Oppanna.com

ಅಪ್ಪಾ°.. ಎನಗೆ ತಿಂದದು ಹೆಚ್ಚಾತು (ನವೀನ ಹಾಡುಗೊ)

ಬರದೋರು :   ಅರ್ತಿಕಜೆ ಮಾವ°    on   29/05/2014    6 ಒಪ್ಪಂಗೊ

ಅಪ್ಪಾ°.. ಎನಗೆತಿಂದದುಹೆಚ್ಚಾತು
(ನವೀನ ಹಾಡುಗೊ)
(ಸಂಗ್ರಹ – ಅರ್ತಿಕಜೆ ಮಾವ°)
 
1
ಅಪ್ಪಾ° ಎನಗೆ ತುಪ್ಪದ ಹೋಳಿಗೆ
ಇಪ್ಪತ್ತು ತಿಂದದು ಹೆಚ್ಚಾತು
ನಡವಲೆ ಎಡಿತ್ತಿಲ್ಲೇ ಎನಗೇ
ಕೈಕಾಲು ಬತ್ತಿಲ್ಲೇ… ಅಪ್ಪಾ°  ॥
 
ಕಟ್ಟು ಸಾರಿಲಿ ಉಂಡಿಗಿದೆ
ಸುಟ್ಟವು ನಾಕು ತಿಂದಿಗಿದೆ
ಅಷ್ಟದ್ರವ್ಯ ಮುಟ್ಟಿದ್ದಿಲ್ಲೆ
ಮನಾರ ಮೂರೇ ಮುಷ್ಟಿ  ॥
 
ಕೂಪಲೆ ಎಡಿತ್ತಿಲ್ಲೇ ಎನಗೇ
ನಿಂಬಲೆ ಎಡಿತ್ತಿಲ್ಲೇ
ಕಾಂಬೋರಿಂಗೇನೂ ಕಾಣ್ತಿಲ್ಲೇ
ದ್ರಾಕ್ಷಾರಿಷ್ಟವ ತರಿಸಿಲ್ಲೇ … ಅಪ್ಪಾ° ॥
 
2
ಅಯ್ಯೋ.. ಬಾರನ್ನೆ ಪದ ಎನಗೊಂದುದೇ
ಸ್ವರ ಬಪ್ಪಾದು ಹೇಂಗದು ಹೇಳದ್ದೇ
ಸುರುಮಾಡುತ್ತೆ ಪದ ಒಂದು ಹೇಳುಲೇ
ನಿಂಗೊ ಮಾಡೆಡಿ ಬೇಜಾರ ಕೇಳುಲೇ ॥
 
ನಾಚಿಕೆ ಎಂತ ಹೇಳುಲೆ ಸ್ವಂತ
ಮಾಡುಲೆ ಆಗ ಈಗ ಕೋಲಂಗಳ
ಇಪ್ಪ ತಪ್ಪೀನ ಕ್ಷಮಿಸೆಕ್ಕು ನಿಂಗಳೇ
ಬಪ್ಪ ಕಷ್ಟಾವ ಬಿಡುಸೆಕ್ಕು ದೇವರೇ ॥
 
ನಾವು ಇಪ್ಪಾದು ಸುಮ್ಮನೆ ಭೂಮಿಲಿ
ಬಪ್ಪ ಕಷ್ಟವ ಬಿಡುಸಿ ಎನ್ನ ಕಾಯಿರಿ
ದೇವರ ದಯವೇ ಜ್ಞಾನದ ಮೂಲ
ಆಯ ಇಲ್ಲದ್ದ ಮನೆ ನಿರ್ಮೂಲ ॥
 
~~** ~~
 

ಅರ್ತಿಕಜೆ ಮಾವ°
Latest posts by ಅರ್ತಿಕಜೆ ಮಾವ° (see all)

6 thoughts on “ಅಪ್ಪಾ°.. ಎನಗೆ ತಿಂದದು ಹೆಚ್ಚಾತು (ನವೀನ ಹಾಡುಗೊ)

  1. ಎನಗಾಗ ಎನಗಾಗ ಜೀಗುಜ್ಜೆ ಬಾಗ ಹೇಳಿ ಪದ್ಯ ಹೇಳಿಕೊಂಡಿದ್ದದು ನೆಂಪಾತು. ಅರ್ತಿಕಜೆ ಮಾವನ ಪದ್ಯಂಗಳೇ ಚೆಂದ.

  2. ಮಾವನ ಸುರುವಾಣ ಪದ್ಯವ ಎನ್ನ ಅಪ್ಪನ ಮಾವ (ಸೋದರತ್ತೆ ಗಂಡ) ಚೂರ್ಣಿಕೆಯಾಗಿ ಹೇಳ್ಯೊಂಡಿತ್ತದು ನೆಂಪಾವ್ತು .. ನೆಗೆ ಮೂಡಿಸಿಗೊಂಡಿತ್ತದರ ಇಲ್ಲಿ ಹಾಕಿ ಪುನ ಮೋರೆ ಅರಳಿಸಿದ ನಿಂಗೊಗೆ ಪ್ರಣಾಮ

  3. ಹರೇರಾಮ, ಅರ್ತಿಕಜೆ ಮಾವನ ಪದ್ಯ ಒಳ್ಳೆದಿದ್ದು. ನೆಗೆ ಒಟ್ಟಿಂಗೆ ಬಗೆ , ಬಗೆ ಅರ್ಥ ಇದ್ದು. ಕೊನೇ ಸಾಲೇ ಬಹು ಬುದ್ಧಿವಾದ ಇದ್ದು.

  4. ನವೀನ ಹಾಡುಗಳ ಸಂಗ್ರಹ ಲಾಯಿಕಿದ್ದು ಮಾವ. ಇನ್ನುದೇ ಬರಲಿ ಹೀಂಗೆಯೆ.

  5. ಸಂತೋಷ ಆತು ಒಪ್ಪಣ್ಣ . ಪ್ರೋತ್ಸಾಹಕ್ಕೆ ಧನ್ಯವಾದಂಗೊ
    ನಮ್ಮ ಮಾತು ಒಪ್ಪ ಇರೆಕು
    ನಾವು ಬರವದು ಒಪ್ಪ ಇರೆಕು
    ನಮ್ಮ ನಡೆನುಡಿ ವ್ಯವಹಾರ ಎಲ್ಲ ಒಪ್ಪ ಇರೆಕು
    ನಾವು ಇದ್ದರೆ ನಮ್ಮ ಒಪ್ಪಣ್ಣನ ಹಾಂಗೆ ಇರೆಕು ಮುದ್ದುತಮ್ಮ

  6. ಅರ್ತಿಕಜೆ ಮಾವಾ, ಚೆಂದದ ಪದ್ಯ ಇದು 🙂
    ನವೀನ ರೀತಿಲಿ ನೆಗೆನೆಗೆಯಾಗಿ ಬಯಿಂದು.
    ಇದರ ಓದಿ ಎನಗೇ ಹೊಟ್ಟೆ ತುಂಬಿದಾಂಗೆ ತೇಗು ಬಂದು ಎರ್ಕಿತ್ತಪ್ಪೋ! 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×