Oppanna.com

ಈಶಾವಾಸ್ಯೋಪನಿಷತ್ತು – ಶ್ಲೋಕ ಹನ್ನೊಂದು

ಬರದೋರು :   ಬೊಳುಂಬು ಕೃಷ್ಣಭಾವ°    on   27/01/2014    1 ಒಪ್ಪಂಗೊ

ಈಶಾವಾಸ್ಯೋಪನಿಷತ್ತು – ಶ್ಲೋಕ ಹನ್ನೊಂದು

ವಿದ್ಯಾಂ ಚಾವಿದ್ಯಾಂ ಚ ಯಸ್ತದ್ವೇದೋಭಯಗ್‍ಂ ಸಹ |
ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾSಮೃತಮಶ್ನುತೇ ||೧೧||

ಕರ್ಮ ಜ್ಞಾನಗಳೆರಡ ಜತೆ ಜತೆಯಾಗಿ ಯಾವನು ತಿಳಿವನು
ಮೃತ್ಯುಜಯಿಪನು ಕರ್ಮದಿಂದಲೆ ಜ್ಞಾನದಿಂದಲಿ ಅಮೃತವು ||೧೧||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.

ಕರ್ಮವನ್ನೂ ಜ್ಞಾನವನ್ನೂ ಒಟ್ಟೊಟ್ಟಿಂಗೆ ಅರ್ಥ ಮಾಡಿಗೊಂಬವಂಗೆ ಕರ್ಮಂದ ಮೃತ್ಯುವಿನ ದಾಂಟಿ ಜ್ಞಾನಂದ ಅಮೃತತ್ವವ ಪಡವಲೂ ಎಡಿತ್ತು. ಕರ್ಮಜ್ಞಾನ ಸಮನ್ವಯದ ಚರ್ಚೆ ಇಲ್ಲಿದ್ದು. ಈಶಾವಾಸ್ಯೋಪನಿಷತ್ತಿನ ಬಗೆಗೆ ಡಿ.ವಿ.ಜಿ. ಅವರ ವ್ಯಾಖ್ಯಾನ ಇದ್ದು. ಎಲ್ಲಾ ಮಂತ್ರಂಗಳನ್ನೂ ವಿಮರ್ಶೆ ಮಾಡಿದ ವಿವರವಾದ ಸಂಗ್ರಹ ಅಲ್ಲಿ ಸಿಕ್ಕುತ್ತು. ತಾತ್ಪರ್ಯ, ಛಾಯಾಪದ್ಯದೊಟ್ಟಿಂಗೆ ಬೇಕಾದಲ್ಲಿ ಟಿಪ್ಪಣಿಗಳನ್ನೂ ಕೊಟ್ಟಿದವು. ಆಸಕ್ತಿ ಇಪ್ಪವು ಅದರ ನೋಡುಲಕ್ಕು.
ಜಗತ್ತೊಂದೇ ಶ್ರೇಷ್ಠವಾದುದಲ್ಲ, ಆದರೆ ಅದು ತುಚ್ಛವೂ ಅಲ್ಲ. ನಮ್ಮ ಆತ್ಮೋದ್ಧಾರದ ದೃಷ್ಟಿಲಿ ಜಗತ್ತಿಂದ ಪ್ರಯೋಜನವೂ ಇದ್ದು. ಕರ್ಮವೂ ಜ್ಞಾನವೂ ಪರಸ್ಪರ ಸಹಕಾರಿಗೊ. ಕರ್ಮ ಜ್ಞಾನಕ್ಕೆ ಸೋಪಾನ, ಜ್ಞಾನ ಕರ್ಮಕ್ಕೆ ಫಲ ಹೇಳ್ತ ದೃಷ್ಟಿ ಋಷಿಗಳದ್ದು. ಹಾಂಗಾಗಿ ವಿದ್ಯೆಯೂ ಅವಿದ್ಯೆಯೂ ಪರಸ್ಪರ ಪೂರಕವಾಗಿಪ್ಪದು ಹೇಳು ಗೊಂತಾವುತ್ತು.
ಪರತತ್ತ್ವವಾದ ಆ ಪರಮ ಪಾವನ ಚೈತನ್ಯವ ಅರುತಂಡು ನಾವು ಈ ಜಗತ್ತಿಲಿ ಬದುಕ್ಕಿ ಸಾಧಿಸೆಕ್ಕು. ಎಲ್ಲವನ್ನೂ ಒಳಗೊಂಡ ಜಗದೀಶ್ವರನಾದ ಪರಮ ಚೈತನ್ಯವ ಮನಸ್ಸಿಲಿ ಕಂಡಂಡು ಮಾಡುವ ಕರ್ಮಂಗೊವಕ್ಕೆ ಬಂಧನಂಗೊ ಇರುತ್ತಿಲ್ಲೆ. ತನ್ನ ಪಾಲಿನ ಕರ್ಮಂಗಳ ಏವೊತ್ತೂ ಮಾಡಿಗೊಂಡೇ ಇರೆಕ್ಕು. ಆ ಪರತತ್ತ್ವದ ಚೇತನ ಇಂದ್ರಿಯಂಗಳ ಮೀರುಸುತ್ತು. ಆ ಪರತತ್ತ್ವ ಸರ್ವಾಂತರ್ಯಾಮಿ ಆಗಿಂಡಿಪ್ಪದು. ಜೀವಜಂತುಗಳಲ್ಲಿ ತನ್ನನ್ನೇ ಕಾಂಬವಂಗೆ ತಾನೇ ಅದಾಗಿಂಡಿಪ್ಪದು ಅನುಭವಕ್ಕೆ ಬತ್ತು.  ಧ್ಯಾನಸ್ಥಿತಿಯ ಮೂರ್ಧನ್ಯಾವಸ್ಥೆಲಿ  ಸಕಲ ಜೀವಜಂತುಗಳಲ್ಲಿ ತನ್ನನ್ನೂ, ತನ್ನಲ್ಲಿ ಸಕಲ ಜೀವಜಂತುಗಳನ್ನೂ ಕಾಂಬಲೆ ಎಡಿತ್ತು. ಆ ಪರತತ್ತ್ವಕ್ಕೆ ಆದಿಯೋ ಅಂತ್ಯವೋ ಇಲ್ಲೆ. ಕರ್ಮವೂ ವಿದ್ಯೆಯೂ ಒಂದಕ್ಕೊಂದು ಪೂರಕವಾಗಿಂಡಿಪ್ಪದು. ತಾನು ಮಾಡುವ ಕರ್ಮಂಗಳ ಫಲಾಭಿಸಂಧಿ ಇಲ್ಲದ್ದೆ ಮಾಡಿಗೊಂಡು ಸಿಕ್ಕಲಿಪ್ಪ ಕರ್ಮಫಲದ ತೀರ್ಮಾನವ ಆ ಪರಮ ಚೈತನ್ಯಕ್ಕೆ ಅರ್ಪಿಸುವದು ಮುಕ್ತಿಮಾರ್ಗಲ್ಲಿ ವಿಜಯಕ್ಕೆ ಸೋಪಾನ.
ವಿದ್ಯೆಯೇ ಶ್ರೇಷ್ಠ ಹೇಳುವದು ಒಂದು ಮತ. ಕರ್ಮವೇ ಶ್ರೇಷ್ಠ ಹೇಳುವದು ಇನ್ನೊಂದು ಮತ. ಆದರೆ ಈ ಎರಡರ ಸಮನ್ವಯವೇ ಸರ್ವಸಮ್ಮತವಾದ ಜೀವನದ ಸೂತ್ರ. ಸಂಸಾರಿಗಳೂ ಸಾಧನೆಲಿ ನಿರತರಾಗಿ ಜ್ಞಾನಿಗಳಾಗಿ ಬದುಕ್ಕಿದ ಉದಾಹರಣೆಗೊ ನಮ್ಮ ಆರ್ಷ ಪರಂಪರೆಲಿ ಸಿಕ್ಕುತ್ತು.

ಅರಿತು ವಿದ್ಯೆಯ ಮೇಣ್ ಅವಿದ್ಯೆಯಾ ಪಥಯುಗವ
ಚರಿಸುವಂ ಜ್ಞಾನಕರ್ಮಗಳೆರಡನ್ ಅನುವಿಂ
ದುರಿತ ಮೃತ್ಯುಗಳ ಕರ್ಮದ ಪಾಕದಿಂ ಗೆಲಿದು
ಪರಮಾತ್ಮನಡರುವಂ ಜ್ಞಾನಬಲದಿಂ ||

~~~*~~~~

One thought on “ಈಶಾವಾಸ್ಯೋಪನಿಷತ್ತು – ಶ್ಲೋಕ ಹನ್ನೊಂದು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×