Oppanna.com

ಮುಳ್ಳುಸೌತೆಕಾಯಿ ಪಾಯಸ

ಬರದೋರು :   ವೇಣಿಯಕ್ಕ°    on   19/11/2013    5 ಒಪ್ಪಂಗೊ

ವೇಣಿಯಕ್ಕ°

ಮುಳ್ಳುಸೌತೆಕಾಯಿ ಪಾಯಸ
ಬೇಕಪ್ಪ ಸಾಮಾನುಗೊ:

  • 2-3 ಕಪ್(ಕುಡ್ತೆ) ಕೊಚ್ಚಿದ ಮುಳ್ಳುಸೌತೆ
  • 1.5-2 ಕಪ್(ಕುಡ್ತೆ) ಬೆಲ್ಲ
  • 3 ಕಪ್(ಕುಡ್ತೆ) ಕಾಯಿ ತುರಿ ಅಥವಾ 2.5-3 ಕಪ್(ಕುಡ್ತೆ) ಕಾಯಿ ಹಾಲು
  • 3/4 – 1 ಚಮ್ಚೆ ಗಟ್ಟಿ ಬೆಣ್ತಕ್ಕಿ ಹಿಟ್ಟು / ಅಕ್ಕಿ ಹೊಡಿ
  • ಚಿಟಿಕೆ ಉಪ್ಪು (ಬೇಕಾದರೆ ಮಾತ್ರ)
  • 2-3 ಏಲಕ್ಕಿ

ಮಾಡುವ ಕ್ರಮ:
ಮುಳ್ಳುಸೌತೆಕಾಯಿಯ ಚೋಲಿ, ಒಳಾಣ ತಿರುಳು, ಬಿತ್ತು ಎಲ್ಲ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ರೆಜ್ಜ ಚೆಟ್ಟೆಗೆ ತುಂಡು ಮಾಡಿ.

ಕಾಯಿಯ ರೆಜ್ಜ ನೀರು ಹಾಕಿ ನೊಂಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ.

ಹಿಂಡಿದ ಪುಂಟೆಗೆ 1 ಕುಡ್ತೆ ನೀರು ಹಾಕಿ, ಲಾಯಿಕಲಿ ಬೆರುಸಿ ವಸ್ತ್ರಲ್ಲಿ ಪುನಃ ಹಿಂಡಿ.
ಈ ನೀರು ಕಾಯಿಹಾಲಿನ ಒಂದು ಪಾತ್ರಕ್ಕೆ ಹಾಕಿ, ಅದಕ್ಕೆ ಕೊಚ್ಚಿದ ಮುಳ್ಳುಸೌತೆದೆ ಹಾಕಿ ಬೇಶಿ.
ಬಾಗ ಬೆಂದಪ್ಪಗ, ಅದಕ್ಕೆ ಬೆಲ್ಲ,ಚಿಟಿಕೆ ಉಪ್ಪು ಹಾಕಿ ಕೊದುಶಿ, ಬೆಲ್ಲ ಕರಗುವನ್ನಾರ ಸಣ್ಣ ಕಿಚ್ಚಿಲ್ಲಿ ಮಡುಗಿ.

ಒಂದು ಪಾತ್ರಲ್ಲಿ 1/4 ಕುಡ್ತೆ ನೀರು/ನೀರು ಕಾಯಿಹಾಲು ಹಾಕಿ, ಅದಕ್ಕೆ ಅಕ್ಕಿ ಹಿಟ್ಟು/ಹೊಡಿ ಹಾಕಿ ಕರಡಿ. ಅದರ ಪಾಯಸಕ್ಕೆ ಹಾಕಿ ಕೊದುಶಿ.
ಕಾಯಿ ಹಾಲನ್ನೂ ಹಾಕಿ ಕೊದುಶಿ. ಗುದ್ದಿ ಹೊಡಿ ಮಾಡಿದ ಏಲಕ್ಕಿಯನ್ನೂ ಹಾಕಿ ತೊಳಸಿ ಪಾಯಸವ 1-2 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.

ಬೆಶಿ-ಬೆಶಿ ಅಥವಾ ತಣ್ಣಂಗೆ(ಫ್ರಿಜ್ ಲ್ಲಿ ಮಡುಗಿ) ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

5 thoughts on “ಮುಳ್ಳುಸೌತೆಕಾಯಿ ಪಾಯಸ

  1. ವೇಣಿ ಅಕ್ಕನ ಪಯಸ ಇಲ್ಲಿಗೆ ಘಂ ಹೇಳಿ ಪರಿಮಳ ಬತ್ತಾ ಇದ್ದು
    ಆನುದೇ ಮಾಡಿ ತಿನ್ನಕ್ಕು ಹೇಳಿ ಇದ್ದೆ
    ಹೇಳಿಕೊಟ್ಟದಕ್ಕೆ ಧನ್ಯವಾದಂಗ

  2. veni akka . kene gendedhudhe paayasa aavutthu. itthichege obbara maneli maaditthau. pastaauthu.

  3. ಪಾಯಸ ರೈಸಿದ ಹಾಂಗೆ ಕಾಣ್ತು..ತಣ್ಣಂಗೆ ಫ್ರಿಡ್ಜ್ ಲಿ ಮಡಗಿ ಒಂದರಿ ತಿನ್ನೇಕ್ಕಾತು..

  4. ಃ) ಅಪ್ಪು ಮುಳ್ಳುಸೌತೆ ಪಾಯಸ ರೆಜ್ಜ ವಿಶೇಷ. ಬಾಗ ಇಪ್ಪ ಪಾಯಸಂಗೊ ಕಮ್ಮಿ…. ಸೊರೆಕ್ಕಾಯಿ, ದಾರಳೆಕಾಯಿ, ಖರಬೂಜ, ಹಲಸಿನಕಾಯಿ ಬೇಳೆ, (ಹಾಲಿಟ್ಟು/ತೆಳ್ಳವು) ಇತ್ಯಾದಿ ಬಿಟ್ಟರೆ ಹೆಚ್ಚಿಂದೆಲ್ಲಾ ಬಾಗ ಇಲ್ಲದ್ದ ಪಾಯಸಂಗಳೆ…

  5. ಆಹಾ..ಏಲಕ್ಕಿ ಘ೦ ಹೇಳಿತ್ತೊ೦ದರಿ. ಬಾಗ ಇಪ್ಪ ಪಾಯ್ಸ ಇದೊ೦ದೇ ಅಲ್ಲದೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×