ಎನ್ನ ಮಗ ಹತ್ತನೇ ಕ್ಲಾಸಿಲಿ ಓದ್ತಾ ಇದ್ದ°. ಮೊಬೈಲ್ಲಿ ಫೇಸ್ ಬುಕ್ ಲಿ ಅವನ ಸಹಪಾಟಿಗಳತ್ತರೆ ಮಾತಾಡ್ತಾ ಇರ್ತ°. ಒಳ್ಳೆ ಸಾತ್ವಿಕ ಮಾಣಿ ,ಆದರೂ ಆವ ಆರತ್ತರೆ ಎಂತ ಮಾತಾಡ್ತಾ ಹೇಳುದರ ಗಮನಿಸುತ್ತಾ ಇರ್ತೆ,ಅದು ಎನ್ನ ಜವಾಬ್ದಾರಿ ಕೂಡಾ ಅನ್ನೇ!ಹಾಂಗೆ ಓ ಮೊನ್ನೆ ಒಂದು ದಿನ ಅವನ ಮೋರೆ ಪುಸ್ತಕ (ಫೇಸ್ ಬುಕ್ ) ತೆಗದು ಆರತ್ತರೆ ಎಂತ ಮಾತಾಡಿದ್ದ°?,ಎಂತ ಮಾಡಿದ್ದ°? ಹೇಳಿ ನೋಡ್ತಾ ಇತ್ತಿದೆ,ಅವನ ಗೆಳೆಯನೊಟ್ಟಿನ್ಗೆ ಅದು ಇದು ಮಾತಾಡಿದ್ದ° .ಅದರಲ್ಲಿ ಒಬ್ಬನ ಹತ್ತರೆ ನಮ್ಮ ಭಾಷೆಲಿ ಮಾತಾಡಿದ್ದ° .ಆರನ್ನೊ ಅವು ಇಬ್ರು ದೂರಿದ್ದವು !ಅದರಲ್ಲಿ ಆರೋ ಒಬ್ಬ ಇವಕ್ಕಿಬ್ರಿಂಗೆ ಎಂಥದೋ ಬೇಕಾದ ಸಹಾಯ ಮಾಡಿದ್ದಾ° ಇಲ್ಲೆ .ಅದರ ಎನ್ನ ಮಗ° “ಅವ° ಎಂತಕ್ಕೂ ಆಗ ಮಾರಾಯ ಅವನ ನಂಬಿರೆ ನಾವು ಗುಂಡಿಗೆ ಬೀಳುಗು.ಅದರ ನಾವು ತಂದು ಸುರುಮಾಡುವ ರಜೆ ಕಳುದು ಶಾಲೆಗೆ ಬಪ್ಪಗ ತೆಕ್ಕೊಂಡೆ ಬಪ್ಪ°(ಎಂಥದೋ ಶಾಲೆಯ ಪ್ರಾಜೆಕ್ಟ್ ವರ್ಕ್ ಗೆ ಬೇಕಾದ ಸಾಮಾನು ) ” ಹೇಳಿ ಬರದ್ದ°; ಮಗನ ಗೆಳೆಯ ಆಚ ಕಡೆಂದ ಅಂತರ ಜಾಲದ ಮೂಲಕ ” ಅಪ್ಪು ಮಾರಾಯ ಅವ° ದೊಡ್ಡ ಮುಂಡೆಂಗಿ ಕುಜುವೆ,ಅವ° ಉಪಕಾರ ಮಾಡ° ” ಹೇಳಿ ಬರದ್ದ°.
ಎನಗೆ ಇದರ ಓದಿ ಭಾರಿ ಕೊಷಿ ಆತು!! ನಮ್ಮ ಭಾಷೆಲಿ ಎಷ್ಟು ಚಂದದ ಪದಂಗಳ ಬಳಕೆ ಇದ್ದು ಹೇಳಿ .ಒಟ್ಟಿಂಗೆ ಈಗಣ ಮಕ್ಕೊಗೂ ಇಂತ ವಿಶಿಷ್ಟ ಪದಂಗಳ ಬಳಕೆ ಗೊಂತಿದ್ದಲ್ಲದಾ ಹೇಳಿ!!
ಕುಜುವೆ ಹೇಳಿದರೆ ಹಲಸಿನ ಕಾಯಿ. ಬಹು ಉಪಯೋಗಿ ತರಕಾರಿ ಅದು .ಅದರ ಬೆಂದಿ ಮಾಡುಲೆ, ಆವುತ್ತು ಬೇಳೆಯನ್ನೂ ಕೊದಿಲಿನ್ಗೆ ಹಾಕುತ್ತವು ,ಇನ್ನು ರೆಚ್ಚೆ, ಹೊದುಂಕುಳು,ಹೂಸರೆ ಎಲ್ಲವೂ ದನಗೊಕ್ಕೆ ತಿಮ್ಬಲೆ ಆವುತ್ತು .ಅದರ ಎಲ್ಲ ಭಾಗಂಗಳುದೆ ಉಪಕಾರಿ .ಆದರೆ ಮುಂಡೆಂಗಿ ಕುಜುವೆ ಇದಕ್ಕೆ ತದ್ವಿರುದ್ಧ .ಹಸೆ ಮಡವಲೆ ಉಪಯೋಗಿಸುವ ಮುಂಡೆಂಗಿ ಸೆಸಿ /ಬಲ್ಲೆಲಿ ಎಷ್ಟುದೆ ಕಾಯಿ ಬಿಡ್ತು. ಇದು ನೋಡುಲೆ ಕುಜುವೆ (ಎಳತ್ತು ಹಲಸಿನ ಕಾಯಿ )ಹಾಂಗೆ ಕಾಣ್ತು .ಹಾಂಗಾಗಿ ಇದರ ಮುಂಡೆಂಗಿ ಕುಜುವೆ ಹೇಳಿ ಹೇಳ್ತವು .ಮುಂದೆಂಗಿ ಒಲಿ ಉಪಯುಕ್ತ ವಸ್ತು ಅದರಂದ ಹಸೆಯ ನೆಯ್ಕೊಂಡು ಇತ್ತಿದವು.ಬಾಕುಡ ಸಮುದಾಯದ ಹೆಂಗಸರಿಂಗೆ ಇದು ಕುಲ ಕಸುಬು ಆಗಿತ್ತು ;ಆದರೆ ಅದರ ಕಾಯಿ ಇದ್ದಲ್ಲದಾ, ಇದು ನಿರರ್ಥಕ ವಸ್ತು .ಇದರಲ್ಲಿ ಸೊಳೆ ,ಬೇಳೆ ಯಾವದೂ ಇಲ್ಲೆ .ಇದರ ದನಗ ಕೂಡ ತಿನ್ತವಿಲ್ಲೆ .ಇದರಲ್ಲಿ ಬೀಜ ಇಲ್ಲೆ ,ಹಾಂಗಾಗಿ ಇನ್ನೊಂದು ಮುಂಡೆಂಗಿ ಸೆಸಿ ಕೂಡಾ ಇದರಲ್ಲಿ ಹುಟ್ಟುತ್ತಿಲ್ಲೆ. ಹಾಂಗಾಗಿ ಇದರ ಹುಟ್ಟೇ ವ್ಯರ್ಥ .ಅದರಂದ ಆರಿನ್ಗೂ ಒಂದಿನಿತೂ ಉಪಯೋಗ ಆಗ .ಆರೋಬ್ಬಂಗೂ ಏನೊಂದೂ ಉಪಕಾರ ಮಾಡದ್ದೋರಿನ್ಗೆ ನಮ್ಮ ಭಾಷೆಲಿ “ ಅವ ದೊಡ್ಡ ಮುಂಡೆಂಗಿ ಕುಜುವೆ” ಹೇಳಿ ಹೇಳ್ತವು .ಎಷ್ಟು ಚೆಂದದ ಹೋಲಿಕೆ ,ಉಪಮೆ ಅಲ್ಲದ ? ಇದು ಆಡು ಮಾತಿಲಿ ರೂಪಕವಾಗಿ ಬತ್ತು .ಇದೊಂದು ಅತ್ಯಂತ ನೈಜವಾದ ಮಾತಿನ ಬಳಕೆ ,ಇಂತ ತುಂಬಾ ಚೆಂದದ ಪದಂಗ ಎಂಗಳ ಭಾಷೆಲಿ ಇದ್ದು ಇತ್ತೀಚೆಗಂಗೆ ಇಂತ ಪದಂಗಳ ಬದಲಿನ್ಗೆ ಆವ° ಯೂಸ್ಲೆಸ್ ಇತ್ಯಾದಿ ಇಂಗ್ಲಿಷ್ ಪದಂಗ ಬತ್ತಾ ಇದ್ದು ಹೇಳುದು ರಜ್ಜ ಬೇಜಾರಿನ ವಿಷಯ !ಯೂಸ್ಲೆಸ್ ಹೇಳುವ ಪದ ಮುಂಡೆಂಗಿ ಕುಜುವೆಯಷ್ಟು ಗಟ್ಟಿ ಪದ ಅಲ್ಲ !ಅಲ್ಲದ ?ನಿಂಗಳ ಅಭಿಪ್ರಾಯ ತಿಳಿಸಿ ,
- ಗಿಳಿ ಬಾಗಿಲಿಂದ -ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹೆರಟರೆ ಅಕ್ಕಾ ? - September 11, 2014
- ಗಿಳಿ ಬಾಗಿಲಿಂದ -ಕಣ್ಣು ನೆತ್ತಿಗೆ ಹಾರುದು - August 20, 2014
- ಗಿಳಿ ಬಾಗಿಲಿಂದ -ಗೆಲ್ಲು ಇಲ್ಲದ್ದರೆ ಎಲೆ ಆದರೂ ಇರಲಿ - July 30, 2014
ಮುಂಡಾಂಗಿ ಬಲ್ಲೆ ಗೊಂತಿದ್ದು.ಆದರೆ ಕುಜುವೆ ಗೊಂತಿತ್ತಿದ್ದಿಲ್ಲೆ.ಸಣ್ಣ ಮಕ್ಕೊಗೆ ಗ್ರಾಣಿ(ಬಾಲಗ್ರಹ)ಗೆ(ತುಳುವಿಲ್ಲಿ ಗ್ರಾಣಿ,ಕಿರಾಣಿ)ಕುಜುವೆ ಹಾಕಿ ಬೇಶಿದ ಹೆಜ್ಜೆಯ ಕೊಡುತ್ತವು ಹೇಳುವ ಮಾಹಿತಿ ಗೊಂತಾತು.
keladda shabda
ಆನು ಇದುವರೆಗೆ ಕೇಳಿದ್ದಿಲೆ. ಹೊಸ ಪದ ಪ್ರಯೋಗ ತಿಳಿಸಿದ್ದಕ್ಕೆ ಧನ್ಯವಾದ ಅಕ್ಕ.
ಹೆಚ್ಚಿನಂಶ ಈ ಗಿಡ ಹಾಂಗೂ ಈ ಮಾತು ಕಾಸರಗೋಡು ಕಡೆ ಇಲ್ಲೆ. ಧನ್ಯವಾದ. ಹರೇ ರಾಮ.
ಕೇಳದ್ದ ಒಂದು ಹೊಸ ಶಬ್ದ ಪ್ರಯೋಗ ಕಂಡು ಕೊಶೀ ಆತು.
ಮುಂಡೆಂಗಿ ಕುಜುವೆ !! 😀
ಆಗಲಿ.. ಹಸೆ ಮಡವಲಾರು ಸೆಸಿಗೊ ಇರಳಿ ಅಲ್ಲದ
ಶುರುವಿ೦ಗೆ ನಮ್ಮ ಕ೦ಡೇ ಹೀ೦ಗೆ ಬರದ್ದವ
ಹೇಳಿ ಯೋಚನೆ ಬ೦ತು ಇರಲಿ .
ಬೈಲ ಬೆಳ್ಳಕ್ಕೆ ಬ೦ದ ತೇ೦ಗಾಯಿ ಹಿಡವಲೆ/ನೋಡಲೇ ಕೂದವ೦ಗೆ,
ಹೀ೦ಗೆ ಪಾ೦ಬಿಕೊ೦ಡು ಬ೦ದರೂ ಸು ಮ್ಮ ನೆ ಕೂಪಲೆ ಆವುತ್ತಾ ?
ಖುಶಿ ಪಡಲೇ ಬೇಕು.