Oppanna.com

ಈಶಾವಾಸ್ಯೋಪನಿಷತ್ತು – ಶ್ಲೋಕ ಆರು

ಬರದೋರು :   ಬೊಳುಂಬು ಕೃಷ್ಣಭಾವ°    on   23/12/2013    1 ಒಪ್ಪಂಗೊ

ಈಶಾವಾಸ್ಯೋಪನಿಷತ್ತು – ಶ್ಲೋಕ ಆರು
ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಶ್ಯತಿ |
ಸರ್ವ ಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ ||೬||
ಯಾರು ಜೀವಿಗಳೆಲ್ಲ ತನ್ನೊಳ ಆತ್ಮವೆಂದೇ ತಿಳಿವರು
ಅವರೆ ಜೀವಿಗಳಲ್ಲಿ ತನ್ಮಯ ಹೊಂದಿ ದ್ವೇಷವ ತೊರೆವರು ||೬||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.
ಪರತತ್ತ್ವ ಎಂಬುದು ಸರ್ವವ್ಯಾಪ್ತವಾದ್ದು. ಸೃಷ್ಟಿಲಿಪ್ಪ ಗುಣಂಗಳೂ ಪ್ರಕೃತಂಗಳೂ ಸೃಷ್ಟಿಕರ್ತನಲ್ಲಿ ಇಪ್ಪದಲ್ಲದ್ದೆ ಬೇರೆಯಲ್ಲ. ಮನಸ್ಸಿಂಗೂದೆ ಸೃಷ್ಟಿಕರ್ತನದ್ದಲ್ಲದ್ದ ಸ್ವತಂತ್ರ ಅಸ್ತಿತ್ವ ಇಲ್ಲೆ. ಆತ್ಮ ಸ್ವಯಂಪ್ರಕಾಶ ಆಗಿಂಡಿಪ್ಪದು. ಪರತತ್ತ್ವವಾದ ಪರಬ್ರಹ್ಮ ಎಲ್ಲವನ್ನೂ ಒಳಗೊಳುತ್ತು, ಆದರೆ ಅದರ ಒಳಗೊಂಬದು ಇನ್ನೇವದೂ ಇಲ್ಲೆ. ಅದು ಹುಟ್ಟಿದ್ದಿಲ್ಲೆ, ಅದು ಸಾವಲು ಇಲ್ಲೆ. ಪರಬ್ರಹ್ಮವೊಂದೇ ಸತ್ಯ. ಅದರ ಇರವಿನ ಎಲ್ಲೋಡಿಕ್ಕೂ ಮನಗಾಣೆಕ್ಕು. ಜೀವಜಂತುಗಳಲ್ಲಿ ತನ್ನನ್ನೇ ಕಾಂಬವಂಗೆ ತಾನೇ ಅದಾಗಿಂಡಿಪ್ಪದು ಅನುಭವಕ್ಕೆ ಬತ್ತು. ಇದು ಧ್ಯಾನಸ್ಥಿತಿಯ ಮೂರ್ಧನ್ಯಾವಸ್ಥೆ. ಹೀಂಗಿಪ್ಪವ° ಇನ್ನೊಬ್ಬನತ್ರೆ ದ್ವೇಷ ಮಾಡಿಗೊಳ°. ಸಂಶಯಕ್ಕೆ (ಪರಮಾರ್ಥದ ಬಗೆಗೆ) ತುತ್ತಾವುತ್ತನಿಲ್ಲೆ ಹೇಳ್ತ ಇನ್ನೊಂದು ವ್ಯಾಖ್ಯಾನವೂ ಇದ್ದು.
ಗೀತ
ಅನಿತರೊಳಗೊಂದನ್ನು
ಅನಿಬರೊಳಗೋರ್ವನನು
ತೋರಿಸುತ್ತ ಮಾಯೆಯನು ನೀ ತೊಡೆದೆಯೈ
ನೋವು ನಲಿವಿನ ಬಾಳ್ವೆ ಹದವಾಗಿ ಬೆರೆಸಿಟ್ಟು
ಎನಗೆ ಊಡಿಸಿದವನು ನೀನಲ್ಲವೇ
ನಿನ್ನದೊಂದು ಒಲುಮೆಯಲಿ ಎಲ್ಲವ ಗೆಲ್ಲುವ ಛಲವ
ಎನಗಿತ್ತು ನಡೆಯಿಸಿದವನು ನೀನಲ್ಲವೇ
~~~

One thought on “ಈಶಾವಾಸ್ಯೋಪನಿಷತ್ತು – ಶ್ಲೋಕ ಆರು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×