Oppanna.com

ಮದುವೆಯ ಕಾಕತ

ಬರದೋರು :   ದೊಡ್ಡಭಾವ°    on   31/07/2010    23 ಒಪ್ಪಂಗೊ

ಹರೇ ರಾಮ,
ಮೊನ್ನೆ ಅಟ್ಟಲ್ಲಿ ಪರಡಿಗೊಂಡಿಪ್ಪಗ ಸಿಕ್ಕಿತ್ತು ಎನ್ನ ಅಪ್ಪಚ್ಚಿಯ ಮದುವೆ ಕಾಕತ, ಖುಷಿ ಆತು.
ಅದರ ತೆಗದು ಮಡಗಿ, ಸ್ಕ್ಯಾನರ್ ಮುಚ್ಚಲು ತೆಗದು ಒಂದು ಪ್ರತಿ ತೆಗದು ಇಲ್ಲಿ ತಂದು ನೇಲುಸಿರೆ ನಾಕು ಜೆನ ನೋಡುಗಾನೆ ತೋರಿತ್ತು.
೧೯೭೦ ರ ಕಾಕತ ಅದು.  ಅಂಬಗ ಆನು ಹುಟ್ಟಿದ್ದೇ ಇಲ್ಲೆ. ಆ ಮದುವೆ ಇರುಳು…!
ಈಗಾಣ ಕಾಲಲ್ಲಿ ಎಲ್ಲಿಯೂ ಇರುಳು ಮದುವೆ ಹೇಳ್ಸು ಕೇಳ್ತಿಲ್ಲೆ.
ಹಳೇ ಕಾಲಲ್ಲಿ ಮದುವೆಗೆ ಇರುಳೇ ಸೂಕ್ತ ಹೇಳಿ ಜಾನ್ಸಿಗೊಂಡಿತ್ತಿದ್ದವು ತೋರ್ತು.
ಹಗಲಿಡೀ ಅವರವರ ತೋಟಲ್ಲಿ ದುಡುದು ಕಸ್ತಲೆಪ್ಪಗ ಹೆರಟರೆ ಸಾಕನ್ನೆ, ಅಂಬಗ ನಮ್ಮ ಕೆಲಸಂಗೊಕ್ಕೆ ತೊಂದರೆ ಇಲ್ಲೆನ್ನೆ ಹೇಳಿ ಆದಿಕ್ಕು. ಅಲ್ದೋ…
ಹಾಂಗೆ ಹೇಳುವಗ ನೆಂಪಾತು. ನಮ್ಮ ಕುಂಬ್ಳೆ ಮಾವನದ್ದೂ ಮದುವೆ ಇರುಳೇ ಆದ್ಸಡ ಸಾರಡಿಲಿ.
ಈ ಕಾಕತ ನೋಡಿಯಪ್ಪಗ ಇದರಿಂದ ಹಳತ್ತು ಇದ್ದನ್ನೆ ಎನ್ನ ಹತ್ತರೆ ತೋರುಗು ಕೆಲವುಜೆನಂಗೊಕ್ಕೆ,  ಅದರ ಎಲ್ಲ ಇಲ್ಲಿ ತಂದು ನೇಲುಸಿರೆ ನವಗೂ ನೋಡುಲೆ ಅಕ್ಕಿದಾ.
ಮದುವೆ ಕಾಕತಲ್ಲಿ ಎಡ್ರಾಸು ಇಲ್ಲೆ, ಪೋನ್ನಂಬ್ರ ಇಲ್ಲೆ, ಮೊಬೈಲು ನಂಬ್ರ ಹೇಂಗೂ ಇಲ್ಲೆ, ಇರುಳು ಹತ್ತೂವರಗೆ ಮೂರ್ತ.
ಈಗಾಣವಕ್ಕೆ ಗ್ರೇಶುಲೂ ಎಡಿಯ, ಅಲ್ಲದೋ?
ಈಗಾಣ ಹಾಂಗೆ ಸವಿನಯ ಆಮಂತ್ರಣದ ಹಾವಳಿ ಇಲ್ಲದ್ದ, ರೂಟು ಮೇಪು ಬರೆಯದ್ದ , ಆಶೀರ್ವಾದವೇ ಉಡುಗೊರೆ ಹೇಳಿ ಬರೆಯದ್ದ ಈ ಕಾಕತಂಗೊ ಅಂದ್ರಾಣ ಕಾಲದ ಕಥೆ ಹೇಳ್ತು.
ಕೇಳುಲೆ ಖುಷಿಯೂ ಆವ್ತು, ಎಂತ ಹೇಳ್ತಿ,
ಏ°…

23 thoughts on “ಮದುವೆಯ ಕಾಕತ

  1. ಹಳತ್ತಿದ್ದರೆ ಈಗಾಣವಕ್ಕೆ ನೋದ್ಲೆ ಒಳ್ಳೆದಲ್ಲದೊ ಒಪ್ಪಣ್ಣ?

  2. ಆನು ಈ ಮದುವಗೆ ಹೋಯಿದೆ ಆತೊ. ಮದುವೆ ಶುದ್ದಿ ಸರಿ ನೆಂಪು ಇಲ್ಲೆ; ಆದರೆ ಸಟ್ಟುಮುಡಿ ದಿನ “ಧರಣಿಗೆ ಗಿರಿಯೂ ಭಾರವೇ” ಪದ್ಯ ಹಾಕಿಪ್ಪಗ ಆನೂ ಒಟ್ಟಿಂಗೆ ಹಾಡಿದ್ದೆ

  3. ambagaana maduveya haangeye aadambarave illadda, saralavaada maduve kaagada nodi khushi aatu.
    eegaana kaalalli maduve kaagadakke maaduva kharchili andraana maduveye aagiyondiddikku !!

  4. enna doddappana magaannana maduve kaagada nodi khushi aathu.aa maduvage aanu bandittidde.hechella nempavuttille.antu halattella nempu madiddadakke oppannage ondu oppa.Krishnamohana,Mayipady

  5. ರವಿ, ನಾವು 2005 ರಲ್ಲಿ ಕೇರದ ಹರೀಶನ ಮದುವೆಗೆ ಕಾರ್ಕಳಕ್ಕೆ ಬೈಕಿಲ್ಲಿ ಹೋದ್ಸು ನೆಂಪಾತಾ? ಅದು ಇರುಳು ಇದ್ದಿದ್ದ ಮದುವೆ ಅಲ್ಲದಾ?

  6. ಎನ್ನ ಭಾವಯ್ಯನ ಮದುವೆ ಹೇಳಿಕೆ ನೋಡಿ ಭಾರೀ ಕೊಶಿ ಆತು. ಅಂದು ಎಂಗೊ ಎಲ್ಲ ಆ ಮದುವೆಗೆ ಹೋದ್ದು ನೆಂಪು ಆತು.
    1970ನೇ ಇಸವಿ ಹೇಳಿರೆ, ಎನಗೆ ಏಳು ವರ್ಷ ಆಗಿತ್ತಷ್ಟೆ. ದಿಬ್ಬಾಣಲ್ಲಿ ಹೋವ್ತ ಗಮ್ಮತ್ತು ಕೊಶಿ ಬೇರೆಲ್ಲಿ ಸಿಕ್ಕುಗು ? ಅಪರೂಪಕ್ಕೆ ಕಾರಿಲ್ಲಿ ಹೋಪದಿದ. ಮದುಮ್ಮಾಯ (ಕೃಷ್ಣ ಭಾವ)ನ ಕಾರಿಲ್ಲೇ ಎನಗೂ ಕೂಬ್ಬಲೆ ಜಾಗೆ ಸಿಕ್ಕಿತ್ತು. (ಆನು ಸೋದರ ಮಾವನ ಮಗ ಅಲ್ಲದೋ ?). ಮಕ್ಕೊ ಎಲ್ಲ ದೊಡ್ಡವರ ಮೊಟ್ಟೆಲಿ (ಪುತ್ತೂರಿನ ಬಾಡಿಗೆ ಕಾರಿಲ್ಲಿ ಕೂದ ಹಾಂಗೆ). ಎಲ್ಲೋರು ಹತ್ತಿದ ಕೂಡ್ಳೆ, ಭಾವಯ್ಯ ಕಾರಿನ ಬಾಗಿಲು ಹಾಕಿದ. ಆನು ಕರೇಲಿ ಕೂದವ, ಬಾಗಿಲಿಲ್ಲಿ ಕೈ ಮಡಗೆಂಡಿದ್ದಿದ್ದೆ. ಎನ್ನ ಕುಂಞಿ ಬೆರಳುಗೊ ಡೋರಿನ ಎಡೆಲಿ ಅಪ್ಪಚ್ಚಿ…! “ಬೆರೇಂ” ಹೇಳಿ ಆನು ಕೂಗಿ ಅಪ್ಪಗಳೇ ಎಲ್ಲೋರಿಂಗೂ ಗೊಂತಾದ್ದು. ಬಾಗಿಲು ತೆಗದು ನೋಡಿದರೆ, ಎನ್ನ ಬೆರಳ ಕೊಡಿ ನೀಲಿ ಆಗಿತ್ತು. ಅಂತೂ ಮದುವೆಯ ಪಾಚ ಉಂಡಪ್ಪಗಳೇ ಎನಗೆ ಸಮಾಧಾನ ಆದ್ದದು.
    ಘಟನೆ ನೆಂಪು ಮಾಡಿದ ಅಳಿಯಂಗೆ ಧನ್ಯವಾದಂಗೊ.

  7. ಹಳೆಕಾಲಲ್ಲಿ ಅಪ್ಪ ಹೆಚ್ಚಿನ ಮದುವೆಗ ಮನೆಗಳಲ್ಲೇ ಅಪ್ಪದು ಇನ್ನೊ೦ದು ವಿಶೇಷ!

  8. ದೊಡ್ಡ ಬಾವ ಲಾಯ್ಕಾ ಆಯ್ದು. ಹಳೆ ಕಾಲದ ಮದುವೆಯ ಕಾಕತದ ಮೂಲಕ ಮತ್ತೊಂದರಿ ನೆಂಪಿಸಿದಿರಿ. ಧನ್ಯವಾದಂಗೊ

  9. ಏ ನೆಗೆಗಾರಣ್ಣಾ ಆ ಪಟಲ್ಲಿ ಇಪ್ಪ ಮಾಣಿ ಆನೆ, ಮತ್ತೊಂದು ಆನೆ

  10. ದೊಡ್ಡಭಾವಾ..
    ಹಳೇಕಾಲದ ವಕ್ಕಣೆ ನೋಡಿ ಭಾರೀ ಕೊಶಿ ಆತು.
    ಬೇಕಾದೋರಿಂಗೆ ಬೇಕಾದಷ್ಟೇ ಹೇಳಿಕೆ ಇಪ್ಪ ಕಾಕತ ಇದು.
    ಆಡಂಬರ ಇಲ್ಲೆ, ಅನಗತ್ಯ ಗವುಜಿ ಇಲ್ಲೆ, ಶಿವಪಾರುವತಿ ಪಟಲ್ಲಿ ಹೊಳೆತ್ತದು ಇಲ್ಲೆ – ಇದೆಲ್ಲ ಒಪ್ಪಣ್ಣನ ಹಳೆನೆಂಪಿನ ಮತ್ತೆ ತಂದು ಕೊಟ್ಟತ್ತು.
    ಒಪ್ಪಣ್ಣಂದೇ ಸಣ್ಣ ಇಪ್ಪಗ ಕೆಲವೆಲ್ಲ ಇರುಳಾಣ ಮದುವೆಗೆ ಹೋಗಿ – ಊಟಕ್ಕೆ ಮೊದಲೇ ಒರಗಿ – ಅರ್ಗೆಂಟುಮಾಡಿದ ಶುದ್ದಿ ಅಮ್ಮ ಹೇಳಿ ಹೇಳಿ ನಾಚಿಗೆ ಮಾಡುಸಿತ್ತು ಒಪ್ಪಣ್ಣಂಗೆ! 😉
    ಒಳ್ಳೆ ಶುದ್ದಿ..
    ಇದೇ ನಮುನೆ ಹಳೆಕಾಕತಂಗೊ ದೊಡ್ಡಜ್ಜನ ಮನೆಲಿ ಇಕ್ಕೊ?

    1. ನಿಜಕ್ಕೂ ಇಕ್ಕು ತೋರ್ತು, ನೀನು ಸೇರಿರೆ ನಾವಿಬ್ರೂ ಸೇರಿ ಬೇಗ ಬೇಗ ಹುಡುಕ್ಕಲಕ್ಕಿದಾ… ಅತ್ತೆಕ್ಕಳ ಸುಮಾರು ಟ್ರಂಕು ಪೆಟ್ಟಿಗೆಗೊ ಇದ್ದು ದೊಡ್ಡಜ್ಜನ ಮನೆಲಿ…!

  11. ಎನ್ನ (ದೊಡ್ಡಪ್ಪನ ಮಗಳು) ಅಕ್ಕನ ಮದುವೆ ,ಈಗ 18-19 ವರ್ಷದ ಹಿಂದೆ ಉದಿಗಾಲ 2 ಗಂಟೆಯ ಮುಹೂರ್ತಲ್ಲಿ ಆದ್ದು ಎನಗೆ ನೆಂಪಾವ್ತು.
    ಉತ್ತರ ಭಾರತಲ್ಲಿ ಮದುವೆ ಅಪ್ಪದು ಇರುಳು. ಅವರಲ್ಲಿ ಈಗಲೂ ಮೂರು ನಾಲ್ಕು ದಿನದ ಮದುವೆಗೊ ನಡೆತ್ತು.
    ಎನ್ನ ಅಪ್ಪ ಅಮ್ಮನ ಮದುವೆದೇ 27 ವರ್ಷ ಹಿಂದೆ ಹೊತ್ತೋಪಗಾಣ ಮುಹೂರ್ತಲ್ಲಿ ಆದ್ದಡ :).

  12. ಇಪ್ಪತ್ತೈದು ವರ್ಷ ಹಿಂದೆ ಎನ್ನ ಮಾಡುವೆ ಕೂಡ ಇರುಳೆ ಆದ್ದು ಮಿನಿಯ°.ಒಂದು ಹಗಲು ಆನುದೇ ಕೆಲಸ ಮಾಡಿಯೇ ಮದುವೆ ಆದ್ದು.

  13. ಕಳುದ ತಿಂಗಳು ಸುಬ್ರಹ್ಮಣ್ಯಲ್ಲಿ ಉದೆಕಾಲ ಮೂರೂಮುಕ್ಕಾಲಕ್ಕೆ ಒಂದು ಮದುವೆ ಆಗಿತ್ತು.(ಅಭಯ ಗಣಪತಿ ದೇವಸ್ಥಾನ ಕಟ್ಟಿಸಿದವರ ಮಗಳ ಮದುವೆ)

    1. ವೆಂಕಟೇಶಣ್ಣ..
      ಬೈಲಿಂಗೆ ಬಂದಿರೋ – ಕೊಶಿ ಆತು.
      ಆದರೆ, ಆ ಪಟಲ್ಲಿ ಆ ಮಾಣಿ ನಿಂಗಳ ಹಿಡ್ಕೊಂಡದು ಎಂತ್ಸಕ್ಕೇ? 😉

      1. ನೆಗೆಗಾರಣ್ಣಂಗೆ ಎಂತ ಹೀಂಗಿದ್ದ ಡೌಟು ಬಪ್ಪದು…?
        ಅದು ವೆಂಕಟೇಶಣ್ನ ಒಪ್ಪಣ್ಣನ ಹಿಡ್ಕೊಂಡದಲ್ಲದಾ????

  14. ನೆನಪಿನ ರಜ ಹಿಂದಂಗೆ ಓಡಿಸಿದೆ ದೊಡ್ಡ ಭಾವಯ್ಯ.
    ಇರುಳಿಂಗೆ ಮದುವೆ ಈಗ ಕೂಡಾ ಆಂಧ್ರಲ್ಲಿ ನೆಡೆತ್ತು. ಅಲ್ಲಿ ಹೆಚ್ಚಾಗಿ ಇರುಳು ಇಲ್ಲದ್ದರೆ ಉದೆಕಾಲಕ್ಕೆ ಅಪ್ಪದಡ.

  15. ಅಂಬಗಾಣ ಕಾಗದ ನೋಡಿದ ನೆಂಪು ಇದ್ದು.ತೆಳು ಕಾಗದ. ಎದುರು ಶಿವ-ಪಾರ್ವತಿ. ಒಳ details. ಅದರ ಮತ್ತೆ ಲಕ್ಕೋಟೆ ಒಳ ಹಾಕಲಿಲ್ಲೆ- Book post.
    ಉತ್ತರ ಭಾರತಲ್ಲಿ ಈಗಳೂ ಹೆಚ್ಚಾಗಿ ಮದುವೆ ಮುಹೂರ್ತ ಕತ್ತಲಪ್ಪಗ. ಬಂದ ಅತಿಥಿಗೊಕ್ಕೆ ಊಟ ಆದ ಮೇಲೆ ಧಾರೆ. ಊಟ ಮೊದಲೇ ಅಪ್ಪ ಕಾರಣ, ಧಾರೆಗಪ್ಪಗ ಮನೆಯವು ಮಾಂತ್ರ ಇಪ್ಪದಡ!!

    1. ಓದಿ ಪ್ರಾಕಿನ ಮದುವೆಗೊಕ್ಕೆ ಹೋದದ್ದು ನೆಮ್ಪಾತು.ಒಂದರಿ ಎಂಗೋ ಮುಹೂರ್ತ ಸಮಯ ಸರಿ ನೋಡದ್ದೆ ಉದಿಯಪ್ಪಗ ಹೋಗಿ ಬೈರಾಸು ಆಯಿದೆಯ.( ಒಪ್ಪೊತ್ತು ಮುಂಚಿತವೆ !).
      ಉತ್ತರ ಭಾರತದ ಮದುವೆಗಳ ಹೇಳಿ ಗುಣ ಇಲ್ಲೆ. ಹೊತ್ತೋಪ್ಪಗ ಕುದುರೆ ಸಾರೋಟಿಲಿ ಮದಿಮ್ಮಾಯನ ಕೂರಿಸಿ ಮಾರ್ಗಲ್ಲೆಲ್ಲಾ ದಿಬ್ಬಣದ ಮೆರವಣಿಗೆ.ಬ್ಯಾಂಡ್ ಸೆಟ್ಟು ,ಗರ್ನಾಳು,ಬೆಡಿಯ ಗೌಜಿ. ಗೆಂಡು ಮಕ್ಕೋ ಹೆಣ್ಣು ಮಕ್ಕೋ ಎಲ್ಲೋರದ್ದೂ ನರ್ತನ,ನೋಟು ಮದಿಮ್ಮಾಯನ ತಲೆಗೆ ಸುಳುದು ಇಡ್ಕಾಣ. ಬ್ರಾಹ್ಮರಲ್ಲದ್ದರೆ ಮದಿಮ್ಮಾಯಂದ ಹಿಡಿದು ಎಲ್ಲ ಗೆಂಡು ಮಕ್ಕಳೂ ತೀರ್ಥ ಕುಡುದು ಟೈಟ್. ಇರುಳು ದಿಬ್ಬಣ ಮದುವೆ ಪೆನ್ದಾಲಿನ್ಗೆ ಎತ್ತೊಗ ಹೆಚ್ಚಿನವು ಈ ಲೋಕಲ್ಲಿರುತ್ತವಿಲ್ಲೆ.ಊಟ ಆದ ಮೇಲೆ ಉದೆಗಾಲಕ್ಕೆ ಧಾರೆ,ಹೋಮ ಇತ್ಯಾದಿ. ( ಮದುವೆ ಆದ್ದಕ್ಕೆ ಶಿಕ್ಷೆ !!) ಅಲ್ಲಿ ಹಗಲು ಮದುವೆ ಅಪ್ಪೊದೆ ಕಡಮ್ಮೆ.

  16. ಅನ್ಬಗಾಣ ಕಾಕತ ನೋಡಿ ಭಾರೀ ಖುಷಿ ಆತು!! ಇನೊಂದು ಸರ್ತಿ ಅಟ್ಟಲ್ಲಿ ಪರಡ್ಡಿ!!! ಇನ್ನೆಂತೆಲ್ಲ ಸಿಕ್ಕುತ್ತಾ??

  17. ದೊಡ್ಡಣ್ಣ ಬಾರಿ ಲಾಯ್ಕ ಆಯಿದು.. ಯೆಜಮಾಂತಿ ಇಲ್ಲೆ ಹೇಳಿಕ್ಕಿ ಅಟ್ಟ ಪರಡಿದ್ದಕ್ಕೆ ನವಗೆ ಮಾಹಿತಿ ಸಿಕ್ಕಿತ್ತು.. ದನ್ಯವಾದಂಗ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×