ಜವಾಬ್ದಾರಿಯ ವಿದ್ಯಾರ್ಜನೆಯೂ, ಬೇಜವಾಬ್ದಾರಿ ಸರ್ಕಾರವೂ..
ಮಾಷ್ಟ್ರುಮಾವನ ಮನೆಲಿ ನಾಮಕರಣ, ಅದಾದ ಮರದಿನ ಸರ್ಪಂಗಳ ಕೂಸಿನ ಮದುವೆ, ಅದರ ಮತ್ತಾಣ ದಿನ ಪೆರ್ಲದ ತಮ್ಮನ ಸಟ್ಟುಮುಡಿ, ಅದಾಗಿ ಸಾರಡಿಲಿ ಪೂಜೆ, ಅದಾಗಿ ದೊಡ್ಡಜ್ಜನ ಮನೆಲಿ ಸಮ್ಮಾನ, ಅದಾಗಿ ಬೇಟುಂಗಾನಲ್ಲಿ ಕಾರ್ಯಕ್ರಮಂಗೊ, ಎಡಕ್ಕಿಲಿ ಓಟಿನ ಗವುಜಿ, ಅದಾಗಿ ಗುಣಾಜೆ ಮದುವೆ – ಹೋವುತ್ತರೆ ಪುರುಸೊತ್ತೇ ಇಲ್ಲೆ ಅಪ್ಪೋ!
ಹಾಂಗಾಗಿ ಬೈಲಿಂಗೆ ಹೊಗ್ಗುಲೂ ಪುರುಸೊತ್ತಾತೇ ಇಲ್ಲೆಪ್ಪೊ! 🙁
~
ಒಪ್ಪಣ್ಣಂಗೆ ಕೈರಂಗಳದ ಅಣ್ಣ ಮೊನ್ನೆ ಸಿಕ್ಕಿದ್ದದು ಪುತ್ತೂರು ಕರಿಮಾರ್ಗದ ಕರೆಲಿ, ಕರಿಕಾರಿಲಿ.
ಮಾಷ್ಟ್ರುಮಾವನ ಮನೆಂದ ಹೆರಟು ಸಾರಡಿ ಪೂಜೆಗೆ ಹೋಪಗ, ಕಾನಾವು ಡಾಗುಟ್ರ ಆಶುಪತ್ರೆಯ ಎದುರು ಬಸ್ಸಿಂಗೆ ಕಾದುಗೊಂಡು ನಿಂದಿತ್ತಿದ್ದೆ.
ಒಪ್ಪಣ್ಣನ ಕಂಡಪ್ಪದ್ದೇ ರೂಪತ್ತೆ ಆಗಿದ್ದರೆ ಕನ್ನಾಟಿ ಏರ್ಸಿ ಬುರೂಲನೆ ಹೋವುತಿತು, ಆದರೆ ಕೈರಂಗಳದ ಅಣ್ಣ ಹಾಂಗಲ್ಲ, ಒಂದು ಗಳಿಗೆ ನಿಲ್ಲುಸಿ ಮಾತಾಡದ್ದೆ ಹೋವುತ್ತ ಕ್ರಮ ಇಲ್ಲೆ ಇದಾ.
ಹಾಂಗೆ, ಮಾರ್ಗದ ಕರೆಲಿ ಕಾರು ನಿಲ್ಲುಸುತ್ತ ಜಾಗೆಲಿ ನಿಂದವು.
ಕಾರು ನಿಂದಪ್ಪದ್ದೇ ಕಾದುಗೊಂಡಿದ್ದ ಒಂದು ಜೆನ ಹತ್ರುಪಾಯಿ ಚೀಟು ಬರದು ಬೇಡಿತ್ತು, ದೊಣೆಯ! ಅದಿರಳಿ.
ದೂರ-ದೂರ ಹೇದು ಅತ್ತಿತ್ತೆ ಮಾತಾಡಿಗೊಂಡೆಯೊ. ಒಂದು ಜೆಂಬ್ರದೂಟ ಉಂಡಿಕ್ಕಿ ಇನ್ನೊಂದು ಜೆಂಬ್ರದೂಟಕ್ಕೆ ಹೇದು ಸೂಕ್ಷ್ಮಲ್ಲಿ ಹೇಳಿದೆ.
~
ಕೈರಂಗಳದ ಅಣ್ಣ ಹೆರಟದು ಕೊಡೆಯಾಲಕ್ಕಡ. ನಿತ್ಯವೂ ಕೊಡೆಯಾಲಕ್ಕೆ ಹೋವುತ್ತೋರದ್ದು ಎಂತ ವಿಶೇಷ ಹೇದು ಕೇಳುಲೇನಿಲ್ಲೆ, ಅಪ್ಪೋ. ಆದರೂ – ಇಂದು ಹೆರಟದು ಒಂದು ವಿಶೇಷ ಕೆಲಸಕ್ಕೇ ಇದಾ.
ಮತ್ತೆ ಮಾತಾಡಿ ಅಪ್ಪಗ ಗೊಂತಾತು, ಸಂಗತಿ ಎಂತರ ಹೇದು.
ಸತ್ಯಸಂಗತಿ ನಮ್ಮೆದುರು ನೆಡವಾಗ ಬೆಶಿಬೆಶಿ ಬೈಲಿಂಗೆ ಹೇಳುವೊ ಹೇದು ಅದನ್ನೇ ಈ ವಾರ ಮಾತಾಡುವೊ.
~
ಕೈರಂಗಳದ ಅಣ್ಣನ ನೆರೆಕರೆಲಿ ಒಬ್ಬ ಪಾಪದ ಮಾಣಿ ಇದ್ದನಾಡ. ಕೊಡೆಯಾಲದ ಯೇವದೋ ಕೋಲೇಜಿಲಿ ಕಲಿಸ್ಸು. ಮಾಣಿ ಪಾಪ ಹೆದರೆ ಪಾಪ, ಅವನಷ್ಟಕ್ಕೇ ಅವ. ಅವ ಆತು, ಅವನ ಕಲಿವಿಕೆ ಆತು, ಅಷ್ಟೆ.
ಇಂತಿಪ್ಪ ಮಾಣಿ ಕೋಲೇಜಿಂಗೆ ಹೋವುತ್ತಾ ಇದ್ದಿದ್ದೋನು, ಮೊನ್ನೆ ಇತ್ಲಾಗಿ ಎಲ್ಲೋರ ಹಾಂಗೇ ಈ ಮಾಣಿಯೂ ಪರೀಕ್ಷೆ ಬರದನಾಡ.
ಅದರ್ಲಿ ಎಂತ ಇದ್ದು ಕೇಳುವಿ ನಿಂಗೊ – ಪರೀಕ್ಷೆ ಬರೇಕು, ಪಾಸಾಯೇಕು, ಮತ್ತಾಣ ಕ್ಲಾಸಿಂಗೆ ಹೋಯೇಕು – ಅಲ್ಲದೋ? ಆದರೆ, ಅಲ್ಲೇ ಇಪ್ಪದು ಸಂಗತಿ.
~
ಕಳುದ ವಾರ ಇಡೀ ರಾಜ್ಯದ ಪಾಸು-ಪೈಲು ಬಂದದು ಅರಡಿಗೊ?
ಈ ಮಾಣಿಯ ಇಡೀ ಕ್ಲಾಸಿನ ಮಕ್ಕಳ ಫಲಿತಾಂಶ ಬಯಿಂದು.
ಇಡೀ ಶಾಲೆಯ ಮಕ್ಕಳದ್ದು ಬಯಿಂದು.
ಇಡೀ ತಾಲೂಕಿನ ಮಕ್ಕಳದ್ದು ಬಯಿಂದು.
ಇಡೀ ರಾಜ್ಯದ ಮಕ್ಕಳದ್ದೇ ಬಯಿಂದು.
ಆದರೆ, ಈ ಮಾಣಿಯ ಫಲಿತಾಂಶ ಬಯಿಂದೇ ಇಲ್ಲೆ!!
~
ಅದಕ್ಕೆಂತ ಕಾರಣ?
ಗೊಂತಿಲ್ಲೆ, ಮಾಣಿಯ ದುರದೃಷ್ಟ – ಹೇಳಿಯೇ ಹೇಳೇಕಟ್ಟೆ.
ಮಾಣಿ ಪರೀಕ್ಷೆಯ ಪೀಸು ಕಟ್ಟಿದ್ದನಿಲ್ಲೆಯೋ? ಕಟ್ಟಿದ್ದ.
ಪರೀಕ್ಷೆ ಬರದ್ದನಿಲ್ಲೆಯೋ? ಬರದ್ದ.
ಮಾಣಿ ಉತ್ತರ ಪತ್ರಿಕೆ ಕೊಟ್ಟಿದನಿಲ್ಲೆಯೋ? ಕೊಟ್ಟಿದ.
ಆದರೆ, ಫಲಿತಾಂಶ ಮಾಂತ್ರ ಕಾಣೆ!!
~
ಮಾಣಿ ಮನೆಗೆ ಬಂದ, ಎಲ್ಲೋರ ಪಾಸುಪೈಲು ಬಯಿಂದು, ಎನ್ನದು ಬಯಿಂದಿಲ್ಲೆ ಅಮ್ಮಾ – ಹೇಳಿದ.
ಮಾಣಿಯ ಮನೆಯೋರು ಕೋಲೇಜಿನ ಮಾಷ್ಟ್ರನ ಹತ್ತರೆ ಕೇಟವಾಡ, ಎನ್ನ ಮಗನದ್ದು ಪಾಸುಪೈಲು ಗೊಂತಾಯಿದಿಲ್ಲೆ – ಹೇದು.
“ಅಪ್ಪು, ಎಂಗೊಗೂ ಗೊಂತಾಯಿದಿಲ್ಲೆ, ನಿಂಗೊ ದೊಡ್ಡಾಪೀಸಿಲಿ ಕೇಳಿ” – ಹೇಳಿದವಾಡ.
ಆತು, ಮಾಣಿಯ ಅಬ್ಬೆಪ್ಪ ದೊಡ್ಡಾಪೀಸಿಂಗೆ ಹೋದವು,
ಹೋದ ಕೂಡ್ಳೇ ಗೊಂತಾವುತ್ತೋ? ಕಾದವು. ದೊಡ್ಡಾಪೀಸಿನ ದೊಡ್ಡಾಪೀಸರ ದಿನಿಗೆಳುವನ್ನಾರ ಹೆರಾಣ ಬೆಂಚಿಲಿ ಕೂದವು.
ಸುಮಾರು ಹೊತ್ತು ಕಾದು ಒಳ ಹೋದವು – ಎಂಗಳ ಮಾಣಿಯ ಪಾಸುಪೈಲು ಬಯಿಂದಿಲ್ಲೆ –ಹೇದು ವಿಚಾರ ತಿಳುಶಿದವು. “ನಿಂಗೊ ಶಾಲೆಂದ ಬರೆಶಿಗೊಂಡು ಬನ್ನಿ” – ಹೇದು ಶಾಲೆಗೆ ಕಳುಗಿತ್ತು ಆ ದೊಡ್ಡಾಪೀಸರ.
ಆತು, ಒಪಾಸು ಶಾಲಗೆ ಬಂದವು, “ಹೀಂಗೀಂಗೆ, ನಿಂಗೊ ದೊಡ್ಡಾಪೀಸರಂಗೆ ಬರದು ಕೊಡೆಕ್ಕಡ” – ಹೇಳಿದವು.
ಅಲ್ಲೂ ಸುಮಾರು ಹೊತ್ತು ಕಾಯಿಸಿ, ಎಂತದೋ ಬರದು ಕೊಟ್ಟತ್ತು.
ಪುನಾ ದೊಡ್ಡಾಪೀಸರನ ಆಪೀಸಿನ ಬುಡಕ್ಕೆ ಹೋದವು.
ಹನಿಯಾ ಹೊತ್ತು ಕಾದು ಮತ್ತೆ ಇವರ ಹೆಡ್ಮಾಷ್ಟ್ರು ಬರದು ಕೊಟ್ಟದರ ಹಿಡುದು ಓದಿತ್ತು. “ಹ್ಮ್, ನೋಡುವ. ಹೆಡ್ಡಾಪೀಸಿಂಗೆ ಕಳುಗುತ್ತೆ, ನಾಳೆಬನ್ನಿ” – ಹೇಳಿ ಇವರ ಕಳುಸಿತ್ತು.
ನಾಳೆ ಪುನಾ ಬಂದವು. ಬಂದು ಕಾದವು.
ಸುಮಾರು ಹೊತ್ತು ಕಾದ ಮತ್ತೆ ಆಪೀಸರ ಸಿಕ್ಕಿತ್ತು. ಇವರ ತಲೆ ಕೊಡಿ ಕಂಡಪ್ಪದ್ದೇ, ಅದಕ್ಕೆ ಮುನ್ನಾಣ ದಿನ ಕೊಟ್ಟ ಅರ್ಜಿ ನೆಂಪಾತು. “ಹೋ, ನಿನ್ನೆ ಕಳುಸಿದ್ದಿಲ್ಲೆ, ಇಂದು ಕಳುಗುತ್ತೆ” – ಹೇಳಿತ್ತು, ಬೇಜವಾಬ್ದಾರಿ ಮನಿಶ್ಶ.
ಆ ದಿನ ಮತ್ತೆ ನೆಂಪಿಲಿ ಕಳುಸಲಿ – ಹೇದು ಮೂರು ಮೂರು ಸರ್ತಿ ಕ್ಲಾರ್ಕಂಗೊಕ್ಕೆ “ಕೈಬೆಶಿ”ನೆಂಪು ಮಾಡಿಕ್ಕಿ ಹೆರಟವು. ಆ ದಿನ ಹೊತ್ತೋಪಗಳೇ ಅವರ ಅರ್ಜಿ ಹೆಡ್ಡಾಪೀಸಿಂಗೆ ಎತ್ತಿತ್ತಡ.
ಮರದಿನ ಒಪಾಸು, ಆ ಆಪೀಸಿಂಗೆ ಹೋದವು. ಕಾದವು.
ಆಪೀಸರ ಬಪ್ಪನ್ನಾರ ಕೂರದ್ದೆ ಬೇರೆ ದಾರಿ ಇಲ್ಲೆ ಇದಾ! ಕೂದವು.
ಆಪೀಸರ ಬಂದು, ಅದರ ಪುರುಸೋತಿಲಿ ಹೇಳಿತ್ತಡ, “ನಿಂಗಳ ಮಾಣಿದು ಮಾಂತ್ರ ಅಲ್ಲ, ಇನ್ನೂ ನಾಲ್ಕು ಜೆನರದ್ದು ಬಾಕಿ ಆಯಿದು. ಎಲ್ಲ ಒಟ್ಟಿಂಗೆ ಹೇಳ್ತೆಯೋ, ನಾಳೆ ಬನ್ನಿ “ ಹೇದು.
ನಾಳೆ ಬನ್ನಿ – ಹೇಳಿದ್ದಲ್ಲದೋ, ಮರದಿನ ಹೋದವು.
“ಎಂತಾತು ನಿಂಗಳ ಮಗನ ರಿಸಳ್ಟು” – ಹೇದು ಆ ಆಪೀಸರ ಇತ್ಲಾಗಿ ಕೇಳಿತ್ತಾಡ, ಮಾಣಿಯ ಅಬ್ಬೆಪ್ಪನ ಹತ್ತರೆ. ಇವಕ್ಕೆಂತ ಗೊಂತು, ಪಾಪ! ಹುಡ್ಕಿ ಕೊಡೆಕಾದ್ದು ಆ ಆಪೀಸರ, ಇವರತ್ರೆ ಕೇಳ್ತು, ಬೋದಾಳ!!
ಎಂಗೊಗೆ ಗೊಂತಾಯಿದಿಲ್ಲೆ, ನಿಂಗಳೇ ಹೇಳೇಕಟ್ಟೇ – ಹೇಯಿದವಾಡ ಆ ಮಾಣಿಯ ಮನೆಯೋರು.
ಹೋ, ಆನೇ ಹೇಳೇಕಲ್ಲದೋ, ಆತಾತು, ಹೇಳ್ತೆ – ನಾಳೆ ಬನ್ನಿ ಹೇದು ಕಳುಗಿತ್ತಾಡ.
ನಾಳೆ, ನಾಳೆ, ನಾಳೆಗಳಲ್ಲಿ ಹಲವು ದಿನ ಹೋತು. ಅಷ್ಟರಲ್ಲಿ ಆ ಮಾಣಿಯ ಕ್ಲಾಸಿನೋರಿಂಗೆ ಮುಂದಾಣ ಶಾಲೆಗೆ ಸೇರಿಯೂ ಆತು. ಈ ಮಾಣಿಗೆ ಮುಂದಾಣದ್ದು ಸೇರ್ಲೆ ಹಿಂದಾಣದ್ದು ಸಂದಿದ್ದಿಲ್ಲೆ ಇದಾ! ಅದಕ್ಕೆ ಬೇಕಾದ ವೆವಸ್ತೆಯೂ ಆಯಿದಿಲ್ಲೆ.
ಇನ್ನು ಕಾದರಾಗ ಹೇದು ಅದರಿಂದ ಮೇಗಾಣ ಆಪೀಸಿಂಗೆ ಇವ್ವೇ ಹೋದವಾಡ.
ಅಲ್ಲಿಯೂ ಇದೇ ಕತೆ, ದೊಡ್ಡ ಉಪಕಾರ ಎಂತೂ ಆಯಿದಿಲ್ಲೆ.
ಶಿಕ್ಷಣ ಇಲಾಖೆಯ ಮನುಷ್ಯಂಗೇ ಪೋನು ಮಾಡಿದವಾಡ, ಅದು ಪೋನು ಮಾಡಿದೋರಿಂಗೆ ಎರಡ್ಡು ಬೈದು ಮಡಗಿತ್ತಾಡ.
ಒಟ್ಟಾರೆ ಆ ಮಾಣಿಯ ಹೆತ್ತೋರಿಂಗೆ ಎಲ್ಲೋರ ಮೇಗೆಯೂ ಬೇಜಾರ ಬಂದು ಹೋತು.
ಇಡೀ ವ್ಯವಸ್ಥೆಯ ಮೇಗೆ ಹೇಸಿಗೆ ಹುಟ್ಟಿ ಹೋತು.
~
ಪರೀಕ್ಷೆ ಬರದ ಮತ್ತೆ ಎಂತಾಯೇಕು? ಅದರ ಫಲಿತಾಂಶ ಬರೆಕ್ಕು, ಅಪ್ಪೋ?
ಆದರೆ, ಈ ಮಾಣಿಗೆ ಪರೀಕ್ಷೆ ಬರದಾಯಿದು, ಆದರೆ ಫಲಿತಾಂಶ ಇನ್ನೂ ಬಯಿಂದಿಲ್ಲೆ.
ಆರ ತಪ್ಪು? ಮಾಣಿದಂತೂ ಅಲ್ಲಲೇ ಅಲ್ಲ!!
~
ಈಗಾಣ ಸ್ಪರ್ಧಾತ್ಮಕ ಜಗತ್ತಿಲಿ ಒಬ್ಬಂಗೊಬ್ಬ ಸ್ಪರ್ಧಿಗಳೇ. ಈಚವನಿಂದ ಆಚೋನು ಉಶಾರಿ ಆಯೇಕು. ಅವನಿಂದ ಮತ್ತೊಬ್ಬಂಗೆ ಮಾರ್ಕು ಜಾಸ್ತಿ ಸಿಕ್ಕೇಕು ಹೇಳ್ತದೇ ಸ್ಪರ್ಧೆ. ಮದಲಾಣ ಹಾಂಗಿರ್ತ ಗುರುಕುಲ ಇಲ್ಲೆ. ಗುರುಕುಲ ಇದ್ದಲ್ಲಿ ಸ್ಪರ್ಧೆ ಇಲ್ಲೆ, ಕೇವಲ ಪರಸ್ಪರ ಪ್ರೀತಿಗೊ ಮಾಂತ್ರ ಇಪ್ಪದು. ಈಗ ಏನಿದ್ದರೂ ಸ್ಪರ್ಧೆ.
ಸ್ಪರ್ಧೆ ಇರಳಿ, ಸಮಸ್ಯೆ ಇಲ್ಲೆ, ಆದರೆ ಆ ಸ್ಪರ್ಧೆ ನಡೆಶುತ್ತೋರು ಸರಿ ಬೇಡದೋ? ಪರೀಕ್ಷೆ ಬರದ ಮಾಣಿಯ ಒಬ್ಬನ ಭವಿಷ್ಯವ ಮಡಿಕ್ಕೊಂಡು ಆಟಾಡುದೋ?
~
ಕೈರಂಗಳ ಅಣ್ಣಂಗೆ ಈ ಮಾಣಿಯ ಅವಸ್ಥೆ ಕಂಡು, ಒಟ್ಟು ವಿಷಯ ತುಂಬಾ ಬೇಜಾರಾಗಿ, ಸ್ವತಃ ಬೆಂಗ್ಳೂರಿನ ದೊಡ್ಡಪೀಸಿಂಗೆ ಹೋಗಿ ಮಾತಾಡ್ಳೆ ಕರಿಕಾರಿಲಿ ಹೆರಟದಾಡ. ಆಗಲಿ, ಬೇಗ ಮಾತಾಡ್ಳಿ, ಚೆಂದಲ್ಲಿ ಕೆಲಸ ಸಾಗಲಿ.
ಸರ್ಕಾರದ ಸಂಸ್ಥೆ ಬೇಗಲ್ಲೇ ಎಚ್ಚರಿಗೆ ಮಾಡಿಂಡು, ತುಕ್ಕು ಹಿಡುದ ವ್ಯವಸ್ಥೆಯ ಬೇಗಲ್ಲೇ ಸುಧಾರ್ಸಿಕ್ಕಿ, ಆ ಮಾಣಿಯ ಭವಿಷ್ಯವ ಒಳಿಶಲಿ, ಬೆಳೆಶಲಿ – ಹೇದು ಹಾರೈಕೆ.
ಬೇಗಲ್ಲೇ ಒಳ್ಳೆ ಫಲಿತಾಂಶ ಆ ಮಾಣಿಗೆ ಸಿಕ್ಕಲಿ – ಹೇಳ್ತದು ಒಪ್ಪಣ್ಣನ ನಿರೀಕ್ಷೆ.
ಅಲ್ಲದೋ?
~
ಒಂದೊಪ್ಪ: ಪರೀಕ್ಷೆಯ ಗಾಂಭೀರ್ಯತೆ ಫಲಿತಾಂಶ ಕೊಡುದರ್ಲಿ ಇಪ್ಪದು. ಅಲ್ಲದೋ?
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಆದಷ್ಟು ಬೇಗ ಮಾಣಿಯ ರಿಸಲ್ಟು ಬರಲಿ..ಉತ್ತಮ ಅಂಕವ ಗಳಿಸಲಿ..
ಸರಿ ಒಪ್ಪಣ್ಣ . ನಾವೂ ಹಾಂಗೆ ಹಾರೈಸುದು
🙁