Oppanna.com

ಪಲಾವು (ಮನೆಲಿ ಮಾಡಿದ ಮಸಾಲೆ ಉಪಯೋಗ್ಸಿ)

ಬರದೋರು :   ವೇಣಿಯಕ್ಕ°    on   30/04/2013    8 ಒಪ್ಪಂಗೊ

ವೇಣಿಯಕ್ಕ°

ಪಲಾವು (ಮನೆಲಿ ಮಾಡಿದ ಮಸಾಲೆ ಉಪಯೋಗ್ಸಿ)

ಬೇಕಪ್ಪ ಸಾಮಾನುಗೊ:

  • 1.5 ಬೆಣ್ತಕ್ಕಿ (ಸೋನಾ ಮಸೂರಿ ಅಥವಾ ಬಾಸ್ಮತಿ ಅಕ್ಕಿ ಒಳ್ಳೆದು)
  • 20-25 ಬೀನ್ಸ್
  • 2 ಸಾಧಾರಣ ಗಾತ್ರದ ಕ್ಯಾರೆಟ್
  • 1-2 ಎಸಳು ಕಾಲಿ ಫ್ಲವರ್ / ಗೋಬಿ (ಬೇಕಾದರೆ ಮಾತ್ರ)
  • 1/2 -3/4 ಕಪ್(ಕುಡ್ತೆ) ಬೊದುಳಿದ ಬಟಾಣಿ
  • 1 ಇಂಚು ಗಾತ್ರದ ಚೆಕ್ಕೆ
  • 2 ಏಲಕ್ಕಿ
  • 3 ಲವಂಗ
  • 1/2 ಚಮ್ಚೆ ಕೊತ್ತಂಬರಿ
  • 1/2 ಚಮ್ಚೆ ಸೋಂಪು
  • 4-5 ಗೆಣಮೆಣಸು
  • 2 ಎಸಳು ಬೆಳ್ಳುಳ್ಳಿ
  • ಸಣ್ಣ ತುಂಡು ಶುಂಠಿ
  • 6-8 ಎಳೆ ಕೊತ್ತಂಬರಿ ಸೊಪ್ಪು
  • 4-5 ಪುದಿನ ಸೊಪ್ಪು
  • 2 ಹಸಿಮೆಣಸು
  • 1/3-1/2 ಕಪ್(ಕುಡ್ತೆ) ಕಾಯಿ ತುರಿ
  • 1/2 ಸಾಧಾರಣ ಗಾತ್ರದ ಟೊಮೇಟೋ
  • 1 ದಾಲ್ಚೀನಿ ಎಲೆ
  • 1 ಸಾಧಾರಣ ಗಾತ್ರದ ನೀರುಳ್ಳಿ(1/3 ಮಸಾಲೆಗೆ +  2/3 ಹೊರಿವಲೆ)
  • ರುಚಿಗೆ ತಕ್ಕಸ್ಟು ಉಪ್ಪು
  • 5-6 ಚಮ್ಚೆ ತುಪ್ಪ/ಎಣ್ಣೆ (ತುಪ್ಪ ಒಳ್ಳೆದು)

ಮಾಡುವ ಕ್ರಮ:

ಕ್ಯಾರೆಟ್, ಬೀನ್ಸ್,  ಕಾಲಿ ಪ್ಲವರ್, 2/3 ನೀರುಳ್ಳಿಯ ಸಾಧಾರಣ 3/4 ಇಂಚು ಉದ್ದಕೆ ತೆಳ್ಳಂಗೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರದು ಮಡುಗಿ.

ಟೊಮೇಟೋ, ಒಳುದ ನೀರುಳ್ಳಿ, ಕೊತ್ತಂಬರಿ ಸೊಪ್ಪಿನ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊರೆರಿ. ಬೆಳ್ಳುಳ್ಳಿಯ ಸೊಲುದು ಜಜ್ಜಿ ಮಡುಗಿ. ಶುಂಠಿಯನ್ನೂ ಜಜ್ಜು ಮಡುಗಿ. ಹಸಿಮೆಣಸಿನ ಉದ್ದಕೆ ಸಿಗುದು ಮಡುಗಿ.

ಅಕ್ಕಿಯ ನೀರಿಲ್ಲಿ ಲಾಯಿಕಲಿ 2-3 ಸರ್ತಿ ತೊಳದು, ನೀರು ಬಳುಶಿ ಮಡುಗಿ.
ಒಂದು ಬಾಣಲೆಗೆ ಚೆಕ್ಕೆ, ಲವಂಗ, ಏಲಕ್ಕಿ, ಕೊತ್ತಂಬರಿ, ಸೋಂಪು, ಗೆಣಮೆಣಸು, ಒಂದು ಚಮ್ಚೆ ತುಪ್ಪ ಹಾಕಿ ಸಣ್ಣ ಕಿಚ್ಚಿಲ್ಲಿ ಲಾಯಿಕ ಪರಿಮ್ಮಳ ಬಪ್ಪನ್ನಾರ ಹೊರಿರಿ. 
ಇದಕ್ಕೆ ಜಜ್ಜಿದ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು ಹಾಕಿ 1-2 ನಿಮಿಷ ಹದ ಕಿಚ್ಚಿಲ್ಲಿ ಹೊರಿರಿ. 
ಇದಕ್ಕೆ 1/3 ನೀರುಳ್ಳಿಯ ಹಾಕಿ 2 ನಿಮಿಷ ಹದ ಕಿಚ್ಚಿಲ್ಲಿ ಹೊರಿರಿ. ಇದಕ್ಕೆ ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪು ಹಾಕಿ 1-2 ನಿಮಿಷ ಹದ ಕಿಚ್ಚಿಲ್ಲಿ ಹೊರಿರಿ. 
ಇದಕ್ಕೆ ಕೊರದ ಟೊಮೇಟೋ ಹಾಕಿ 20-30 ಸೆಕುಂಡು ಹೊರಿರಿ. ಇದಕ್ಕೆ ಕಾಯಿ ತುರಿ ಹಾಕಿ ಲಾಯಿಕಲಿ ತೊಳಸಿ ಕಿಚ್ಚು ನನ್ಸಿ.

ಈ ಮಸಾಲೆಯ ಮಿಕ್ಸಿಗೆ ಹಾಕಿ, ರೆಜ್ಜವೇ ನೀರು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನೊಂಪಿಂಗೆ ಕಡೆರಿ.

4-5 ಚಮ್ಚೆ ತುಪ್ಪ, ದಾಲ್ಚೀನಿ ಎಲೆಯ ಕುಕ್ಕರ್ಂಗೆ ಹಾಕಿ ಹದ ಕಿಚ್ಚಿಲ್ಲಿ 20-30 ಸೆಕುಂಡು ಹೊರಿರಿ.
ಇದಕ್ಕೆ ಒಳುದ ಕೊರದ ನೀರುಳ್ಳಿ ಹಾಕಿ 2-3 ನಿಮಿಷ ಹದ ಕಿಚ್ಚಿಲ್ಲಿ ಹೊರಿರಿ.
ಇದಕ್ಕೆ ತೊಳದ ಅಕ್ಕಿಯ ಹಾಕಿ 2 ನಿಮಿಷ ಹೊರಿರಿ. ಇದಕ್ಕೆ ಕಡದ ಪಲಾವು ಮಸಾಲೆ ಹಾಕಿ 2 ನಿಮಿಷ ಹೊರಿರಿ.
ಇದಕ್ಕೆಬಟಾಣೆ, ಕೊರದು ಮಡುಗಿದ ತರಕಾರಿಗಳ ಹಾಕಿ 1-2 ನಿಮಿಷ ತೊಳಸಿ. ಉಪ್ಪು, 3 ಕುಡ್ತೆ ನೀರು(ಅಕ್ಕಿಯ ಹೊಂದಿಗೊಂಡು ನೀರಿನ ಹೆಚ್ಚು-ಕಮ್ಮಿ ಹಾಕೆಕ್ಕಕ್ಕು) ಹಾಕಿ ತೊಳಸಿ, ಬೇಶಿ. (3 ಸೀಟಿ ಸಾಕು)

ಪ್ರೆಶರ್ ಹೋದ ಮೇಲೆ, ಲಾಯಿಕಲಿ ತೊಳಸಿ, ಮೊಸರು ಗೊಜ್ಜಿಯ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 5 ಪ್ಲೇಟ್ ಪಲಾವು ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

8 thoughts on “ಪಲಾವು (ಮನೆಲಿ ಮಾಡಿದ ಮಸಾಲೆ ಉಪಯೋಗ್ಸಿ)

  1. hi…………… i am chaitra basically from uttra kannada….. e site nodi baala kushi atu.. kadigu havyak baashe site sigtu nodale….

  2. ಆನು ತಮಾಷೆಗೆ ಹೇಳಿದ್ದು ಡೋಂಟು ಮಿಸ್ಟೇಕು ಮಿ!!

  3. ಯಪ್ಪೋ ಎನಗೆ ಗೊಂತಿಲ್ಲೆಪ್ಪೋ! ಬೈಲಿಲಿ ಎನ್ನಾಂಗೆ ಕೊಂಕು? ಮಾತಾಡ್ತೋರುದೇ ಇರೆಕು ಅಕ್ಕಾ!! ಎಲ್ಲರೂ ಸುಭಗರೇ ಆದರೆ ಒಬ್ಪಾರು ಪೆದಂಬ ಬೇಡದ!!?

  4. ಇದರಲ್ಲೇ ಇದ್ದನ್ನೆ ಅಕ್ಕಾ 1/2 ಚಮ್ಚೆ SOMPOO ಹಾಯೆಕೋಳಿ!! ಇದು ಎಂತರ?
    ಆನು ಬೈಲ್ಲಿ ಹೇಳಿ ಕೊಡುವ ರೆಸಿಪಿಯ ಮಾತ್ರ ನೋಡುದು ಗೊಂತಿದ್ದಾ!

    1. ಎನಗೆ ಗೊಂತಿದ್ದ ಪ್ರಕಾರ “Fennel Seeds” ಇಂಗೆ ಕನ್ನಡಲ್ಲಿ “ಸೋಂಪು” ಹೇಳುದು. ಬೇರೆ ಯಾವುದಾದರು ಹವ್ಯಕ ಪದ/ಕನ್ನಡ ಪದ ಇದ್ದರೆ ಹೇಳಿಕ್ಕಿ… ರೆಸಿಪಿಯ update ಮಾಡುವ.. ಃ) ಮತ್ತೆ ಸುಮ್ಮನೆ ನಿಂಗಳ ಹಾಂಗಿದ್ದವು ಕೊಂಕು ಮಾತಾಡುದು ಬೇಡ!!!

  5. ಮೊನ್ನೆ ಮಾಡಿತ್ತಿದ್ದೆಯಾ ಮನೆಲಿ mtr ಉಪಯೋಗ್ಸಿ.
    ಹೇಳುದು ನೋಡುವಗ ಈ ನಮುನೆಂದ ಮೊನ್ನೆ ಹೇಳಿದ್ದೇ ಒಳ್ಳೆದೋಳಿ ಆವುತ್ತು. ಇದಕ್ಕೆ Shampoo ಹಾಕಿರೆ ಹೇಂಗಪ್ಪ ತಿಂತು!!?;-)

    1. ಪಲಾವಿಂಗೆ ಶ್ಯಾಂಪು ಹಾಯೆಕ್ಕು ಹೇಳಿ ಎಲ್ಲಿದೆ ಹೇಳಿದ್ದಿಲ್ಲನ್ನೆ….. ಬೇರೆ ಯಾವುದಾದರು ರೆಸಿಪಿ ಓದಿಕ್ಕಿ ಬಂದಿರಾ ಹೇಂಗೆ????

  6. ಅಕ್ಕಾ…. ನಿಂಗಳ ಆಂಗ್ಲ ಪ್ರತಿ ಬ್ಲೋಗಿಲ್ಲಿ ನೋಡಿ ಮೊನ್ನೆ ಮಾಡಿತ್ತೆ… ಲಾಯ್ಕ ಬಂದಿತ್ತು… ঃ)

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×