- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ದೀಗುಜ್ಜೆ ಪೋಡಿ
ಬೇಕಪ್ಪ ಸಾಮಾನುಗೊ:
- 1 ಸಣ್ಣ ದೀಗುಜ್ಜೆ
- 1 ಕಪ್(ಕುಡ್ತೆ) ಅಕ್ಕಿ ಹೊಡಿ ಅಥವಾ ಗಟ್ಟಿಗೆ ಕಡದ ಬೆಣ್ತಕ್ಕಿ(ಸೋನಾ ಮಸೂರಿ ಅಕ್ಕಿದು ಆದರೆ ಒಳ್ಳೆದು) ಹಿಟ್ಟು
- 3/4 -1 ಚಮ್ಚೆ ಮೆಣಸಿನ ಹೊಡಿ
- ದೊಡ್ಡ ಚಿಟಿಕೆ ಇಂಗು
- ರುಚಿಗೆ ತಕ್ಕಸ್ಟು ಉಪ್ಪು
- 10-15 ಜೀರಿಗೆ
- 10-15 ಓಮ
- ಎಣ್ಣೆ ಹೊರಿವಲೆ
ಮಾಡುವ ಕ್ರಮ:
ದೀಗುಜ್ಜೆಯ ಹೆರಾಣ ಚೋಲಿ, ಒಳಾಣ ಗೂಂಜು ಎಲ್ಲ ತೆಗದು, ಕೆಳಾಣ ಚಿತ್ರಲಿ ತೋರ್ಸಿದ ಹಾಂಗೆ ಉದ್ದ-ಉದ್ದಕೆ ತೆಳ್ಳಂಗೆ ಕೊರದು, ಒಂದು ಹತ್ತು ನಿಮಿಷ ಉಪ್ಪು ನೀರಿಲ್ಲಿ ಹಾಕಿ ತೆಗದು ಮಡುಗಿ.
ಒಂದು ಪಾತ್ರಲ್ಲಿ ಅಕ್ಕಿ ಹಿಟ್ಟು/ಹೊಡಿ, ಇಂಗು, ಮೆಣಸಿನ ಹೊಡಿ, ಉಪ್ಪು, ಜೀರಿಗೆ, ಓಮವ ಹಾಕಿ, ಅದಕ್ಕೆ ಬೇಕಾದಸ್ಟು ನೀರುದೆ ಹಾಕಿ
ಲಾಯಿಕಲಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಸ್ಟು ಹದ ಇರಲಿ.
ಒಂದು ಬಾಣಲೆಲಿ ಎಣ್ಣೆ ಮಡುಗಿ ಬೆಶಿ ಮಾಡಿ.
ಅದು ಬೆಶಿ ಆದಪ್ಪಗ, ದೀಗುಜ್ಜೆಯ ಹಿಟ್ಟಿಲ್ಲಿ ಅದ್ದಿ ಎಣ್ಣೆಗೆ ಹಾಕಿ ಅದು ಕರು-ಕುರು ಅಪ್ಪನ್ನಾರ ಬೇಶಿ(ಎಣ್ಣೆಯ ಗುಜು ಗುಜು ಅಜನೆ ನಿಂದರೆ ಆತು ಹೇಳಿ ಲೆಕ್ಕ.)
ಬೆಶಿ ಬೆಶಿ ತಿಂಬಲೆ ಕೊಡಿ.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.