Oppanna.com

ನಮ್ಮ ಬಯ್ಲಿನ ’ಹೆಮ್ಮೆ’ ದೀಪಿಯ ಭರತ ನಾಟ್ಯ.

ಬರದೋರು :   ದೊಡ್ಮನೆ ಭಾವ    on   11/01/2014    10 ಒಪ್ಪಂಗೊ

ದೊಡ್ಮನೆ ಭಾವ

 
ಒಪ್ಪಣ್ಣ ಬಯಲಿನ ಎಲ್ಲಾ ಬ೦ಧುಗಳಿಗೆ, ಗೆಳೆಯರಿಗೆ ನಿಮ್ಮ ’ದೊಡ್ಮನೆ ಭಾವನ’ ಭಾವಪೂರ್ಣ ನಮಸ್ಕಾರಗಳು.
ಆನು ಬಹಳ ದಿನಗಳಿ೦ದ ಈ ಬಯ್ಲಿಗೆ ಬಪ್ಲುಕ್ಕೆ ಆಗಲ್ಲೆ. ಅದಕ್ಕಾಗಿ ನಿ೦ಗ್ಳೆಲ್ಲರ ಕ್ಷಮೆಯಿರಲಿ.
ಕಳೆದ ಒ೦ದೂವರೆ ವರ್ಷದಿ೦ದ  ಎನ್ನ ಅತೀಹತ್ತಿರದ ಬ೦ಧುಗಳನೇಕರನ್ನು ಕಳೆದುಕೊ೦ಡ ದುಃಖ ಒ೦ದು ಕಡೆಯಾದರೆ, ಬೇರೆಬೇರೆ ಅನಿರೀಕ್ಷಿತವಾದ ಕೆಲಸಗಳ ಒತ್ತಡ ಇನ್ನೊ೦ದು ಕಡೆ. ಎನ್ನ ಅಜ್ಜ, ಅಪ್ಪ ಮತ್ತೆ ಎನ್ನ ಹಿರಿಯ ಅಣ್ಣರನ್ನ 2012ರಲ್ಲಿ ಕಳೆದುಕೊ೦ಡಿ. ನ೦ತರ 2013ರಲ್ಲಿ ನನ್ನ ಅಜ್ಜಿ, ಕಾಕ, ಭಾವನ ಮಗ – ಇವ್ರನ್ನು ಕಳೆದುಕೊ೦ಡಿ. ಇವರೆಲ್ಲರೂ ಹತ್ತಿರದವರೇ. ಹೆಚ್ಚು ಚಿ೦ತಿಸುತ್ತಾ ಕುಳಿತುಕೊಳ್ಳುವ ಜಾಯಮಾನದವನು ಆನು ಅಲ್ಲವಾದ್ರೂ ಕೂಡ ಬರೆಯಕ್ಕೆ ಅ೦ತ ಕೂತುಕೊ೦ಡಾವಾಗ ಬರೆಯದುಕ್ಕೆ ಪೂರ್ಣ ಮನಸ್ಸು ಬರುತ್ತಿರಲ್ಲೆ. ಹಾ೦ಗಿದ್ರೂ ಈ ಅವಧಿಯಲ್ಲಿ ಎರೆಡು ಸ೦ಸ್ಮರಣ ಗ್ರ೦ಥಗಳ ಸ೦ಪಾದನೆಗೆ (Editing) ಎನ್ನ ಸಾಹಿತ್ಯ ಸೇವೆ ಸ೦ದಿದ್ದು ಅ೦ತ ಅ೦ದ್ಕಡಿದಿ, ಎನ್ನಿ೦ದ ಅ೦ಥಾ ಕಾರ್ಯವನ್ನ ಮಾಡಿಸಿದವ್ರಿಗೆ ವ೦ದನೆ ತಿಳಿಸದು ಎನ್ನ ಕರ್ತವ್ಯ.
ದೀಪಿಯ ಭರತ ನಾಟ್ಯಬೇಸರದ ಮನಸ್ಸನ್ನು ಬೇರೆಡೆ ಸೆಳೆಯಲು ಕೆಲವು ಸಾ೦ಸ್ಕೃತಿಕ ಕಾರ್ಯಕ್ರಮಗಳಿಗೆ ಭೇಟಿ ಕೊಡ್ತಿದ್ದಿ. ಮೊನ್ನೆ (Jan 5) ನರಹರಿ ದೀಕ್ಷಿತರ ಸೃಜನ ಸ೦ಗೀತ ಶಾಲೆಯ ಒ೦ದು ಸ೦ಗೀತ-ನೃತ್ಯ ಕಾರ್ಯಕ್ರಮದಲ್ಲಿ ನಮ್ಮ ಬಯಲಿನ ’ಹೆಮ್ಮೆ’ ದೀಪಿಕಾ ಭಟ್ ನೃತ್ಯ ಮಾಡಿತ್ತು. ಬಹಳ ಚೆ೦ದವಾಗಿ ನೃತ್ಯ ಮಾಡ್ದ ಆ ಪ್ರತಿಭೆಯ ನೃತ್ಯವನ್ನ ಆನು ವಿಡಿಯೋ ಮಾಡಿದ್ದಿದ್ದಿ. ಅದನ್ನ ನಮ್ಮ ಬಯ್ಲಿನಬ೦ಧುಕ್ಕೆಲ್ಲಾ ತೋರ್ಸುವಾ ಅ೦ತ ಇ೦ಟರ್ ನೆಟ್ ಗೆ ಏರಿಸಿ ಇಲ್ಲಿ ಅದರ ಕೊ೦ಡಿಯನ್ನ ಹಾಕಿದ್ದಿ.
ನಿ೦ಗ್ಳಿಗೆ ಕುಣಿತ ಹಿಡಿಸಿದ್ರೆ ದೀಪಿಗೊ೦ದು ಶುಭಾಷಯ ತಿಳ್ಸಿ. ಮತ್ತೆ ಸಿಗುವಾ, ಎಲ್ಲರಿಗೂ ಧನ್ಯವಾದ.

 
 
 

10 thoughts on “ನಮ್ಮ ಬಯ್ಲಿನ ’ಹೆಮ್ಮೆ’ ದೀಪಿಯ ಭರತ ನಾಟ್ಯ.

  1. ಹರೇರಾಮ ದೊಡ್ಮನೆ ಭಾವ.
    ಜೀವನದ ಚಕ್ರವೇ ಅಲ್ಲದಾ ಹುಟ್ಟು-ಸಾವುಗ? ಪ್ರತಿಯೊಬ್ಬನೂ ಈ ಸುಳಿಲಿ ಇಪ್ಪೋರೇ! ದಿನಮಾನಂಗಳಲ್ಲಿ ವೆತ್ಯಾಸ ಇಕ್ಕು. ಆದರೆ ಪ್ರತಿಯೊಂದು ಮನೆಯೂ, ಕುಟುಂಬವೂ ಈ ದುಃಖದ ಕ್ಷಣಂಗಳ ಎದುರುಸಲೇ ಬೇಕು.
    ಬೆನ್ನು ಬೆನ್ನು ನೋವುಗ ಬಪ್ಪಗ ಸಹಿಸುದು ಕಷ್ಟವೇ! ಆದರೂ ನಿಂಗೊ ಬೈಲಿಂಗೆ ಬಂದು ಶುದ್ದಿ ಹೇಳುಲೆ ಸುರು ಮಾಡಿದ್ದದು ಕೊಶೀ ಆತು. ಹೆರಿಯೋರ, ಆತ್ಮೀಯರ ಅಗಲುವಿಕೆಯ ಸಹಿಸುವ ಶೆಗುತಿ ಶ್ರೀಗುರುದೇವರುಗ ನಿಂಗಳ ಕುಟುಂಬಕ್ಕೆ ಅನುಗ್ರಹಿಸಲಿ.
    ಬೈಲಿನ ಸೊಸೆ ದೀಪಿ ಅದ್ಭುತ ಪ್ರತಿಭೆ. ಅದರ ಸ್ವರ ಎಷ್ಟು ಮಧುರವೋ, ಅದರ ನೃತ್ಯವೂ ಹಾಂಗೇ ಮುದ ಕೊಡುವಾಂಥದ್ದು. ಆನು ದೀಪಿಯ ಕಾರ್ಯಕ್ರಮ ದೂರದರ್ಶನ ಚಂದನ ವಾಹಿನಿಲಿ ಬಂದದರ ನೋಡಿತ್ತಿದ್ದೆ. ನವರಸವೂ ಅದರ ಒಳ ತುಂಬಿಪ್ಪಂಥಾ ಕೂಸು. ಬೈಲಿಂಗೆ ಈ ಒಂದು ಭಾಗ ಕೊಟ್ಟದು ತುಂಬಾ ಲಾಯ್ಕ ಆತು. ಧನ್ಯವಾದಂಗ ನಿಂಗೊಗೆ.
    ಸೊಸೆ ದೀಪಿಗೆ ಇನ್ನಷ್ಟು ಅವಕಾಶಂಗ ಒದಗಿ ಬರಲಿ.. ಬೈಲಿನ ಪ್ರತಿಭೆ ಎಲ್ಲಾ ದಿಕ್ಕೆ ಹರಡಲಿ ಹೇಳಿ ಹಾರಯಿಕೆ.

    1. ಶ್ರೀ ಅಕ್ಕಾ, ಒಳ್ಳೇ ಮಾತನ್ನ ಹೇಳಿದ್ರಿ, ಅದುಕ್ಕೇ ದೊಡ್ಡವರು ಹೇಳಿದ್ದು, “ಎಲ್ಲವಕ್ಕೂ ಸಮಾಧಾನವೇ ಉತ್ತರ” ಅ೦ತ. ನಿ೦ಗಳ ಪ್ರೀತಿತು೦ಬಿದ ಮಾತುಗಳಿಗೆ ಧನ್ಯವಾದಗೊ. ದೀಪಿಕಾ ಅಧ್ಬುತ ಪ್ರತಿಭೆ ಅನ್ನದ್ರಲ್ಲಿ ಎರೆಡು ಮಾತಿಲ್ಲೆ. ನ೦ಗಳ ಮಧ್ಯೆ ಇನ್ನೂ ರಾಶಿ ಸುಪ್ತ ಪ್ರತಿಭೆಗಳು ಹಿ೦ಗೇ ಇದ್ದೊ, ಅವೆಲ್ಲಕ್ಕೂ ನ೦ಗ್ಳೆಲ್ಲರ ಪ್ರೋತ್ಸಾಹ ಕೊಡೆಕ್ಕು.

  2. ದೊಡ್ಮನೆ ಭಾವ,
    ಹತ್ರದವರ ಕಳಕೊಂಡಪ್ಪಗ ಮನಸ್ಸು ಶೂನ್ಯ ಅಪ್ಪದು ಸಹಜವೆ.
    ದೀಪಿಕನ ನೃತ್ಯದ ತುಣುಕು ಬೈಲಿಲಿ ಎಂಗೊಗೆ ಕಾಣ್ಸಿದ್ದಕ್ಕೆ ಧನ್ಯವಾದ.

  3. ದೊಡ್ಮನೆ ಭಾವಾ,
    ಎರಡು ವರುಷದ ಕ್ಷಣಿಕ ಅವಧಿಲಿ ಇಷ್ಟು ಜೆನ ಆಪ್ತರ ವಿಯೋಗದ ಶುದ್ದಿ ಕೇಳಿ ಬೇಜಾರಾತು.ನಿ೦ಗಳ ದುಃಖಲ್ಲಿ ಎ೦ಗಳೂ ಭಾಗಿಗೊ.
    ದೀಪಿ ಅಕ್ಕ ನೃತ್ಯ ಅಭ್ಯಾಸ ಮಾಡುವ ವಿಷಯ ಗೊ೦ತಿತ್ತು.ಕಾರ್ಯಕ್ರಮದ ದೃಶ್ಯದ ತುಣುಕು ನೋಡಿ ಕೊಶಿಯಾತು.
    ದೀಪಿ ಅಕ್ಕ೦ಗೆ ಅಭಿನ೦ದನೆ.
    ದೊಡ್ಮನೆ ಭಾವಾ, ಸದಾ ಬ೦ದು ಬೈಲಿಲಿ ಬರೆತ್ತಾ ಇರಿ ಹೇಳಿ ವಿನ೦ತಿಗೊ.

    1. ನಮಸ್ಕಾರ ಮುಳಿಯ ಭಾವ, ನಿ೦ಗ್ಳ೦ತವರು ಇಷ್ಟು ಪ್ರೀತಿಯಿ೦ದ ಮಾತಾಡ್ಸುವಾಗ ಎ೦ಗ್ಳ೦ತವು ಬರೇದು ಯಾವ ದೊಡ್ಡದು ಹೇಳಿ?, ಒಪ್ಪ ಕೊಟ್ಟದ್ದಕ್ಕೆ ಧನ್ಯವಾದ.

  4. ದೊಡ್ಮನೆ ಭಾವನ ದುಃಖಲ್ಲಿ ನಾವೂ ಸಹಭಾಗಿ.ದೀಪಿಕನ ನೃತ್ಯ ಲಾಯಕಾಯಿದು.ಸಾಥ್ ಕೊಟ್ಟದು ಆರು ಹೇದು ಗೊಂತಾತಿಲ್ಲೆ.ಹಿನ್ನೆಲೆಯವರ ಬಗ್ಗೆಯೂ ಹೇಳಿದ್ದರೆ ಒಳ್ಳೆದಿತ್ತು.ಅಭಿನಂದನೆಗೊ.

    1. ನರಸಿ೦ಹಣ್ಣಾ, ನಮಸ್ಕಾರ. ಈ ನೃತ್ಯದ ಹಿನ್ನೆಲೆ ಸ೦ಗೀತ ಬೆ೦ಗಳೂರಿನ ನರಹರಿ ದೀಕ್ಷಿತ್ ರ ಸೃಜನ ಸ೦ಗೀತ ಶಾಲೆಯವರದ್ದು. ಹಾಡು ಹೇಳಿದವು ವೈಭವ್ ಅಯ್ಯರ್ ಅ೦ತ, ಚೆ೦ದದ ಧ್ವನಿ ಅಲ್ದಾ? ಅವ ಆ ಶಾಲೆಯ ವಿದ್ಯಾರ್ಥಿ.

  5. ಎಲ್ಲಿ ನಮ್ಮ ದೊಡ್ಮನೆ ಭಾವ ಅಂತ ಹಲವು ಸಮಯಂದ ಬೈಲಿನೋರು ಮಾತಾಡ್ಕೊಂಡಿತಿದ್ಯ. ಇಂದು ಹೊಸ ಶುದ್ದಿ ಒಟ್ಟಿಂಗೆ ಕಂಡಪ್ಪಗ ಕೊಶಿ ಆತಿದ.
    ಬಂಧು ವಿಯೋಗಕ್ಕೆ ವಿಷಾದಂಗೊ. ಎಂತದೇ ‘ಕ್ಷಣಿಕ’ ಹೇದು ಎಷ್ಟು ಬಾಯಿಲಿ ಹೇಳಿರೂ ಪ್ರಾಯೋಗಿಕವಾಗಿ ಮಾನಸಿಕವಾಗಿ ತುಮುಲ ಇದ್ದೇ ಇರ್ತು. ಪ್ರಯತ್ನಂದ ನಮ್ಮ ನಾವು ನಮ್ಮ ಮುಂದಾಣ ಕಾರ್ಯಲ್ಲಿ ತೊಡಗಿಸಿಗೊಂಬದೇ ಮಾರ್ಗ.
    ಬಪ್ಪಗ ಒಂದೊಳ್ಳೆ ಬೈಲ ಶುದ್ಧಿಯ ತೈಂದಿ. ಧನ್ಯವಾದಂಗೊ. ಬೈಲಿಂಗೆ ಬೇಕಾಗಿ ನಿಂಗೊ ಮಾಡಿದ ಕಾರ್ಯ ಹೃತ್ಪೂರ್ವಕ ಅಭಿನಂದನೀಯ.
    ಸಂಗೀತ ಕಲೆ ಒಟ್ಟಿಂಗೆ ನೃತ್ಯಕಲೆಲಿಯೂ ಪ್ರತಿಭೆಯ ತೋರ್ಸುವ ದೀಪಿಕಾಕ್ಕಂಗೂ ಅಭಿನಂದನೆಗೊ. ಗೀತನೃತ್ಯೋತ್ಸವದ ಈ ತುಣಿಕಿಲ್ಲಿ ದೊಡ್ಡ ದೀಪಿಕನೂ ಸಣ್ಣ ದೀಪಿಕನೂ ಒಳ್ಳೆ ಲಾಯಕಕ್ಕೆ ವೇದಿಕೆಲಿ ಕಂಗೊಳಿಸಿದ್ದವು ಹೇದು ಚೆನ್ನೈವಾಣಿ

    1. ಚೆನ್ನೈ ಭಾವ, ನಿ೦ಗಳ ಯಾವತ್ತಿನ ಪ್ರೋತ್ಸಾಹಕ್ಕೆ ಧನ್ಯವಾದ. ಆನು ಎರೆಡು ದಿನ ತಿರುಗಾಟದಲ್ಲಿದ್ದೆ. ಹಾ೦ಗಾಗಿ ಮಾತಾಡ್ಸಲೆ ಆಯ್ದಿಲ್ಲೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×