ಚುಟುಕಂಗೊ
ಇನ್ನೆಂತಬೇಕು?!
ಪೈಸೆಯೂ ಇದ್ದನ್ನೆ ಮೀಸೆಯೂ ಇದ್ದನ್ನೆ
ದೇಶ ಆಳಲೆ ಇನ್ನೆಂತಬೇಕು?!
ಮೋಸವೂ ಇದ್ದನ್ನೆ ದ್ವೇಷವೂ ಇದ್ದನ್ನೆ
ನಾಶ ಮಾಡಲೆ ಇನ್ನೆಂತಬೇಕು?! ||
ಹವಿಗನ್ನಡ
ಎಷ್ಟೊಂದು ಸೀವು ನಮ್ಮೀ ಹವಿಗನ್ನಡ
ಕನ್ನಡದ ಉಪಭಾಷೆ ಅದು ತಿರುಳ್ಗನ್ನಡ
ಹವೀಕರ ಮನೆಮಾತು ಈ ಹಳೆಗನ್ನಡ
ಎಂದಿಂಗು ಮರವಲಾಗ ನಮ್ಮ ಅಬ್ಬೆ ಭಾಷೆ ಕನ್ನಡ ||
ಫಲಸಿಕ್ಕುಗೊ?!
ತಳೆಯದ್ದರೆ ಗಂಧ ಪರಿಮ್ಮಳ ಬಕ್ಕೊ?!
ಹಿಂಡದ್ದರೆ ಕಬ್ಬಿಂದ ಹಾಲು ಬಕ್ಕೊ?!
ಕಿಚ್ಚಿಲಿ ಕಾಸಿ ಬಡಿಯದ್ದರೆ ಚಿನ್ನ ಹೊಳಗೊ?!
ಕಷ್ಟಪಟ್ಟು ಗೈಯ್ಯದ್ದರೆ ಫಲಸಿಕ್ಕುಗೊ?! ||
ಮಿತಿಬೇಕು
ಮಿತಿಬೇಕು ನಾವು ಆಡುವ ಮಾತಿಲಿ
ಅತಿಯಪ್ಪಲಾಗ ಪೈಸೆಯ ಖರ್ಚಿಲಿ
ಲೆಕ್ಕಂದ ಹೆಚ್ಚುಬೇಡ ನಮ್ಮ ಆಡಂಬರಲ್ಲಿ
ಎಲ್ಲಕ್ಕು ಮಿತಿಬೇಕು ನಮ್ಮ ಬದುಕ್ಕಿಲಿ ||
ಇದೂ ಬೇಕು
ಉದ್ದ ಇದ್ದರೆ ಸಾಕೊ ಬುದ್ಧಿಯೂ ಬೇಕು
ಚೆಂದ ಇದ್ದರೆ ಸಾಕೊ ಒಳ್ಳೆ ಗುಣವೂ ಬೇಕು
ತೋರ ಇದ್ದರೆ ಸಾಕೊ ತಕ್ಕ ಶಕ್ತಿಯೂ ಇರೆಕ್ಕು
ನಮ್ಮ ಮಾತಿಲಿ ನಡತೆಲಿ ವಿನಯ ಸೌಜನ್ಯ ತುಂಬಿರೆಕ್ಕು ||
ಶುದ್ಧ ಇರೆಕು
ಸಂಗೀತಗಾರಂಗೆ ತಾಳಲಯ ಶ್ರುತಿ ಶುದ್ಧ ಇರೆಕ್ಕು
ತಪಸ್ಸು ಮಾಡುವ ಸನ್ಯಾಸಿಗೆ ಮನಸ್ಸು ಶುದ್ಧ ಇರೆಕ್ಕು
ಆರೋಗ್ಯಲ್ಲಿ ಇರೆಕ್ಕಾರೆ ತಿಂಬ ಆಹಾರ ಶುದ್ಧ ಇರೆಕ್ಕು
ಸರಕಾರಿ ಕೆಲಸಗಾರಂಗೆ ಸದಾ ಕೈ ಶುದ್ಧ ಇರೆಕ್ಕು ||
**
- ಹಾಸ್ಯ ತರಂಗ - September 4, 2014
- ಗೆಣವತಿಗೆ ನಮನ - August 28, 2014
- ಸುಖ ಜೀವನದ ದಾರಿ - August 21, 2014
ಅನುಭವದ ಮಾತುಗಳ ಚುಟುಕಿಲಿಯೆ ಬರಗು
ಅನುಸರಿಸಿ ನೆಡವವಕೆ ದಾರಿ ತೋರುಸುಗು
ಅರ್ತಿಕಜೆ ಮಾವಯ್ಯ ಬೈಲಿ೦ಗೆ ಬ೦ದು ನಮ್ಮ ಸಾಹಿತ್ಯಕೃಷಿ ಸ೦ಪತ್ತಿನ ಹೆಚ್ಚುಸುತ್ತಾ ಇದ್ದವು ಹೇಳಿ ಭಾರೀ ಕೊಶಿ ಆಯಿದು.
ಹಾಂಗೊಂದು ಇದ್ದು ಹೇಳಿ ಗೊಂತಿದ್ದಣ್ಣ ರಘು ಮುಳಿಯ
ಅರ್ಥ ತುಂಬಿದ ಹಳ್ಳಿಹಾಡುಗೊ ಎಂದಿಂಗೂ ಅಳಿಯ
ಅರ್ಥ ಇಲ್ಲದ್ದ ಚೆಂದ ಇಲ್ಲದ್ದ ಪದ್ಯಂಗೊ ಬಹುಕಾಲ ಒಳಿಯ
ನಮ್ಮ ಜನಪದ ಸಂಸ್ಕೃತಿಯ ಈಗ ರಕ್ಷಣೆ ಮಾಡದ್ದೆ ಕಳಿಯ
ಇನ್ನೆಂತ ಬೇಕು?
ಇಂತ ಚುಟುಕಂಗೊ ಇನ್ನೂ ಬೇಕು!
ಲಾಯಿಕಾಯಿದು ಮಾವ.”ಶುದ್ಧ ಇರೆಕು” ಆಶಯ ಸತ್ಯ ಆಗಲಿ ಅಲ್ಲದೋ../
ಧನ್ಯವಾದಂಗೊ