- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ದೀಗುಜ್ಜೆ ತಾಳು(ಪಲ್ಯ)
ಬೇಕಪ್ಪ ಸಾಮಾನುಗೊ:
- 1 ಸಾಧಾರಣ ಗಾತ್ರದ ದೀಗುಜ್ಜೆ
- 2-3 ಚಮ್ಚೆ ಕಾಯಿ ತುರಿ
- 1/2 ಚಮ್ಚೆ ಮೆಣಸಿನ ಹೊಡಿ
- ದೊಡ್ದ ದ್ರಾಕ್ಷೆ ಗಾತ್ರದ ಬೆಲ್ಲ
- ಚಿಟಿಕೆ ಅರುಶಿನ ಹೊಡಿ
- ರುಚಿಗೆ ತಕ್ಕಸ್ಟು ಉಪ್ಪು
- 1 ಚಮ್ಚೆ ಉದ್ದಿನ ಬೇಳೆ
- 5-6 ಬೇನ್ಸೊಪ್ಪು
- 1 ಚಮ್ಚೆ ಸಾಸಮೆ
- 1 ಚಮ್ಚೆ ಎಣ್ಣೆ
ಮಾಡುವ ಕ್ರಮ:
ದೀಗುಜ್ಜೆಯ ಚೋಲಿ ತೆಗದು, ಒಳಾಣ ಗೂಂಜನ್ನೂ ತೆಗದು, 3-4 ನಿಮಿಷ ನೀರಿಲ್ಲಿ ಹಾಕಿ ಮಡುಗಿ. ಇದರ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಕೊರೆರಿ.
ಕೊರದ ದೀಗುಜ್ಜೆ ಭಾಗವ ಒಂದು ಬಾಣಲೆಗೆ ಹಾಕಿ, ಉಪ್ಪು, ಬೆಲ್ಲ, ಮೆಣಸಿನ ಹೊಡಿ, ಅರುಶಿನ ಹೊಡಿ ರೆಜ್ಜ ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ.
ನೀರು ಆರಿಗೊಂಡು ಬಪ್ಪಗ, ತೆಂಗಿನಕಾಯಿ ತುರಿ ಹಾಕಿ ತೊಳಸಿ. ಒಂದು 2 ನಿಮಿಷ ತಾಳಿನ ಸಣ್ಣ ಕಿಚ್ಚಿಲ್ಲಿ ಮಡುಗಿ.
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಉದ್ದಿನ ಬೇಳೆ, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ತಾಳಿಂಗೆ ಹಾಕಿ ತೊಳಸಿ.
ಇದು ಅಶನ/ಚಪಾತಿ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಒಂದು ರಜ್ಜ ತೆಂಗಿನ ಎಣ್ಣೆ ಸೇರಿಸಿ ತಿಂದರೆ ಅದರ ರುಚಿಯೆ ಬೇರೆ ಅಲ್ಲದೊ?