Oppanna.com

ಬೆನ್ನೆಲುಬು ಎರಡು ಭಾಗ !!

ಬರದೋರು :   ಒಪ್ಪಣ್ಣ    on   04/10/2013    9 ಒಪ್ಪಂಗೊ

ಬಿರ್ಮ ಪೂಜಾರಿಯ ಪುಳ್ಳಿ ಸೂರಿಯ ಕತೆ ರಜ್ಜ ನಾವು ಮೊನ್ನೆ ಮಾತಾಡಿದ್ದು; ಅಪ್ಪೋ!

ಆದರೂ, ಒಂದರಿ ತೂಷ್ಣಿಲಿ ನೆಂಪು ಮಾಡಿರೆ ದೋಷ ಇಲ್ಲೆ.
ಸೂರಿ ಸಣ್ಣಾದಿಪ್ಪಾಗಳೇ ಅದರ ಅಪ್ಪ – ಸಾಂತುವಿನ ನಮುನೆ ಬೆಳದತ್ತು.
ಕುಡಿವದು, ತಿಂಬದು, ಅಗಿವದು– ಎಲ್ಲವನ್ನೂ ಕಲ್ತು ಅಡ್ಡದಾರಿ ಹಿಡುದು ಅಡ್ಡಡ್ಡ ಬೆಳದತ್ತು.
ದೊಡ್ಡವರೊಟ್ಟಿಂಗೆ ಸೇರಿ ದೊಡ್ಡ ಬುದ್ಧಿಯ ಪೂರಾ ಕಲ್ತುಗೊಂಡತ್ತು. ಊರಿಡೀ ಕಾಟು ಚೆಂಙಾಯಿಗಳ ಬೆಳಶಿತ್ತು.
ಮನೆಯ ಬೆನ್ನೆಲುಬು ಆಗಿ ಬೆಳೇಕಾದ ಜೆನ ಮನೆಂದ ಅಪ್ಪಮ್ಮನನ್ನೇ ಹೆರ ಹಾಕಿತ್ತು!
ಒಬ್ಬನೇ ಆಗಿ ಮನೆಲಿ ಬದ್ಕುತ್ತ ಕಾಲಲ್ಲಿ ಚಟಂಗೊ ಇನ್ನೂ ಏರಿತ್ತು.
ಊರಿಂಗೂ ಮಾರಿ – ಮನೆಗೂ ಮಾರಿ ಹೇಳ್ತ ಹೊಸ ಗಾದೆಗೆ ಸೂಕ್ತ ವೆಗ್ತಿ ಆಗಿ ಬೆಳದು ನಿಂದತ್ತು.

ಹೀಂಗಿದ್ದರೂ, ಒಂದು ಎಲ್ಯೋ ಒಂದು ಸಂಬಂಧ ಸಿಕ್ಕಿತ್ತು, ಮದುವೆ ಕೂಡಿ ಬಂತು.
ಮದುವೆ ಆದ ಮತ್ತೆ ಆರೇ ತಿಂಗಳ್ಳಿ ಚಿತ್ರಣ ಸಂಪೂರ್ಣವಾಗಿ ಬದಲಿತ್ತು.
ಪ್ರೀತಿಯ ಬೆಲೆಯೇ ಅರಡಿಯದ್ದ ಸೂರಿಗೆ ಸಮ್ಮಂದಂಗಳ ಬೆಲೆ ಗೊಂತಪ್ಪಲೆ ಸುರು ಆತು.
ಮನೆಂದ ಓಡುಸಿದ ತಪ್ಪಿನ ಅರ್ತು ಅಪ್ಪಮ್ಮನ ಪುನಾ ಕರಕ್ಕೊಂಡು ಬಂತು.
ಮದಲು ಅಮ್ಮ ಮಾಡಿಗೊಂಡಿದ್ದ ನೆಟ್ಟಿ ಸಾಲುಗಳ ಪುನಾ ಬೆಳೆಶಿತ್ತು, ಹಟ್ಟಿ-ತೋಟವ ರಜ ನೋಡಿಗೊಂಡು, ಎಡೆ ಪುರುಸೋತಿಲಿ ನೆರೆಕರೆಲಿ ಕೆಲಸಕ್ಕೆ ಹೋಗಿಂಡು – ಮರಿಯಾದಿಯ ಗ್ರಹಸ್ಥ ಆಗಿ ಬೆಳದತ್ತು.

ಪ್ರೀತಿಯ ಹೆಂಡತ್ತಿಯ ಪ್ರೀತಿಲೇ ನೋಡಿತ್ತು. ಆ ಲೆಕ್ಕಲ್ಲಿ – ಅಪ್ಪ ಅಮ್ಮ, ಅಕ್ಕಂದ್ರು – ಎಲ್ಲೋರಿಂಗೂ ಪ್ರೀತಿ ಕೊಡ್ಳೆ ಸುರುಮಾಡಿತ್ತು. ಸುಖ ಸಂಸಾರದ ಸಂತೋಷವ ಎಲ್ಲೋರತ್ರುದೇ ಸಂಭ್ರಮಲ್ಲಿ ಹೇಳಿಗೊಂಡಿತ್ತು.
ಸಾಧ್ಯ ಆದಷ್ಟು ಮಟ್ಟಿಂಗೆ ಮನೆಯ ಎಲ್ಲೋರನ್ನೂ ಚೆಂದಕ್ಕೇ ನೋಡಿಗೊಂಡತ್ತು.
~

ಅದೊಂದು ದಿನ, ಪ್ರೀತಿಯ ಹೆಂಡತ್ತಿಗೆ ಪತ್ರೋಡೆ ತಿನ್ನೇಕು ಹೇದು ಆತಾಡ.
ಮರಂದಲೇ ಮರಕೆಸವು ಕೊಯ್ಯೇಕು – ಹಾಂಗೆ ಮದಲಿಂದಲೇ ಗುರ್ತ ಇದ್ದ ಮರಕ್ಕೆ ಹತ್ತಿ ಕೆಸವಿನ ಕೊಯ್ವಲೆ ಹೆರಟತ್ತು.
ಪ್ರತಿ ಸರ್ತಿ ಹತ್ತುವಾಗಳೂ ಹಿಡಿತ್ತ ಬಳ್ಳಿ – ಈ ಸರ್ತಿ ಬುಡಕಡುದ ಕಾರಣ ಕೊಡಿ ಕುಂಬಾಗಿತ್ತು.
ಹತ್ತಿಗೊಂಡು ಹೋಪಾಗ ಕುಂಬು ಬಳ್ಳಿ ಕಡುದು ಜಾರಿತ್ತು, ಒಟ್ಟಿಂಗೆ ಅದರ ಹಿಡ್ಕೊಂಡ ಸೂರಿಯೂ.
ಬಳ್ಳಿ ಜಾರಿ ಬಿದ್ದರೆ ದೊಡ್ಡ ಸಂಗತಿ ಇಲ್ಲೆ, ಆದರೆ ಸೂರಿ ಬಿದ್ದರೆ!? ಅಪ್ಪು, ಸೂರಿ ಜಾರಿ ಮರದ ಬುಡಕ್ಕೆ ಬಿದ್ದತ್ತು.
ಇಷ್ಟು ಎಲ್ಲೋರಿಂಗೂ ಅರಡಿಗು!! ಮತ್ತೆಂತಾತು?!

~
ಸಣ್ಣಮಟ್ಟಿಂಗೆ ಮರಂದ ಬೀಳುದು, ಮೊಲವ ಹಿಡಿವಲೆ ಓಡುವಾಗ ಡಂಕಿ ಬೀಳುದು, ಎಸಡಿ (ಡೆಂಜಿ) ಹಿಡಿಯಲೆ ಹೋಪಾಗ ಜೆರುದು ಬೀಳುದು – ಇದೆಲ್ಲವೂ ಸಾಮಾನ್ಯ ಆ ಜೆನಕ್ಕೆ. ಆದರೆ, ಇಷ್ಟೆತ್ತರಂದ ಬೀಳುಸ್ಸು ಸಾಮಾನ್ಯ ಅಲ್ಲನ್ನೇ!
ಬಿದ್ದದರ್ಲಿ ತಾಗದ್ದೆ ಒಳಿಯಲೆ ಅದು ರಾಜ್ಕುಮಾರೋ? ತಾಗಿತ್ತು.
ಸೂರಿ ಬಿದ್ದದೆಲ್ಲಿಗೆ? ಬಿದ್ದದರ್ಲಿ ತಾಗಿದ್ದೆಲ್ಲಿಗೆ?

ಮರದ ಬುಡಲ್ಲಿ ಒಂದು ದೊಡ್ಡ ಗಾತ್ರದ ಕಲ್ಲಿತ್ತು. ಆ ಕಲ್ಲ ಮೇಗೆ – ಅದೂ ಮೊಗಚ್ಚಿ ಬಿದ್ದದು!!
ಮೊಗಚ್ಚಿ ಬಿದ್ದರೆ – ಖರ್ಗಲ್ಲಿನ ಮೇಗೆ ಬಿದ್ದರೆ ಎಂತಕ್ಕು!?
ಅಪ್ಪಲಾಗದ್ದೇ ಆತು – ಸೂರಿಯ ಬೆನ್ನಿಂಗೆ ಪೆಟ್ಟಾತು.
ಮೈಮೇಗೆ ಬೇರೆಲ್ಲಿಯೂ ಗಾಯ ಆಯಿದಿಲ್ಲೆ. ಬೆನ್ನಿಂಗೆ ಮಾಂತ್ರ!!
ಬೆನ್ನಿಂಗೆ ಪೆಟ್ಟಾದ್ದರ್ಲಿಯೂ – ಗಾಯ ಬೇರೆಲ್ಲಿಯೂ ಆಯಿದಿಲ್ಲೆ, ಬೆನ್ನು ಹುರಿಗೆ ಮಾಂತ್ರ!

~

ಬೆನ್ನು ಹುರಿ ಹೇದರೆ – ಅದರ್ಲಿ ಎಲುಬೂ ಇದ್ದು, ನರಂಬೂ ಇದ್ದು ಹೇದು ಚೂರಿಬೈಲು, ಕೆದೂರು ಡಾಗುಟ್ರು ಹೇಳಿತ್ತಿದ್ದವು.
ಬೆನ್ನಿನ ಸರ್ತ ಹಿಡುದು ನಿಲ್ಲುಸುತ್ತ ಶೆಗ್ತಿ ಇಪ್ಪದರಿಂದಾಗಿಯೇ “ಬೆನ್ನೆಲುಬು” – ಹೇಳ್ತವು.
ಹಂಚಿನ ಮಾಡಿನ ಮೇಗಾಣ ಪಕ್ಕಾಸಿಂಗೆ “ಬೆರ್ತೋಳು” ಹೇಳ್ತದು ಇದೇ ಅರ್ಥಲ್ಲಿ ಇದಾ.
ಮೆದುಳು ತಲೆಲಿ ಮಾಂತ್ರ ಇಪ್ಪದಲ್ಲ, ಅಲ್ಲಿಂದ ಒಂದು ಬಳ್ಳಿ ರೂಪಲ್ಲಿ ಹೆರಟು ಈ ಬೆನ್ನೆಲುಬಿಲಿ ಸೊಂಟದ ಒರೆಂಗೂ ಎತ್ತುತ್ತಾಡ.
ಇಡೀ ದೇಹವ ನಿಯಂತ್ರಣ ಮಾಡ್ತ ನರವ್ಯೂಹದ ದೊಡ್ಡ ಪೈಪು – ಅಡಕ್ಕೆ ತೋಟದ ಸ್ಪ್ರಿಂಕ್ಲರಿಂಗೆ ಮೈನ್-ಲೈನು ಇದ್ದ ಹಾಂಗೆ!

ದುರ್ದೈವವಶಾತ್, – ಸೂರಿ ಬಿದ್ದದರಲ್ಲಿ ಇದೆರಡಕ್ಕೂ ಪೆಟ್ಟಾತಡ!

~

ಬಿದ್ದಲ್ಲಿಂದಲೇ ಏಳುಲೆಡಿಯ, ಸೊಂಟ-ಕಾಲುಗೊಕ್ಕೆ ವಶ ಇಲ್ಲೆ; ಬೆನ್ನುಹುರಿಯ ನರಂಬಿಂಗೆ ಪೆಟ್ಟಾದ ಕಾರಣ!
ಸರ್ತ ನಿಂಬಲೂ ಎಡಿತ್ತಿಲ್ಲೆ, ಬೆನ್ನೆಲುಬು ತುಂಡಾದ ಕಾರಣ!
ಎರಡೂ ಕೈಯ ಬಲಲ್ಲಿ ಹೊಡಚ್ಚಿಗೊಂಡು ಬಂಙ ಬಂದುಗೊಂಡು ಹತ್ತರಾಣ ದಾರಿಕರೆ ಒರೆಂಗೆ ಬಂದು ಬಿದ್ದತ್ತು ಸೂರಿ.
ಮತ್ತೆಂತಾತು ಅದಕ್ಕೆ ನೆಂಪಿಲ್ಲೆ. ನೆಂಪಪ್ಪಗ ಆಸ್ಪತ್ರೆಲಿ ಇದ್ದತ್ತು.

~

ಶಾಲೆಬಿಟ್ಟು ಮನೆಗೆ ಹೋವುತ್ತ ಮಕ್ಕೊಗೆ ಈ ಸೂರಿ ಬಿದ್ದುಗೊಂಡು ಕಂಡತ್ತು.
ಅದು ಮಾರ್ಗದ ಕರೆಲಿ ಬೀಳುಸ್ಸು ಹೊಸತ್ತಲ್ಲ,
ಕುಡುದ್ದು ಜೋರಪ್ಪಾಗ, ಅದರ ಅಪ್ಪನ ಹಾಂಗೇ ಬೀಳ್ತ ಮರಿಯಾದಿ ಧಾರಾಳ ಇತ್ತು. ಆದರೆ ಈಗ ಗ್ರಹಸ್ಥ ಆಯಿದು, ಇಡೀ ಊರಿಂಗೇ ಗೊಂತಿತ್ತು. ಈಗ ಪುನಾ ಸುರು ಮಾಡಿತ್ತೋ ಗ್ರೇಶಿಗೊಂಡವು.
ಆದರೆ ಅರೆ ಮರ್ಕಲ್ಲಿ ಎಂತದೋ ಹೇಳಿಗೊಂಡಿತ್ತಲ್ಲದೋ – ಇದೆಂತದೋ ಅಂದ್ರಾಣ ಹಾಂಗಲ್ಲ – ಹೇದು ಮಕ್ಕೊಗೆ ಅರಡಿಗಾತು.
ಬೈಲಕರೆ ಸುಬ್ರಾಯನ ಅಂಗುಡಿಲಿ ಹೇಳಿದವು – ಹೀಂಗೀಂಗೆ, ಸೂರಿ ಬಿದ್ದಿದು, ಎಂತದೋ ಹೇಳ್ತಾ ಇದ್ದು – ಹೇಳಿ.

ಬೈಲಕರೆ ಸುಬ್ರಾಯ ಬಂದು ನೋಡುವಾಗ, ಜೆನ ಸೇರಿದ್ದತ್ತು.
ಸೂರಿ ಅರೆ ಒರಕ್ಕಿಲಿ ಮಾತಾಡಿದ ಹಾಂಗೆ ಹೇಳಿಗೊಂಡಿತ್ತು – ’ಕೆಸವು ಕೊಯ್ವಲಾಯಿದಿಲ್ಲೆ, ಕೈ ಜಾರಿತ್ತು’ – ಹೇದು.
ಸಾಂತುವ ಅಣ್ಣನ ಮಗಂಗೆ ಬೈಲಕರೆಲಿ ಪಂಪು ರಿಪೇರಿ ಅಂಗುಡಿ. ಒಂದು ಜೀಪುದೇ ಇದ್ದು.
ಆ ಜೀಪಿಲಿ ಹಾಕಿಂಡು ಸೀತಾ ದೊಡ್ಡಾಸ್ಪತ್ರೆಗೆ ಕರಕ್ಕೊಂಡು ಹೋದವು.
ಡಾಗುಟ್ರು ನೋಡಿದ ಮತ್ತೆಯೇ ವಿಷಯದ ಗಾಂಭೀರ್ಯತೆ ಗೊಂತಾದ್ಸು.

ಮತಿ ಬಪ್ಪಗ ಮತ್ತೆ ಒಂದಿನ ಹಿಡುದತ್ತು. ನೆಂಪು, ಮಾತು, ಕೈ, ಮೈಗೆ ಏನೂ ತೊಂದರೆ ಇಲ್ಲೆ.
ಬೇರೆ ಗಾಯ ಎಂತೂ ಇಲ್ಲೆ, ಬೆನ್ನಿಲಿ ಒಂದು ಸಣ್ಣ ಗುದ್ದಿದ ನಮುನೆಯ ಗಾಯ ಇಪ್ಪದು.

ಆದರೆ, ಬೆನ್ನುಹುರಿಯೂ, ಬೆನ್ನೆಲುಬೂ – ಎರಡೂ ತುಂಡಾಯಿದು!
~

ಗಾಯ ಎಲ್ಲ ಗುಣ ಆತು, ಆದರೆ ತುಂಡಾದ್ಸು ಸರಿ ಅಕ್ಕೋ?
ಎಡಿಗಾಷ್ಟು ಮದ್ದು ಮಾಡಿ, ಇನ್ನು ಕರಕ್ಕೊಂಡು ಹೋಗಿ – ಹೇದು ಕಳುಶಿಕೊಟ್ಟವಾಡ, ಆಸುಪತ್ರೆಯೋರು.
ಸೂರಿ ಜೀಪಿಲಿ ಮನೆಗೆತ್ತಿತ್ತು.
ಜೆಗಿಲಿ ಕರೆಯ ಕೋಣೆಲಿ ಹಸೆ ಮಾಡಿ ಕೊಟ್ಟಿದವಲ್ಲದೋ – ಅದರ್ಲಿ ಮನಿಕ್ಕೊಂಡಿದ್ದು.
ಮರಂದ ಬಿದ್ದ ದಿನಂದ, ಇಂದಿನ ಒರೆಂಗೂ ಮನೆಲಿ ಮನಿಕ್ಕೊಂಡೇ ಇದ್ದು. ಹೆಂಡತ್ತಿ, ಅಪ್ಪಮ್ಮನ ಚಾಕ್ರಿಲಿ!

ಪೂರ್ವಾಶ್ರಮಲ್ಲಿ ಮನೆ ಬಿಟ್ಟ ಪಾಲು ಈಗ ಮನೆಲೇ ಇರೆಕ್ಕಾಗಿ ಬಪ್ಪ ಹಾಂಗೆ ದೇವರು ಮಾಡಿದ್ದೋ ಏನೋ – ಹೇದು ಊರೋರು ಕೆಲವು ಜೆನ ಮಾತಾಡಿಗೊಳ್ತವು.

ಪೂರ್ವಾಶ್ರಮಲ್ಲಿ ಅಪ್ಪಮ್ಮನ ಸೇವೆ ತೆಕ್ಕೊಂಡದು ಕಮ್ಮಿ ಆದ ಕಾರಣ ಈಗ ಹೀಂಗೆ ಒದಗಿ ಬಂದ್ಸೋ ಏನೋ – ಹೇದು ಊರೋರು ಮಾತಾಡಿಗೊಳ್ತವು.
ಅದೇನೇ ಇರಳಿ, ಸೂರಿ ಮನುಗಿದಲ್ಲೇ.
~

ಇದರೆಡಕ್ಕಿಲಿ ಸಾಂತುವಿಂಗೆ ಈಗ ಮದಲಾಣಷ್ಟು ಕುಡಿಯಲೆ ಎಡಿತ್ತಿಲ್ಲೆ.
ಕುಡಿಯಲೆ ಮಾಂತ್ರ ಅಲ್ಲ, ಈಗ ಏನೂ ಎಡಿತ್ತಿಲ್ಲೆ; ನಾಕು ಮಾರು ನೆಡದ ಕೂಡ್ಳೇ ಬಚ್ಚಿ ಕೂರೇಕಾವುತ್ತು!
ಉಂಬಲೆ ಮೆಚ್ಚುತ್ತಿಲ್ಲೆ, ಮಾತಾಡ್ಳೆ ಎಡಿತ್ತಿಲ್ಲೆ.
ಅನ್ನನಾಳಲ್ಲಿ ಹುಣ್ಣಾಯಿದು ಹೇಳ್ತವಾಡ ಡಾಗುಟ್ರು.
ಕೂದಲ್ಲೇ ಕೂದುಗೊಂಡು ಇರ್ತು, ಚೆಂಡಿ ಕೋಳಿಯ ನಮುನೆಲಿ.

~

ಆ ಮನೆಲಿ ಈಗ ಉದಿ ಆಯೇಕಾರೆ ಅಮ್ಮ ಬೇಕು. ಚಾಕ್ರಿ ಮಾಡೇಕಾರೆ ಹೆಂಡತ್ತಿ ಬೇಕು.
ಮನೆಯ ನೆಡೆಶೇಕಾದ ಆ ಹುಡುಗ ಈಗ ಎಲ್ಲೋರ ಸೇವೆ ತೆಕ್ಕೊಂಬ ಹಾಂಗಾಯಿದು.

ಮನೆಗೆ ಆಧಾರವಾಗಿ ಬೆಳಗೇಕಾದ ಒಂದೇ ಮಗ, ಈಗ ಮನೆಯ ಕೊಬಳು ನೋಡಿಗೊಂಡು ಮನುಗಿದಲ್ಲೇ ಇದ್ದು!

ಮನುಗಿದಲ್ಲೇ ಮನುಗಿರೆ ಬೆಂದ ಹಾಂಗೆ ಗಾಯ ಆವುತ್ತಾಡ ಅಲ್ಲದೋ – ಎದ್ದು ಕೂಪಲೂ ಎಡಿಯದ್ದರೆ ಮನುಗದ್ದೆ ಎಂತ ಮಾಡುಸ್ಸು!?
ಅಂತೂ – ಆ ಗಾಯಂಗೊ ಸಮಗಟ್ಟು ಒಣಗಿದ್ದಿಲ್ಲೆ ಆಡ.
ಸೊಂಟಂದ ಕೆಳ ವಶವೇ ಇಲ್ಲದ್ದ ಕಾರಣ ಆ ಗಾಯ ಒಣಗುದೂ ಕಷ್ಟವೇ ಆಡ.
~

ಅದೆಲ್ಲ ಬಿಡಿ, ಜೀವ ಒಳಿವದೇ ಕಷ್ಟ ಆಡ.
ಬೈಲಕರೆಗೆ ಬಂದ ಆ ಹೊಸ ಡಾಗುಟ್ರು ಇದ್ದಲ್ಲದೋ – ಅದು ಬಪ್ಪದೇ ನಿಲ್ಲುಸಿತ್ತಾಡ.
ಎನಗೆ ಅರಡಿವ ಮದ್ದು ಪೂರ ಮಾಡಿದೆ, ಇನ್ನು ಮುಂದಾಣದ್ದು ಎನಗೆ ಗೊಂತಿಲ್ಲೆ – ಹೇಳಿತ್ತಾಡ.
~
ನಿನ್ನೆ-ಮೊನ್ನೆ ಹುಟ್ಟಿ ಬೆಳದ ಒಂದು ಜೆನ, ಬಾಲ್ಯಲ್ಲೇ ಚುರ್ಕು, ಪ್ರಕಾಂಡ ಬಲಿಷ್ಠ, ಸಾಮರ್ಥ್ಯವಂತ – ಇಂದು ಯೇವ ಸ್ಥಿತಿಲಿದ್ದು!

ಇಪ್ಪತ್ತೈದರ ಒರಿಶಲ್ಲಿ ಜೀವನವ ಬೆಳಗಿ, ಬಾಳೇಕಾದ ಕಾಲಲ್ಲಿ, ಹೆಚ್ಚಿನೋರಿಂಗೆ ಜೀವನ ಸುರು ಆವುತ್ತ ಸಮೆಯಲ್ಲಿ ಈ ಸೂರಿ ಮನುಗಿದಲ್ಲೇ ಆತು. ಎಂತಾ ದುರ್ದೈವ!?

~

ತಪ್ಪು ಮಾಡಿರೆ ಅಂಬಗಳೇ ಗೊಂತಾವುತ್ತಾಡ ಈ ಕಲಿಕಾಲಲ್ಲಿ.
ಸೂರಿಯ ಪೂರ್ವಾಶ್ರಮಲ್ಲಿ ಯೇವದೋ ರೌಡಿಗಳ ಒಟ್ಟಿಂಗೆ ಸೇರಿ ಆರಾರದ್ದೋ ಕೈಕ್ಕಾಲು ಬಡಿತ್ತ ಕಾರ್ಯ ಮಾಡಿಗೊಂಡಿತ್ತಾಡ ರಜ ಸಮೆಯ. ಆರೋ ಇದರ ಕೈಲಿ ಪೆಟ್ಟು ತಿಂದ ಒಂದು ಜೆನ ಬೇಜಾರಲ್ಲಿ ದೇವರ ಮೇಗೆ ಹಾಕಿತ್ತಾಡ.
ಹಾಂಗೆ ಆ ಶಾಪ ತಟ್ಟಿದ್ದು – ಹೇದು ಊರಿಲಿ ಈಗ ಇತ್ತೀಚಿನ ಒರ್ತಮಾನ.
ಎಂತಕ್ಕೂ, ಎಲ್ಲದಕ್ಕೂ ದೇವರೇ ಕಾರಣ.

ಸೂರಿ ಮನುಗಿದಲ್ಲೇ ಆದರೂ, ಸರಿ ಆಗಿ ಬೇಗ ಜೀವನಕ್ಕೆ ಮರಳಿ, ಒಳ್ಳೆಯ ರೀತಿಲಿ ಬದ್ಕಲೆ ಸುರು ಆದರೂ ಅದಕ್ಕೆಲ್ಲವೂ ದೇವರೇ ಕಾರಣ ಹೇದು ಹಲವೂ ಜೆನ ನಂಬುಗು.

~

ಎಲ್ಲ ಸಾಗಿ ಸರಿ ಆತು ಹೇಳ್ತ ಕಾಲಕ್ಕೆ ದೇವರು ಹೀಂಗೆ ಮಾಡಿ ಮಡಗಿದವೋ – ಹೇದು ಸೂರಿಯ ಅಮ್ಮ ನಿತ್ಯವೂ ಕಣ್ಣನೀರು ಹಾಕುತ್ತಾಡ.
ಅದೊಂದು ಬಿಟ್ಟು ಆ ಸಹನಾಮಯಿ ಅಮ್ಮಂಗೆ ಬೇರೆಂತ ಅರಡಿಗು!

~

ಅದಾ, ಮನೆಯ ಬೆನ್ನೆಲುಬೇ ಆಗಿರೇಕಾದ ಸೂರಿಯ ಬಗ್ಗೆ ಮಾತಾಡ್ಳೆ ಸುರುಮಾಡಿ, ಎರಡು ವಾರಕ್ಕೆ ಆತಿದಾ.
ಒಂದನೇದಾಗಿ, ಆ ಮನೆಯ ಬೆರ್ತೋಳು ಆಗಿ ನಿಲ್ಲೇಕಾದ ಹುಡುಗ ದಾರಿತಪ್ಪಿ ಹಾಳಾಗಿ ಹೋದ್ಸು.
ಎರಡು – ಸರಿದಾರಿಗೆ ಬಂದರೂ – ಅದರ ಬೆನ್ನೆಲುಬೇ ತುಂಡಾಗಿ, ಮನೆಯ ಬೆನ್ನೆಲುಬಾಗಿ ನಿಂಬಲೆ ಎಡಿಗಾಗದ್ದೆ ಹೋದ್ಸು.
ಎರಡುದೇ ಈಗಾಣ ಯುವಜನತೆಗೆ ಪಾಠ ಆಗಿರೇಕಾದ ಶುದ್ದಿ.

~

ಒಂದೊಪ್ಪ: ಬೆನ್ನು ಹುರಿ ಹೋದ ಮತ್ತೆ ತಪ್ಪಾತು ಹೇದು ಕಾಲಿಡಿಯಲೂ ಎಡಿಯ ಇದಾ!

ಸೂ: ಸೂರಿಯ ನಿಜಜೀವನದ ಹೆಸರು ಹಾಂಗಲ್ಲ; ಬೇರೆಂತದೋ ಇರೇಕು.!

9 thoughts on “ಬೆನ್ನೆಲುಬು ಎರಡು ಭಾಗ !!

  1. ಅಪ್ಪಮ್ಮಂಗೇ ಪೆಟ್ಟು ಹಾಕುತ್ತು, ಇನ್ನು ಒಳುದೋರಿಂಗೆ ಎಂತ ಗೆತಿ..?ಹಾಕಿದವಂಗೆ ಎಂಥ ಗತಿ ಬಂತು ಹೇಳಿ ಗೊಂತಾತು,ಆದರೂ ಬೆನ್ನು ಹುರಿಗೆ ತಾಗಿ ಕೈಕಾಲು ವಶ ಇಲ್ಲದ್ದೆ ಬದುಕಕ್ಕಾದ ದುಸ್ಥಿತಿ ಆರಿನ್ಗೂ ಬಪ್ಪದು ಬೇಡ ಹೇಳಿ ಅನ್ಸಿತ್ತು !

  2. ವೇಣಿ ಅಕ್ಕ ಬರದ” ಪತ್ರೋಡೆ ರೋಸ್ಟ್” ಓದಿ ತುಂಬಾ ಆಸೆ ಆಗಿಯೊಂಡಿತ್ತು. ಆದರೆ ಈ ಕಥೆ ಓದಿದ ಮೇಲೆ ಪತ್ರೋಡೆ ಸುದ್ದಿ ಮಾತಾಡೆಡಿ ಹೇಳ್ತು ಎನ್ನ ಯಜಮಾನ್ತಿ.

  3. ಛೇ! ಅಖೇರಿಗೆ ಹೀಂಗಾದ್ದು ಬೇಜಾರ ಆತು.
    ದೇವರ ದಯಂದ ಯಾವುದಾದರೂ ವೈದ್ಯರ ಮದ್ದಿಲ್ಲಿ ಅದಕ್ಕೆ ಗುಣ ಆಗಲಿ.
    ಕೆಟ್ಟ ಬುದ್ಧಿ ಎಲ್ಲ ಹೋಗಿ ಸರಿದಾರಿಗೆ ಬಂದಪ್ಪಗ ಹೀಂಗಾಗಿ ಮನಿಗಿದಲ್ಲೇ ಆತನ್ನೇ ಹೇಳಿ ಬೇಜಾರ….

  4. ದೇಹದ ಬೆನ್ನೆಲುಬು ಮತ್ತೆ ಮನೆಯ ಆಧಾರ ಸ್ಥಂಭವಾಗಿ ಇರೆಕಾದ ಜವಾಬ್ದಾರಿ ತೆಕ್ಕೊಳೆಕ್ಕಾದ ಮಕ್ಕೊ- ಇವೆರಡ ತುಲನಾತ್ಮಕ ನಿರೂಪಣೆ- ಕೊಶೀ ಆತು.

  5. ಬೆನ್ನು ಹುರಿ ಹೋದ ಮತ್ತೆ ತಪ್ಪಾತು ಹೇದು ಕಾಲಿಡಿಯಲೂ ಎಡಿಯ ಇದಾ!
    ಯಪ್ಪ, ಒಪ್ಪಣ್ಣನ ಒಪ್ಪವ ಓದಿ ಅಪ್ಪಗ ಅಪ್ಪದು ಹೇಳಿ ಕಂಡತ್ತು.
    ಹೆಂಡತ್ತಿಗೆ ಪತ್ರಡೆ ಮಾಡ್ಳೆ ಸಕಾಯ ಮಾಡ್ಳೆ ಹೆರಟ ಸಣ್ಣ ಕಾರಣವೇ ಸಾಕಾತನ್ನೆ ದುರಂತಕ್ಕೆ. ಹಿಂದೆ ಸೂರಿ ಮಾಡಿದ ಪಾಪ ಕಾರ್ಯವೇ ತಿರುಗಿ ಹೀಂಗೆ ಮಾಡಿತ್ತೊ ಅಂಬಗ ?

  6. ಓದುವಾಗ ಬೇಜಾರು ಅವುತ್ತು, ಸರಿದಾರಿಗೆ ಬಂದರೂ ಹೀಂಗೆ ಅತನ್ನೆ ಹೇಳಿ. ಇದಕ್ಕೆ ಆಯಿಕ್ಕು ದೊಡ್ಡವು ಹೇಳಿದ್ದು, “ಮಾಡಿದ್ದರ ಫಲ ಸಿಕ್ಕುತ್ತು” ಹೇಳಿ.

  7. ಬೆನ್ನುಲುಬು ಎರಡು ಭಾಗ!! – ಅಪ್ಪಪ್ಪು ಶುದ್ದಿಗೊಪ್ಪುವ ಹಣೆಬರ

    ಬಿರಮ ಪೂಜಾರಿಯ ವೊಯಿವಾಟು, ಸಾಂತುವಿನ ದರ್ಬಾರು, ಮತ್ತದಕ್ಕೆ ಮದುವೆ, ಮಲ್ಲಿಗೆ ತೋಟ, ರಾಜ್ಕುಮಾರನಾಂಗೆ ಬಿದ್ದದು ಎಲ್ಲ ಲಾಯಕಕ್ಕೆ ಓದಿಸಿಗೊಂಡು ಹೋತು. ಆದರೆ ಬಿದ್ದು ತಾಗಿದ್ದೆಲ್ಲಿಗೆ ಹೇದು ಓದಿಯಪ್ಪಗ ಯಬ್ಬ! ಹಿಂದಂದ ಬೆನ್ನಹುರಿ ಹಿಡುದು ಆರೋ ಪೀಂಟಿದಾಂಗೆ ಆತು. ಚಿಂತನೀಯಾ ಒಂದೊಪ್ಪ. ದೇವರೇ ಕಾಪಾಡು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×