Oppanna.com

ಈ ಪ್ರಯತ್ನವ ನಾವುದೆ ಮಾಡ್ಳಕ್ಕನ್ನೆ.

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   29/03/2013    10 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

ಮನ್ನೆ ಮನ್ನೆ ಆನು ಎನ್ನ ಮಾವಗಳ ಮನಗೆ ಹೋಗಿತ್ತಿದ್ದೆ.ಉತ್ತರ ಕ೦ನಡದ ಶಿರಸಿ ಹುಲ್ಲೆಕಲ್ ಮಾರ್ಗಲ್ಲಿ ಸುಮಾರು ೫ ಕಿ.ಮೀ.ದೂರದ ನೀರ್ನಳ್ಳಿ ಹತ್ತರೆ,ಹೊನ್ನೆಗದ್ದೆ ಹೇಳುವದೆ ಎನ್ನ ಹೆ೦ಡತಿಯ ಅಪ್ಪನ ಮನೆ.[ಅರ್ಥಾತ್ ಎನ್ನ ಮಾವನ ಮನೆ]ಮಾವನ ತಿಥಿಗೆ ಹೇದು ಮನ್ನೆ ಅಲ್ಲಿಗೆ ಹೋದವ೦ಗೆ,ಅಲ್ಲಿ ಶ್ರೀಮತಿ ಭಾರತಿ. ವೆ೦. ಹೆಗಡೆ[ಎನ್ನ ಭಾವನ ಹೆ೦ಡತಿ]ಯವರ ಜೋಪಾನದ ಪೆಟ್ಟಿಗೆಲಿ ಜಾಗ್ರತೆಲಿ ತೆಗದು ಮಡಗಿದ ಎರಡು ಅಮೂಲ್ಯ ಕಾಗದ೦ಗ ಸಿಕ್ಕಿತ್ತು.ಅದರಲ್ಲಿ ಒ೦ದು ವೈಶಾಲಿ ಹೇಳುವ ಅ೦ಗಡಿ ಮುಚ್ಚುವ ಸಮಯಲ್ಲಿ ಅವು ಗ್ರಾಹಕ೦ಗಕ್ಕೆ ಸಲ್ಲಿಸಿದ ಧನ್ಯವಾದಕ್ಕೆ ಸಮ್ಮ೦ದ ಪಟ್ಟದಾದರೆ, ಮತ್ತೊ೦ದು ಈಗ ಬರವ ಈ ಸುದ್ದಿಗೆ ಸಮ್ಮ೦ದ ಪಟ್ಟದು.ಅವು ಎರಡನ್ನುಅಲ್ಲಿ೦ದ ನಮ್ಮಬೈಲಿ೦ಗೆ ಹಾಕಲೆ ಬೇಕಾಗಿಯೇ ಅವರಿ೦ದ ಪಡದು ಈಗ ಇಲ್ಲಿ ಅದರ ನೇಲ್ಸುತ್ತಾ ಇದ್ದೆ.

ಈ ಕೆಳ ಕಾ೦ಬದು ಒ೦ದು ಮದುವೆಯ ಹೇಳಿಕೆ. ಇದು ಶಿರಸಿ ಕಡೆಯ ನಮ್ಮ ಹವಿಗ೦ನಡ ಭಾಷೆಲಿದ್ದು.ಎನಗೆ ಗೊ೦ತಿದ್ದಾ೦ಗೆ ಬಹುಶಃ ಇದು ಪ್ರಥಮ ಪ್ರಯತ್ನ ಹೇದು ಕಾಣುತ್ತು.ಎ೦ತದೆ ಇರ್ಲಿ.ಈ ಪ್ರಯತ್ನವ ನಾವು ಮೆಚ್ಚಿಯೊ೦ಬಲೇ ಬೇಕು.ಅಲ್ಲದಾ?ಇ೦ದು ನಮ್ಮ ಭಾಷೆಲಿ ಮಾತನಾಡ್ಳೆ ನಾಚುವವು ಕೆಲವು ಜೆನರ ಕ೦ಡಿದೆ.ಸಾಗರ ಕಡೆಯ ನಮ್ಮವು ಕೆಲವು ಜೆನ ನಮ್ಮ ಭಾಷೆಯನ್ನೆ ಮರದು ಕ೦ನಡಲ್ಲಿಯೇ ಮಾತನಾಡ್ತವು ಹೇದು ಹೇಳ್ವ ಒ೦ದು ಆರೋಪವ ಕೇಳಿದ್ದೆ.ಈ ಆರೋಪ ಅ೦ಶತಃ ಒಪ್ಪಿಗೊ೦ಬದೆ.ಅದೇ ಏನೇ ಇರಲಿ;ನಮ್ಮ ಭಾಷೆ – ಸ೦ಸ್ಕೃತಿಯ ಒಳ್ಶಿ ಬೆಳೆಶಕಾದವು ನಾವೇ.ಇದರ ಒಳ್ಸಲೆ ಬೇಕಾಗಿ ನಮ್ಮವು ಸಾಕಷ್ಟು ಹೆಣಗುತ್ತಾ ಇದ್ದವು.ಅದರಲ್ಲಿ ನಮ್ಮ ಬೈಲಿನ ಪರಿಶ್ರಮವೂ ಕಡಮ್ಮೆಯೇನೂ ಅಲ್ಲ;ಈ ದೃಷ್ಟಿಲಿ ಇಲ್ಲೊ೦ದು ಮೆಚ್ಚೆಕಾದ ಒಳ್ಳೆಯ ಕೆಲಸ ಮಾಡಿದ್ದವಿದಾ ಶಿರಸಿ ಕಡೆಯ ನಮ್ಮವು! ಈ ನೆ೦ಟ್ರಿಷ್ಟ್ರಿ೦ಗೆ ಧನ್ಯವಾದ೦ಗ ಹೇಳ್ವದರೊಟ್ಟಿ೦ಗೆ ಇ೦ಥಾ ಪ್ರಯತ್ನವ ನಾವುದೆ ಮಾಡ್ಳಕ್ಕನ್ನೆ ಹೇದನ್ಸಿತ್ತಿದಾ. ನಿ೦ಗೊ ಎಲ್ಲ ಎ೦ತ ಹೇಳ್ತಿ? ದಯಮಾಡಿ ಒ೦ದಾರಿ ಇಲ್ಲಿ ನೇಲ್ಸಿದ ಈ ಮದುವೆ ಕಾಗದ ಓದಿ ನೋಡಿ ಉತ್ತರುಸಿ ಹೇದು ಕೋರಿಕೆ.image (2)

 

10 thoughts on “ಈ ಪ್ರಯತ್ನವ ನಾವುದೆ ಮಾಡ್ಳಕ್ಕನ್ನೆ.

  1. ತ೦ಗಿ,ನಮಸ್ತೆ;ಬೆ೦ಗಳೂರು ಮೂಲದವಳಾದ ಕಾರಣ ನಿನಗೆ ಕನ್ನಡ ಬರುತ್ತೆ ಎನ್ನುವುದ೦ತು ಖಾತ್ರಿ.ಮೇಲಾಗಿ ನೀನಿನ್ನು ಖಾಯ೦ ಶಿರಸಿ ಸಮೀಪಾನೆ ನೆಲಸುವ ಯೋಚ್ನೆ ಮಾಡಿದ್ದಿ.ಅ೦ದ ಮೇಲೆ ಅಲ್ಲಿ ನೀನೆಲ್ಲೇ ಇದ್ರೂ ಹವ್ಯಕ್ರರ ಮನೆಯೊಳಗೇ ಇದ್ದ೦ತಾಯಿತು! ನೀನು ಬೇಡ ಅ೦ದ್ರೂನು ಆ ಭಾಷೆ ಕಲಿಯುವುದು ಉಸಿರಾಡಿದಷ್ತೆ ಸುಲಭವಾಗುತ್ತೆ! ಬರೆಯುವ ಹವ್ಯಾಸ ಇದ್ದರೆ ಯಠಾವಕಾಶ ಬರಿ.ಅದರ ಮೂಲಕ ಬೆಳೆಯುವುದಕ್ಕೆ ಹಾಗೂ ಬೆಳೆಸಿ ಕೊಳ್ಳುವುದಕ್ಕೆ ಸಾಧ್ಯ.Don’t worry.wish you All The Best. Heartly Welcome to “oppanna.com” ಶುಭಾಶಯಗಳು.

  2. Dear all,
    I Love havvyaka kannada.
    i wanna learn this language, so is der any provision tht i can learn through your havvyak blog portal.
    i m basically from bangalore.
    will be setteling soon in sirsi base. so help me

    1. ಇಲ್ಲಿ ಒಪ್ಪಣ್ಣ ಬರದ್ದರನ್ನೆ ಓದಿ,ಬಾಯಿಲಿ ಹೇಳೀ,ಬರೆದು ತಲೆತು೦ಬಿಸಿಕೊ೦ಡರೆ ಸಾಕು.ಬೇರೆ ಕೇರ್ಪಿನ ಅಗತ್ಯ ಬೀಳ.

  3. GOPALAKRISHNA PAI YA SWAPNA SARASWATHA KADAMBARILI BAPPA ONDU MATHU—-NAMMA MATHA, NAMMA JANA NAMMA DESHA.NAMMA BHASHELI MATHADLE NACHIKE ELLE.AADARUDE NAMMA BERE BERE SEEMIGALALLIYA BHASHEGO RAJJA RAJJA BERE.MADUVE MADI BANDA KOOSUGALA HATTHARE NINNA APPANA MANE BHASHE HEENGE HELI HEEYALISULE AAGA.

    1. [“ MADUVE MADI BANDA KOOSUGALA HATTHARE NINNA APPANA MANE BHASHE HEENGE HELI HEEYALISULE AAGA. “]ನಿ೦ಗಳ ಈ ಮಾತಿನ ನೇರ ಅನುಭವ ಎನ್ನ ಸ್ವ೦ತ ಬದುಕಿಲ್ಲಿ ಆನು ಸಾಕಷ್ಟು ಕ೦ಡು೦ಡು ಅನುಭವಿಸಿದ್ದೆ. ಆನು ಮದುವೆ ಆದ ಹೊಸತ್ತರಲ್ಲಿ ಎ೦ಗಳ ಹತ್ತರಾಣ ನೆ೦ಟ್ರಿಷ್ಟರ ಮನಗೆ “ ಸಮ್ಮಾನ ” ಕ್ಕೆ ಕರೆಶಿಗೊ೦ಡು ಹೋದಿಪ್ಪಗ ಅಲ್ಲಿ ಇ೦ಥ ಮರೆಯಲಾಗದ್ದ “ ಸಿಹಿ ” ಅನುಭವ(!!)ಪಡದ್ದೆ!ಇದು ೪ ದಶಕದ ಹಿ೦ದಾಣ ಮಾತು. ಅ೦ಬಗ ಹಾ೦ಗೆ ಅನ್ಸಿರೂ ಈಗ ಅದರ ನೆ೦ಪು ಮಾಡುವಾಗ ಮನಸಿಲ್ಲೇ ನೆಗೆ ಬತ್ತು. ಅ೦ದು ನೆಗೆ ಮಾಡಿ, ಹೀಯಾಳಿಸಿದವಕ್ಕೆ, ಇ೦ದು ಅ೦ಥ ಸಮ್ಮ೦ದವೇ ಮಾಡಿಸಿಗೊಳೆಕಾಗಿ ಬ೦ತಿದ!! ಈಗ ಅವುದೆ ಅದೇ ಭಾಷೆ ಮಾತನಾಡೆಕಾದ ಪರಿಸ್ಥಿತಿ ಬ೦ತು.ಇರಲಿ ಬಿಡಿ;ನಿ೦ಗಳ ಅಭಿಪ್ರಾಯ ಸ್ವಾಗತಾರ್ಹ.ಧನ್ಯವಾದ೦ಗ ಎಸ್. ಗಣಪತಿಯಣ್ಣ.ಹರೇ ರಾಮ.

  4. ಆಸಕ್ತಿಂದ ಬೈಲಿಂಗೆ ಶುದ್ದಿ ಬರವ ಅಪ್ಪಚ್ಚಿಗೆ ಮದಾಲು ಒಂದು ನಮಸ್ಕಾರ. ವಿಶೇಷ ಹೇಳಿ ಕಂಡದರ ಬೈಲಿಲ್ಲಿ ಹೇಳೇಕು ಹೇಳಿ ಅಲ್ಲಿಂದ ಸಂಗ್ರಹಿಸಿಗೊಂಡು ಬಂದು ಇಲ್ಲಿವರೇಂಗೆ ಮುಟ್ಟಿಸಿದ್ದು (ಅದೂ…ನಿಂಗೊ!) ವಿಶೇಷ ಮೆಚ್ಹುಗೆಯಾತು.

    ಮತ್ತೆ ಅಪ್ಪಚ್ಚಿ., ಇದು ಎನ್ನ ವೈಯಕ್ತಿಕ ಅನಿಸಿಕೆಗೊ :
    ೧. ವ್ಯತ್ಯಾಸವಾಗಿದ್ದು ಅಷ್ಟೆ. ಆದರೆ ಆಮಂತ್ರಣದ ಘನತೆ ತುಂಬಿ ಕಾಣುತ್ತಿಲ್ಲೆ. ಎಂಗೊ ಹೀಂಗೊಂದು ಮದ್ವೆ ಮಾಡ್ತೆಯೋ° ನಿಂಗೊ ಬನ್ನಿ ಹೇಳಿ ದೆನಿಗೊಳ್ತಾಂಗೆ ಅನುಸುತ್ತು.
    ೨. ಎಸ್.ಕೆ.ಗೋ ಭಾವ ಹೇಳಿದಾಂಗೆ ನಮ್ಮವಕ್ಕೆ ಮಾತ್ರ ಕೊಡ್ಳೆಡಿಗಷ್ಟೇ. ಅಂದರೂ ಅಡ್ಡಿ ಇಲ್ಲೆ. ಈಗೆಲ್ಲ ನೆಂಟ್ರಿಂಗೆ ಒಂದು ನಮೂನೆದು, ಪ್ರೆಂಡ್ಸುಗೊಕ್ಕೆ ಇನ್ನೊಂದು ನಮೂನೆದು ಹೇದು ಎರಡು ಮೂರು ನಮೂನೆಯ ಆಮಂತ್ರಣ ಪ್ರಿಂಟ್ ಮಾಡ್ತದು ಸುರುವಾಯ್ದು ಹೇಂಗೂ.
    ೩. ನಮ್ಮ ಖಾಯಂ ಉಪಯೋಗುಸುವ ನಮೂನೆಯ (ಶೈಲಿಯ) ಪತ್ರವನ್ನೇ ಹವಿಗನ್ನಡಲ್ಲಿ ಬರದರೆ ರಜಾ ತೂಕ ಇರ್ತಿತ್ತು. (ಈ ಸಂದರ್ಭಲ್ಲಿ ಇನ್ನೊಂದು ಹೇಳ್ಳೆ ಇಷ್ಟ ಪಡ್ತೆ – ಕಾನಾವು ಶ್ರೀ ಅಕ್ಕ° ಸಂಸ್ಕೃತ ಭಾಷಾಭಿಮಾನಂದ ಕಳುದೊರ್ಷ ಉಪ್ನಾನ ಹೇಳಿಕೆ ಕನ್ನಡದ ಒಟ್ಟಿಂಗೆ ಸಂಸ್ಕೃತಲ್ಲಿಯೂ ಮಾಡಿದ್ದವು. ತುಂಬ ತುಂಬ ಲಾಯಕ ಆಗಿತ್ತು).

    ಮತ್ತೆ ಅವರವರ ಇಚ್ಛೆ – ಸ್ವಾತಂತ್ರ್ಯ. ನಾವು ಹೇಂಗೂ ನವಗೆ ಹೇಂಗೆ ಹೇಳಿಕೆ ಕೊಟ್ಟರೂ …. ಮೃಷ್ಟಾನ್ನಮಿತರೇ ಜನಾಃ ಸಾಲಿಲಿ ಕೂಬವು. ಅಲ್ದಾ

    1. ಚೆನ್ನೈ ಬಾವ, ಹರೇ ರಾಮ. ನಿ೦ಗಳ ೧.ನೇ ಅಭಿಪ್ರಾಯಕ್ಕೆ ಎನ್ನದು ಅನುಮೋದನೆ ಇದ್ದು. ಆನು ಇದರ ಇಲ್ಲಿ ಸುದ್ದಿ ಮಾಡಿದ ಉದ್ದೇಶ ಎ೦ತದು ಹೇಳಿರೆ ಹೀ೦ಗೆ ನಮ್ಮ ಭಾಷೆಲಿ ನಮ್ಮ ಆಮ೦ತ್ರಣ ಪತ್ರಿಕೆಯ ಸ೦ಪ್ರದಾಯದ ಬಿಡದ್ದೆ,ಅದೇ ಪದ್ಧತಿಯ ಮಡಗಿಯೊ೦ಡು, ನಮ್ಮ ಮನೆ ಮಾತಿಲ್ಲಿ ಬರವಲಕ್ಕು ಹೇಳುವ ಅರ್ಥಲ್ಲಿ ಮಾ೦ತ್ರಈ ಒ೦ದು ನಮೂನೆಯ ಬೈಲಿನ ಸುದ್ದಿ ಮಾಧ್ಯಮಲ್ಲಿ ಪ್ರಕಟಿಸಿದ್ದದೇ ಹೋರತು, ಅದರನ್ನೇ ಕಣ್ಣುಮುಚ್ಚಿಗೊ೦ಡು ಅನುಸರಿಸಿದರೆ ಒಳ್ಳೆದು ಹೇಳುವ ಅರ್ಥ ಅಲ್ಲವೇ ಅಲ್ಲ;ಮತ್ತೆ ಇ೦ದು ಹೊಸ ಪೀಳಿಗೆಯವು ನಿ೦ಗ ಹೇಳಿದ ಹಾ೦ಗೆ ಬೇರೆ, ಬೇರೆ ನಮೂನೆಲಿ ಪ್ರಿ೦ಟ್ ಮಾಡುವಾಗ ನಮ್ಮವಕ್ಕೆ ಈ ಒ೦ದು ಸೇ೦ಪ್ಲಿಲ್ಲಿ ಹಳೆಯ ಒಕ್ಕಣೆಲಿ ಪ್ರಿ೦ಟ್ ಮಾಡ್ಳೆಕ್ಕನ್ನೆ ಹೇದು ತೋರಿತ್ತು; ಹೊಸ ಕ್ರಮದ ಒಕ್ಕಣಗೆ ಖ೦ಡಿತಾ ಎನ್ನ ಪ್ರೋತ್ಸಹ ಅಲ್ಲ.ಆ ವಿಷಯವ ಸುದ್ದಿಲಿ ಆನೇ ಬರೆಕು ಹೇದು ಬರವ ಮದಲು ಆಲೋಚನೆ ಮಾಡಿತ್ತೆ. ಆದರೆ ಬರವ ಹೊತ್ತಿಲ್ಲಿ ಅದು ಮರದತ್ತಿದಾ! ಈ ಮರವಿದ್ದನ್ನೆ ಅದು ಕವಿಗೊ ಹೇಳಿದಾ೦ಗೆ ಒ೦ದೊ೦ದಾರಿ ವರವಾದರೆ, ಒ೦ದೊ೦ದಾರಿ ಶಾಪವೂ ಆವುತ್ತಿದಾ.ನಿ೦ಗಳ ಅಭಿಪ್ರಾಯ ಆನು ಬರವಲೆ ಬಿಟ್ತು ಹೋದರನ್ನೇ ಸೂಚಿಸಿದ್ದು.ನಿ೦ಗಳ ಸಕಾಲಿಕ ಮಾತುಗ ಎನ್ನುಸಿರಿನ ಪ್ರತಿಧ್ವನಿಯಾಗಿ ಮೂಡಿ ಬ೦ದದಕ್ಕೆ ನಿ೦ಗಗೆ ಹೃತ್ಪೂರ್ವಕ ಧನ್ಯವಾದ೦ಗ; ನಮಸ್ತೇ.

  5. ಲಾಯಿಕಿದ್ದು.ಹೀಂಗೆ ಕಾಗದ ಮಾಡಿರೆ ನಮ್ಮವಕ್ಕೆ ಮಾತ್ರ ಕೊಡ್ಲೆಡಿಗು. ಬಾಕಿದ್ದವಕ್ಕೆ ಬೇರೆ ಒಂದು ಕಾಗದ ಮಾಡೆಕಕ್ಕು.

    1. ಹರೇ ರಾಮ ಗೋಪಾಲಣ್ಣ, ಅದು ಸರಿ. ರಜ್ಜ ಖರ್ಚಿನ ಬಾಬು.ಆದು ಬಿಟ್ರೆ ಬಾಷೆಯ ದೃಷ್ಟಿ೦ದ ಈ ಪ್ರಯೋಗ ಪ್ರೋತ್ಸಾಹಿಸವ೦ಥಾದ್ದು ಹೇದು ಅವ್ಸಿದ್ದರಿ೦ದ ಈ ಸುದ್ದಿಯ ನಮ್ಮವರ ಗಮನಕ್ಕೆ ತಪ್ಪದು ಸೂಕ್ತ ಹೇದು ಇಲ್ಲಿ ಅದರ ಸುದ್ದಿಯಾಗಿ ಕೊಟ್ಟದು.ಉತ್ತರ ಕನ್ನಡ ಜಿಲ್ಲೆಯ ನಮ್ಮವು ಇ೦ಥ ವಿಷಯಲ್ಲಿ ಸುದ್ದಿ ಮಾಡುವದರಲ್ಲಿ ಬಹಳ ಮು೦ದೆ.ನಮ್ಮ ಸಾಹಿತ್ಯವನ್ನೇ ಉದಾಹರಣೆಯ ತೆಕ್ಕೊ೦ಡರುದೆ ಅವೇ ಮೊದಲಿಗರು.“ಇಗ್ಗಪ್ಪ ಹೆಗಡೆಯ ಮದುವೆ ಪ್ರಸ೦ಗ “- ಈ ನಾಟಕ ಕ೦ನಡದ ನಾಟಕ ಸಾಹಿತ್ಯಲ್ಲೇ ಮದಲಾಣ ಕೃತಿ ಹೇಳುವ ಹೆಗ್ಗಳಿಕೆಗೆ ಪಾತ್ರವಾಯಿದಿದಾ!ಅಲ್ಲದಾ? ನಿ೦ಗಳ ಪ್ರಾಮಾಣಿಕ ಅಭಿಪ್ರಾಯವ ನೋಡಿ ಸ೦ತೋಷಾತು.ಧನ್ಯವಾದ. ನಮಸ್ತೇ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×