Oppanna.com

ಗಿಳಿ ಬಾಗಿಲಿಂದ -ಅಲ್ಪ ಒಳುದು ಹಾಳು ಹಲಾಕು ಆಯಿದು

ಬರದೋರು :   ಲಕ್ಷ್ಮಿ ಜಿ.ಪ್ರಸಾದ    on   11/12/2013    11 ಒಪ್ಪಂಗೊ

“ಅಡಿಗ್ಗೆಯೋವು ಅಲ್ಪ ಮಾಡಿ ಹಾಕಿದ್ದವು . ಅಲ್ಪ ಒಳುದು ಹಾಳು ಹಲಾಕು ಆಯಿದು ಹೇಳುವ ಮಾತಿನ ನಮ್ಮ ಭಾಷೆಲಿ ಸಾಮನ್ಯಾವಾಗಿ ಉಪಯೋಗಿಸುತ್ತವು.ಅನುಪತ್ಯ ಮಾಡಿ ಅಪ್ಪಗ ಕೆಲವು ಸರ್ತಿ ಅಡಿಗೆಯೋರ (ಇದು ಸತ್ಯಣ್ಣನ ಬಗ್ಗೆ ಅಲ್ಲ.ಸತ್ಯಣ್ಣನ ಅಡಿಗೆ ಮೂರನೇ ಹಂತಿಗೆ ಅಲ್ಲಿಂದಲ್ಲಿಗೆ ಹರ ಹರಾ ಆವುತ್ತಡ!!)!ಅಂದಾಜು ತಪ್ಪಿ ಅಶನ, ಕೊದಿಲು,ಮೇಲಾರಂಗ ತುಂಬಾ ಒಳುದು ಹಾಳಪ್ಪದು ಇದ್ದು .ಕೆಲವು ಸರ್ತಿ ಗ್ರೇಶಿದಷ್ಟು ಜನಂಗ ಬಾರದ್ದೆ ಒಳಿವದು ಇದ್ದು .ಇಂಥ ಸಂದರ್ಭಲ್ಲಿ ತುಂಬ ಒಳುದು ಹಾಳಾಯಿದು ಹೇಳುದರ ಅಲ್ಪ /ಅಲ್ಪ ಒಳುದು ಹಾಳಾಯಿದು ಹೇಳಿ ಹೇಳ್ತವು.
ಕನ್ನಡದ ಪ್ರಾದೇಶಿಕ ಉಪ ಭಾಷೆ ಹೇಳಿಯೇ ಗುರುತಿಸಲ್ಪಡುವ ನಮ್ಮ ಭಾಷೆಲಿ ಬಳಕೆಲಿ ಇಪ್ಪ ಕೆಲವು ಕನ್ನಡ ಪದಂಗೊಕ್ಕೆ ನಮ್ಮ ಭಾಷೆಲಿ ವಿರುದ್ಧವಾದ ಅರ್ಥ ಬಳಕೆಲಿ ಇದ್ದು .ಇಂತಾದ್ದೆ ಒಂದು ಪದ ಅಲ್ಪ ಹೇಳುದು .ಕನ್ನಡಲ್ಲಿ ಅಲ್ಪ ಹೇಳ್ರೆ ಕಮ್ಮಿ ಹೇಳಿ ಅರ್ಥ .ಆದರೆ ನಮ್ಮ ಭಾಷೆಲಿ ತುಂಬ ಹೇಳುವ ಅರ್ಥಲ್ಲಿ ಇದು ಬಳಕೆ ಆವುತ್ತು .”ಅವೆಂತ ಒಂದೆರಡು ಜನಂಗಳ?ಅವು ಅಪ್ಪಚ್ಚಿ ದೊಡ್ಡಪ್ಪ ಮಾವ ಅತ್ತೆ ಮಕ್ಕ ಮರಿಗ ಹೇಳಿ ಅಲ್ಪ ಇದ್ದವು” ಹೇಳಿ ದೊಡ್ಡ ಕುಟುಂಬದ ಬಗ್ಗೆ ಹೇಳುದು ಇದ್ದು .
ಸುತ್ತ ಮುತ್ತ ಎಲ್ಲಿ ನೋಡ್ರೂ ಬ್ಯಾರಿಗಳೇ ಕಾಣ್ತಾ ಇಪ್ಪ ಕನ್ಯಾನ ಉಪ್ಪಳದ ನಡುವೆ ಮನೆ ಇಪ್ಪ ಎಂಗಳ ಬೇತದ ಅಜ್ಜ , ”ಅಲ್ಪ ಸಂಖ್ಯಾತರು ಹೇಳಿ ಇವರ ದೆನಿಗೇಳುದು ಸರಿ.ಆದರೆ ಅದು ನಮ್ಮ ಭಾಷೆಯ ಅಲ್ಪ ಕನ್ನಡದ ಅಲ್ಪ ಅಲ್ಲ” ಹೇಳಿ ಎರಡು ಕೈ ಆಕಡೆ ಈ ಕಡೆ ಬಿಡುಸಿ ಅಗಾಲ್ಸಿ ತೋರ್ಸಿ ನೆಗೆ ಮಾಡಿಗೊಂಡು ಇತ್ತಿದವು!
ಅಲ್ಪ ಹೇಳುವ ಪದಕ್ಕೆ ನುಡಿಗಟ್ಟಾಗಿ ಬಳಕೆ ಮಾಡುವಗ ತುಂಬಾ /ಹೆಚ್ಚು ಹೇಳುವ ಅರ್ಥ ಇದ್ದರೂ ಕಮ್ಮಿ ಹೇಳುವ ಸರ್ತ ಅರ್ಥಲ್ಲಿಯೂ ಬಳಕೆ ಆವುತ್ತು ಕೆಲವು ಸರ್ತಿ. “ಅವು ಬರಿ ಅಲ್ಪಂಗ ಅವರ ವ್ಯವಹಾರ ಆಗ ” ಹೇಳುವ ಮಾತು ನಮ್ಮ ಭಾಷೆಲಿ ಬಳಕೆಲಿ ಇದ್ದು.ಇಲ್ಲಿ ಆ ಅಲ್ಪಂಗ ಹೇಳ್ರೆ ಅವು ರಜ್ಜ ಬುದ್ಧಿ ಇಲ್ಲದ್ದೋರು,ನೀತಿ ನಿಯತ್ತು ಇಲ್ಲದ್ದೋರು, ಸಣ್ಣ ಮನಸ್ಸಿನೋರು ಹೇಳುವ ಅರ್ಥ ಇದ್ದು.
ಕೋಳ್ಯೂರು ಸೀಮೆಲಿ ” ಅಲ್ಪ ”ಪದಕ್ಕೆ ಹೀಂಗೆ ಇಪ್ಪ ಅರ್ಥ ಪ್ರಚಲಿತ ಇದ್ದು .ಹವ್ಯಕಲ್ಲಿ ಎಲ್ಲ ಕಡೆಲಿಯೂ ಇಕ್ಕು ಅಲ್ಲದ ?ತಿಳುಸಿ.

11 thoughts on “ಗಿಳಿ ಬಾಗಿಲಿಂದ -ಅಲ್ಪ ಒಳುದು ಹಾಳು ಹಲಾಕು ಆಯಿದು

  1. ಅಲ್ಪ ಹೇಳಿದರೆ ಜಾಸ್ತಿ ಹೇಳಿಯೇ ಎಂಗಳಲ್ಲೂ ಉಪಯೋಗ ಇದ್ದು. ಲಂಚಕ್ಕೆ ಮಾಮೂಲು ಹೇಳಿ ಹೆಸರಿದ್ದು ;ಸುಮಾರು ಹೇಳುವ ಶಬ್ದಕ್ಕೆ ಅಂದಾಜು ಬದಲು ಬಹಳ ಹೇಳಿಯೇ ಅರ್ಥ ನಮ್ಮ ಭಾಷೆಲಿ.
    ಹೀಂಗೆ ಅಲ್ಪ ಇದ್ದು ಉದಾಹರಣೆ!
    ಒಂದು ಶಬ್ದದ ಅರ್ಥ ಪಲ್ಲಟ ಅಪ್ಪದು ಭಾಷೆಯ ಒಂದು ಸೊಗಸು.ಇಂಗ್ಲಿಶಿಲೂ ಬೇಕಾಷ್ಟು ಇದ್ದು ಹೀಂಗೆ .ಸುಂಕ ಕೊಡುದು ಪದ್ಧತಿ ‘=ಕಸ್ಟಂ ‘ ಆದ್ದರಿಂದ ಸುಂಕ ಇಲಾಖೆಗೆ ಕಸ್ಟಮ್ಸ ಹೇಳಿಯೇ ಹೆಸರು ಬಂತು!

  2. ಈ ವಾರದ ಶಬ್ದ ಚಿಂತನೆಯುದೆ ಲಾಯಕಿತ್ತು. ಅಲ್ಪ ಶಬ್ದದ ಬಗ್ಗೆ ಅಲ್ಪ(ಹವ್ಯಕ ಭಾಷೆದು) ಮಾಹಿತಿ ಕೊಟ್ಟತ್ತು.

  3. ಎನ್ನ ಮೋರೆ ಪುಟದ ನೆಂಟ್ರು ಆದ ನರಸಿಂಹ ಹೆಗಡೆಯೋರು ಒಂದು ಮಾಹಿತಿ ಕೊಟ್ಟಿದವು ಮಲೆ ನಾಡಿಲಿ ಸ್ವಲ್ಪ ಹೇಳುವ ಪದಕ್ಕೂ ಇದೆ ರೀತಿ ತುಂಬಾ ,ಜಾಸ್ತಿ ಹೇಳುವ ಅರ್ಥ ಇದ್ದಡ
    ಅವರ ಮಾತಿನ ಇಲ್ಲಿ ಕಾಪಿ ಮಾಡಿ ಹಾಕಿದ್ದೆ
    NaraSimha Hegde- dhakshina kannadadhalli “alpa” aa artha, hange malenadali “swalpa” amba,
    ex: avara mane madhwe’ge swalpa jana agidwille. idhara artha rashi jana aja heladhu!
    ಒಳ್ಳೆ ಮಾಹಿತಿ ಕೊಟ್ಟ ನರಸಿಂಹ ಹೆಗಡೆ ಗೆ ಧನ್ಯವಾದಂಗ

  4. ಎಂಗಳ ಕೋಳ್ಯೂರು ಸುತ್ತ ಮುತ್ತ ,ಪ್ರಸಾದ್ ನ ಮನೆ ಕೋಡಪದವು ,ಮತ್ತೆ ಬೇತದ ಅಜ್ಜನ ಮನೆಲಿ ಎಲ್ಲ ಅಲ್ಪ ಹೇಳಿಯೇ ಬಳಕೆ ಇಪ್ಪದು ಬೊಳುಂಬು ಕೃಷ್ಣಭಾವ°
    ಬೇರೆ ಕಡೆಲಿ ಅಳ್ಪ ಇದ್ದಾ ಏನ ,ಎನ್ನ ಗಮನಕ್ಕೆ ಇಷ್ಟರ ತನಕ ಬೈನ್ದಿಲ್ಲೆ ,ಈಗ ನಿಂಗ ಹೇಳಿದ್ದನ್ನೂ ಇದಕ್ಕೆ ಸೇರ್ಸಿ ಮಡುಗುತ್ತೆ ಎನ್ನ ಬ್ಲಾಗ್ ಲಿ
    ಇದು ‘ಅಳ್ಪ’ಹೇಳಿ ಎಲ್ಲಿ ,ಯಾವಕಡೆ ನಮ್ಮ ಭಾಷೆಲಿ ಬಳಕೆ ಅವುತ್ತು ಹೇಳಿ ತಿಳುಸಿದರೆ ಉಪಕಾರ ಆವುತ್ತು ಅದನ್ನು ಒತ್ತಿನ್ಗೆ ಸೇರ್ಸುತ್ತೆ
    ಓದಿ ಅಭಿಪ್ರಾಯಿಸಿ ಎನ್ನ ತಿಳುವಳಿಕೆಯ ಪರಿಧಿಯ ಹೆಚ್ಚುಸುತ್ತಿಪ್ಪ ಬೈಲಿನ ಎಲ್ಲ ನೆಂಟ್ರುಗೊಕ್ಕು ಧನ್ಯವಾದಂಗ

  5. ಲಕ್ಷ್ಮಿ ಅಕ್ಕ,
    ನಮ್ಮಲ್ಲಿ ಹೆಚ್ಚಿಗೆ ಹೇಳ್ತ ಅರ್ಥಲ್ಲಿ ಉಪಯೋಗ ಅಪ್ಪ ಶಬ್ದ ‘ಅಳ್ಪ’, ಅದು ‘ಅಲ್ಪ’ ಅಲ್ಲ. ಸಣ್ಣದು ಅಥವಾ ಕಡಮ್ಮೆ ಇಪ್ಪದು ಹೇಳುವ ‘ಅಲ್ಪ’ ಹೇಳ್ತ ಶಬ್ದಕ್ಕಿಂತ ಭಿನ್ನವಾದ ಎಟಿಮೋಲಜಿಕಲ್ ಹಿನ್ನೆಲೆ ಇದಕ್ಕೆ ಇಕ್ಕು.

  6. ಲಗಾಡಿ ಹೋತು, ಲಗಾಡಿ ತೆಗೆಡ. ಇದು ನಮ್ಮ ಭಾಷೆಲಿ ಉಪಯೋಗ ಮಾಡುವ ಪದ. ಇದು ಯಾವ ಭಾಷೆಂದ ಬಂದದು ? ತಿಳಿಸಿ.

  7. ಒಂದು ಸರ್ತಿ ಹೀಂಗಾತು!ಅಂದಾಜಿಂದ ಹೆಚ್ಚು ಜೆನ ಆತು ಹೇದು ಎಲ್ಲದಕ್ಕೂ ಉಪ್ಪು ಸೊರುಗಿ ಮಡುಗಿದವು (ಪಾಯಸಕ್ಕೂ ಕೂಡಾ)ಹಾಂಗೆ ಅಲ್ಪ ಒಳುದು ಹಾಳಾತು.ಅಲ್ಪ ಹೇಳುವ ಪದ ಸಂಕುಚಿತ ಮನೋಭಾವದವ ಹೇಳುವ ಅರ್ಥಲ್ಲಿ ಬಳಕೆ ಆವುತ್ತು.’ಅಲ್ಪಂಗೆ ಬುದ್ಧಿ ಹೇಳಿ ಎಂತ ಪ್ರಯೋಜನ?’ತುಳು ಭಾಷೆಲಿಯೂ ಈ ಪದ ಬಳಕೆಲಿ ಇದ್ದು.ಅಲ್ಪ ನರಮಾನಿ=ಕೀಳು ಮನುಷ್ಯ,ಕ್ಷುದ್ರ ವ್ಯಕ್ತಿ.

  8. ಆಲ್ಪದ ವಿಷಯಲ್ಲಿ ಅಲ್ಪ ಚಿಂತನೆಗೊ! ಅಲ್ಪಸಂಖ್ಯಾತರು ಹೇಳ್ತಲ್ಲಿ ಅವ್ವೇ ಅಲ್ಪ ಸಂಖ್ಯಾತರು ಆಯ್ದವಪ್ಪೋ!! . ಲಾಯಕ ಆಯ್ದು.

  9. ಅಲ್ಪ ಶಬ್ದದ ವ್ಯಾಪ್ತಿ ಲಾಯಿಕಲಿ ವಿವರಿಸಿದ್ದಿ. ಧನ್ಯವಾದಂಗೊ
    “ಅಲ್ಪ- ಸ್ವಲ್ಪ” ಹೇಳಿ ಜೋಡು ಶಬ್ದ ಪ್ರಯೋಗವೂ ನಮ್ಮಲ್ಲಿ ಇದ್ದು.
    ಯಾವುದಾದರೂ ಅಳತೆ ಹೇಳುವಾಗ- “ಅಲ್ಪ ಸ್ವಲ್ಪ ವೆತ್ಯಾಸ ಇಕ್ಕು” ಹೇಳ್ತ ಶಬ್ದ ಪ್ರಯೋಗವೂ ಕಾಣುತ್ತು.

  10. ಬೇರೆ ಬೇರೆ ಸಂದರ್ಭಲ್ಲಿ ವಿರುದ್ಧಾರ್ಥ ಕೊಡ್ತ ‘ಅಲ್ಪ’ದ ವಿವರಣೆ ಲಾಯಿಕ್ಕಾಯಿದು. ಹೀಂಗಿರ್ಸ ಇನ್ನುದೇ ಹಲವು ಶಬ್ಧಂಗೊ ನಮ್ಮಲ್ಲಿ ಬಳಕೆಲಿ ಇಕ್ಕು.

  11. ಕೆಲವು ಸರ್ತಿ ಗ್ರೇಶಿದಷ್ಟು ಜನಂಗ ಬಾರದ್ದೆ ಒಳಿವದು ಇದ್ದು—–
    ಆದರೆ ಬ೦ದ ಆದ್ಮಿಗಳಲಿ ೧/೨
    ಬೇರೆ ೨ ಕಡೆ ಎಟೆ೦ಡನ್ಸ್ ಹಾಕಿ ಬ೦ದರೆ,(ಅನಿವಾರ್ಯತೆ ಇ೦ದ)
    ಇದರಲಿ ೩/೪ ಉಳಿಯದ್ದೇ ಇಕ್ಕಾ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×