- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಹಲಸಿನ ಹಣ್ಣಿನ ಗೆಣಸಲೆ
ಬೇಕಪ್ಪ ಸಾಮಾನುಗೊ:
- 2 ಕಪ್(ಕುಡ್ತೆ) ಬೆಣ್ತಕ್ಕಿ
- 3 ಕಪ್(ಕುಡ್ತೆ) ಕಾಯಿ ತುರಿ
- 3 ಕಪ್(ಕುಡ್ತೆ) ಸಣ್ಣಕೆ ಕೊಚ್ಚಿದ(ಕ್ರಶ್ ಮಾಡಿದ) ಹಲಸಿನ ಹಣ್ಣು
- 1-1.5 ಕಪ್(ಕುಡ್ತೆ) ಬೆಲ್ಲ
- ರುಚಿಗೆ ತಕ್ಕಸ್ಟು ಉಪ್ಪು
- 10-12 ಬಾಳೆ ಎಲೆ
ಮಾಡುವ ಕ್ರಮ:
ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ.
ಅಕ್ಕಿಗೆ ರೆಜ್ಜವೆ ನೀರು ಹಾಕಿ, ರುಚಿಗೆ ತಕ್ಕಸ್ಟು ಉಪ್ಪು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಗಟ್ಟಿಗೆ ನೊಂಪಿಂಗೆ ಕಡೆರಿ.
ಅಕ್ಕಿ ಹಿಟ್ಟು ದಪ್ಪ ಮಜ್ಜಿಗೆಯಸ್ಟು ಹದ ಇರಲಿ.
ಹಲಸಿನ ಹಣ್ಣಿನ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ.
ಉಳಿಲಿ ಅಥವಾ ಮಿಕ್ಸಿಲಿ ಹಲಸಿನ ಹಣ್ಣಿನ ಸಣ್ಣಕೆ ಕೊಚ್ಚಿ/ಕ್ರಶ್ ಮಾಡಿ.
ಬಾಳೆ ಎಲೆಯ ಕಿಚ್ಚಿಲ್ಲಿ ಬಾಡ್ಸಿ, ಲಾಯಿಕಲಿ ಉದ್ದಿ ಮಡುಗಿ. ಕಾಯಿ ಕೆರದು, ಬೆಲ್ಲವ ಕೆರಸಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಲಾಯಿಕ ಕಲಸಿ ಮಡುಗಿ.
ಇದಕ್ಕೆ ಕೊಚ್ಚಿ ಮಡುಗಿದ ಹಲಸಿನ ಹಣ್ಣಿನ ಹಾಕಿ ಬೆರುಸಿ.
ಅರ್ಧ ಸೌಟಪ್ಪಸ್ಟು ಹಿಟ್ಟಿನ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬಾಡ್ಸಿ ಉದ್ದಿ ಮಡುಗಿದ ಬಾಳೆ ಕೀತಿನ ನಡುಕಂಗೆ ಹಾಕಿ.
ಬಾಳೆ ಕೀತಿನ ಓರೆ ಮಾಡಿ ಅಥವಾ ಒಂದು ಸೌಟಿಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉರುಟಿಂಗೆ ಹಸರ್ಸಿ.
ಮಾಡಿ ಮಡುಗಿದ ಹಲಸಿನ ಹಣ್ಣು ಬೆಲ್ಲ ಸುಳಿಯ ರೆಜ್ಜ ತೆಕ್ಕೊಂಡು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹಸರ್ಸಿದ ಹಿಟ್ಟಿನ ಅರ್ಧ ಭಾಗಕ್ಕೆ ಹಾಕಿ.
ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬಾಳೆ ಎಲೆಯ ಮಡ್ಸಿ.
ಪುನಃ ಬಾಳೆ ಎಲೆಯ ಎರಡು ಕರೆಯನ್ನು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಮಡ್ಸಿ.
ಅಟ್ಟಿನಳಗೆ/ಪ್ರೆಶರ್ ಕುಕ್ಕರ್ನ ಅಡಿಲಿ ರೆಜ್ಜ ನೀರು ಹಾಕಿ, ಸ್ಟಾಂಡ್ ಮಡುಗಿ ಅದರ ಮೇಗೆ ಗೆಣಸಲೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕವುಂಚಿ ಮಡುಗಿ.
ಮುಚ್ಚಲು ಮುಚ್ಚಿ, 15-20 ನಿಮಿಷ ದೊಡ್ಡ ಕಿಚ್ಚಿಲ್ಲಿ ಬೇಶಿ, ಮತ್ತೆ 15-20 ನಿಮಿಷ ಸಣ್ಣ/ಹದ ಕಿಚ್ಚಿಲ್ಲಿ ಬೇಶಿ.
(ಪ್ರೆಶರ್ ಕುಕ್ಕರಿಂಗೆ, ವೈಟ್ ಮಡುಗುದು ಬೇಡ, ವೈಟ್ ಸ್ಟಾಂಡಿಂಗೆ ಒಂದು ಗ್ಲಾಸಿನ ಕವುಂಚಿ ಮಡುಗಿರೆ ಸಾಕು.)
ಬೆಶಿ ಬೆಶಿ ಗೆಣಸಲೆಗೆ ತುಪ್ಪ ಹಾಕಿ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 10-12 ಗೆಣಸಲೆ ಆವುತ್ತು. ಇದರ ದೇವರ ನೈವೇದ್ಯಕ್ಕೆ ಉಪಯೋಗ್ಸುಲೆ ಅಕ್ಕು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ನಾನು ನಿಮ ಗೆನಸಲೇ ಮಾಡಿದೆ. ಮನೇಲಿ ಯಲ್ಲರಿಗೆ ತುಂಬ ಇಷ್ಟ ಆಯಿತು .ವಂದನೆಗಳು ……………………….. :)-
veniyakka, ruchi akku. genasalege havyaka pustakdalli vishesha staana.yenambe?
ಗೆಣಸಲೆ ನೋಡ್ಯಪ್ಪಗ ಎನಗೆ ಆನು ಹೈಸ್ಕೂಲಿಲಿಪ್ಪಗ ಓದಿತ್ತ ‘ ಗೆಣಸಲೆ ‘ ಹೇಳ್ವ ಹವ್ಯಕ ಕವನ ಸಂಕಲನ ನೆಂಪಾತು… ঃ)
ಅದರಲ್ಲಿ
ಗೆನ ಗೆನಾ ಗೆಣಸಲೆಯ
ಗೆಣವತಿಗೆ ಮಡುಗುತ್ತೆ
ಮಾಡುತ್ತೆ ಅವನ ಪೂಜೆಯಾ….. ತುಂಬಾ ಲಾಯ್ಕಿತ್ತು. ಆರು ಬರದ್ದು ಹೇಳಿ ನೆಂಪಾವ್ತಾಯಿಲ್ಲೆ
ನಮ್ಮ ಬೈಲಿನ ಆತ್ಮೀಯ ಮಾರ್ಗದರ್ಶಕ ಶ್ರೀ ಹರಿಕೃಷ್ಣ ಭರಣ್ಯ ಮಾವ ಬರದ ಪುಸ್ತಕ ಅದು.ತ್ರಿಪದಿಗಳಲ್ಲಿ ಚೆ೦ದದ ಕವನ೦ಗೊ ಇದ್ದು.
ಹು,ಇ೦ದು ಉದಿಯಪ್ಪಗ ಹಲಸಿನ ಹಣ್ಣಿನ ಕೊಟ್ಟಿಗೆ ತಿ೦ದಾತು,ಇಲ್ಲಿ ನೋಡಿರೆ ಗೆಣಸಲೆ ! ದೇವರ ನೈವೇದ್ಯ ಆಗಿ ಪ್ರಸಾದಕ್ಕೆ ಧಾರಾಳ ಅಕ್ಕು.ರೈಸಿತ್ತು.
Photo nodiyappaga bayili neeru erkuthu.:) ida ennadondu salute !!
Halasina hannina genasaleyottinge kempu chatni nodi appaga hashu joraathu…
Yammiii…