ಡೆಲ್ಲಿಲ್ಲಿ ಒಂದು ಗೋಶಾಲೆ ಇದ್ದು. ಕರೋಲ್ ಬಾಗಿನ ಹತ್ತರೆ.
ಈ ಗೋಶಾಲೆಯ ಹೆಸರು – ಪಿಂಜಾರಪೋಲ್ ಗೋಶಾಲೆ. ಇದು ಆರಂಭಗೊಂಡದು -1895 ನೇ ಇಸವಿಲ್ಲಿ. ಹೇಳಿರೆ 118 ವರ್ಷ ಆತು.
ಇಲ್ಲಿ ಇಪ್ಪ ಗೋವುಗಳ ಸಂಖ್ಯೆ 1290.
ನಗರಲ್ಲಿಪ್ಪವಕ್ಕೆ ಗೋವುಗಳ ಸೇವೆಗೆ ಒಂದು ಅವಕಾಶ, ಸಣ್ಣ ವಿಹಾರಸ್ಥಾನವುದೆ. ಸುಮಾರು ಜೆನ ಈ ಗೋಶಾಲೆಯ ನೋಡ್ಳೆ ಬತ್ತವು. ಬಂದು ಹುಲ್ಲು, ಹಿಂಡಿ, ರೊಟ್ಟಿ ಇತ್ಯಾದಿ ತಿನ್ಸುತ್ತವು. ಸಾಧುಪ್ರಾಣಿಗಳ ಒಡನಾಟಕ್ಕೆ ಒಂದು ಅವಕಾಶ ಅಲ್ಲದಾ!
ಇಲ್ಲಿ ದಿನಾ ಉದಿಯಪ್ಪಗ, ಕಸ್ತಲಪ್ಪಗ “ಗೋ ಆರತಿ” ಮಾಡ್ತವು. ಕೆಲವು ಸರ್ತಿ ಭಾಗವತ ಕಥೆ/ಪ್ರವಚನವೂ ಇರ್ತಡ.
ಅಲ್ಲಿ ಹೋಗಿಪ್ಪಗ ಈ ದೃಶ್ಯ ಕಂಡತ್ತು.
ನೋಡಿ ಈ ಬುದ್ಧಿವಂತೆ ಚತುರೆ ಗೋಮಾತೆಯ-
https://docs.google.com/file/d/0B_mCOqv4ijEqdHJUWUpPRDhkMU0/edit
ಮತ್ತೆ ಕೆಲವು ಚಿತ್ರಂಗ –
ಈ ಪರಿಸರಕ್ಕೆ ಹೋದರೆ ಡೆಲ್ಲಿಲ್ಲೊಂದು ಹಳ್ಳಿ ಕಂಡ ಹಾಂಗೆ ಆವ್ತು.
- ಸೌಂದರ್ಯಮಾಧುರ್ಯಶೋಭೇ!(ಅನುರಾಗ-ಗೀತಮ್) - November 13, 2014
- Hello world! - October 22, 2014
- ಅನುರಾಗ ರಾಗ - June 13, 2014
ವಂದೇ ಗೋಮಾತರಂ…
ಹೀಂಗಿಪ್ಪ ಗೋಶಾಲೆಗೊ ಎಲ್ಲ ಊರಿಲ್ಲೂ ಇರೆಕು..
ಪಾರ್ಕು, ಮೋಲು, ಕ್ಲಬ್ಬುಗೊ ಇಪ್ಪ ಹಾಂಗೇ ಊರಿಂಗೊಂದು ಗೋಶಾಲೆ ಹೇಳಿ ಇದ್ದರೆ – ಅಲ್ಲಿ ಮಕ್ಕೊ, ದೊಡ್ಡೋರು ಸಮಯ ಕಳವಷ್ಟು ಜಾಗೆ ಮತ್ತೆ ಸೌಕರ್ಯ ಇದ್ದತ್ತೂ ಹೇಳಿ ಆದರೆ – ಗೋಸಂರಕ್ಷಣೆಯ ವಿಷಯಲ್ಲಿ ಒಂದು ದೊಡ್ಡ ಕ್ರಾಂತಿಯೇ ಅಕ್ಕು..
ಹಾಲು ಉಂಬೆ ಮಸರು ಉಂಬೆ
ಬೆಣ್ಣೆ ತಿಂಬೆ ತುಪ್ಪ ಉಂಬೆ
ಎಲ್ಲ ಕೊಡುವ ಮುದ್ದು ಉಂಬೆ
ನಿನ್ನ ಚೆಂದ ನೋಡಿಗೊಂಬೆ
ಎನ್ನ ಕಣಕಣಲ್ಲಿ ನಿನ್ನ ಕಾಂಬೆ
ನಿನ್ನ ಕೊಲ್ಲುವವಕೆ ಎದುರು ನಿಂಬೆ
ಉಂಬೆಗಳ ಶುದ್ದಿ ಓದಿ ಖುಷಿ ಆವ್ತು…
ಇಂದು ಉದಿಯಪ್ಪಗ ೯ ಘಂಟೆಯ ಟಿ ವಿ ೯ ರ ವಾರ್ತೆಲಿ ಕರ್ನಾಟಕದ ಅಮ್ರುತಮಹಲ್ ಗೋಶಾಲೆ ಬಗ್ಗೆ ವರದಿ ಬಯಿಂದು. ಗೋಶಾಲೆ ಆಡಳಿತ ಸರಿಯಿಲ್ಲದ್ದ ಕಾರಣ ವಿನಾಶದ ಅಂಚಿಲ್ಲಿದ್ದು ಹೇಳಿ ವರದಿ. ಸರಕಾರ ಕೂಡಲೇ ಕ್ರಮ ಕೈಗೊಂಬಲೆ ಹವ್ಯಕ ಬಂಧುಗೊ ಒಂದು ಅಭಿಯಾನ ಸುರುಮಾಡೆಕ್ಕು ಹೇಳಿ ಪ್ರಾರ್ಥನೆ.
ಸರಕಾರ ಎಂತಗೆ? ನಮ್ಮ ಗುರುಗೊಕ್ಕೆ ಬಿಟ್ಟು ಕೊಡಲಿ. ನಾವೇ ನೋಡಿಕೊಂಬ.. ಎಂತ ಹೇಳ್ತಿ…?
ಗೋಹತ್ಯೆಯ ವಿರೋಧುಸುವವು ತುಂಬಾ ಜೆನ ಇದ್ದರುದೇ ದೇಶದ ರಾಜಧಾನಿಲಿ ಹೀಂಗಿಪ್ಪ ಒಂದು “ಗೋಶಾಲೆ”ಯ ನಡೆಶಿಗೊಂಡು ಬತ್ತಾ ಇದ್ದವನ್ನೆ, ಅದೂ ೧೧೮ ವರ್ಷಗಳ ಹಿಂದಂದ! – ಆ ವ್ಯಕ್ತಿಯೋ, ಸಂಸ್ಥೆಯೋ, ಅವರ ಕೆಲಸ ಸ್ತುತ್ಯಾರ್ಹವಾದ್ದದು. ಅವು ನಿಜವಾಗಿಯೂ ಅಭಿವಂದನೀಯರು. ಮಹೇಶ, ನೀನು ಆ ಗೋಶಾಲೆಯ, ಗೋಮಾತೆಯರ ಫೋಟೊ ತೆಗದು ಹಾಕಿದ್ದದು ಭಾರೀ ಲಾಯ್ಕಾತು- ಎಂಗೊಗೆಲ್ಲಾ ಒಂದರಿ ನೋಡಿದಾಂಗಾತು- ನೋಡಿ ಖುಶಿಯಾತು.
ಅಪ್ಪೋ..! ಡೆಲ್ಲಿಗೆ ಸುಮಾರು ಸರ್ತಿ ಹೋಯಿದೆ. ಕರೋಲ್ ಬಾಗಿಲಿ ಕೆಲವು ಸರ್ತಿ ಉಳ್ಕೊಂಡಿದೆ. ಆದರೆ ಈ ಗೋಶಾಲೆಯ ಬಗ್ಗೆ ಗೊಂತೇ ಇತ್ತಿಲೆ. ಒಳ್ಳೆ ಮಾಹಿತಿ.
ಪಟ ಸಹಿತ ಶುದ್ದಿ ನೋಡಿ ಕೊಶಿ ಆತು. ಹರೇ ರಾಮ