Oppanna.com

ಕಟ್ಟಳೆಗಳೂ, ಕಟ್ಟುಕಟ್ಳೆ ತಕ್ಕ ನಂಬಿಕೆಗಳೂ..

ಬರದೋರು :   ಒಪ್ಪಣ್ಣ    on   25/04/2014    4 ಒಪ್ಪಂಗೊ

ಜೆಂಬ್ರದ ಗವುಜಿ ಪೂರ ಮುಗುದ ಮತ್ತೆ ಎಜಮಾನ ಒಂದರಿ ಮೀವಲೆ ಹೋಪಲಿದ್ದಲ್ಲದೋ, ಅದೇ ನಮುನೆಲಿ ಜಾತ್ರೆಯ ಗವುಜಿ ಪೂರ ಮುಗುಶಿದ ಮತ್ತೆ ಒಂದರಿ ದೇವರು ಮೀವಲೆ ಹೋಪಲಿದ್ದು, ಪುತ್ತೂರಿನ ಸಂಪ್ರದಾಯಲ್ಲಿ. ಜೆಂಬ್ರದ ಬಚ್ಚೆಲು ಕಳಿವಲೆ ಮಾಂತ್ರ ಅಲ್ಲ, ದೊಡಾ ಜೆಂಬರ ತೆಗದ ಜೆಬಾದಾರಿಯ ಹಗುರ ಮಾಡ್ತ ಹಾಂಗೆ ಹೇಳಿಯೂ ಹೇಳುಲಕ್ಕು.

ಕೊಡಿ, ಕೆರೆ ಆಯನ, ಪೇಟೆ ತಿರುಗಾಟ, ಬೆಡಿ – ಎಲ್ಲವೂ ಮುಗುದ ಮತ್ತೆಯೇ ದೇವರ “ಆಯನ”. ದೇವರು ಮೀವಲೆ ಹೋವುಸ್ಸು ಎಲ್ಲಿಗೆ? ಅಲ್ಲೇ ಹತ್ತರೆ ಅಪ್ಪಾ – ಏಳೆಂಟು ಮೈಲು ದೂರಕ್ಕೆ!!
ಏಳೆಂಟು ಮೈಲು ದೂರವೋ? ಅದು ನವಗೆ ಹತ್ತರೆ ಅಲ್ಲ – ದೇವರಿಂಗೆ ಹತ್ತರೆ, ಅಷ್ಟೆ!!
ದೇವರದ್ದೇ ಇಡೀಕ ಜಾಗೆ ಈ ಭೂಮಿ, ಅದರಲ್ಲಿ ಏಳೆಂಟು ಮೈಲು ದೂರ ಹೇದರೆ ಅವಕ್ಕೆ ಜಾಲಕರೆಯೇ ಅಲ್ಲದೋ?
ದೇವರು ಮೀಯಲೆ ಹೋವುಸ್ಸು, ಹೇದರೆ, ದೇವರ ಹೊತ್ತುಗೊಂಡು ಇಡೀ ಪರಿವಾರವೇ ಮೀವಲೆ ಹೋವುಸ್ಸು.

~

ಕಾನಾವು ಡಾಗುಟ್ರ ಆಸ್ಪತ್ರೆಯ ಎದುರೆ ಆಗಿಯೇ ದೇವರು ಮೀವಲೆ ಹೋಪದಿದಾ.
ಕಾನಾವಣ್ಣಂಗೆ ಮೊನ್ನೆಂದಲೇ ಆ ಸಂಗತಿಯ ಕೊಶಿ ಇದ್ದತ್ತು. ಅಂತೂ – ಆ ದಿನ ಬಂದೇಬಿಟ್ಟತ್ತು.
ಹೊತ್ತೋಪಗ ಐದು ಗಂಟೆಗೆ ಅಂಗಣಂದ ದೇವರು ಹೆರಟವಾಡ. ದೇವರು ಒಪಾಸು ಮಿಂದಿಕ್ಕಿ ಬಪ್ಪನ್ನಾರವೂ ಆ ಅಂಗಣವ ಕಾವಲೆ “ಅಂಗಣತ್ತಾಯ” ಭೂತ ಇದ್ದನ್ನೇ, ಹಾಂಗಾಗಿ ನೆಮ್ಮದಿಲಿ ಮೀವಲೆ ಹೋಪಲಕ್ಕು. ಮೀವಗ ನೆಮ್ಮದಿ ಇಲ್ಲದ್ದರೆ ಮಹಾ ರಗಳೆ ಇದಾ – ಅಂದೊಂದರಿ ರಾವಣ ಮೀವಗಳೇ ಸಮಸ್ಯೆ ಆಗಿ ಗೋಕರ್ಣ ಲಿಂಗ ಪ್ರತಿಷ್ಠೆ ಆದ್ದು ಹೇದು ಪ್ರತೀತಿ ಇದ್ದು. ಅದಿರಳಿ. ಅಂತೂ, ಮಾಲಿಂಗೇಶ್ವರಂಗೆ ಮೀವಗ ಎಂತೂ ಚಿಂತೆ ಇಪ್ಪಲಾಗ ಹೇದು ಅಂಗಣತ್ತಾಯ ಭೂತ ಆ ಇಡೀ ವಠಾರವ ಹೆರಂತ ಕಾವಲು ಕೂರ್ತಾಡ.

ಐದು ಗಂಟೆಗೇ ಅಂಗಣಂದ ಹೆರಟ್ರೂ, ನಾಕು ಪರ್ಲಾಂಗು ದೂರದ ಕಾನಾವು ಡಾಗುಟ್ರ ಆಸ್ಪತ್ರೆ ಹತ್ತರೆ ಎತ್ತೇಕಾರೆ ಭರ್ತಿ ನಾಕು ಗಂಟೆ ಹಿಡುದ್ದಾಡ. ಊರ ಪರಊರ ಭಕ್ತಾದಿಗೊಕ್ಕೆ ಎಲ್ಲೋರಿಂಗೂ ದರ್ಶನ ಕೊಟ್ಟುಗೊಂಡು, ಆಸ್ತಿಕ ಭಕ್ತಾದಿಗಳ ಕಟ್ಟೆಪೂಜೆಗಳ ಸ್ವೀಕರುಸೆಂಡು, ಎದೂರಂದ ನಂದಿ, ದೇವರ ಬಿರುದುಬಾವಲಿಗ, ಬೇತಾಳ, ಚೆಂಡೆ, ಭಜನೆ, ಡೊಳ್ಳು – ಇತ್ಯಾದಿ ಪಕ್ಕವಾದ್ಯಂಗಳ ಒಟ್ಟಿಂಗೆ ಇಡೀ ಪರಿವಾರ ಬಪ್ಪದು ಹೇದರೆ ಅದೊಂದು ಗವುಜಿಯೇ ಬೇರೆ – ಹೇದು ಕಾನಾವಣ್ಣ ಹೇಳಿತ್ತಿದ್ದ°. ಒಂದು ಹೊಡೆಲಿ ಕಾನಾವಣ್ಣ, ಇನ್ನೊಂದು ಹೊಡೆಲಿ ಭಾಮಿನಿ ಅಕ್ಕ° – ಇಬ್ರೂ ನಿಂದುಗೊಂಡು ದೇವರ ಸವಾರಿ ದೊಡ್ಡಮಾರ್ಗಲ್ಲೆ ಬಪ್ಪ ಸಂಗತಿಯ ನೋಡ್ತ ಚೆಂದವೇ ಬೇರೆ! ಅದಿರಳಿ.

~

ಕಲ್ಲಾರೆಂದ ದರ್ಭೆ ವೃತ್ತ ಕಳುದು, ಬೆದ್ರಾಳ ಶಾಸ್ತ್ರಿಗಳ ಮನೆ ಆಗಿ, ನರಿಮೊಗರು ಸಾಂದೀಪನಿ ಆಗಿಂಡು – ಮುಂದೆ ಹೋವುತ್ತದೇ ದೇವರ ದಾರಿ. ದೇವರು ಪಡುವಲಾಗಿಂದ ಎತ್ತುವ ಆ ಜಾಗೆಗೆ ಸರೀಯಾಗಿ ಮೂಡ್ಳಾಗಿಂದ ಕುಮಾರಧಾರೆ ಹರುದು ಬತ್ತು. ಆ ಜಾಗೆಯೇ “ವೀರಮಂಗಲ”.

~

ಮಹಾಲಿಂಗೇಶ್ವರ ದೇವರು ಕುಮಾರನ ಹತ್ತರೆ ಮೀವಲೆ ಬಪ್ಪದು.
ಸುಬ್ರಹ್ಮಣ್ಯಲ್ಲಿ ನೆಲೆ ಆದ, ಮಹಾಲಿಂಗೇಶ್ವರನ ಮಗ° ಕುಮಾರ ಇಲ್ಲೆಯೋ, ಸುಬ್ರಮಣ್ಯ – ಅವನ ಪಾದಲ್ಲಿ ಹುಟ್ಟಿ ಧಾರೆಯಾಗಿ ಹರಿತ್ತ ಕುಮಾರ ಧಾರಾ – ಆ ಕುಮಾರಧಾರೆ ಓ ಅಲ್ಲಿ ವೀರಮಂಗಲ ಹೇಳ್ತ ಜಾಗೆಲಿ ದೊಡಾ ಗಯದ ನಮುನೆ ಹರಿತ್ತು. ಅಲ್ಲಿಗೆ ದೇವರ ಗುಂಡಿ ಹೇಳಿಯೂ ಹೆಸರಿದ್ದಾಡ, ಶ್ರೀಅಕ್ಕ° ಹೇಳಿತ್ತಿದ್ದವು. ಯೇವತ್ತಿಂಗೂ ನೀರು ಆರದ್ದ ದೊಡಾ ಗುಂಡಿ.
ನೀರು ಸದಾಕಾಲ ಇಪ್ಪ ಕಾರಣ ಜಲಜೀವಿಗಳೂ ಇದ್ದವಾಡ – ದೊಡ್ಡದೊಡ್ಡ ಮೀನುಗೊ, ಇತ್ಯಾದಿ. ಮೀನು ಇದ್ದು ಹೇದು ಇಬ್ರಾಯಿ ಗಾಳ ಹಿಡ್ಕೊಂಡು ಬಪ್ಪ ಕ್ರಮ ಇಲ್ಲೆ, ಅದು ದೇವರ ಮೀನು ಇದಾ! ಅದಿರಳಿ.

ಅಂತೂ – ಪ್ರಕೃತಿ ರಮಣೀಯವಾದ, ಸ್ಮರಣೀಯವಾದ ಜಾಗೆ.
ಅದಷ್ಟೇ ಅಲ್ಲದ್ದೆ, ಮರಣೀಯವಾದ ಜಾಗೆಯೂ ಅಪ್ಪು – ಹೇಳ್ತದು ಒಂದು ಪ್ರತೀತಿ ಇದ್ದಾಡ.

ಎಂತಗೆ? ಮಾತಾಡುವೊ°.
~

ಊರ ದೇವರ ಜಾತ್ರೆ ಮುಗಿಯದ್ದೆ ಹಲವು ಕಾರ್ಯಂಗೊ ಬಾಕಿ ಆಗಿದ್ದತ್ತು. ಒಂದೂ ಮಾಡ್ಳೆಡಿಯ.
ಜಾತ್ರೆ ಹೇದರೆ – ಒಂದು ನಮುನೆಲಿ ಇಡೀ ಊರಿಂಗೆ ಊರೇ ಇತರೇ ಚಟುವಟಿಕೆಗಳ ನಿಲ್ಲುಸಿ ಬಿಡ್ತು. ಬರೇ ಜಾತ್ರೆ ಗೌಜಿ ಮಾಂತ್ರ. ಅದಕ್ಕೆ ಸರೀಯಾಗಿ ನಮ್ಮ ಕಟ್ಟಳೆಗೊ – ದೇವಸ್ಥಾನಲ್ಲಿ ಕೊಡಿ ಏರಿದ ಮತ್ತೆ ಮರ ಹತ್ತಲಾಗ. ದೇವರು ಅಂಗಣಕ್ಕೆ ಇಳುದ ಮತ್ತೆ ಚೆರ್ಪು ಹಾಕಲಾಗ, ದೇವಸ್ಥಾನಲ್ಲಿ ಕೊಡಿ ಇಳಿವನ್ನಾರ ನೆಂಟ್ರಮನೆಗೆ ಹೋಪಲಾಗ, ದೇವಸ್ಥಾನದ ಜಾತ್ರೆ ಮುಗಿವನ್ನಾರ ಮನೆಲಿ ಜೆಂಬ್ರ ಮಡಗಲಾಗ – ಹೀಂಗೆ ಹತ್ತು ಹಲವು ಕಟ್ಟುಪಾಡುಗೊ, ಕಟ್ಟಳೆಗೊ ನಮ್ಮ ಊರಿಲಿ ಚಾಲ್ತಿಲಿ ಇದ್ದು ಅಪ್ಪೋ. ಇದೆಲ್ಲ ಪ್ರಾಕಿಂದ ಬಂದ ನೆಡವಳಿಕೆಗೊ. ಇದಕ್ಕೆ ಹಿಂದೆ – ಮುಂದೆ ಎಂತೂ ಇಲ್ಲೆ ಹೇದು ನಂಬುತ್ತೋರು ಕೆಲವು ಇದ್ದರೂ, ಇದೆಲ್ಲವೂ ಒಂದು ಕಾರಣಕ್ಕೇ ಕಟ್ಟಿಗೊಂಡದು – ಹೇದು ನಂಬುತ್ತೋರು ಬೈಲಿಲಿ ತುಂಬ ಜೆನ ಇದ್ದವು.

ಇದೆಲ್ಲ ಎಂತಗೆ ನೆಂಪಾತು ಹೇದರೆ, ಓ ಮನ್ನೆ ಪುತ್ತೂರು ಜಾತ್ರೆಯೂ, ಅದಕ್ಕೆ ಸಮ್ಮಂದಪಟ್ಟ ಕೆಲವು ಘಟನೆಗಳೂ ಕಂಡಪ್ಪಗ ಮನಸ್ಸಿಂಗೆ ಬಂದ ಸಂಗತಿಗೊ.

~

ದೇವರು ಮೀತ್ತ ವೀರಮಂಗಲಲ್ಲಿಯೂ ಒಂದು ಕಟ್ಟಳೆ ಇದ್ದಾಡ. ಅದೆಂತರ?
ಗಯಲ್ಲಿ ದೇವರು ಮೀವಲೆ ಇಳುದು, ಮಿಂದಿಕ್ಕಿ ಹೆರಡುವನ್ನಾರ –
ಅದು ದೇವರು ಮೀತ್ತ ನಮುನೆಲಿ ಶುದ್ಧ.
ಒಂದರಿ ದೇವರು ಮಿಂದಾದ ಮತ್ತೆ ಆ ನೀರೇ ಶುದ್ಧ!

~

ದೇವರ ಮೀಯಾಣ ಆದ ಮತ್ತೆ ಅದು ತೀರ್ಥ ಆಗಿರ್ತಲ್ಲದೋ – ಆ ನೀರಿಲಿ ಮೀಯಲೆ ಹೇದು ಸಾವಿರಗಟ್ಳೆ ಜೆನ ಸೇರಿರ್ತಾಡ. ಈ ಸರ್ತಿಯೂ ಹಾಂಗೇ ಆತು; ಹತ್ತರತ್ತರೆ ನಾಕು ಸಾವಿರ ಜೆನ ಸೇರಿದ್ದಡ. ದೇವರು ಬಂದವು, ಪೂಜಾ ಕೈಂಕರ್ಯಂಗೊ ಸೇವಿಸಿಗೊಂಡವು, ಅಲಂಕಾರ-ಹೂಗು ಇತ್ಯಾದಿಗಳ ಬಿಡುಸಿಗೊಂಡವು, ವೀರಮಂಗಲದ ದೇವರಗುಂಡಿಗೆ ಇಳುದೇ ಬಿಟ್ಟವು.

~

ಆದರೆ?
ಆ ಹೊಳೆಯ ರಜ್ಜವೇ ಮೇಲೆ ಒಂದು ಪ್ರಮಾದ ಆಗಿ ಹೋತು.
ದೇವರ ಮೀಯಾಣ ಆಯೇಕಾರೆ ಮದಲೇ, ರಜಾ ಮೇಗೆ ಕೆಲವು ಮಕ್ಕೊ ನೀರಿಂಗಿಳುದು ಬಿಟ್ಟವು!
ಅಷ್ಟೇ ಅಲ್ಲ, ಮೀಸುಲೆ ಹೆರಟವು, ಮೀವಲೇ ಸುರುಮಾಡಿದವು.

ಎಂತ ಆತೋ, ಎಂತ ಹೋತೋ ಅರಡಿಯ; ಆದರೆ ಇಳುದ ಮೂರು ಮಕ್ಕಳ ಪೈಕಿ ಇಬ್ರು ನೀರಿಲೇ ಬಾಕಿ ಆಗಿ, ದೇವರ ಪಾದ ಸೇರಿದವು. ಇದಿಷ್ಟು ನೆಡದ ಸಂಗತಿ, ಇನ್ನು ಹೇಳ್ತೋರು ಹಲವು ಹೇಳ್ತವು. ಎಂತರ?
~

ಇದು ಮಾಡ್ಳಾಗದ್ದ “ಕಟ್ಟಳೆ”ಗಳಲ್ಲಿ ಒಂದು ಇದಾ! ಅದರ ಮಾಡಿದ್ದಕ್ಕೇ ದೇವರ ಕೋಪ ಕಂಡದೋದು.
ದೇವರಿಂಗೆ ಮಿಂದಾಗದ್ದೆ ನಾವು ಮೀತ್ತ ಮರಿಯಾದಿ ಇಲ್ಲೆ. ಅದೂ – ದೇವರು ಮೀವದರಿಂದ ಮೇಗೆ!!
ಹಾಂಗಾಗಿ ದೇವರ ಕೋಪಕ್ಕೆ ಕಾರಣ ಆತು – ಹೇದು.
ದೇವರ ಕೋಪಂದಾಗಿಯೇ ಆ ಮಕ್ಕೊ ತೀರಿಗೊಂಡವು –ಹೇದು.

~

ಕಾರಣ ಎಂತದೇ ಆಗಿರಳಿ, ಮಕ್ಕೊ ಹೋದವು ಹೋದವೇ! ಛೇ!!
ತುಂಬ ಹಸಿ ಪ್ರಾಯ, ಜೀವನಲ್ಲಿ ಇನ್ನೂ ಬಾಳಿ ಬೆಳಗೇಕಾದ ಸಂದರ್ಭ. ಅಷ್ಟರಲ್ಲೇ ನೀರಿಂಗೆ ಹಾರಿ ಅವಾಂತರ ಮಾಡಿಗೊಂಡವು. ಅಲ್ಲದೋ? ಅವರ ಕುಟುಂಬದೋರಿಂಗೆ ದುಃಖವ ತಡಕ್ಕೊಂಬ ಶೆಗ್ತಿ ಆ ಮಹಾಲಿಂಗೇಶ್ವರ ಕರುಣಿಸಲಿ.
ಮಕ್ಕೊಗೆ ನಮ್ಮ ಕಟ್ಟಳೆಗಳ ಹೇಳಿ ಕೊಡದ್ದದು ತಪ್ಪೋ? ಅತವಾ ಹೆರಿಯೋರು ಹೇಳಿದ್ದದರ ಮೂಢನಂಬಿಕೆ ಹೇಳಿ ಹೇಳಿದ್ದದರ ಬೆಳ್ಳಕ್ಕೆ ಬಿಟ್ಟದು ಮಕ್ಕಳ ತಪ್ಪೋ? ಈಗ ನಾವು ಎಷ್ಟು ವಿಮರ್ಶೆ ಮಾಡಿದರೂ ಈ ವಿಷಯಲ್ಲಿ ಕಾಲ ಮಿಂಚಿದ್ದು.

~
ಅದೆಷ್ಟು ವೈಜ್ಞಾನಿಕ, ಅದೆಷ್ಟು ಆಧ್ಯಾತ್ಮಿಕ – ಹೇಳ್ತ ಬಗ್ಗೆ ಒಪ್ಪಣ್ಣಂಗೆ ಅರಡಿಯ.
ಆದರೆ, ಇಪ್ಪ ಕೆಲವು ಸರ್ತಿ ಎಲ್ಲವನ್ನೂ, ಎಲ್ಲದನ್ನೂ ನಂಬೇಕಾವುತ್ತು. ಕೆಲವು ಕ್ಷೇತ್ರಕ್ರಮಂಗೊ ಸಾವಿರಗಟ್ಳೆ ಒರಿಶಂದ ನೆಡದು ಬಂದಿರ್ತು ಅಲ್ಲದೋ, ಅದರ ತಪ್ಪಿ, ಮೀರಿ ನೆಡದರೆ ಎಂತಾವುತ್ತು ಹೇದು ನೋಡಿದೋನು ಇಲ್ಲೆ. ಒಂದು ವೇಳೆ ಹೀಂಗಿರ್ತ ಸಂಗತಿಗೊ ಆದರೆ – “ಇದು ಅದರಿಂದಾಗಿಯೇ ಆದ್ಸು” ಹೇದರೆ ನಂಬಲೇಬೇಕಾವುತ್ತು. ಅಲ್ಲದೋ?

ನಾವು ಇಂದು ಆಕಾಶದೆತ್ತರಕ್ಕೆ ಇಪ್ಪ ಲೋಕವ ಕಾಂಬ ಹಾಂಗೆ ಆದಿಕ್ಕು. ಆದರೆ ನಮ್ಮ ಸಂಸ್ಕೃತಿಯ ಬೇರು ಭೂಮಿಯ ಎಷ್ಟೋ ಆಳಲ್ಲಿದ್ದು. ಅದರ ಆಳ-ಅಗಲವ ಅಳವಲೆ ನವಗೆ ಎಡಿಯ. ಕೆಲವು ದಿಕ್ಕೆ ನಾವು ಹೆರಿಯೋರು ಹಾಕಿದ ಕೆಲವು ಕಟ್ಟಳೆಗಳ ಬಿಡ್ಳೂ ಎಡಿತ್ತಿಲ್ಲೆ.

ಒಂದೊಪ್ಪ: ಕಟ್ಟಳೆಗಳ ಕಟ್ಟುಕಟ್ಳೆ ತಕ್ಕ ಆದರೂ ನಂಬೇಕು. ಮೂಡನಂಬಿಕೆ ಹೇದು ಬಿಡ್ಳಾವುತ್ತಿಲ್ಲೆ. ಅಲ್ಲದೋ?

4 thoughts on “ಕಟ್ಟಳೆಗಳೂ, ಕಟ್ಟುಕಟ್ಳೆ ತಕ್ಕ ನಂಬಿಕೆಗಳೂ..

  1. ಪರಮದಯಾಳು ಮಹಾಮಹಿಮ ಸರ್ವಾಂತಯ್ರಾಮಿ ದೇವರಿಂಗೆ ಕೋಪ ಬಾರ ! ನಮ್ಮ ನಂಬಿಕೆಲಿ ಪೂರ್ವ ಜನ್ಮದ ಕರ್ಮ ಫಲ ಹೇಳಿ ನಂಬಿಕೆ.

  2. ಚೆ. ಘಟನೆ ಕೇಳಿ ಬೇಜಾರಾತು. ನಮ್ಮ ಕೈಲಿ ಎಂತ ಇದ್ದು ? ಆ ಮಕ್ಕೊಗೆ ನೀರಿಂಗಿಳಿಯಲೆ ಬುದ್ದಿ ಕೊಟ್ಟದೂ ದೇವರೇ ಅಲ್ಲದೊ ?

  3. ಶೋಚನೀಯವಾದ ಸಂಗತಿ.ಅಷ್ಟು ಕೋಪ ದೇವರಿಂಗೂ ಬಪ್ಪಲಾವುತ್ತಿತ್ತಿಲ್ಲೆ.

  4. ಹರೇ ರಾಮ . ರೋಮಾಂಚನ ಸತ್ಯ. ಒಳಿತು ಆವ್ತೋ ಇಲ್ಯೋ ನವಗರಡಿಯ, ಕೆಟ್ಟದ್ದಂತೂ ಆವ್ತಿಲ್ಲೆ ಹೇದಿಪ್ಪಗ ನಂಬಿಕೆಗಳ ನಂಬಿಗೊಂಡು ಪಾಲುಸುತ್ತರ್ಲಿ ನಷ್ಟ ಇಲ್ಲೆನ್ನೆ.

    ಶುದ್ದಿಗೊಂದು ಒಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×