Oppanna.com

ಓಟು ಬಂತದ ಓಟು!

ಬರದೋರು :   ಬಾಲಣ್ಣ    on   31/03/2014    8 ಒಪ್ಪಂಗೊ

ಬಾಲಣ್ಣ
Latest posts by ಬಾಲಣ್ಣ (see all)

ಓಟು  ಬಂತದ  ಓಟು!

 ಓಟು ಬಂದರೆ ಸಾಕು ಎಲ್ಲೊರಓಟು  ಬಂತದ  ಓಟು!
ನೋಟ ದಿಲ್ಲಿಯ  ಕಡೆಗೆ  ಮತ್ತಾ
ನೋಟು ತುಂಬುಗು ಕಿಸೆಗಳನೆ ಹಾರುಗದು ಬೀದಿಲೆಲ್ಲ |
ಸೀಟು ಹಿಡಿವಲೆ ಬೇಕು ತುಂಬಾ
ಸೂಟುಕೇಸಿನ ಒಳವೆ ತುಂಬುಸಿ
ಆಟ ಆಡುಗು ದೊಡ್ದ ಹೊಟ್ಟೆಯ ಮೇಗೆ ಕೈ ಮಡುಗಿ |೧|

 ಇಂದು ಆ ಕಡೆಲಿಪ್ಪದಾದರೆ
ಒಂದು ಕಾರಣ ಕೊಟ್ಟು  ಸುಮ್ಮನೆ
ನಿಂದೆ ಬೈಗಳು ಮಳೆಯೆ  ಸುರಿಗದ  ಧಾರೆ ಕಡಿಯದ್ದೆ|
ಬಿಂದು   ಬಿಂದಾಗಿಳಿಗು ಕಣ್ಣೀ-
ರೆಂದು ತಿಳಿಯೆಡಿ ಮೊಸಳೆ  ಜಾತಿಯ
ದೊಂದು ರೂಪವೊ !ನರಿಯು ಕೂಡಾ ಸೋಲುಗಿವರೆದುರು |೨|

 ಬಣ್ಣ ಬಣ್ಣದ ಮಾತು  ಆಡುಗು
ಸುಣ್ಣ ಗೋಡೆಲಿ  ಬಣ್ಣ ಬರಶುಗು
ನುಣ್ಣನೆಯ  ಮಾತಿಲಿಯೆ ಎಲ್ಲೊರ ಮರುಳು ಮಾಡುಸುಗು  |
” ಅಣ್ಣ , ಅಕ್ಕಾ “- ಹೇಳಿ  ಹೇಳುಗು
ಬಣ್ಣುಸುಗು ಹೊಗಳಿಕೆಯ ಹಾಕುಗು
ಸಣ್ಣ ವಿಷಯವ ಮೇರು ಪರ್ವತ  ಮಾಡಿ ತೋರುಸುಗು  |೩|

 ಅಡ್ದ ಬೀಳುಗು  ಮುಗಿಗು  ಕೈಗಳ
ದೊಡ್ದಕಗಲಿಸಿ  ಬಾಯಿಲಿಪ್ಪಾ
ಬಡ್ದು ಮೂವತ್ತೆರಡು ಹಲ್ಲುಗಳನ್ನು  ತೋರುಸುಗು|
ಮಡ್ಡಿ ಮಂಕರನೆಲ್ಲ  ಕೂರುಸಿ
ದುಡ್ಡು ಹಂಚುಗು  ಬೊಗಸೆ ತುಂಬಾ
ಹೆಡ್ದರಾಗೆಡಿ  ಓಟು ಕೊಡೆಕೆಲ್ಲರುದೆ  ಚೆಂದಕ್ಕೆ  |  ೪|

 ಒಪ್ಪ   ಕೆಲಸವ ಮಾಡೊ  ಮನಸಿನ
ಇಪ್ಪ  ಸಜ್ಜನ ರೊಬ್ಬರವರನೆ
ಒಪ್ಪ ಕೊಡಿ,ಓಟಾಕಿ ಅರುಸಿ  ಕಳುಸಿ ಕೇಂದ್ರಕ್ಕೆ |
ಬಪ್ಪ ತಿಂಗಳ ಒಂದು  ಶುಭ  ದಿನ
ಅಪ್ಪು,  ಅದೆ ಆ ಗುರುತು  ಮರೆಯೆಡಿ
ತಪ್ಪು ಬಾರದ್ದಿರಲಿ  ಎಲ್ಲೊರು ಮಾಡಿ ಮತದಾನ  |೫|

~~~~***~~~~~~

ವ್ಯಂಗ್ಯ ಚಿತ್ರ ಒದಗಿಸಿದ ಶ್ಯಾಮಣ್ಣಂಗೆ ಧನ್ಯವಾದಂಗೊ.

8 thoughts on “ಓಟು ಬಂತದ ಓಟು!

  1. Shyam mavana chitra pashtaydu..rajakarani gala varnane layka aagi bayindu padyalli 🙂

  2. ಪದ್ಯ-ಚಿತ್ರ ಎರಡೂ ರೈಸಿದ್ದು,ರುಚಿಯಾದ ಅವಿಲಿನ ಹಾ೦ಗೆ..
    ಬಾಲಣ್ಣ -ಶ್ಯಾಮಣ್ಣನ ಜತೆ ಬಲ ಇದ್ದನ್ನೆ.

  3. ಈ ಬಾರಿ ಒಪ್ಪಣ್ಣಾ ಕಾಣದ್ದರೆ, ಒ೦ದ್ ನೋಟ ನೋಡಿ ಬಪ್ಪದಾ ಹೇಳಿ.

  4. ಪದ್ಯವೂ ಚಿತ್ರವೂ ಲಾಯಿಕಾಯಿದು. ಶ್ಯಾಮಣ್ಣನ ಚಿತ್ರದ ಪೆನ್ಸಿಲು ಕಾಣೆ ಆಯಿದೋ ಹೇಳಿ ಜಾನ್ಸಿತ್ತಿದ್ದೆ !! ಇದ್ದನ್ನೆ …

  5. ಅಪ್ಪು,ಓಟು ಹಾಕೆಕ್ಕೆ. ಆದರೆ ಆರಿಂಗೆ..?
    ಈ ಚಿತ್ರ ನೋಡಿ ಬೂತಿಂಗೆ ಹೋದರೆ ಬೂತ ಕಂಡ ಹಾಂಗೆಯೇ ಅಕ್ಕೋದು.
    ಪದ್ಯ ಪಷ್ಟಾಯಿದು ಬಾಲಣ್ಣ.

  6. ಬಾಲಣ್ಣ ಶ್ಯಾಮಣ್ಣನ ಕಾಂಬಿನೇಶನಿಲ್ಲಿ ಬಂದ ವೋಟಿನ ವಿರಾಟ್ ರೂಪ ತುಂಬಾ ಚೆಂದಕೆ ಬಯಿಂದು.
    ಕಡೇಂಗೆ ಕೊಟ್ಟ ಉತ್ತಮ ಸಂದೇಶ ಎಲ್ಲೋರು ಅನುಸರಿಸೆಕಾದ್ದೆ.

  7. ದೊಡ್ದ ಹೊಟ್ಟೆಯ ಮೇಗೆ ಕೈ ಮಡುಗಿ – ಭೂಸುಧಾರಣೆ?!, ನರಿಯು ಕೂಡಾ ಸೋಲುಗಿವರೆದುರು – ನರವಂಚಕ?!, ಮೇರು ಪರ್ವತ ಮಾಡಿ ತೋರುಸುಗು – ಅಣು, ಪರಮಾಣು ಸ್ಫೋಟ?!, ಅಡ್ದ ಬೀಳುಗು ಮುಗಿಗು ಕೈಗಳ – ಜನತಾಸೇವೆ ಜನಾರ್ಧನ ಸೇವೆ?! 😀 😀
    ಚಿತ್ರ ಸಹಿತ ಕವನ ಲಾಯಕ ಆಯ್ದು

  8. ಶಾಮಣ್ಣಾ ,ಚಿತ್ರ ಪಷ್ಟಾಯಿದು ಮಿನಿಯಾ….ರಾಜಕಾರಣಿಗಳ ಬಣ್ನ ಬಯಲಾತೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×