ಸುಮಾರು ಸಮೆಯ ಆತು ಒಪ್ಪಣ್ಣ ಕಂಪ್ಲೀಟ್ರು ಸಮ್ಮಂದದ ಶುದ್ದಿ ಮಾತಾಡದ್ದೆ.
ಬೈಲಿಲೇ ನಮ್ಮ ಹತ್ತುಬಳಕ್ಕೆಯ ಶುದ್ದಿಗೊ ಹೇಳುವಗಳೇ ಹೊತ್ತು ಕಂತುತ್ತು; ಇನ್ನು ಈ ನಮುನೆ ನವಗರಡಿಯದ್ದ ಕಂಪ್ಳೀಟ್ರು ಶುದ್ದಿಗೆ ಎಲ್ಲಿ ಪುರುಸೊತ್ತಿರ್ತು, ಅಲ್ಲದೋ?
ಕೆಡ್ವಸದ ವಿಷಯವೋ, ಸೌಟು-ಕೊತ್ತಳಿಂಕೆ-ತಾಳೆಗರಿ ಇನ್ನೇನಾರೋ ಬೈಲಿನೊಳಾಣದ್ದು ಸಿಕ್ಕಿರೆ ಅಲ್ಲಿಗೇ ಸಮಯ ಹೊಂದುತ್ತು.
ಅದೂ ಅಲ್ಲದ್ದೆ, ನವಗೆ ಜಾಸ್ತಿ ಅರಡಿಯದ್ದ ಏರ್ಪಾಡುಗಳ ಬಗ್ಗೆ ಶುದ್ದಿ ಮಾತಾಡುವಗ ರಜ ಜಾಗ್ರತೆ ಬೇಕಪೋ; ಮತ್ತೆ “ಅರಡಿಯದ್ದೋರು ಅಟ್ಟಿನಳಗೆ ತೊಳದ ಹಾಂಗೆ” – ಹೇದು ಸುಭಗಣ್ಣನ ಗಾದೆ ನೆಂಪಕ್ಕು!
ಹಾಂಗಾಗಿ ನಾವು ಇಂತದ್ದಕ್ಕೆ ಬಾಯಿಹಾಕುದು ಕಮ್ಮಿಯೇ ಇದಾ!
ನಮ್ಮ ರೂಪತ್ತೆ ಆದರೆ ಹಾಂಗಲ್ಲ, ಆಷ್ಟ್ರೇಲಿಯದ ಸೋಪ್ಟುವೇರು ಕಂಪೆನಿಲಿ ಒಯಿವಾಟು ಹೇಂಗೆಲ್ಲ ನೆಡೆತ್ತು ಹೇಳ್ತರ ಬಗ್ಗೆ ವಿವರವಾಗಿ ಮಾತಾಡುಗು. 😉
ಮಗ° ಹೇಳಿ ಗೊಂತಿಪ್ಪದರ ರಜ ‘ಚೆಂದ’ ಮಾಡಿ ಹೇಳ್ತದು, ಅಷ್ಟೆ! ಅದಿರಳಿ.
~
ಒಪ್ಪಣ್ಣಂಗೆ ಕಂಪ್ಲೀಟ್ರು ಅರಡಿವದು ಕಮ್ಮಿ ಆದರೆಂತಾತು, ಸರೀ ಅರಡಿವೋರು ನಮ್ಮ ಬೈಲಿಲಿ ಧಾರಾಳ ಜೆನ ಇದ್ದವು.
ಪೆರ್ಲದಣ್ಣಂಗೆ ದಿನ ಉದಿ ಆದರೆ ಕಂಪ್ಲೀಟ್ರಿನೊಟ್ಟಿಂಗೆ ಮಾತಾಡ್ಳೆ ಸುರುಮಾಡಿರೆ, ಮೂರೊತ್ತು ಉಂಬಲೆದಕ್ಕಿತ ಮಾಂತ್ರ ಪುರುಸೊತ್ತು ಆಡ.
ಮದಲಿಂಗೆ ಗುಣಾಜೆಕುಂಞಿಗೂ ಈ ಮರುಳು ಇದ್ದತ್ತು, ಈಗ ಮೂವತ್ತೈದು ಸಾವಿರದ ಕರಿಮೊಬೈಲಿಲಿ ಮೋರೆಪುಟ ಬಪ್ಪಲೆ ಸುರುಆದ ಮತ್ತೆ ಕಂಪ್ಲಿಟ್ರು ಇಲ್ಲದ್ದರೂ ನೆಡೆತ್ತು.
ಶ್ರೀಅಕ್ಕ° ಅಂತೂ ಹತ್ತನ್ನೆರಡೊರಿಶ ಮದಲೇ – ಈಗಾಣ ಜವ್ವನಿಗರಿಂಗೆ ಕಂಪ್ಲೀಟ್ರಿನ ಗುರ್ತ ಅಪ್ಪ ಮದಲೇ – ಕಂಪ್ಲೀಟ್ರು ಕೋರ್ಸು ಮಾಡಿ ಶಾಸ್ತ್ರೋಕ್ತವಾಗಿ ಪಾಟ ಹೇಳುಸಿಗೊಂಡಿದವು!
ಮಾಷ್ಟ್ರಮನೆ ಅತ್ತೆಗೂ ಬೈಲಿನ ಶುದ್ದಿ, ಪುತ್ತೂರು ಸುದ್ದಿ, ಹೊಸದಿಗಂತ – ಹರೇರಾಮ – ಹೀಂಗಿರ್ಸು ಓದಲೆದಕ್ಕಿತ ಕಂಪ್ಲೀಟ್ರು ಅರಡಿತ್ತು.
ಒಪ್ಪಕ್ಕಂಗೂ ರಜರಜ ಅರಡಿತ್ತು – ಮಾಷ್ಟ್ರುಮಾವನ ಮನೆಲಿಪ್ಪ ಕಂಪ್ಲೀಟರಿಲಿ ಪೈಂಟು ಮೆತ್ತಲೆ, ವರ್ಡು ಬರವಲೆ – ಎಲ್ಲ.
ನವಗೂ ರಜ ಕಲ್ತುಗೊಳೆಕ್ಕು ಹೇದು ಇದ್ದು, ಈ ಸರ್ತಿ ಒಪ್ಪಕ್ಕಂಗೆ ಪರೀಕ್ಷೆ ಕಳುದ ಪುರುಸೊತ್ತಾದರೆ.
ನೆಗೆಮಾಣಿ ಇಂಗ್ಳೀಶು ಕಲ್ತಾಂಗೆ ಆಗಿ ಹೋಕೋದು ಹೆದರಿಕೆ ಅಪ್ಪದು ಒಂದೊಂದರಿ! 😉
~
ಬೈಲಿಲಿ ಇದರಿಂದ ಮದಲು ಹಲವು ಕೆಲವು ಸರ್ತಿ ಕಂಪ್ಲೀಟರಿಂಗೇ ಸಮ್ಮಂದಪಟ್ಟ ಶುದ್ದಿಗಳ ಮಾತಾಡಿದ್ದು ನಿಂಗೊಗೆ ನೆಂಪಿಕ್ಕು.
ಆ ಶುದ್ದಿಗಳ ಕೇಳಿಯೇ ಒಪ್ಪಣ್ಣಂಗೆ ಕಂಪ್ಲೀಟ್ರು ಸಮಗಟ್ಟು ಅರಡಿತ್ತಿಲ್ಲೇದು ಬೈಲಿಂಗೆ ಗೊಂತಾದ್ದು ಇದಾ!
ನೆಂಟ್ರುಬಾರದ್ದ ಮನೆಗೊಕ್ಕೂ ಇಂಟರುನೆಟ್ಟು ಬಂತು ಹೇಳ್ತ ಶುದ್ದಿಯ ಹೇಳುವಗ, ನಮ್ಮ ಬೈಲಿಲಿ ಸುಮಾರು ಮನೆಗಳ ಕಂಪ್ಲಿಟ್ರಿಂಗೆ ಇಂಟರು-ನೆಟ್ಟದು ಗೊಂತಾಗಿದ್ದತ್ತು.
ಬೈಲಿನ ಒಳದಿಕ್ಕೂ, ಹೆರದಿಕ್ಕೂ, ಅಲ್ಲಿಗೂ, ಇಲ್ಲಿಗೂ, ಎಲ್ಲೆಲ್ಲಿಗೂ ಗೂಗುಲು ಉಪಯೋಗ ಮಾಡ್ತದರ ಬಗ್ಗೆಯೂ ಶುದ್ದಿ ಗೊಂತಾಯಿದು.
ಎಲ್ಲೇ ಇದ್ದರೂ – ದುರ್ಯೋಧನನ ಹಾಂಗೆ ನೀರೊಳಗಿರ್ದುಂ – ಆದರೂ ಹುಡ್ಕಿ ತೆಗೆತ್ತ ಸಾಮರ್ಥ್ಯ ಆ ಗೂಗುಲಿಂಗೆ ಇದ್ದಾಡ!
ಒರಕ್ಕು ತೂಗಿಂಡು ಇದ್ದೋರು, ಒರಕ್ಕು ತೂಗದ್ದೋರು ಓರುಕುಟ್ಟುತ್ತದರ ಬಗ್ಗೆಯೂ ಒಂದರಿ ಮಾತಾಡಿದ್ದು.
ಈಗ ಆ ಓರುಕುಟ್ಟುತ್ತ ಪುಟವೇ ಒರಕ್ಕು ತೂಗಲೆ ಸುರು ಆಯಿದಡ, ಮೋರೆಪುಟ ಬಂದಮೇಗೆ – ಮುಳಿಯಭಾವ ಹೇಳಿತ್ತಿದ್ದವು.
ಪೆರ್ಲದಣ್ಣನ ಹಾಂಗಿರ್ತ ಇಂಜಿ-ನೀರುಗೊ ಜೀವಂದಲೂ ಹೆಚ್ಚಾಗಿ ಜೀಮೇಲಿನ ಬಗ್ಗೆ ಹಸಬಡಿತ್ಸರನ್ನೂ ನಾವು ಮಾತಾಡಿಗೊಂಡಿದು.
ಇದಿಷ್ಟೂ ಬೈಲಿಲಿ ಮಾತಾಡ್ಲೆ ಕಾರಣ – ಕಂಪ್ಲೀಟ್ರು ಅರಡಿವೋರು ಇರ್ತದು.
ಒಪ್ಪಣ್ಣಂಗೆ ಕೇಳ್ತ ಹಾಂಗೆ ಅವೆಲ್ಲ ಅತ್ತಿತ್ತಲಾಗೆ ಮಾತಾಡಿಗೊಂಡದು ನವಗೂ ರಜ ಕಲ್ತುಗೊಂಬಲೆ ಎಡೆ ಆತು.
ಇದೇ ನಮುನೆ ಇನ್ನೊಂದು ಶುದ್ದಿ ಈ ವಾರ ಮಾತಾಡುವೊ°.
ಆಗದೋ? ಏ°?
~
ಪೆರ್ಲದಣ್ಣಂಗೆ ಮದುವೆ ಆದ ಮತ್ತೆ ಮೋರೆಲಿ ನೆಗೆ ಹೆಚ್ಚಾಯಿದೋ – ಕಮ್ಮಿ ಆಯಿದೋ – ಗೊಂತಪ್ಪದು ಹೇಂಗೆ?
ಎದುರೇ ಹೋಗಿ ನಿಲ್ಲದ್ದೆ ಗೊಂತಾಗ.
“ಏನೂ..” – ಕೇಳದ್ದೆ ಗೊಂತಾಗ.
ಏನೊಳ್ಳೆದು ಮಾತುಕತೆ ಆದ ಮತ್ತೆಯೂ; ಅತ್ತಿಗೆ ಅಟ್ಟುಂಬೊಳಾಂಗೆ ಹೋಗದ್ದೆ ಗೊಂತಾಗ!
ಪೆರ್ಲದಣ್ಣಂಗೆ ಮಾಂತ್ರ ಅಲ್ಲ, ಮನುಷ್ಯನ ಎಲ್ಲ ಮಾತುಕತೆಗೆ ಭಾವನೆಗೊ ಮುಖ್ಯ.
ಭಾವನೆಗಳೇ ಇಲ್ಲದ್ದೆ ಮಾತಾಡ್ಳೆ ಹೆರಟ್ರೆ ಸೋನೆಗಾಂಧಿ ಭಾಷಣ ಓದಿದ ಹಾಂಗಕ್ಕು – ಹೇದು ಗುಣಾಜೆಮಾಣಿ ಹೇಳುಗು.
ಮಾತಿನ ಎಡೆಲಿ ನೆಗೆಗೊ, ಪಿಸುರುಗೊ, ಬೇಜಾರಂಗೊ – ಇದೆಲ್ಲವೂ ಬಂದೇ ಬತ್ತು. ಬಂದರೆಯೇ ಅದೊಂದು ಚೆಂದದ ಮಾತುಗಾರಿಕೆ ಹೇದು ಅಪ್ಪದು. ಅಲ್ಲದೋ?
ಭಾವನೆಗೊ ವ್ಯಕ್ತ ಅಪ್ಪದು ಮೋರೆಲಿ.
ಮನಸ್ಸು ಕಾಣ್ತಿಲ್ಲೆ, ಆದರೆ ಮನಸ್ಸಿನ ಭಾವನೆಗೊ ಕಾಣ್ತು – ಮೋರೆಂದಾಗಿ.
ಕೊಶಿಲಿದ್ದೋ, ಬೇಜಾರಲ್ಲಿದ್ದೋ – ಸಂತೋಷಲ್ಲಿದ್ದೋ, ನೆಗೆಮಾಡಿಂಡಿದ್ದೋ, ಪಿಸುರಿಲಿದ್ದೋ – ಎಲ್ಲವೂ ಗೊಂತಪ್ಪದು ಮನಸ್ಸಿನ ಕನ್ನಾಟಿ ಆದ ಮೋರೆಲಿಯೇ.
~
ಈ ಕಂಪ್ಯೂಟ್ರಿನ ಎದುರೆ ಕೂದುಗೊಂಡು ಅತ್ತಿತ್ತೆ ಮಾತಾಡ್ಳಾವುತ್ತಡ, ಅಲ್ಲದೋ? ಜೀಮೈಲು, ಓರುಕುಟ್ಟು, ಮೋರೆಪುಟ – ಹೀಂಗಿರ್ಸ ಬೈಲುಗೊ ಇಪ್ಪದೇ ಅದಕ್ಕೆ ಅಲ್ಲದೋ?
ಒಬ್ಬ° ಇಲ್ಲಿ, ಇನ್ನೊಬ್ಬ° ಓ ಅಲ್ಲಿ ಕೂದುಗೊಂಡು ಕಂಪ್ಯೂಟ್ರಿನ ಮೂಲಕ ಮಾತಾಡ್ತದಾಡ. ಅಂಬಗ, ಈ ಕಾಣದ್ದ ಮನಸ್ಸಿನ ಭಾವನೆಯ, ಅತ್ತಿತ್ತೆ ಮೋರೆಕಾಣದ್ದ ಕಂಪ್ಲೀಟ್ರಿಲಿ ತೋರ್ಸುತ್ತ ಕೆಣಿ ಎಂತರ? ಉಮ್ಮಪ್ಪ. ಒಪ್ಪಣ್ಣಂಗರಡಿಯ.
ಒಪ್ಪಣ್ಣಂಗರಡಿಯದ್ದರೆ ಎಂತಾತು, ಪೆರ್ಲದಣ್ಣಂಗೂ ಅರಡಿಗು; ಕೊಳಚ್ಚಿಪ್ಪು ಭಾವಂಗೂ ಅರಡಿಗು. 😉
ಕೊಳಚ್ಚಿಪ್ಪು ಬಾವಂಗೆ ಮದುವೆ ಆಗಿ ಒಂದೊರಿಶ ಆತೋ ಏನೋ, ಪೆರ್ಲದಣ್ಣಂಗೂ ಮದುವೆ ಆತು.
ಸದ್ಯ ಮದುವೆ ಆದೋರು ಪರಸ್ಪರ ಸಿಕ್ಕಿರೆ ಕಷ್ಟಸುಖ ಮಾತಾಡಿಗೊಂಬದು ಇಪ್ಪದೇ ಇದಾ!
ಹಾಂಗೇ, ಈ ಪೆರ್ಲದಣ್ಣನೂ-ಕೊಳಚ್ಚಿಪ್ಪು ಭಾವನೂ ಪರಸ್ಪರ ಸಿಕ್ಕಿಗೊಂಡವಾಡ, ಮಾತಾಡಿದವಾಡ!
ಎಲ್ಲಿ? ಎದುರೆದುರೆ ಸಿಕ್ಕಲೆ ಒಬ್ಬ ಬೆಂಗುಳೂರು, ಮತ್ತೊಬ್ಬ ಮತ್ತೊಂದಿಕ್ಕೆ. ಮತ್ತೆಲ್ಲಿ – ಕಂಪ್ಲೀಟರ್ಲೇ ಸಿಕ್ಕಿಗೊಂಡದು.
ಅವು ಅತ್ತಿತ್ತೆ ಮಾತಾಡಿದ ಸಂಗತಿ ಮೊನ್ನೆ ಕರಸೇವೆ ದಿನ ಕೊಳಚ್ಚಿಪ್ಪು ಬಾವ ಹೇಳಿಯೇ ಒಪ್ಪಣ್ಣಂಗೆ ಗೊಂತಾದ್ಸು.
~
ಹಾಂಗೆ ಅವು ಮಾತಾಡುವಾಗ ಸುಮಾರು ಕಷ್ಟ ಸುಖಂಗಳ ಹಂಚಿಗೊಂಡವಾಡ; ಕೊಳಚ್ಚಿಪ್ಪು ಭಾವ ಹೇಳಿದ°.
ಇಪ್ಪಲೂ ಸಾಕು; ಹಲವು ಪಾತ್ರ ತೊಳೆಸ್ಸು, ತರಕಾರಿ ತುಂಡುಸ್ಸು, ಅಡಿಗೆ ಕೋಣೆ ಮನಾರ ಮಾಡುಸ್ಸು- ಹೀಂಗಿರ್ಸ ಹಲವು ಕಾರ್ಯಂಗೊ ಇಪ್ಪಲೂ ಸಾಕು; ನವಗರಡಿಯ. ಅಟ್ಟಿನಳಗೆ ತೊಳೇಕಾರೆ ಜಾಲ್ಸೂರು ತೋಡೇ ಬೇಕಕ್ಕೋ ಏನೋ!
ಅದಿರಳಿ.
ಹೀಂಗಿರ್ತ ಸಂಗತಿಗಳ ಮಾತಾಡಿ ಒಳ್ಳೆ ನೆಗೆ-ಬೇಜಾರಂಗೊ ಹಂಚಿಗೊಂಡಿದವಾಡ.
ಚೆಲ, ಎದುರೆದುರೇ ಮಾತಾಡ್ತದಾದರೆ ನೆಗೆ-ಬೇಜಾರಾಂಗಳ ಹಂಚಲೆ ಎಡಿತ್ತು; ಕಂಪ್ಲೀಟ್ರಿಲಿ ಹೇಂಗೆ ಆ ಕೆಣಿ? – ಕೇಟೆ.
ಅಷ್ಟಪ್ಪಗಳೇ ಈ ಶುದ್ದಿ ಕೊಳಚ್ಚಿಪ್ಪು ಭಾವ ವಿವರ್ಸಿದ್ದು; ಒಪ್ಪಣ್ಣಂಗೆ ಅರ್ತ ಆದ್ದು.
~
ನೆಗೆಗೊಂಬೆ:
ಕಂಪ್ಲೀಟ್ರಿಲಿ ಬರವಾಗ, ಆ ಬರವ ಭಾವನೆಗೆ ಅನುಗುಣವಾಗಿ, ಅದರ ವ್ಯಕ್ತಪಡುಸಲೆ ಕೆಲವು “ನೆಗೆಗೊಂಬೆ”ಗೊ ಇದ್ದಾಡ.
ಅದು ನಿಂಗಳ ಮೋರೆಯೂ ಅಲ್ಲ, ಎನ್ನ ಮೋರೆಯೂ ಅಲ್ಲ, ಕೊಳಚ್ಚಿಪ್ಪು ಭಾವನ ಮೋರೆಯೂ ಅಲ್ಲ – ಅದೊಂದು ಗೊಂಬೆ ಮೋರೆಯ ಚಿತ್ರ.
ಬರಕ್ಕೊಂಡು ಹೋಪದ್ದೇ, ಭಾವನೆಗಳ ವ್ಯಕ್ತಪಡುಸುತ್ತ ಗೆರೆ ಬರವಾಗ, ಎಡಕ್ಕಿಲಿ ಈ ಗೊಂಬೆ ಚಿತ್ರಂಗಳ ಬರವಲಾವುತ್ತಾಡ.
ಓದುತ್ತೋನಿಂಗೂ ಓದಿಗೊಂಡು ಹೋವುತ್ತ ಹಾಂಗೆ, ಆ ಚಿತ್ರವ ಕಂಡಪ್ಪಗ ಅದೇ ಭಾವನೆಗೊ ಬತ್ತಾಡ – ಕೊಳಚ್ಚಿಪ್ಪು ಭಾವ° ಉವಾಚ.
ಉದಾಹರಣೆಗೆ, ಒಂದು ಗೊಂಬೆ ನೆಗೆಮಾಡ್ತ ಮೋರೆದು. ಎಂತಾರು ಕೊಶಿಯ ಸಂಗತಿ ಹೇಳ್ತ ಗೆರೆ ಬರದಪ್ಪದ್ದೇ ಈ ನೆಗೆಮೋರೆಯ ಚಿತ್ರ ಸೇರ್ಸಿರೆ, “ನೆಗೆಮಾಡ್ಳಾತು” ಹೇದು ಗುರ್ತಕ್ಕೆ ಆವುತ್ತಾಡ. ಅತವಾ, ಇದರ ಬರವಗ, ಬರದೋನಿಂಗೆ ನೆಗೆಬಯಿಂದು – ಹೇಳ್ತ ಗುರ್ತಕ್ಕೂ ಆವುತ್ತಾಡ.
ಇನ್ನೊಂದು ಬೇಜಾರದ ಚಿತ್ರ ಇದ್ದಾಡ. ಎಂತಾರು ದುಖ್ಖದ ಶುದ್ದಿಯ ಗೆರೆ ಬರದಪ್ಪದ್ದೇ, ಆ ಬೇಜಾರದ ಗೊಂಬೆಚಿತ್ರ ಹಾಕಿರೆ – ಇದರ ಬರವಗ ಬೇಜಾರಾಯಿದು; ಓದುವಾಗಳೂ ಬೇಜಾರ ಅಕ್ಕು – ಹೇದು ತೋರ್ಸಿದ ಗುಣ ಆಡ.
ಮತ್ತೊಂದು ಕೋಪದ ಚಿತ್ರ, ಎಂತಾರು ಕೋಪದ್ದಾರ ವಿವರ್ಸುವಾಗ ಈ ಚಿತ್ರ ಬರಕ್ಕೊಂಬಲಕ್ಕಾಡ. ಇದರ ಬರದೋನ ಮನಸ್ಥಿತಿ ಕೋಪಲ್ಲಿದ್ದತ್ತು – ಹೇಳ್ತ ಅರ್ತ ಬಪ್ಪ ನಮುನೆಗೆ.
ಮತ್ತೊಂದು ಒಪ್ಪ ಕೊಡ್ತದು. ನಿಜ ಜೀವನಲ್ಲಿ ಬೋಚಬಾವಂಗೆ ಒಪ್ಪ ಕೊಡ್ಳೆ ಬಂಙ ಇದ್ದರೂ – ಕಂಪ್ಲೀಟ್ರಿಲಿ ಎಡಿಗು!! ಇಶ್ಶೀ..!!
ಇನ್ನೊಂದು ಕನ್ನಡ್ಕ ಹಾಕಿ ಷ್ಟೈಲು ಮಾಡ್ತದು. ತಾನು ಹೇಳಿದ್ದು ಎಂತಾರು ಅಪ್ರೂಪಲ್ಲಿ ಸರಿ ಆಗಿದ್ದರೆ ಕೆಲವು ಜೆನ ಸೇಳೆ ಮಾಡ್ತವಲ್ಲದೋ – ಹಾಂಗೆ ಮಾಡ್ಳೆ ಅನುಕೂಲ ಆವುತ್ತ ನಮುನೆದು!!
ಹೀಂಗೆ ಹಲವರ ಪಟ್ಟಿ ಹೇಳಿಗೊಂಡೇ ಹೋದ, ಕೊಳಚ್ಚಿಪ್ಪು ಭಾವ. ಕರಸೇವೆ ಮಾಡಿಗೊಂಡು ಮಣ್ಣು ಹೊತ್ತುಗೊಂಡು ಬಚ್ಚಿತ್ತು. ಉಸ್ಸಪ್ಪಾ – ಹೇಳಿದೆ ಒಂದರಿ. “ಇದಾ, ಹೀಂಗೆ ಆದ್ಸರ ತೋರ್ಸಲೂ ಒಂದು ಬೊಂಬೆ ಚಿತ್ರ ಇದ್ದು” – ಹೇಳಿದ ಕೊಳಚ್ಚಿಪ್ಪು ಭಾವ°.
~
ಇದು ಕಂಪ್ಲೀಟ್ರಿಲಿ ಮಾಂತ್ರ ಅಲ್ಲಾಡ; ಈಗಾಣ ನಮುನೆ ಮೊಬೈಲುಗಳಲ್ಲಿಯೂ ಇದ್ದಾಡ.
ಗುಣಾಜೆಮಾಣಿಯ ಮೂವತ್ತೈದುಸಾವಿರ ಮೊಬೈಲಿಲಿ ಇಕ್ಕೋ? – ಕೇಳಿದೆ.
ಅದರ್ಲಿ ಮಾಂತ್ರ ಅಲ್ಲ, ಮೂರೂವರೆ ಸಾವಿರದ ಎನ್ನ ಮೊಬೈಲಿಲಿಯೂ ಇದ್ದು – ಹೇದು ಕಿಸೆಂದ ಮೊಬೈಲು ತೆಗದು ತೋರ್ಸಿದ°.
ಸಮೋಸ ಬರೆತ್ತ ಪುಟ ತೆಗದು, ಎರಡು ಮೂರು ಚುಕ್ಕೆ ಹಾಕಿ ಅಪ್ಪದ್ದೇ ಒಂದು ಅರುಶಿನ ಬಣ್ಣದ ನೆಗೆಚಿತ್ರ ಪ್ರತ್ಯಕ್ಷ!
ಕೊಂಡಾಟದ ಮೋರೆ, ಚೆಂದದ ಕಣ್ಣುಗೊ, ಕೆಂಪು ತೊಡಿ, ಎಲೆಡಕ್ಕೆ ತಿಂದ ನಮುನೆ!
ಸ್ವತಃ ಕೊಳಚ್ಚಿಪ್ಪು ಭಾವನೇ ನೆಗೆ ಮಾಡಿದ ಹಾಂಗೆ ಕಂಡತ್ತು!!
ಚೆಲ, ಇದರ ಬರುಸುತ್ತ ಕೆಣಿ ಹೇಂಗೆ? ಕೇಟೆ.
~
ಭಾವನೆ ವ್ಯಕ್ತ ಪಡುಸಲೆ ಮುಖ್ಯವಾಗಿ ಬೇಕಪ್ಪದು ಕಣ್ಣು – ಮೂಗು – ಬಾಯಿ. ಇಷ್ಟೇ.
ಇನ್ನು ಬಾಯಿಯ ಬೊಬ್ಬೆ, ಕೈಯ ಪೆಟ್ಟು – ಇದೆಲ್ಲವೂ ಪೂರಕ, ಅಷ್ಟೆ. ಮುಖ್ಯವಾಗಿ ಬೇಕಪ್ಪದು ಇದು ಮೂರು – ಕಣ್ಣು, ಬಾಯಿ, ಹೆಚ್ಚಿರೆ, ಅದರೆಡಕ್ಕಿಲಿರ್ತ ಮೂಗು.
ಇದಿಷ್ಟರ ಒಟ್ಟೊಟ್ಟಿಮ್ಗೆ ಬರದರೆ ಮೊಬೈಲಿಂಗೆ ಗೊಂತಾವುತ್ತಾಡ, ಈ ಜೆನಕ್ಕೆ ನೆಗೆಚಿತ್ರ ತೋರ್ಸೇಕಾಯಿದು – ಹೇದು.
ಹಾಂಗಾಗಿ ಕಣ್ಣು “:”, ಮೂಗು “-“, ನೆಗೆಮಾಡ್ತ ತೊಡಿ / ಬಾಯಿ “)” – ಇಷ್ಟರ ಒಟ್ಟಿಂಗೆ ಬರೇಕಾಡ. : – ) = ಇದಿಷ್ಟರ ಹತ್ತರತ್ತರೆ ಬರದು ತಲೆಯ ಅಡ್ಡ ಹಿಡುದು ನೋಡಿರೆ ಆ ಚುಕ್ಕಿಗೊ ಕಣ್ಣಾಗಿಯೂ, ಕೋಲುಗೆರೆ ಮೂಗಿನ ಹಾಂಗೆಯೂ, ಅರ್ಧಚಂದ್ರ ಬಾಯಿಯ ಹಾಂಗೆಯೂ ಕಾಣ್ತು – ಹೇದು ಮತ್ತೆ ವಿವರ್ಸುವಾಗ ಅಂದಾಜಿ ಆತು.
ಅದೇ ಕಣ್ಣು, ಅದೇ ಮೂಗು, ಆದರೆ ತೊಡಿಯ ಅರ್ಧಚಂದ್ರ ಕೆಳಾಂತಾಗಿ ಬಗ್ಗಿದರೆ – ಅದು ಬೇಜಾರದ ಲಕ್ಷಣ ಆಡ! : – (
~
ಹೋ – ಕೆಣಿ ಹೀಂಗಿದ್ದೋ? ಅಂಬಗ ನಮ್ಮ ಬೈಲಿಂಗೂ ಇದು ಬೇಕಾತನ್ನೇ; ಹೇದೆ.
ಬೈಲಿಲಿ ಈಗಳೇ ಇದ್ದು ಒಪ್ಪಣ್ಣೋ – ನೀನುದೇ ಹಾಂಗೆ ಬರದು ನೋಡು; ಕೂಡ್ಳೇ ನೆಗೆಚಿತ್ರ ಬತ್ತು – ಹೇಳಿದ°.
ಆ ದಿನ ಮನೆಗೆ ಬಂದಪ್ಪದ್ದೇ ಕೂಡ್ಳೇ ಆ ನಮುನೆ ಬರದು ನೋಡಿದೆ. ಇದಾ!! : – ) = 🙂
~
ಬರೇ ಅಕ್ಷರಲ್ಲಿ ಭಾವನೆಗಳ ಮೂಡ್ಸೇಕಾರೆ ಇಷ್ಟಿಷ್ಟುದ್ದ ಪ್ರಬಂಧವೇ ಬರೇಕಷ್ಟೆ. ಆದರೆ, ಹೀಂಗಿರ್ತ ನೆಗೆಚಿತ್ರಂಗಳ ಬಳಸಿಗೊಂಡ್ರೆ ಉದ್ದುದ್ದ ಭಾವನೆ ವ್ಯಕ್ತ ಪಡುಸುತ್ತ ಬರವಣಿಗೆಗಳನ್ನೇ ಬಿಡ್ಳಕ್ಕು – ಹೇಳಿದ°. ಯಪ್ಪೋ, ಬರವಣಿಗೆಲಿ ಎಷ್ಟು ದೊಡ್ಡ ಅಭಿವೃದ್ಧಿ ಆದ್ಸು, ಅಲ್ಲದೋ?
ಕೊಳಚ್ಚಿಪ್ಪು ಭಾವನೂ, ಪೆರ್ಲದಣ್ಣನೂ ಅತ್ತಿತ್ತೆ ಮಾತಾಡಿಗೊಂಬಗ ಹೀಂಗಿರ್ತ ಚಿತ್ರಂಗೊ ಧಾರಾಳ ಬಳಸುತ್ತವಾಡ.
ನಿಂಗೊ?
~
ನಮ್ಮ ಸುತ್ತುಮುತ್ತಾಣ ಸಂಗತಿಗಳ ನೆಗೆಚಿತ್ರ ಸೇರ್ಸೆಂಡು ಬರದರೆ ಹೇಂಗಿಕ್ಕು?
- ದೊಡ್ಡಮಾವ° ಗ್ರೇಶದ್ದೆ ನಮ್ಮ ಬಿಟ್ಟಿಕ್ಕಿ ಹೋದ್ಸು ಬೈಲಿಂಗೆ ತುಂಬಾ ಬೇಜಾರಾಯಿದು. : – ( 🙁
- ರೂಪತ್ತೆಯ ಹೊಸ ಕಾರಿಲಿ ಏಸಿ ಇದ್ದ ಕಾರಣ ಬೇಸಗೆ ಇಡೀ ಕೊಶಿಲಿದ್ದಾಡ : – ) 🙂
- ಬೋಸಬಾವಂಗೆ ನೆಗೆಮಾಣಿಯೇ ಇಂಗ್ಳೀಶು ಕಲಿಶುದಾಡ! : – D 😀
- ಬೇಸಗೆಲಿ ಸೆಕೆ ಅಪ್ಪದಕ್ಕೆ ಗಬ್ಲಡ್ಕ ಜಾಣ ಐಸ್ಕ್ರೀಮು ತಯಿಂದನಾಡ! : – P 😛
~
ನಿಂಗೊಗೆ ಗೊಂತಿಪ್ಪ ಶುದ್ದಿಯ ನಿಂಗಳೂ ಹೇಳಿಕ್ಕಿ. ಆತೋ?
ಒಂದೊಪ್ಪ: ಕಣ್ಣು-ಮೂಗು-ಬಾಯಿಗಳಲ್ಲಿ ಮೋರೆಯ ತಿಳಿವಳಿಕೆ ಗೊಂತಕ್ಕು; ನಿಜವಾಗಿ ಮನಸ್ಸಿನೊಳ ಎಂತ ಇದ್ದು ಹೇದು ಗೊಂತಕ್ಕೋ?
ಇಂಟರ್ನೆಟ್ಟಿಲಿ ಕಂಡ ಕೆಲವು ಚಿತ್ರಂಗೊ:
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಲಾಯಿಕಾಯಿದು 😉
ಮೇಲೆ ತೋರ್ಸಿದ ಹಾ೦ಗೆ ಬಯಿ೦ದಿಲ್ಲೆನ್ನೆ !
ಕೆಲವು ನೆಗೆಗೊ೦ಬೆಗಳ ಕೆಣಿ ಗೊ೦ತಾತು .ಮೊದಾಲು ಸರಿಯಾಗಿ ನೆಗೆ ಮಾಡ್ಲೆ ಎಡಿತ್ತಾ ನೋಡ್ತೆ ಃ-)
ಉತ್ತಮ ಮಾಹಿತಿ ಒಪ್ಪಣ್ಣ.
ಆನು ನೆಗೆ ಮೋರೆ ಮತ್ತೆ ಬೇಜಾರದ ಮೋರೆ ಒಂದೊಂದರಿ ಮಾತ್ರ ಉಪಯೋಗಿಸುತ್ತೆ ಅಷ್ಟೆ.
ಇಲ್ಲಿ ಸುಮಾರು ನಮೂನೆ ಭಾವನೆಗಳ, ಚಿತ್ರ ನೋಡಿ ಕಲ್ತ ಹಾಂಗೆ ಆತು.
ಭಾವಯ್ಯಂದ್ರಿಂಗೆ ಭಾವನೆಗಳ ಹೊರ ಹೊಮ್ಮುಸಲೆ ನೆಗೆ ಬೊಂಬೆಗೊ ಸಕಾಯ ಮಾಡ್ತದು ಕೇಳಿ ಕೊಶಿ ಆತು. ಎಲ್ಲ ಸಿಗ್ನಲಿಲ್ಲಿ ಮಾಡಿ ತೋರುಸುತ್ತ ಕಾಲ ಇದು. ಚೆನ್ನೈ ಭಾವಯ್ಯ ಕೊಟ್ಟ ಒಪ್ಪಲ್ಲಿ ನವರಸಂಗಳೇ ಹರುದ್ದೋ ಹೇಳಿ. ಒಂಭತ್ತು ನೆಗೆಮಂಡಗೊ ಲೆಕ್ಕಕ್ಕೆ ಸಿಕ್ಕಿತ್ತದ.
ಒಪ್ಪಣ್ಣನ ಒಪ್ಪಲ್ಲಿ ಇದು ಬಕ್ಕೋ ಹೇಳಿ ನೋಡಿದೆ.ಬತ್ತಿಲ್ಲೆಪ್ಪ:(.ಇದು ಮೈಕ್ರೋಸಾಫ್ಟ್ ಲಿಂಕ್ ಲಿ ಬಪ್ಪ ಸ್ಮೈಲಿಗ
:-*,<:o),:-#,:-*,(L),(U)
ಭಾವನೆಗಳ ವ್ಯಕ್ತಪಡಿಸಲೆ ಚಿತ್ರ….ಚಿತ್ರವ ವಿವರಿಸಲೆ ವಿವರಣೆ…
ಪೀಠಿಕೆ ಗಮ್ಮತಾಯ್ದು. ಇದರ ಓದಿಕ್ಕಿ ಜಾಣ° ಸೇಮಗೆ ಮುಟ್ಟು ತೆಕ್ಕೊಂಡು ತೊಳವಲೆ ತೋಡಿನತ್ರಂಗೆ ಹೋಗದ್ರೆ ಸರಿ ಇನ್ನು.
[..ಪಾತ್ರ ತೊಳೆಸ್ಸು, ತರಕಾರಿ ತುಂಡುಸ್ಸು, ಅಡಿಗೆ ಕೋಣೆ ಮನಾರ ಮಾಡುಸ್ಸು- ಹೀಂಗಿರ್ಸ ಹಲವು…] – ಚಪ್ಪಾತಿ ಲಟ್ಟುಸುತ್ಸು., ದೋಸೆ ಎರೆತ್ಸು…. – ಅಪ್ಪಪ್ಪು.,- ಹಲವು ಪಟ್ಟಿಲ್ಲಿ ಸೇರಿತ್ತು.
[ಭಾವನೆ ವ್ಯಕ್ತ ಪಡುಸಲೆ ಮುಖ್ಯವಾಗಿ ಬೇಕಪ್ಪದು ] – ನಿರೂಪಣೆ ಗಮ್ಮತಾಯ್ದು.
[ನಿಂಗೊಗೆ ಗೊಂತಿಪ್ಪ ಶುದ್ದಿಯ ನಿಂಗಳೂ ಹೇಳಿಕ್ಕಿ. ಆತೋ? ] – ನವಗೆ ಒಪ್ಪಣ್ಣನಷ್ಟೂ ಅರಡಿಯಾ ಇದಾ. ಒಪ್ಪಣ್ಣ ಹೇಳಿದ ಮತ್ತೆ ಓ ಇಷ್ಟು ಕಲ್ತು ಗೊಂಡತ್ತು. ಪ್ರಯೋಗ ಮಾಡಿ ನೋಡ್ತೆ . ಸರಿ ಬಂದರೆ ಆತು. ಇಲ್ಲದ್ರೆ ಸುರುವಾಣದ್ದು ಗೆಣವತಿಗೆ – 🙁 🙂 😀 😮 😯 😕 😎 :-X 😛 😐 😉