Oppanna.com

ಕಣಿಲೆ ಗಸಿ

ಬರದೋರು :   ವೇಣಿಯಕ್ಕ°    on   23/07/2013    1 ಒಪ್ಪಂಗೊ

ವೇಣಿಯಕ್ಕ°

ಕಣಿಲೆ ಗಸಿ
ಬೇಕಪ್ಪ ಸಾಮಾನುಗೊ:

  • 5 ಕಪ್(ಕುಡ್ತೆ) ಸಣ್ಣಕೆ ಕೊಚ್ಚಿದ ಕಣಿಲೆ
  • 2 ಸಾಧಾರಣ ಗಾತ್ರದ ನೀರುಳ್ಳಿ
  • 1 ಕಪ್(ಕುಡ್ತೆ) ಬೊದುಳಿದ ಬಟಾಣಿ
  • 1.5 ಕಪ್(ಕುಡ್ತೆ) ಕಾಯಿ ತುರಿ
  • 1/4 ಚಮ್ಚೆ ಅರುಶಿನ ಹೊಡಿ(1/8 ಚಮ್ಚೆ ಬೇಶುಲೆ +  1/8 ಚಮ್ಚೆ ಮಸಾಲೆಗೆ)
  • 1/4 ಚಮ್ಚೆ ಮೆಣಸಿನ ಹೊಡಿ
  • ಸಾಧಾರಣ ದ್ರಾಕ್ಷೆ ಗಾತ್ರದ ಬೆಲ್ಲ
  • 5-6 ಒಣಕ್ಕು ಮೆಣಸು
  • ಸಣ್ಣ ದ್ರಾಕ್ಷೆ ಗಾತ್ರದ ಹುಳಿ
  • ಚಿಟಿಕೆ ಇಂಗು
  • ರುಚಿಗೆ ತಕ್ಕಸ್ಟು ಉಪ್ಪು
  • 1/2-3/4 ಕಪ್(ಕುಡ್ತೆ) ಬೇಶಿದ ತೊಗರೀ ಬೇಳೆ
  • 12-15 ಬೇನ್ಸೊಪ್ಪು (8-10 ಮಸಾಲೆಗೆ + ಒಳುದ್ದು ಒಗ್ಗರಣೆಗೆ)
  • 1 ಚಮ್ಚೆ ಸಾಸಮೆ
  • 2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕಣಿಲೆಯ ಹೆರಾಣ ಚೋಲಿಯ ತೆಗದು, ಬೆಳಿ ಎಳತ್ತು ಇಪ್ಪ ಭಾಗವ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ರೆಜ್ಜ ಉದ್ದ-ಉದ್ದಕೆ ಸಪುರಕೆ ಕೊರೆರಿ.

ಒಂದು ಪಾತ್ರಲ್ಲಿ ಸಾಧಾರಣ 6 ಕುಡ್ತೆ ನೀರು ಹಾಕಿ ಕೊದಿವಲೆ ಮಡುಗಿ. ಅದು ಕೊದುದಪ್ಪಗ, ಕೊಚ್ಚಿದ ಕಣಿಲೆಯ ಹಾಕಿ ಕೊದುಶಿ, ಸಣ್ಣ ಕಿಚ್ಚಿಲ್ಲಿ ಒಂದು 5-10 ನಿಮಿಷ ಮಡುಗಿ.
ಇದರ ಒಂದು ವಸ್ತ್ರ/ ಅರಿಪ್ಪೆಲಿ ಹಾಕಿ ಅರುಶಿ ಅಥವಾ ಪಾತ್ರಕ್ಕೆ ಮುಚ್ಚಲು ಮಡುಗಿ ಬಗ್ಗುಸಿ. ಇದಕ್ಕೆ ಪುನಃ ನೀರು ಹಾಕಿ, ತೊಳಸಿ ಬಗ್ಗುಸಿ. ಹೀಂಗೆ ನೀರು ಹಾಕಿ ಇನ್ನು 1-2 ಸರ್ತಿ ತೊಳಸಿ ಬಗ್ಗುಸಿ, ಹಿಂಡಿ ಮಡುಗಿ.

ನೀರುಳ್ಳಿಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಾಧಾರಣ ಸಪುರಕೆ ಕೊರೆರಿ.

ಕಣಿಲೆ, ಬಟಾಣಿಯ ಪ್ರೆಶರ್ ಕುಕ್ಕರಿಂಗೆ ಹಾಕಿ, ಉಪ್ಪು, ಬೆಲ್ಲ, ಮೆಣಸಿನ ಹೊಡಿ, ಅರುಶಿನ ಹೊಡಿ(1/8 ಚಮ್ಚೆ), ನೀರು ಹಾಕಿ ಬೇಶಿ.(2-3 ಸೀಟಿ).
ಪ್ರೆಶರ್ ಹೋದ ಮೇಲೆ, ಅದಕ್ಕೆ ಕೊರದ ನೀರುಳ್ಳಿ ಬಾಗವ ಹಾಕಿ 4-5 ನಿಮಿಷ ಮುಚ್ಚಲು ಮುಚ್ಚಿ ಬೇಶಿ. ಇದಕ್ಕೆ ಬೇಶಿದ ತೊಗರೀಬೇಳೆಯನ್ನೂ ಹಾಕಿ ತೊಳಸಿ, ಕೊದುಶಿ.

ಬಾಣಲೆಲಿ ಒಣಕ್ಕು ಮೆಣಸು, 1 ಸಕ್ಕಣ ಎಣ್ಣೆ ಹಾಕಿ ಸಣ್ಣ ಕಿಚ್ಚಿಲ್ಲಿ ಹೊರಿರಿ. ಅದು ಪರಿಮ್ಮಳ ಬಪ್ಪಗ ಇಂಗು, ಬೇನ್ಸೊಪ್ಪು(8-10 ಎಲೆ), ಅರುಶಿನ ಹೊಡಿ(1/8 ಚಮ್ಚೆ) ಹಾಕಿ 1 ನಿಮಿಷ ಹೊರಿರಿ.

ಕಾಯಿ, ಹೊರುದ ಮಸಾಲೆ, ಹುಳಿಯ ಮಿಕ್ಸಿಗೆ/ಗ್ರೈಂಡರಿಂಗೆ ಹಾಕಿ, ಬೇಕಾದಸ್ಟು ನೀರು ಹಾಕಿ ನೊಂಪು ಕಡದು, ಬೇಶಿ ಮಡುಗಿದ ಬಾಗಕ್ಕೆ ಹಾಕಿ ತೊಳಸಿ, ಕೊದುಶಿ.(ನೀರು, ಉಪ್ಪು ಬೇಕಾದರೆ ಹಾಕುಲಕ್ಕು.) ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ.
ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ಬೆಂದಿಗೆ ಹಾಕಿ ತೊಳಸಿ.
ಇದು ರೊಟ್ಟಿ, ದೋಸೆ, ಚಪಾತಿ, ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

One thought on “ಕಣಿಲೆ ಗಸಿ

  1. ಬಾರಿ ರುಚಿಯ ಕಣಿಲೆ ಗಸಿಯ ಬಗ್ಗೆ ತಿಳುಸಿದಿ ಅಕ್ಕ..
    ಇದರೊಟ್ಟಿ೦ಗೆ, ಕಣಿಲೆ ಪುಪ್ಪಿನ ಕಾಯಿ ಹೆಜ್ಜೆ ತಿ೦ದರೆ ಪಷ್ಟು ಆವುತ್ತು.. 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×