Oppanna.com

ಮಾವಿನ ಹಣ್ಣು ರಸಾಯನ

ಬರದೋರು :   ವೇಣಿಯಕ್ಕ°    on   21/05/2013    2 ಒಪ್ಪಂಗೊ

ವೇಣಿಯಕ್ಕ°

ಮಾವಿನ ಹಣ್ಣು ರಸಾಯನ

ಬೇಕಪ್ಪ ಸಾಮಾನುಗೊ:

  • 2 ದೊಡ್ಡ ಮಾವಿನ ಹಣ್ಣು
  • 1 ಕಪ್(ಕುಡ್ತೆ) ಬೆಲ್ಲ
  • 1/2 ಕಪ್(ಕುಡ್ತೆ) ಸಕ್ಕರೆ
  • 2 ಕಪ್(ಕುಡ್ತೆ) ಕಾಯಿ ತುರಿ ಅಥವಾ 1.5 ಕಪ್(ಕುಡ್ತೆ) ಕಾಯಿ ಹಾಲು
  • 2 ಚಮ್ಚೆ ಎಳ್ಳು (ಬೇಕಾದರೆ ಮಾತ್ರ)
  • 2-3 ಚಮ್ಚೆ ಸಣ್ಣಕೆ ತುರುದ ಕಾಯಿ ತುರಿ (ಬೇಕಾದರೆ ಮಾತ್ರ)
  • ಚಿಟಿಕೆ ಉಪ್ಪು
  • 2 ಏಲಕ್ಕಿ

ಮಾಡುವ ಕ್ರಮ:

ಮಾವಿನ ಹಣ್ಣಿನ ಚೋಲಿಯ ತೆಗದು, ಸಣ್ಣಕೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊಚ್ಚಿ ಮಡುಗಿ.

ಇದಕ್ಕೆ ಬೆಲ್ಲ, ಸಕ್ಕರೆ, ಚಿಟಿಕೆ ಉಪ್ಪು ಹಾಕಿ ತೊಳಸಿ 20-30 ನಿಮಿಷ ಮಡುಗಿ.

ಕಾಯಿಯ ರೆಜ್ಜ ನೀರು ಹಾಕಿ ನೊಂಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ.

ಕಾಯಿ ಹಾಲಿನ ಮಾವಿನ ಹಣ್ಣು ಕೊಚ್ಚಿ ಮಡುಗಿದ ಪಾತ್ರಕ್ಕೆ ಹಾಕಿ ತೊಳಸಿ. ಗುದ್ದಿ ಹೊಡಿ ಮಾಡಿದ ಏಲಕ್ಕಿಯನ್ನೂ ಹಾಕಿ ತೊಳಸಿ.

ಫ್ರಿಜ್ ಲ್ಲಿ ಮಡುಗಿ ತಣ್ಣಂಗೆ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

ಸೂಚನೆ (ಬೇಕಾದರೆ ಮಾತ್ರ)ಃ
ಎಳ್ಳು ಕಾಯಿ ಇಷ್ಟ ಇಪ್ಪವಕ್ಕೆ, ಒಂದು ಬಾಣಲೆಲಿ 2 ಚಮ್ಚೆ ಎಳ್ಳು ಹಾಕಿ ಪರಿಮ್ಮಳ ಬಪ್ಪನ್ನಾರ/ಹೊಟ್ಟುವನ್ನಾರ ಹದ ಕಿಚ್ಚಿಲ್ಲಿ ಹೊರಿರಿ. ಇದಕ್ಕೆ 2-3 ಚಮ್ಚೆ ಸಣ್ಣಕೆ ತುರುದ ಕಾಯಿ ತುರಿ ಹಾಕಿ ಸಣ್ಣ ಕಿಚ್ಚಿಲ್ಲಿ ಚಿನ್ನದ ಬಣ್ಣ ಬಪ್ಪನ್ನಾರ ಹೊರಿರಿ. ಇದರ ರಸಾಯನಕ್ಕೆ ಹಾಕಿ ತೊಳಸಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

2 thoughts on “ಮಾವಿನ ಹಣ್ಣು ರಸಾಯನ

  1. ಇದಾ ಬೋಚನೂ ಪೆಂಗಣ್ಣನೂ ಅತ್ತೆ ಹೆರಟಿದವು..
    ನಾಳಂಗೆ ಮದ್ಯಾಹ್ನಕ್ಕೆ ತಲ್ಪುಗು.. ನೆಗೆಮಾಣಿ ಘಟ್ಟ ಹತ್ತಿದವ ಬರೇಕಟ್ಟೇ ..

    ಎರಡು ತಪಲೆ ರಸಾಯನ ಇರಳಿ..

    1. ಏ ಭಾವ…
      ಎರಡು ಸಾಕೊ? ಇದಾ..
      ಒ೦ದು ತಪಲೆ ರಸಾಯನ ಇಡೀ ಎನಗೆ ಬೇಕು…! ಮತ್ತೊ೦ದು ನಿಗೆ…
      ಅ೦ಬಗ ನೆಗೆಮಾಣಿಗೆ ಎ೦ತರ??

      ತಪಲೆ ಮಾ೦ತ್ರವೋ..!! 😀

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×