Oppanna.com

“ಮಾತೃ ದೇವೋ ಭವ” : ಅಮ್ಮನ ದಿನದ ವಿಶೇಷ ಲೇಖನ

ಬರದೋರು :   ಇಂದಿರತ್ತೆ    on   12/05/2013    8 ಒಪ್ಪಂಗೊ

ಸಾಹಿತ್ಯವ ರಕ್ತಗತವಾಗಿ ಪಡಕ್ಕೊಂಡು ಬಂದ ಮನೆತನಲ್ಲಿ ದೇರಾಜೆಯೂ ಒಂದು.
ಹಿರಿಯ ಸಾಹಿತಿಗಳಾದ ದೇರಾಜೆ ಸೀತಾರಾಮಯ್ಯನವರ ಮಗಳು ಶ್ರೀಮತಿ ಇಂದಿರಾ ಜಾನಕಿ ಇದಕ್ಕೆ ಹೊರತಲ್ಲ.
ನಮ್ಮ ಬೈಲಿಲಿಯೂ ಹಲವು ಛಂದೋಬದ್ಧ ಕವಿತೆಗಳ ಬರದು ಸಾಹಿತ್ಯ ಪ್ರೌಢಿಮೆಯ ಇವು ತೋರ್ಸಿದ್ದವು. ವಿಷು ವಿಶೇಷ ಸ್ಪರ್ಧೆಲಿ ಕವನ ವಿಭಾಗಲ್ಲಿ ಬಹುಮಾನವನ್ನೂ ಪಡಕ್ಕೊಂಡಿದವು.
ಪ್ರಸ್ತುತ, ಇಂದಿರತ್ತೆಯಾಗಿ ನೆರೆಕರೆಗೆ ಬಂದು ಶುದ್ದಿ ಹೇಳುಲೆ ಸುರು ಮಾಡ್ತಾ ಇದ್ದವು.
ಎಲ್ಲೋರುದೇ ಸ್ವಾಗತ ಮಾಡುವೊ°. ಚೆಂದದ ಶುದ್ದಿಗಳ ಕೇಳುವೊ°, ಶುದ್ದಿಗೊಕ್ಕೆ ಒಪ್ಪ ಕೊಡುವೊ°.

~
ಬೈಲಿನ ಪರವಾಗಿ

ಮಾತೃ ದೇವೋ ಭವ:

ಮಾತೃತ್ವ ಸ್ತ್ರೀಯರ ಜನ್ಮಕ್ಕೊಂದು ಶೋಭೆ. ನಿರ್ವ್ಯಾಜವಾದ ಪ್ರೇಮ ಆ ಮಮತಾಮಯಿದು.
ಆ ತಾಯ್ತನ ಬರೇ ತಾನು ಹೆತ್ತಮಕ್ಕಳ ಮೇಲೆ ಮಾಂತ್ರ ಇದ್ದರೆ ಸಾಲ – ಎಲ್ಲೋರಮೇಲೂ ಇದ್ದರೆ, ಅಂಬಗ ಆ ತಾಯ್ತನಕ್ಕೆ ಹಿರಿಮೆ ಬಪ್ಪದು.
ಆಚಾರ್ಯ ಶಂಕರರು ಅಂದೇ ಹೇಳಿದ್ದವು, ‘ ಕುಮಾತಾ ನ ಭವತಿ ’ ಹೇಳಿ. ನಿಜವಾದ ಅಬ್ಬೆ ಕೆಟ್ಟವಳಪ್ಪದು ಹೇಂಗೆ? ಮಾತೆಯ ಮನಸ್ಸು ವೈಶಾಲ್ಯವ ಕಳಕ್ಕೊಂಡಪ್ಪಗ ತಾನುದೆ ತನ್ನ ಮಕ್ಕಳುದೆ ಮಾಂತ್ರ ಸುಖವಾಗಿರೆಕ್ಕು ಹೇಳ್ತ ಸ್ವಾರ್ಥ ತುಂಬುತ್ತು. ‘ಅಮ್ಮ’ ಅಪ್ಪಂಥಾ ಯೋಗ ಬರೇ ಮನುಷ್ಯರಿಂಗೆ

ಮಾತೃ ಹೃದಯ
ಮಾತೃ ಹೃದಯ

ಮಾ೦ತ್ರ ಅಲ್ಲನ್ನೆ- ಪ್ರಾಣಿಪಕ್ಷಿಗೊಕ್ಕೂ ಇದ್ದು.
ಅವಕ್ಕೆ ಬಾಯಿ ಬತ್ತಿಲ್ಲೆ- ಮೂಕಪ್ರಾಣಿ ಹೇಳಿ ಹೇಳ್ತು ನಾವು – ಆದರೆ ಮಾತು ಬಾರದ್ದರೂ ತಾಯಿಕರುಳು ಮಗುವಿನ ಬೇನೆಗೆ ಖಂಡಿತಾ ಚಡಪಡುಸುತ್ತು.

ಎಂಗೊ ಇಪ್ಪದು ಉಪ್ಪರಿಗೆಲಿ ಬಾಡಿಗೆಗೆ. ಹಳೆ ಕುರುಶಿ೦ದ ಎಳಕ್ಕಿದ ಒಂದು ಸ್ಪಂಜಿನ ತುಂಡು ಹೆರ ಮಡಿಗಿತ್ತಿದ್ದೆ. ರೆಜ ದಿನ ಕಳುದು ನೋಡಿರೆ ಅದು ಅಲ್ಲಿ ಇತ್ತಿಲ್ಲೆ. ಶೆಲ,ಈ ಕಸವನ್ನೂ ಕದಿವವು ಇದ್ದವನ್ನೇ ಹೇಳಿ ಪರಂಚಿಗೊಂಡೆ. ಪ್ರತೀ ತಿಂಗಳ ಒಂದನೇ ತಾರೀಕಿಂಗೆ ಕರೆಂಟಿನ ಗ್ರಾಸ್ತ° ಬಕ್ಕು. ಕೆಳಾಣ ಮನೆಲಿ ಒಂದು ಹೆಮ್ಮಕ್ಕೊ ಇದ್ದು- ಮೂರು ಮಕ್ಕಳ ಅಬ್ಬೆ. ಅದರ ಹತ್ತರೆ ಮೀಟರಿನ ಎಂತಕ್ಕೆ ಇಷ್ಟು ಗಲೀಜುಮಾಡಿ ಮಡಿಕ್ಕೊಂಬದು ಹೇಳಿ ಕೇಳಿದ°ಡ್ಡ . ಆನು ಕೆಳ ಹೋಪದ್ದೆ ಮೀಟರುಬೋರ್ಡಿನ ಬಾಗಿಲು ತೆಗದು ನೋಡಿತ್ತು. ನೋಡಿರೆ ಅದರಲ್ಲಿ ಕಸವಿನ ದೊಡ್ಡಾ ರಾಶಿಯೇ ಇತ್ತು. ಆ ಹೆಮ್ಮಕ್ಕೊ ಒಂದು ಕೋಲು ತಂದು ಅದರ ಕೆಳ ಹಾಕುಲೆ ನೋಡಿತ್ತು. ‘ಬೇಡ, ಅದರ್ಲಿ ಯೇವದಾರು ಪ್ರಾಣಿಯ ಕುಞಿಗೊ ಇಕ್ಕು, ಕುಟ್ಟಿ ಕೆಳ ಹಾಕಿಕ್ಕೆಡಿ ,ಕುಞಿಗೊಕ್ಕೆ ಬೇನೆ ಅಕ್ಕು’ ಹೇಳಿದೆ. ಗಣ್ಯವೇ ಮಾಡದ್ದೆ ಕುಟ್ಟಿ ಕೆಳ ಹಾಕಿತ್ತು. ಗೂಡು ಬಿದ್ದಪ್ಪಗ ಚಿಂಯಿಚಿಂಯಿ ಹೇಳಿ ಕೂಗುದುದೇ ಕೇಳಿತ್ತು. ನೋಡಿರೆ ಎಂತರ! ಎನ್ನ ಕಾಣೆಯಾದ ಸ್ಪಂಜು ಇತ್ತನ್ನೆ– ಅದು ಕಡ್ಳೆಕಾಳಿನಷ್ಟು ದೊಡ್ಡಕ್ಕೆ ಚೂರುಚೂರಾಗಿ ಆ ಕಸವಿನ ರಾಶಿಲಿದ್ದು. ಅಷ್ಟು ಮಾಂತ್ರ ಅಲ್ಲ- ಕಾಯಿಸೊಪ್ಪಿನ ಎಳೆ ಎಳೆ ಬಿಡುಸಿದ ಸುಗುಡು, ವಸ್ತ್ರದ ಚೂರುಗೊ ಎಲ್ಲಾ ಸೇರಿ ಬೊಂಡದಷ್ಟು ದೊಡ್ಡ ಸುಪ್ಪತ್ತಿಗೆ ಒಂದು ಆ ಬೋರ್ಡಿನ ಒಳದಿಕ್ಕೆ ಇತ್ತು. ಈ ಹೆಮ್ಮಕ್ಕೊ ಗೂಡಿನ ಬಿದ್ದಲ್ಲ್ಯಂಗೂ ಬಿಟ್ಟಿದಿಲ್ಲೆ, ಕೋಲಿಲಿ ನೂಕಿ ಮಾರ್ಗಕ್ಕೆ ಹಾಕಿತ್ತು. ನಾಯಿಯೂ ಬಂತು ಕಸವಿಲಿ ಎಂತ ಇದ್ದು ಹೇಳಿ ನೋಡ್ಳೆ. ಆ ಉಂಡೆಯ ಒಳಂದ ಅರೆಬ್ಬಾಯಿಕೊಟ್ಟು ಕೂಗುತ್ತಾ ಇದ್ದವು ಕುಞಿಗೊ. ಆ ಹೆಮ್ಮಕ್ಕೊಗೂ ರೆಜ ಉಮೇದು ಬಂದು ಒಳದಿಕ್ಕೆ ಯೇವ ಕುಞಿ ಇಪ್ಪದು ಹೇಳಿ ನೋಡಿತ್ತು. ನೋಡಿರೆ ಕುಞಿ ಕುಂಡೆಚ್ಚಂಗೊ ನಾಲ್ಕೈದು. ಚಿಗುರೆಲೆಯ ಬಣ್ಣ ಇನ್ನೂ ಮಾಸಿದ್ದಿಲ್ಲೆ- ರಾಮ ನೇವರಿಸಿದ ಗುರ್ತ ಹೇಳ್ತ ನಂಬಿಕೆ ಇದ್ದನ್ನೆ- ಆ ಪಟ್ಟೆಗೊ ಬೆನ್ನ ಮೇಗೆ ನೆಗೆದು ಕಾಣ್ತು. ಕೆಳಂಗೆ ಬಿದ್ದಪ್ಪಗ ಎಂತಾ ಆಘಾತ ಆದಿಕ್ಕು ಕುಞಿಗೊಕ್ಕೆ- ಒಂದೇ ಸಮ ಚಿಂಯಿಚಿಂಯಿ ಹೇಳಿ ಕೂಗಿಗೊಂಡೇ ಇತ್ತಿದ್ದವು. ನಾಯಿ ಎಲ್ಲಿ ಬಾಯಿ ಹಾಕುತ್ತೋ ಹೇಳ್ತ ಹೆದರಿಕೆಲಿ ಅಲ್ಲೇ ನಿಂದುಗೊಂಡೆ ಕಾವಲಿಂಗೆ. ಆ ಅಬ್ಬೆ ಕುಂಡೆಚ್ಚ ಎಲ್ಲಿತ್ತೋ ಬಂದೇ ಬಿಟ್ಟತ್ತು. ಜೆನಂಗಳ ಕಂಡು ಟೇರೇಸಿಂದ ಟೇರೇಸಿಂಗೆ ಹಾರಿ ಮಾರ್ಗಕ್ಕೆ ಎತ್ತಿತ್ತು. ಕಸವಿನ ರಾಶಿಲಿತ್ತಿದ್ದ ಕುಞಿಗಳ ಒಂದೊಂದನ್ನೇ ಕಚ್ಚಿಗೊಂಡು ಹೋತು, ಮಾರ್ಗಲ್ಲಿ ಕಸವಿನ ರಾಶಿ ಕಾಲಿಯಾತು- ಪಾಪ ಆ ಅಬ್ಬೆ ಈ ಹಸೀ ಕುಞಿಗಳ ಕಚ್ಚಿಗೊ೦ಡು ಎಲ್ಲಿಗೆ ಹೋದಿಕ್ಕು- ಹೇಂಗೆ ಜೋಪಾನ ಮಾಡುಗು? ಕೈಕಾಲು ಇಪ್ಪ ಮನುಷ್ಯರಿಂಗೇ ಅಷ್ಟುಸಣ್ಣ ಕುಞಿಗಳ ಕಾಪಾಡುದು ಕಷ್ಟ- ಅಷ್ಟು ಸಣ್ಣ ಪ್ರಾಣಿ ಕುಂಡೆಚ್ಚ ಹೇಂಗೆ ಮಾಡಿತ್ತೋ ಎಂತದೋ. ಮೇಲಂದ ಕೆಳಂಗೆ ಬಿದ್ದಪ್ಪಗ ಮಕ್ಕೊ ಮಾಡಿದ ಆಕ್ರಂದನ ಎಲ್ಲಿಯೋ ಇತ್ತಿದ್ದ ಅಬ್ಬೆಗೆ ಕೇಳಿತ್ತನ್ನೆ- ಇದಲ್ಲದಾ ಮಾತೃಹೃದಯದ ಶಕ್ತಿ!

ಅಷ್ಟು ಸಣ್ಣ ಪ್ರಾಣಿ ಮಕ್ಕೊಗೆ ಬೇಕಪ್ಪ ಹಾಸಿಗೆ ರೂಢಿಮಾಡಿ ಮಡುಗಿದ್ದದು ನೋಡಿರೆ ಮನುಷ್ಯರು ಸೋಲೆಕ್ಕು.
ವಸ್ತ್ರ, ಸ್ಪಂಜು, ಎಲೆ, ಕಾಯಿಸೊಪ್ಪು ಎಲ್ಲವನ್ನುದೆ ಸಣ್ಣಸಣ್ಣ ಚೂರು ಮಾಡಿ ಎಷ್ಟು ಸರ್ತಿ ಹೊತ್ತುಗೊಂಡು ಹೋದಿಕ್ಕು ಆ ಪಿಟ್ಟೆ ಪ್ರಾಣಿ!
ಒಂದೊಂದು ಕಡೆಂದ ಒಂದೊಂದರ ತಂದು ಅಟ್ಟಣೆ ಮಾಡಿದ್ದೇ ದೊಡ್ಡ ಸಾಹಸ. ತಂದರೆ ಸಾಕೋ ತಂದು ಸೀದಾ ಅಟ್ಟಿ ಒಯಿಸುದಲ್ಲನ್ನೆ.
ಮೀಟರ್ ಬೋರ್ಡು ಇಪ್ಪದು ಗೋಡೆಲಿ ಎತ್ತರಕ್ಕೆ. ಕಸವಿನಚೂರಿನ ಕಚ್ಚಿಗೊಂಡು ಮೆಟ್ಲಿನ ಕರೆಯ ಗ್ರಿಲ್ಲಿಲಿ ಬಂದು, ಅಷ್ಟೆತ್ತರ ಇಪ್ಪ ಬೋರ್ಡಿನ ಒಳದಿಕ್ಕಂಗೆ ಹಾರಿ, ಅಲ್ಲಿ ಆ ಕಸವಿನ ಚೂರಿನ ಮಡುಗಿ, ಮತ್ತೆ ಗ್ರಿಲ್ಲಿಂಗೆ ಹಾರಿ, ಕಸವು ಇಪ್ಪಲ್ಯಂದ ಇನ್ನೊಂದು ಚೂರಿನ ಕಚ್ಚಿಗೊಂಡು, ಮತ್ತೆ ಗೋಡೆಗೆ ಹಾರಿ- ಹೀಂಗೇ ಮತ್ತೆಮತ್ತೆ ಅದೇ ಕ್ರಮಲ್ಲಿ ಕಸವಿಪ್ಪ ಜಾಗೆ-ಗ್ರಿಲ್ಲು-ಬೋರ್ಡು, ಬೋರ್ಡು-ಗ್ರಿಲ್ಲು-ಜಾಗೆ- ಎಷ್ಟು ಸರ್ತಿ ಓಡಿಕ್ಕು! ಕುಂಡೆಚ್ಚ ಚುರುಕಿನ ಪ್ರಾಣಿಯೇ,
ಆದರೂ ಅದರ ಓಡಾಟವ ಕಲ್ಪಿಸಿಗೊಂಬಗಳೇ ತಲೆ ತಿರುಗುತ್ತು. ಮನುಷ್ಯರು ಮಾಡುಗಾ ಹೀಂಗಿಪ್ಪ ಅಟ್ಟಣೆ? ಬೇರೆ ಆರಾದರೂ ಮಾಡಲಿ ಹೇಳಿ ಕಾದುಗೊಂಡು ಕೂರುಗು.

ಕೋಮಲ ಮೈಗೆ ಬೇನೆ ಅಪ್ಪಲಾಗ ಹೇಳ್ತ ಯೋಚನೆ- ಅದಕ್ಕೆ ಬೇಕಾದ ತಯಾರಿ- ಯಾವ ಮನುಷ್ಯ ಮಗುವಿನ ಸ್ವಾಗತಕ್ಕೆ ಇಷ್ಟು ಕಷ್ಟಬಕ್ಕು? ಎಷ್ಟೋ ಜನ ಹೆತ್ತ ಮಗುವಿನ ಕಸವಿನ ತೊಟ್ಟಿಲಿ ಇಡ್ಕಿಕ್ಕಿ ಬತ್ತವನ್ನೆ- ಅಂತಾ ಮನುಷ್ಯರಿಂದ ನಾವು ಸಸಾರ ಮಾಡುವ ಈ ಪ್ರಾಣಿಗಳೇ ಸಾವಿರ ಪಾಲು ಮೇಲು ಹೇಳಿ ಕಾಣ್ತಿಲ್ಲೆಯೋ?

ಎಲ್ಲಾ ಜೀವಿಗಳಲ್ಲೂ ಮಾತೃಹೃದಯ ಇರ್ತು. ಅದರ ಮೊದಲು ನಾವು ಗುರ್ತುಸೆಕ್ಕು, ತಲೆಬಗ್ಗುಸೆಕ್ಕು. ಬರೇ ದೈಹಿಕವಾಗಿ ಅಬ್ಬೆ ಆದರೆ ಸಾಲ- ಮಾನಸಿಕವಾಗಿದೇ ಆ ಮಟ್ಟವ ಮುಟ್ಟೆಕ್ಕು- ಅಂಬಗ ಮಾಂತ್ರ ‘ಕುಮಾತಾ ನ ಭವತಿ’ ಸಾರ್ಥಕ ಅಕ್ಕು.
ಅಂತಾ ಮಾತೃಹೃದಯಲ್ಲಿ ಜಗಜ್ಜನನಿಯೂ ನೆಲೆಗೊಳ್ಳುಗು ಹೇಳ್ತ ವಿಶ್ವಾಸಲ್ಲಿ ಎಲ್ಲಾ ಅಬ್ಬೆಕ್ಕೊಗೂ ಇಲ್ಲಿಂದಲೇ ಹೊಡಾಡುತ್ತೆ.

~*~

 ಚಿತ್ರ: ಅಂತರ್ಜಾಲ ಕೃಪೆ

8 thoughts on ““ಮಾತೃ ದೇವೋ ಭವ” : ಅಮ್ಮನ ದಿನದ ವಿಶೇಷ ಲೇಖನ

  1. ಓದಿ ಕಣ್ಣಿಲಿ ನೀರು ಬಂತು ಇಂದಿರತ್ತೆ

    ಲೇಖನ ತುಂಬಾ ಹೃದಯಂಗಮವಾಗಿ ಮನಸು ತಟ್ಟುತ್ತು ,ತುಂಬಾ ಲಾಯ್ಕ ಇದ್ದು

    ಎಲ್ಲ ಅಮ್ಮನ್ದಿರಿನ್ಗೆ ಮನಪೂರ್ವಕ ವಂದನೆಗ

  2. ಹರೇ ರಾಮ

    ಕುಂಡೆಅ ಅದರ ಮರಿಗಳ ತೆಕ್ಕೊಂಡು ಎಲ್ಲಿ ಹೋತೋ ಏನೋ.ಎನಗೆ ನಿನ್ನೆ ಇರುಳಿಡೀ ಇದೇ ನೆನಪಾಗ್ಯೊಂಡು ಇತ್ತು ಇಂದಿರೆಕ್ಕ.
    ಮಾತೃ ಹೃದಯದ ಬಗ್ಗೆ ಮಾತಿಲ್ಲಿ ಹೇಳುವದು ಬಹುಷಃ ಕಷ್ಟ ಹೇಳಿ ತೋರುತ್ತು ಎನಗೆ. ಎಲ್ಲ ಮಾತೆಯರಿಂಗೆ ಎನ್ನ ನಮಸ್ಕಾರ.
    ಲೇಖನ ಹೃದಯ ಸ್ಪಷ್ರಿಯಾಗಿತ್ತು ಇಂದಿರಕ್ಕ.

  3. ಕುಂಡೆಚ್ಚ…. ಅಲ್ಲಲ್ಲಾ ಕುಂಡೆಚ್ಚಿ ಪಾಪ ! ………. ಮತ್ತೆಲ್ಲಿಗೆ ಹೋತೋ, ಹೇಂಗೆ ಮರಿ ಸಾಂಕಿತಾ……… ಒಂದರಿ ಊರಿಂಗೆ ಹೋಪಗಾ, ಶಿರಾಡಿ ಘಾಟಿಲಿ, ಒಂದು ಮಂಗ ತನ್ನ ಸತ್ತುಹೋದ ಮರಿ ಹಿಡುಕೋಂಡ್ ಹೋಗಿಕೋಂಡ್ ಇತ್ತು. ಅಯ್ಯೋ ಪಾಪವೇ ಹೇಳಿ ಆತು.

    ಇಂದಿರತ್ತೆ……… ಲೇಖನ ಲಾಯ್ಕಾಯಿದು. ಸ್ವಲ್ಪ ದಿನ ಅಲ್ಲಿಯೆ ಬಿಟ್ಟಿತ್ತಿದ್ದರೆ, ಒೞೆದಿತ್ತು. ಅಲ್ಲದಾ ?

  4. ಕು೦ಬಾರನಿಗೆ ವರುಷ ದೊಣ್ಣೆಗೆ ನಿಮಿಷ ಹೇಳಿದ ಹಾ೦ಗೆ.
    ಆ ಮಾತೃವಾತ್ಸಲ್ಯಕ್ಕೆ ಮನಸ್ಸು ಸೋತತ್ತು.ಸಮಯೋಚಿತ ಶುದ್ದಿ ಅತ್ತೆ.

  5. ಲಾಯ್ಕಾಯಿದು ಇಂದಿರ!

    ಇದರ ಓದುವಾಗ ಸಾದಾರಣ ಮೂವತ್ತು ವರ್ಷದ ಹಿಂದೆ ಆನು ಸಾಂಕಿದ ಕುಂಡೆಚ್ಚನ ನೆಂಪಾತು. ಆವಗ ಎಂಗೊ ಇದ್ದ ಮನೆಯ ಜಾಲಿನ ಹಲಸಿನ ಮರಂದ ಒಂದು ದಿನ ಒಂದು ಕುಂಡೆಚ್ಚನ ಕುಞಿ ಕೆಳ ಬಿದ್ದು ಕೂಗುದು ನೋಡಿದೆ. ಅದರ ಒಂದು ಪ್ಲಾಸ್ಟಿಕ್ ಕುರುವೆಲಿ ವಸ್ತ್ರ ಹಾಕಿ ಮನಿಶಿ ಕೆಲವು ದಿನ ಸಾಂಕಿದೆ. ಅದಕ್ಕೆ ಕೈಬೆರಳಿಲ್ಲಿ ಹಾಲು ಕುಡಿಶಿದೆ.

    ಮತ್ತೆ ಕೆಲವು ದಿನ ಕಳುದು ಮಾರ್ಕೆಟ್ಟಿಂದ ಗೂಡು ತಂದು ಪುಚ್ಚಗೆ ಸಿಕ್ಕದ್ದ ಹಾಂಗೆ ಮನೆಲಿ ಎತ್ತರಕ್ಕೆ ನೇಲುಸಿದೆ. ಕುಂಡೆಚ್ಚಂಗೆ ಮನುಗಲೆ ಗೂಡಿನ ಒಳ ಒಂದು ವಸ್ತ್ರ ಹಾಕಿದರೆ ಅದನ್ನೇ ಒಂದು ಮಾಟೆಯ ಹಾಂಗೆ ಮಾಡಿಗೊಂಡು ಮನಿಕ್ಕೊಂಡಿತ್ತು. ದಿನಿಗೇಳಿದರೆ ಅಲ್ಲಿಂದಲೇ ಪಿಳಿಪಿಳಿ ನೋಡುಗು. ಹಾಲು ಹಣ್ಣು ಕೊಟ್ಟೊಂಡಿತ್ತಿದ್ದೆ. ಕೆಲವು ಸರ್ತಿ ಎನ್ನ ಕೈಂದಲೇ ಹಣ್ಣು ತಿಂದುಗೊಂಡಿತ್ತು.

    ರಜ ದೊಡ್ಡಾದ ಹಾಂಗೆ ದಿನಕ್ಕೊಂದರಿ ಹೆರ ಬಿಟ್ಟೊಂಡಿತ್ತಿದ್ದೆ; ಅದರೊಟ್ಟಿಂಗೆ ಆಟ ಆಡ್ಯೊಂಡು, ಮಾತಾಡ್ಯೊಂಡು ಇತ್ತಿದ್ದೆ. ಕುಞಿ ಕುಂಡೆಚ್ಚ ಎನ್ನ ಬೆನ್ನಿಂಗೆ, ಹೆಗಲಿಂಗೆ, ತಲಗೆ ಎಲ್ಲ ಹಾರ್ಯೊಂಡಿತ್ತು. ಹಾಂಗೇ ದೊಡ್ಡ ಆತು. ಮತ್ತೆ ಗೂಡಿನ ಬಾಗಿಲು ತೆಗದೇ ಮಡಿಕ್ಕೊಂಡಿತ್ತಿದ್ದೆ. ಮತ್ತೆ ಕೆಲವು ಸಮಯ ಕಳುದು ಮರಕ್ಕೆ ಬಿಟ್ಟರೆ ರಜ ಹೊತ್ತು ಕಳುದು ದಿನಿಗೇಳಿರೆ ವಾಪಾಸು ಬಂದೊಂಡಿತ್ತು. ದಿನಿಗೇಳದ್ದರೆ ಅದೇ ಗೂಡಿಂಗೆ ಬಂದು ಚಿಂಯಿಚಿಂಯಿ ಹೇಳಿ ಜೋರು ದಿನಿಗೇಳುಗು; ಮತ್ತೂ ಕೇಳದ್ದರೆ ಗೂಡಿಲ್ಲಿ ಹಾಲು ಕೊಡ್ಳೆ ಮಡಿಗಿದ ಗಿಣ್ಣಾಲಿನ ಶಬ್ದ ಮಾಡುಗು.

    ಹೀಂಗಿಪ್ಪಗ ಒಂದು ಸರ್ತಿ ಎಂಗೊ ಊರಿಂಗೆ ಹೋದವು ಬಪ್ಪಗ ಒಂದು ವಾರ ಆಯಿದು. ಹತ್ತರಾಣ ಮನೆಯವು “ನಿಂಗಳ ಕುಂಡೆಚ್ಚ ಯಾವಾಗಳೂ ಬಂದು ದಿನಿಗೇಳ್ಯೊಂಡಿತ್ತು” ಹೇಳಿದವು. ಮತ್ತೆ ಆ ಕುಂಡೆಚ್ಚನ ಕಂಡಿದಿಲ್ಲೆ.

  6. ಲೇಖನ ಭಾರೀ ಲಾಯ್ಕಾಯಿದು ಇಂದಿರೆ… ಬೈಲಿಲಿ ಬರವಲೆ ಸುರು ಮಾಡ್ತಾ ಇದ್ದೆ ಹೇಳಿ ತಿಳುದು ಸಂತೋಷ ಆತು… ಸ್ವಾಗತ.. ಇನ್ನೂ ಹೀಂಗೇ ಚೆಂದದ ಸುದ್ದಿಗೊಕ್ಕೆ ಕಾಯ್ತಾ ಇರ್ತೆ…

  7. ಕುಂಡೆಚ್ಚನ ಕಥೆ ಮನಮುಟ್ಟಿತ್ತು ಇಂದಿರತ್ತೆ.
    ನಿಜಕ್ಕೂ ಅಮ್ಮನ ಅಗಾಧ ಪ್ರೀತಿಯ ಅಕ್ಷರಂಗಳಲ್ಲಿ ವಿವರ್ಸುಲೆಡಿಯ..

  8. ಎಲ್ಲಾ ಅಮ್ಮಂದಿರಿಂಗೂ ದಿನ ವಿಶೇಷದ ಅಂಗವಾಗಿ ಶುಭಾಶಯಂಗೊ.ಇಂದು ಮಾಂತ್ರ ಅಲ್ಲದ್ದೆ ಎಲ್ಲಾ ದಿನಂಗಳೂ ಅಮ್ಮಂದ್ರಿಂಗೆ ಶುಭ ದಿನಂಗೊ ಆಗಿರಳಿ ಹೇದು ಸದಾಶಯ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×