ಭಟ್ಟ, ಬಾಳಿಕೆ
Latest posts by ಸುಬ್ಬಣ್ಣ ಭಟ್ಟ, ಬಾಳಿಕೆ (see all)

ಕಾಲ! ಎಲ್ಲ ಸರ್ತಿಯೂ ನಮ್ಮ ಸೋಲು ಗೆಲುವುಗಳ, ಸುಖ ನಲಿವುಗಳ ಗ್ರೇಶುತ್ತಿಪ್ಪಗ ಪಕ್ಕನೆ ನೆಂಪಪ್ಪದು ಕಾಲ!
ಎಲ್ಲಕ್ಕೂ ಹೊಣೆ. ನಮ್ಮ ಹೊಣೆಗಾರಿಕೆ ತಪ್ಪುಸಿಗೊಂಬಲೆ ದೂರಿಗೊಂಬಲೆ ಸುಲಭಲ್ಲಿ ಸಿಕ್ಕುವದು ಕಾಲ!.
ತಪ್ಪು ಆರದ್ದೇ ಇರಲಿ,ಆರೇ ಮಾಡಿರಲಿ ಹೇಳುವದು ಎಲ್ಲ ಕಾಲದ ಮಹಿಮೆ.
ಅವ ಇಂಥ ಕೆಲಸ ಮಾಡುವೋನು ಅಲ್ಲ. ಎಲ್ಲ ಕಾಲನ ಲೀಲೆ ಹೇಳಿ ಜಾರಿಗೊಂಬದು ಸಾಮಾನ್ಯ.
ತನ್ನ ತಪ್ಪಿನ ಅಥವಾ ತನ್ನೋರ ತಪ್ಪಿನ ಆರೂ ಒಪ್ಪಿಗೊಂಬಲೆ ತಯಾರಿದ್ದವೋ ಹೇಳಿ. ಬುದ್ಧಿಗೇಡಿತನಂದಲೋ ಯೋಚನೆ ಮಾಡದ್ದೆ ಮುಂದುವರುದ್ದರಿಂದಲೋ, ಅಥವಾ ಬೇಕು ಬೇಕು ಹೇಳಿಯೋ ಒಟ್ಟಾರೆ ತಪ್ಪು ಆಗಿಹೋತು ಹೇಳಿ ಆದರೆ ಪಶ್ಚಾತ್ತಾಪವೇ ಪ್ರಾಯಶ್ಚಿತ್ತಡೊ.
ತಾನು ತಪ್ಪೇ ಮಾಡಿದ್ದಿಲ್ಲೆ ಹೇಳಿ ಸಮರ್ಥುಸುವೋನು ಪಶ್ಚಾತ್ತಾಪ ಪಡುಲಿದ್ದೋ?ಅರಿಯದ್ದೆ ಮಾಡಿದ ತಪ್ಪಿನ ಗೊಂತಾದ ಮೇಲೆ ಎಲ್ಲೋರ ಎದುದು ಒಪ್ಪಿಗೊಂಡು ಕ್ಷಮೆ ಕೇಳುವದು ಅದಕ್ಕೆ ಪಶ್ಚಾತ್ತಾಪದ ಪರಿಹಾರ ಮಾಡಿಗೊಂಬದು ದೊಡ್ಡ ಮನಸ್ಸು.
ಒಬ್ಬ ಇಬ್ಬ ಹೇಳಿರೆ ಅಕ್ಕು. ಆದರೆ ಇಡೀ ಲೋಕವೇತನ್ನ ತಪ್ಪಿನ ಮುಚ್ಚುಲೆ ವಿಷಯ ಮರೆಸಿಯೋ ಹೇಂಗೋ ತಪ್ಪುಸಿಗೊಂಬದು ಕಾಲದ ಮಹಿಮೆಯೋ?
ದಿನ ನಿತ್ಯ ಪೇಪರಿಲ್ಲಿ ಓದುವ ಗೋಹತ್ಯೆ,ಹಾಂಗೆ ಅತ್ಯಾಚಾರ, ಕಳ್ಳತನ, ದರೋಡೆ ಎಲ್ಲಮಾಡುವದು ತಪ್ಪು ಹೇಳಿ ಗೊಂತಿದ್ದರೂ ಅಂಥ ತಪ್ಪು ಮಾಡುವದು ಕಾನೂನು ನಿಯಮ ಪ್ರತಿಪಾದಕರಾದ ಬುದ್ಧಿವಂತರೇ ಸಿಕ್ಕಿಬಿದ್ದು ಮತ್ತೆ ತಪ್ಪುಸಿಗೊಂಬದು ಕಾಲದ ಮಹಿಮೆಯೋ?
ಅಂಥೋರಿಂಗೆ ಮಾಂತ್ರ ಈ ಕಾಲವೋ?
ಮನಸ್ಸು ಮನಸ್ಸುಗಳ ಮಿಲನ ಮತ್ತೆ ದೇಹಗಳ ಮಿಲನ ಎಲ್ಲ ಪಾಶ್ಚಾತ್ಯರಲ್ಲಿ ರೂಡಿಯಾಗಿಕ್ಕು. ಹಾಂಗಾದರೆ ಅಲ್ಲಿಗೊಂದು ಕಾಲ, ಇಲ್ಲಿಗೊಂದು ಕಾಲ ಹೇಳಿ ಇದ್ದೋ?
ಅಥವಾ ದೇವಲೋಕದ ಅಪ್ಸರಸ್ಸುಗಳ ಬಗ್ಗೆಯೋ ಚರ್ಚೆ ಮಾಡುತ್ತಿಲ್ಲೆ. ನಮ್ಮ ಸಮಾಜ ,ಸಂಸ್ಕೃತಿ ಎಂತ ಹೇಳುತ್ತು?
ಎಂತಕೆ ಈ ಶಾಸ್ತ್ರ ಮಾಡಿದ್ದವು? ಮುಂದಾಣೋವು ಹೀಂಗೆ ನಡಕ್ಕೊಳ್ಳೆಕ್ಕು ಹೇಳಿ ಒಂದು ಸಂಘಟನೆಯೋವು ಒಂದು ಶಾಸ್ತ್ರ ಮಾಡಿದ್ದವು.
ಲೋಕಕ್ಕೇ ಬೇಲಿ ಕಟ್ಟಲೆಡಿಯ. ವಿವೇಕಾನಂದನ ಹಾಂಗಿದ್ದೋರು ಹೇಳಿ ಅವಕ್ಕೆ ಗೊಂತಾಗಿತ್ತು. ಈಗ ನಮ್ಮಲ್ಲಿದ್ದೋರೇ ಒಂದು ವಿಭ್ಹಾಗದ ವೋಟ್ ಗಿಟ್ಟುಸುಲೆ ಅವಕ್ಕೆ ರೀತಿ ನಿಯಮ ಯಾವದೂ ಇಲ್ಲೆ.
ನಕ್ಸಲ್ಗಳ ಹುಟ್ಟು ಹಾಕಿದೋರು. ನಮ್ಮ ಜೀವಿತ ಎಷ್ಟೋ ಕರ್ತವ್ಯ ಎಂತದೋ ಹೇಳುವ ವಿಚಾರ ಇಲ್ಲೆ. ಒಟ್ಟಾರೆ ಬದುಕು ನಡೆಶಿದರೆ ಆತು.
ಬೀಳದ್ದಜ್ಜನ ಕತೆಯ ಹಾಂಗೆ ಟಿವೀ ಯೋವಕ್ಕೆ ಸೀರಿಯಲ್ ಬೇಕು. ನೋಡುವ ಬೆಗುಡಂಗೊ ಏನೇ ಹೇಳಲಿ. ಅವಕ್ಕೆ ಬೇಕಾದ್ದು ಪೈಸೆ.

~

ಹತ್ತು ವರ್ಷದ ಬದುಕಿನ ಕತೆ ಇನ್ನೂ ಮುಂದುವರಿತ್ತಿದ್ದು.
ಕಾಂಬ ಅತ್ಯಾಚಾರ, ದರೋಡೆ ಮಾಡುವ ಕ್ರಮಂಗೊ ಕಲಿವೋರಿಂಗೆ ಕಲ್ತೋಂಬಲಕ್ಕು. ಡ್ರಗ್ಸ್ ಸೇವನೆ ಕಲ್ತ ಹುಡುಗಿಯ ಚಿಕಿತ್ಸೆ ಮಾಡಿಯೂ ಗುಣ ಆಗದ್ದೆ ಆತ್ಮಹತ್ಯೆ ಮಾಡಿಗೋಂಡು ಹೆತ್ತೋರಿಂಗೆ ದುಃಖ ಮಾಂತ್ರ ಬಿಟ್ಟಿಕ್ಕಿಹೋದ ಕತೆ ಪೇಪರಿಲ್ಲಿ ಇತ್ತು.
ಇದು ಕಾಲದ ಮಹಿಮೆಯೋ? ಒಂದು ವಿಭಾಗದ ಜನಂಗೊ ಸುಲಭಲ್ಲಿ ದುಡ್ಡು ಮಾಡುವ ದಂಧೆ ಮಾಡುವೋವಿದ್ದವು.
ಮಕ್ಕಳಲ್ಲಿಯೇ ಕೆಲವರ ಹುಡುಕ್ಕಿ, ಅವಕ್ಕೆ ಕಮಿ ನ್ ರೂಪಲ್ಲಿ ಒಳುದವಕ್ಕೆ ಹಂಚುವ ಹಾಂಗೆ, ಚಟ ಬೆಳೆಶಿಗೊಂಡ ಮೇಲೆ ಚಿನ್ನದ ಮೊಟ್ಟೆಯೇ ಅವಕ್ಕೆ ಸಿಕ್ಕುಗು.
ಆರಕ್ಷಕರಿಂಗೂ ರಜ ಲಂಚ ಕೊಟ್ಟರೆ ವ್ಯಾಪರ ಸಲೀಸು! ಇದೆಲ್ಲವೂ ಕಾಲದ ಮಹಿಮೆಯೋ?
ಸುಳಿಲ್ಲಿ ಬೀಳುವೋರ ಮೇಲೆ ಮಾಂತ್ರ ಕಾಲದ ಪ್ರತಾಪವೋ?ಡಿಲ್ಲಿಲ್ಲಿ ನಡೆದ ಘಟನೆಯ ನೋಡಿದೋರು ಇದ್ದರೂ ವiನವಾಗಿಪ್ಪಲೆ ಅವಕ್ಕೆ ಧೈರ್ಯ ಹೇಳಿ ಭರವಸೆ ಕೊಟ್ಟು ಸಾಕ್ಷಿ ಹೇಳುಸಿದರೆ ಪೈಕ್ಯೋರೇ ಸಿಕ್ಕಿ ಬೀಳುಗು!
ಅದಕ್ಕೆ ಕಣ್ಣುಕಟ್ಟಿನ ತನಿಖೆ. ಉಜ್ರೆ ಹತ್ಯೆಯ ಬಗ್ಗೆ ಸತ್ಯ ಗೊಂತಿದ್ದ ಅಧಿಕಾರಿಗಳೂ ಬಾಯಿ ಮುಚ್ಚಿ ಕೂದಿಕ್ಕು..
ಇದೆಲ್ಲ ಕಾಲದ ಮಹಿಮೆಯೋ?ಇಂದ್ರಾಣ ಸರಕಾರ ಮಾಡುವ ಹಗರಣ ತೋರುಸಿದರೆ ಆರನ್ನೋ ಜೈಲಿಂಗೆ ಹಾಕಿ ಕಣ್ಣು ಕಟ್ಟಿನ ವಿಚಾರಣೆ.ಮದಲಾಣೋವು ಹೇಳುಗು “ಅಡಕ್ಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಹೇಳಿ”.
ಇಂದು ಆನೆಗೆ ಹೋದ ಮಾನ ಅಡಕ್ಕೆ ಕೊಟ್ಟರೆ ಮುಗುತ್ತು!

ಶಾಸ್ತ್ರಿಗಳು ರೈಲ್ವೇ ಮಮ್ತ್ರಿಯಾಗಿಪ್ಪಗ ಒಂದು ಏಕ್ಸಿಡೆಂಟ್ ಆದ ಕೂಡಲೇ ಪದವಿಗೆ ರಾಜಿ ಕೊಟ್ಟಡೊ. ನೆಹರು, ಮೆನೊನಿಬ್ರಿಂದಾಗಿ ಭೂಭಾಗವೇ ನಷ್ಟವಾದರೂ “ಹೆಚ್ಚು ಕಾಲ ಪ್ರಧಾನಿ ಮಂತ್ರಿಯಾಗಿದ್ದ ಕೀರ್ತಿ ಇದ್ದನ್ನೆ! ಅದುದೇ ಅಂದ್ರಾಣ ಕಾಲಕ್ಕೆ.
ಮಗಳು ಮತ್ತೊಂದು ಮಾಡಿತ್ತು. ಅಂತೂ ಸಾಲದ ಹೊರೆ ಹೊರುಸಿಕ್ಕಿ ಹೋದವು.
ಮತ್ತೆ ಬಂದೋರುದೆ ಬರ್ಕತ್ತು ಮಾಡಿದ್ದವೋ? ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಹೇಳುವದು ಒಂದು ಗಾದೆ. ಎಲ್ಲೋರೂ ಅವರವರ ಕಾಲಲ್ಲಿ ದೇಶವ ಗುಂಡಾಂತರ ಮಾಡಿದ್ದಂತೂ ಖರೆ!
ಅತ್ತೆ ಒಡೆದ ಅಳಗೆಗೆ ಲೆಕ್ಕ ಬೇಡ! ಸೊಸೆಯ ಮೇಲೆ ಗೂಬೆ ಕೂರುಸುಲೆ ಸೊಸೆ ಕೈಯಿಂದ ಪರಾಮೋಶಿಂದ ಒಡದು ಹೋದ್ದಕ್ಕೂ ದಂಡ ಕೊಡೆಕ್ಕು.

ಒಂದೊಂದು ಯುಗದ ಕತೆ ಬೇರೆ ಬೇರೆ ಕವಿಗೊ ಬರದವು.
ಇಡೀ ಜಗತ್ತೇ ವ್ಯಾಸೋಚ್ಚಿಷ್ಟ ಹೇಳಿಯೂ ಹೇಳಿದವು. ಅಂದ್ರಾಣ ಕಾಲಕ್ಕೆ ನಂಬಿದವು. ಇಂದು ಪುರಾಣವನ್ನೆ ನಂಬದ್ದೋವು,ಪುರಾಣ ಪುರುಷರ ಆದರ್ಶ ಒಪ್ಪುತ್ತವೋ?
ರಾಮಾಯಣಲ್ಲಿ ರಾಮನ ಆಳ್ವಿಕೆ ಜನಂಗೊಕ್ಕೆ ಕೊಶಿ ಕೊಟ್ಟತ್ತು. ಈಗಾಣೋವಕ್ಕೆ ಗನಿ ಹಣವೂ ಶೇಂದಿ ಶರಾಬು ಮಾರಿದ ಲಾಭವೂ ಕದ್ದು ತಂದ ಹಣವೂ ವಿದೇಶಿ ಬೇಂಕಿಲ್ಲಿ ಮಡಗುಲಾವುತ್ತು.
ಪಾಪದೋವಕ್ಕೆ ಕೊಡುಲೆ ತೆಗೆದು ಮಡಗಿದ ಹಣಲ್ಲಿಯೂ ಲಾಭಾಂಶ ಸಿಕ್ಕೆಕ್ಕು.
ಇದುದೇ ಕಾಲ ಮಹಿಮೆಯೋ ಅಲ್ಲ ಮನುಷ್ಯರ ಅರಿವಿನ ಪರಾಕಾಷ್ಟೆಯೋ?
ಕಾಲವ ಇಂಥದಕ್ಕೆಲ್ಲ ದೂರುವದು ಪಲಾಯನ ವಾದ ಹೇಳುವದು ಎನ್ನ ಅಭಿಪ್ರಾಯ.ಕಾಲ ಎಂತದೂ ಮಾಡುತ್ತಿಲ್ಲೆ.
ಎಲ್ಲ ಮನುಷ್ಯರೇ ಮಾಡುವದು. ಎಲ್ಲೋರನ್ನು ಹೆತ್ತದು ಹೇಂಗೆ ಅವರವರ ಅಬ್ಬೆಕ್ಕಳೆ!

ಆದರೂ ಅಬ್ಬೆ ಕೈಂದ ತಪ್ಪಿ ತಾನೇ ನಡವಲೆ ಶುರು ಮಾಡಿದ ಮೇಲೆ ಪರಿಸರಂದ ಕಲಿತ್ತವು.ಕೆಟ್ಟದು ಬೇಗ ಬತ್ತು.
ಶಾಲೆಲ್ಲಿಯೂ ಕಲ್ತದು ಒಂದು ಉದ್ಯೋಗ ನಿಮಿತ್ತ ಮಾಂತ್ರ! ಮತ್ತೆ ಅವರವರ ಆಯ್ಕೆಯಂತೆ ಬೇಕಾದ ಈಟು ನೀರು ಶೇರುಸ್ಯೊಂಡು ವಂಶಾಭಿವೃದ್ಧಿ ಮಾಡಿಗೊಳ್ಳುತ್ತವು.
ಹೊಟ್ಟೆ ತುಂಬುಸುಲೆ ಕಲ್ತ ವಿದ್ಯೆ ಮತ್ತೆ ತನ್ನ ಸಂಪತ್ತು ಹೆಚ್ಚುಸಿಗೊಂಬಲೆ ಅಡ್ಡ ದಾರಿ ಹಿಡಿತ್ತವು.
ತನ್ನದರ ಮರೆಶುಲೆ ಬೇರೆಯೋರನ್ನೂ ಸೇರುಸ್ಯೊಂಡು ಎಲ್ಲೋರೂ ಭ್ರಷ್ಟಾಚಾರಿಗಳೇ ಹೇಳುವ ಆರೋಪ ಹೊರುಸುತ್ತವು.

“ಹನಿ ಕೂಡಿ ಹಳ್ಳ ತೆನೆಗೂಡಿ ರಾಶಿ ” ಹೇಳಿದ ಹಾಂಗೆ ಪ್ರತಿಯೊಬ್ಬನೂ ತಾನು ಸರಿಯಿದ್ದುಗೊಂಡು ಬೇರೆಯೋರೂ ತಪ್ಪಿ ನಡವದರ ಪರ್ಯಾಯವಾಗಿ ತಿದ್ದುಲೆ ನೋಡಿದರೆ ಪ್ರಸ್ತುತ, ಕಾಲ ಕ್ರಮೇಣ ಸರಿಯಕ್ಕು ಹೇಳಿ ಕಾಣುತ್ತು.
ಎಲ್ಲಕ್ಕೂ ಕಾಲ ಕಾಲನೇ ಉತ್ತರ ಹೇಳೆಕ್ಕಷ್ಟೆ!!!

~*~*~

One thought on “ಕಾಲ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×