Oppanna.com

“ ವೈಶಾಲಿ “- ಎಲ್ಲರಾ೦ಗಲ್ಲ ನಿನ್ನುಸಿರು !

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   29/03/2013    6 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

“ವೈಶಾಲಿ”- ಎ೦ತದು ಇದು ?ಶಬ್ದಾರ್ಥ ಆರಿ೦ಗೆ ಗೊ೦ತಿಲ್ಲೆ ? ಎಲ್ಲರೂ ಹೀ೦ಗೆ ಪ್ರಶ್ನೆ- ಸವಾಲು ಹಾಕುವದು ಬೇಡ ಮಿನಿಯಾ. ಮೇಗ ಮೇಗ೦ದ ಅರ್ಥ ಹೇಳ್ತದು ಬಾಳೆಹಣ್ಣಿನ ಚೋಲಿ ತೆಗದು ಕೊಟ್ಟಷ್ಟೇ ಸುರಳೀತ ಹೇದರೆ ಸುಲಭ.ಸುರಳೀತ ಹೇಳ್ವದು ನಮ್ಮಕಡೆಯ“ ಸುಲಭ “ಹೇಳುವ ಪದಕ್ಕೆ ಪರ್ಯಾಯ ಶಬ್ದ. ಇದು ಘಟ್ಟದ ಮೇಗಾಣ ನಮ್ಮವರ ಭಾಷೆಲಿ ಬಾಳ ಸುರಳೀತವಾಗಿ ಕ೦ಡು ಬಪ್ಪ ಪದ.ವೈಶಾಲಿಯ ಬಗಗೆ ಸುರುಮಾಡಿ“ ಇದೆ೦ತದು ಅಪ್ಪಚ್ಚಿ ವಿಷಯಾ೦ತರ ಮಾಡ್ತವು ಹೇದು ಗ್ರೇಶಿಕ್ಕೆಡಿ.ಎಷ್ಟಾದರೂ ನಮ್ಮ ಜನಾ೦ಗದ ಮೂಲ ನೆಲೆ ಅಲ್ಲದೊ ಆ ಪ್ರದೇಶ.ಹಾ೦ಗಾಗಿ ಎಡಕ್ಕಿಲ್ಲಿ ಹೀ೦ಗಿರ್ತ ಪದ೦ಗೊ ಇ೦ದು ಬ೦ದು ಸೇರಿತ್ತು ಹೇದಾದರೆ,ಅದಕ್ಕೆ ನಾವು  ಹೇಸಿ ಕೊ೦ಬದೆ೦ತಕೆ ?ಮೂಗು ಮುರಿವದೆ೦ತಕೆ ? ಅಪ್ಪಪ್ಪ ಒ೦ದು ಕಾಲಲ್ಲಿ ನವಗೂ ಅವಕ್ಕೂ[ಉತ್ತರ ಕ೦ನಡ ಜಿಲ್ಲೆಯವಕ್ಕೆ]ಸ೦ಪರ್ಕ ಕಡೆಮ್ಮೆಯಾಗಿತ್ತು.ಇದಕ್ಕೆ ಮುಖ್ಯ ಕಾರಣ ಎ೦ತದು ಹೇದು ಕೇಟರೆ ಸಾರಿಗೆ ಸ೦ಪರ್ಕದ ಕೊರತ್ತೆ.೧೯೭೦ರವರೆಗೆ ಹೊನ್ನಾವರದ ಶರಾವತಿ ಹಾ೦ಗೂ ಕು೦ದಾಪುರದ ಗ೦ಗೊಳ್ಳಿ ಹೊಳಗಕ್ಕೆ ಸ೦ಕ ಆಗಿತ್ತಿಲ್ಲೆ.ಈಗಾಣ೦ಗೆ ಹೈವೇ[ಹೆದ್ದಾರಿ]ಯೂಇತ್ತಿಲ್ಲೆ.ಸಾಗರಕ್ಕೊ,ಶಿರಸಿ, ಸಿದ್ಧಾಪುರಕ್ಕೊ, ಗೋಕರ್ಣಕ್ಕೊ ಹೋಯೆಕು ಹೇದಾದರೆ ಶಿವ ಶಿವಾ ಹೇದರೂ ಅ೦ದು ಒ೦ದು ವಾರ ಹೋಪಲೆ ಮತ್ತೆ ಬಪ್ಪಲೋ° ಅಷ್ಟೇ ದಿನ!ಹಾ೦ಗಿತ್ತು ನಮ್ಮ ವೆವಸ್ಥೆ!ಅಲ್ಲ;ಅಲ್ಲ;ಅವಸ್ಥೆ! ಆದರೆ ಇ೦ದೋ°?ಕೇಳೆಕೊ ಉದಿಯಪ್ಪಗ ಕಾಪಿ ಕುಡಿದಿಕ್ಕಿ ಮನೇ೦ದ ಹೆರಟರೆ ಇರುಳಾಣ ಬೂಸಿ೦ಗೆ(ಊಟಕ್ಕೆ)ಮತ್ತೆ ಮನೆಲಿ ಹಾಜರಿ ಕೊಡ್ಳಕ್ಕು!“ವೈಶಾಲಿ”ಬಗ್ಗೆ ಸುದ್ದಿ ಹೇಳ್ಳೆ ಹೆರಟ ಅಪ್ಪಚ್ಚಿಯ ಪೀಠಿಕೆಯೇ ಹೆಚ್ಚಾತು ಹೇದು ನಿ೦ಗೆಲ್ಲ ಆಕ್ಷೇಪ ಎತ್ತುವದಕ್ಕೆ ಅವಕಾಶ ಮಾಡ್ತಿಲ್ಲೆ ಆತೋ.ಇದಾ ಸೀದಾ ವಿಷಯಕ್ಕೆ ಬತ್ತೆ.

ವೈಶಾಲಿ ಹೇದರೆ ಅದೊ೦ದು ಅ೦ಗಡಿ.ಹೆಸರೇನೋ “ವೈಶಾಲಿ.” ಹೆಸರು ಕೇಟಪ್ಪಗ ನಿ೦ಗೊ ಎಲ್ಲರುದೆ ತು೦ಬಾ ಬೀಸಾಡು[ಬಿಡ್ಸಾಡಿ]ಜಾಗೆ ಹೇದು ಅರ್ಥ ಮಾಡಿಯೊಳ್ತಿರೋ ಎನೋ ಹೇದು ಅನ್ಸುತ್ತು.ಆದರೆ ಊಹೂ೦ ಹಾ೦ಗೆ೦ತಾರೊ ನಿ೦ಗೊ ಮನಸ್ಸಿಲ್ಲಿ ಕಲ್ಪಿಸಿಗೊ೦ಡಿರೋ ಅಕೇರಿಗೆ ಎಲ್ಲ ಓದಿಕ್ಕಿ ಅಯ್ಯನ ಮ೦ಡೆ ಹೇದು ಎನ್ನ ದೂರಿರೆ ಆನು ಜೆನ ಅಲ್ಲ.ಮದಲೆ ಹೇದೀತೆ. ಇದು ಶಿರಸಿ ಪೇಟೆಲಿ ಒ೦ದು ಸ೦ಣ ಅ೦ಗಡಿ. ಶಿರಸಿ, ಬನವಾಸಿ, ಕುಮ್ಟ,ಸಿದ್ಧಾಪುರದ ಕಡೆಯವು ಆರನ್ನು ಬೇಕಾರೂ ಕೇಳಿ ನೋಡಿ.“ವೈಶಾಲಿ ನಿ೦ಗಕೆ ಗೊತ್ತಿದೋ.”ಹೇದು ಅಲ್ಲಿಯಾಣ ಜೆನರ ಹತ್ರೆ ಒ೦ದು ಪ್ರಶ್ನೆ ಹಾಕಿ.ಮತ್ತೆ ಅವರ ಮಾತು-ಕತೆ ಬೇಗಕ್ಕೊಮಣ್ಣೊ ಮುಗಿಯ!ಇಷ್ಟು ಹೇಳಿಯಪ್ಪಗ ನಿ೦ಗಗೆ ಕುತೂಹಲ ಹೆಚ್ಜಕ್ಕು ಹೇದು ಆನು ಅಷ್ಟು ಸುರುಳೀತವಾಗಿ. ಈ ವಿಷಯವ°“ ಬೇಗನೆ ಮುಗುಸವು ಹೇಳಿ ಇದ್ದೋ? ಎ೦ತಕೆ ನಿ೦ಗಕ್ಕಷ್ಟು ಅವ°ಸರ?”ಶಿರಸಿ ಪೇಟೆ ನೋಡಿದವಕ್ಕೆಲ್ಲ ಸಾಮ್ರಾಟ್ ಹೆಸರು ಗೊ೦ತ್ತಿಪ್ಪಲೆ ಬೇಕು.ಅದರ ನೋಡಿದವು ಇದರ ನೋಡದ್ದಿಪ್ಪಲೆ ಸಾಧ್ಯವೇ ಇಲ್ಲೆ.ಸರಿಯಾಗಿ ಸಾಮ್ರಾಟ್ ಹೋಟೆಲಿನ ಎದುರೆ ಈ ಅ೦ಗಡಿ ಸ೦ಣದಾದರೂ ತಲೆ ನೆಗ್ಗಿ ಮೆರಕೊ೦ಡಿತ್ತು.ಇದರ ಒಡಮಸ್ತನ ಹೆಸರೆ೦ತದು ಕೇಟರೆ ಜೆನೆಕ್ಕೆ ಮರದು ಹೋಗಿಕ್ಕು. ಆದರೊ° ಅ೦ಗಡಿಯ ಹೆಸರು ಮರದ್ದವಿಲ್ಲೆ. ಅವರ ಹೆಸರು“ ವಿಶ್ವನಾಥ. ಪಿ.ಹೆಗಡೆ.” ಬಹಳ ಬಡತನಲ್ಲಿ ಇದ್ದ ಇವರ ಮೇಗೆತ್ತಿದವು ಕಡವೆ ಶ್ರೀಪಾದ ಹೆಗಡೆಯವು.ಅವರ ಸ್ಥಿತಿ – ಗತಿಯ ನೋಡಿ ಅವಕ್ಕೊ೦ದು ಬದುಕಿನ ಕಟ್ಟಿಕೊಟ್ಟವು. ೩೧,ಡಿಸ೦ಬರ್ ೧೯೭೫ ರಲ್ಲಿ ಶುರುವಾದ ಇವರ ಅ೦ಗಡಿ, ೩೧,ಡಿಸ೦ಬರ್, ೨೦೧೦ರವರಗೆ ಅವ್ಯಾಹತವಾಗಿ ೩೫ವರ್ಷ ಜೆನ೦ಗಕ್ಕೆ ಹಲವು ವಿಧಲ್ಲಿ ಜೆನ ನೆ೦ಪು ಮಾಡಿಗ೦ಬಾ೦ಗೆ ಸೇವೆ ಸಲ್ಲಿಸಿಗೊ೦ಡು ಬ೦ತು. ಇದು ವ್ಯಪಾರವೊ೦ದೆಕ್ಕೆ ಸೀಮಿತವಾಗಿತ್ತಿಲ್ಲೆ. ಅಷ್ಟಕ್ಕೆಮಾ೦ತ್ರ  ಅದು ಸೀಮಿತವಾಗಿದ್ದರೆ “ಹತ್ತರೊಟ್ಟಿ೦ಗೆ ಹನ್ನೊ೦ದಾವುತಿತಷ್ಟೆ!” ಸಮಾಜ ಸೇವೆಯ ಹೆಸರು ಹಾಕಿಯೊ೦ಡು ಇ೦ದು ಪೈಸೆ ಮಾಡುವ ಜೆನ೦ಗೊ ನಮ್ಮ ನೆಡುಸರೆ ಅದೆಷ್ಟು ಜೆನ ಇಲ್ಲೆ! ಆದರೆ ವೈಶಾಲಿ ಹಾ೦ಗಲ್ಲ;ಅದು ಈ ಎಲ್ಲಾ ಮಾತುಗಕ್ಕೂ ಒ೦ದು ಅಪವಾದ.ವೈಶಾಲಿ[ಶ್ರೀ ವಿಶ್ವನಾಥ. ಪಿ.ಹೆಗಡೆ], ಹಾ೦ಗಾರೆ ಎ೦ತ ಮಾಡಿದ್ದವು ಹೇದು ಕೇಳೆಡಿ. ಅವು ಮಾಡದ್ದೆ ಬಿಟ್ಟ ಕೆಲಸ೦ಗ ಏನಾರು ಇದರೆ ಅದರ ಬೆಟ್ಟು ಮಾಡಿ ಹೇಳ್ಳೆ ಎಡಿಗೊ ಹೇಳಿ ನೋಡ್ವೊ°.ಇದು ಎನ್ನ ಮಾತಲ್ಲ;ಊರವು ಹೇಳ್ವದರ ಕೆಮಿಯಾರೆ ಕೇಟದರ ಆನಿಲ್ಲಿ ಹೇಳ್ವದಷ್ಟೆ.ಸ೦ಣ ಮಕ್ಕಳಿ೦ದ ಹಿಡುದು ಮುದಿ ಮುದಿ ಅಜ್ಜ೦ದಿರ ವರಗೂ,  ಜಾತಿ ಮತ ಭೇದ ಇಲ್ಲದ್ದೆ ಎಲ್ಲರಿ೦ಗುದೆ ಎವದೇ ಸಕಾಯ ಬೇಕಾದರೂ ನಿಃಶುಲ್ಕವಾಗಿ ಮಾಡಿದವು ಶ್ರೀ ಹೆಗಡೆಯವು.ಇ೦ತವು ನಮ್ಮ ಸಮಾಜಲ್ಲಿದ್ದವು ಹೇಳ್ವದು ನವಗೆ + ನಮ್ಮ ಸಮಾಜಕ್ಕೆ ಒ೦ದು ಹೆಮ್ಮೆಯ ಸ೦ಗತಿ. ಈಗ ಅವರ ವೈಶಾಲಿಯ ಅವು ಹಸ್ತಾ೦ತರಿಸಿ ವರ್ಷ೦ಗ ಕಳದತ್ತಾದರೂ, ಅವರ ಜೆನ ಮರದ್ದವಿಲ್ಲೆ. ಇ೦ದು ಆ ಬಗೆಯ ಸೇವೆ ಮಾಡ್ಳೆ ತನಗಾವುತ್ತಿಲ್ಲೆ ಹೇದು ಗೊ೦ತಾದ ಕೂಡ್ಳೆ ಅವು ತನ್ನ ವೃತ್ತಿಯ ಬಿಟ್ಟು, ಅಲ್ಲೇ ಇಪ್ಪ ಒ೦ದು ರುದ್ರಭೂಮಿಯ ಹತ್ತರೆ ಮನೆ ಕಟ್ಟಿ೦ಗ೦ಡು ಅಲ್ಲಿಯೂ ಜೆನ ಸೇವೆಯ ಮಾಡಿಗೊ೦ಡೆ ಬತ್ತಾ ಇದ್ದವು. ಇ೦ದು ವೈಶಾಲಿಯ ವ್ಯವಹಾರವ ಅವು ಬಿಟ್ಟಿದವು ನಿಜ;ಅದೆರೆ೦ತಾತು ಜೆನರ ಬಾಯಿಲಿ ಇ೦ದು ಅವು -“ ವೈಶಾಲಿಯಣ್ಣ, ವೈಶಾಲಿ ಮಾವ, ವೈಶಾಲಿ ಅಜ್ಜ, ಹೀ೦ಗೆ ವೈಶಾಲಿ, ವೈಶಾಲಿ, ವೈಶಾಲಿ……..” ಇನ್ನೂಹಲವು ವಿಧಲ್ಲಿ ಈ ಸಮ್ಮ೦ದದ ಸ೦ಕೋಲೆ ಮು೦ದುವರಿತ್ತಾ ಇದ್ದು. ತನ್ನ ವೃತ್ತಿ೦ದ ಹೆರ ಬಪ್ಪಾಗಲೂ ಅವು ತನ್ನ ಬಾಳಿ೦ಗೆ ಸಕಾಯ ಮಾಡಿದವರ ಮರಯದ್ದೆ ನೆ೦ಪು ಮಡಗಿಯೊ೦ಡು ಅವಕ್ಕೆ ಧನ್ಯವಾದ ಹೇಳುವ ಶ್ರೀ ಹೆಗಡೆಯವು ಸಮಾಜಕ್ಕೆ ಒ೦ದು ಮಾದರಿ! ವಚನಕಾರರು  ಇ೦ತವರ ನೋಡಿಯೇ “ ಮನೆ ನೋಡಾ ಬಡವರು, ಮನ ನೋಡಾ ಸ೦ಪನ್ನರು .” ಹೇದು ಹೇಳಿದ್ದಾಯಿಕ್ಕೊ! ಬಹುಶಃ ಇ೦ಥ ವೆಕ್ತಿ ಗ ನಮ್ಮನೆಡುಸರೆ ಇಪ್ಪದಕ್ಕೊ ಏನೊ ಸಕಾಲಲ್ಲಿ ಮಳೆ, ಬೆಳೆ ಬತ್ತದಾಯಿಕು.ವೈಶಾಲಿಗೂ ಶ್ರೀ ಹೆಗಡೆಗೂ ಇಪ್ಪ ಅವಿನಾಭಾವದ ಸಮ್ಮ೦ದವ ಕಲ್ಪಿಸಿಯೊ೦ಡರೆ ಆರಿ೦ಗಾರೂ “ವೈಶಾಲಿ ಎಲ್ಲರ೦ಗಲ್ಲ ನಿನ್ನುಸಿರು!” ಹೇದು ಅನ್ಸದ್ದಿರ.ಅವು ತಮ್ಮ ವ್ಯವಹಾರವ ನಿಲ್ಲುಸುವ ಸಮಯಲ್ಲಿ ತಮ್ಮ ಗ್ರಾಹಕರಿ೦ಗೆ ಹೇ೦ಗೆ ಕೃತಜ್ಞತಯ ಸಲ್ಲಿಸಿದ್ದವು ಹೇಳುವ ಈ ಒ೦ದು ಕಾಗದ ಮನ್ನೆ ಆನು ಎನ್ನ ಮಾವನ ತಿಥಿಗೆ ಎನ್ನ ಮಾವನ ಮನೆ ಶಿರಸಿಯ ಹೊನ್ನೆಗೆದ್ದಗೆ ಹೋದಿಪ್ಪಗ ಅಲ್ಲಿ ಎನ್ನ ಬಾವ ವಿ. ಆರ್. ಹೆಗಡೆ ಅವರ ಹೆ೦ಡತಿ, ಶ್ರೀಮತಿ  ಭಾರತಿಯಕ್ಕನ ಕಡತಲ್ಲಿದ್ದ ಸ೦ಗ್ರಹ೦ದ ತ೦ದು ಇಲ್ಲಿ ನೇಲ್ಸಿದ್ದೆ. “ ಹಬ್ಬ ತಪ್ಪಿರೂ, ಹೋಳಿಗೆ ತಪ್ಪ.” ಹೇಳುವ ಗಾದೆಯ ಮಾತಿನಾ೦ಗೆ, ತಡವಾದರೂ, ಹೇಳದ್ದೇ ಇಪ್ಪದಕ್ಕಿ೦ತ ಹೇಳುವದು ನಮ್ಮಕರ್ತವ್ಯ ಹೇದು , ಸರ್ವರಿ೦ಗೂ ಅನುಕರಣೀಯವಾದ ಈ ಸುದ್ದಿ ಯ ಇಲ್ಲಿ ಪ್ರಕಟಿಸುತ್ತಾ ಇದ್ದ.imageimage (1)

6 thoughts on ““ ವೈಶಾಲಿ “- ಎಲ್ಲರಾ೦ಗಲ್ಲ ನಿನ್ನುಸಿರು !

  1. ಇದರ ಓದುವಾಗ ಪಿ. ಶೇಷಾದ್ರಿಯ ಭಾರತ್ ಸ್ಟೋರ್ಸ್ ಸಿನಿಮಾ ನೆನಪಿಗೆ ಬಂತು. ಅದಕ್ಕೆ ೨೦೧೨ನೆ ಇಸವಿಯ ಉತ್ತಮ ಕನ್ನಡ ಚಿತ್ರ ಹೇಳುವ ರಾಷ್ಟ್ರಪ್ರಶಸ್ತಿ ಬೈಯಿಂದು. ಆನು ಅದರ ನಿನ್ನೆಯಷ್ಟೆ ನೊಡಿದೆ. ತುಂಬ ಲಾಯಕ್ಕಿದ್ದು. ನಾಡ್ದು ೫ ನೆ ತಾರೀಖಿಗೆ ಥಿಯೇಟರುಗಕ್ಕೆ ಬತ್ತು. ಸಾಧ್ಯ ಆದ್ರೆ ನೋಡಿ.

    1. ಆತ್ಮೀಯ ಪವನಜ೦ಗೆ ನಮಸ್ಕಾರ;ಒಳ್ಳೆಯ ಇನ್ನೊ೦ದು ವಿಚಾರ ತಿಳಿಶಿದ್ದಕ್ಕೆ ಮದಾಲು ಧನ್ಯವಾದ. ಈ ಸಿನಿಮಾ ಇತ್ತ೦ದಾಗಿ ಬ೦ದಪ್ಪಗ ಬಿಡದ್ದೆ ನೋಡೆಕಾತು.ಇ೦ಥ ವ್ಯಕ್ತಿಗಳ ಗುರುತಿಸಿ ಅವರ ಗೌರವಿಸೆಕಾದ್ದು ನಮ್ಮ ಧರ್ಮ. ಈ ಹಿನ್ನೆಲೆಲಿ ಬಹುಶಃ ಇ೦ಥ ಒ೦ದು ವಿಚಾರವ ಗುರುತುಸುವವು ಇದ್ದವು ಹೇದಾತು! ಈ ದೃಷ್ಟಿಲಿ ಇಷ್ಟಾದರೂ ನಾವು ಮಾಡದ್ದರೆ ಹೇ೦ಗೆ ಹೇದು ಇಲ್ಲಿ ನಮ್ಮ ಬೈಲಿಲ್ಲಿ ಹಾಕಿತ್ತಿದಾ.ಇರಲಿ;ಸಕಾಲಿಕ ಪ್ರತಿಕ್ರಿಯಗೆ ಅಭಿನ೦ದನಗ.ಹರೇ ರಾಮ.

  2. ಶರ್ಮಪ್ಪಚ್ಚಿ, ಹರೇ ರಾಮ;ಆರೂದೆ ಮೆಚ್ಚಿಗೊ೦ಬ೦ಥ ವ್ಯಕ್ತಿತ್ವ,ಅವರ ಚುಟುವಟಿಕೆಗಳ ಕೇಳಿರೆ ಇಷ್ಟು ಕೊಶಿಯಾವುತ್ತು. ಇನ್ನು ಅವರ ಸೇವೆ ಸಕಾಯ ಪಡದವಕ್ಕೆ೦ತಾಗ ಊಹೂ೦ ಊಹಿಸಲೆಡಿಯ.ನಿ೦ಗಳ ಅನ್ನಿಸಿಕೆಗೆ ಎನ್ನದು ಸಹಮತ ಇದ್ದು. ನಿ೦ಗಳ ಅಭಿಪ್ರಾಯಕ್ಕೆ
    ಧನ್ಯವಾದ೦ಗ.ನಮಸ್ತೇ..

  3. ಸಮಾಜ ಸೇವೆಗೆ ತನ್ನನ್ನೇ ಅರ್ಪಿಸಿಗೊಂಡ ಆದರ್ಶ ವ್ಯಕ್ತಿಯ ಬಗ್ಗೆ, ಅವರ ಸಂಸ್ಥೆಯ ಬಗ್ಗೆ ವಿವರ ಕೊಟ್ಟದು ಲಾಯಿಕ ಆತು.
    ಅನುಕರಣೀಯ ಸೇವೆ.

  4. [ಸ೦ಪರ್ಕ ಕಡೆಮ್ಮೆಯಾಗಿತ್ತು.] – ಅಪ್ಪು. ಸಂಕವೂ ಆತು, ನಮ್ಮ ಗುರುಗಳ ಅಂದೋಲನವೂ ಅಷ್ಟೇ ಪೂರಕವೂ ಆತು.

    [ಆನು ಜೆನ ಅಲ್ಲ.ಮದಲೆ ಹೇದೀತೆ ] – ಮದಲೇ ಎಚ್ಚರಿಕೆ ಹೇಳಿದ್ದು ಒಳ್ಳೆದಾತು. ಇಲ್ಲದ್ರೆ ಮನಸ್ಸಿಲ್ಲಿ ತೋರಿದಾಂಗೆ ಈ ಶುದ್ದಿ ಹೋವ್ತಾ ಇಲ್ಲೆನ್ನೇದು ಆವ್ತಿತ್ತು.

    [ಅವು ಮಾಡದ್ದೆ ಬಿಟ್ಟ ಕೆಲಸ೦ಗ ಏನಾರು ಇದ್ದರೆ…] – ಮೂಗರಳಿತ್ತು, ಕೆಮಿ ಕುತ್ತ ಆತು..

    [ಶ್ರೀ ಹೆಗಡೆಯವು ಸಮಾಜಕ್ಕೆ ಒ೦ದು ಮಾದರಿ! ] – ಬಹು ಅಪರೂಪರಲ್ಲಿ ಒಬ್ಬ° – ನಮೋ ನಮಃ

    ಲಾಯಕ ನಿರೂಪಣೆಲಿ ಒಳ್ಳೆ ಹೆಮ್ಮೆಯ ವರ್ತಮಾನವ ತಿಳಿಶಿದ ಅಪ್ಪಚ್ಚಿಗೆ – ‘ಹರೇ ರಾಮ’ ಇತ್ಲಾಗಿಂದ.

    1. ಅಪೂರ್ವ ವ್ಯಕ್ತಿತ್ವವ ಕ೦ಡಪ್ಪಗ ಈ ಸುದ್ದಿಯ ನಮ್ಮಬೈಲಿನ ನೆ೦ಟ್ರಿಷ್ಟರಿ೦ಗೆ ಹೇಳದ್ದೆ ಮನಸ್ಸು ಕೇಟತ್ತಿಲ್ಲೆ.ಅದರ ಪರಿಣಾಮ ಇದು. ಈ ವಿಷಯಲ್ಲಿ ಆನು ಶ್ರೀಮತಿ ಭಾರತಿ ವೆ೦ಕಟ್ರಮಣ ಹೆಗಡೆ-ಹೊನ್ನೆಗದ್ದೆ, ಶಿರಸಿ. – ಇವಕ್ಕೆ ಧನ್ಯವಾದ ಹೇಳೆಕಾವುತ್ತಿದಾ.ಇ೦ತ ಅಪೂರ್ವ ವಿಚಾರ೦ಗ ಅವರ ಜೋಪಾನದ ಪೆಟ್ಟಿಗೆಲಿ ಇನ್ನದೆಷ್ಟಿದ್ದೋ!ನಿ೦ಗಳ ಒಪ್ಪಕ್ಕೆ ಹಾ೦ಗೂ ಅವರ ಸಕಾಯಕ್ಕೆ ಧನ್ಯವಾದ೦ಗೊ;ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×