ಮೋದಿ ನಡದ ಹಾದಿ
ಲೋಕಸಭೆಯ ಚುನಾವಣೆಲಿ ಅದ್ಭುತ ಜಯ ಸಾಧಿಸಿದ° ನರೇಂದ್ರ ಮೋದಿ
ಸುಮ್ಮನೆ ಗೆದ್ದಿದಾ°ನಿಲ್ಲೆ ದೇಶಲ್ಲಿಡಿ ಪ್ರಚಾರ ಮಾಡಿದ್ದ° ಬಿಡದ್ದೆ ಪ್ರತಿಯೊಂದು ಬೀದಿ
ಇನ್ನಾದರೂ ಸರಿಯಕ್ಕೊ ಏನೋ ನಮ್ಮ ಭಾರತ ದೇಶದ ಏಳಿಗೆಯ ಹಾದಿ
ಇಂದ್ರಾಣ ಜವ್ವನಿಗರು ಮುಂದೆ ಬರಲಿ ಮೋದಿಯ ಜೀವನ ಚರಿತ್ರೆಯ ಓದಿ
ಧೂಳೀಪಟ
೨೦೧೪ರ ಲೋಕಸಭೆಯ ಚುನಾವಣೆಲಿ ಆತು ಕಾಂಗ್ರೆಸುಪಕ್ಷ ಧೂಳೀಪಟ
ಬಹಳ ಬೇಜಾರಾವ್ತು ನೋಡ್ಳೆ ಕಾಂಗ್ರೆಸು ಪಕ್ಷದ ಹೀನಾಯ ಸೋಲಿನ ನೋಟ
ನಡದತ್ತಿಲ್ಲೆ ಈ ಸರ್ತಿಯ ಚುನಾವಣೆಲಿ ಆ ಪಕ್ಷದ ನಾಯಕರುಗಳ ಆಟ
ನೋಡ್ಳೆಡಿಯ ಚುನಾವಣೆಲಿ ಸೋತ ಕಾಂಗ್ರೆಸ್ಸು ಅಭ್ಯರ್ಥಿಗಳ ಪೇಚಾಟ
ಸಹಕಾರ
ಲೋಕಸಭೆಯ ಚುನಾವಣೆಲಿ ಬಿಜೆಪಿಯ ಕೈಸೇರಿತ್ತು ನಮ್ಮ ದೇಶದ ಅಧಿಕಾರ
ಕಾಂಗ್ರೆಸ್ಸು ಪಕ್ಷದ ನಾಯಕರ ಮುಂದೆ ನಿಂದಿದು ಹೀನಾಯ ಸೋಲಿನ ಭೂತಾಕಾರ
ಎಷ್ಟೋ ವರ್ಷಂಗಳ ಮತ್ತೆ ಬಂತು ಕೇಂದ್ರಲ್ಲಿ ಕಾಂಗ್ರೆಸು ಹೊರತಾದ ಸರಕಾರ
ನರೇಂದ್ರಮೋದಿಯ ಆಡಳಿತ ಭಾರಿ ಒಳ್ಳೆದಕ್ಕು ಇತರ ಪಕ್ಷಂಗೊ ಕೊಟ್ಟರೆ ಸಹಕಾರ
***
- ಹಾಸ್ಯ ತರಂಗ - September 4, 2014
- ಗೆಣವತಿಗೆ ನಮನ - August 28, 2014
- ಸುಖ ಜೀವನದ ದಾರಿ - August 21, 2014
ಈಗಾಣ ಕಾಲಮಾನಕ್ಕೆ ತಕ್ಕ ಹಾಂಗೆ ಚುಟುಕ ಬಂದದು ಲಾಯ್ಕಾಯಿದು ಅರ್ತಿಕಜೆ ಮಾವ.
ಸಮಯಕ್ಕೆ ಹೊಂದಿಗೊಂಡು ಚೆಂದಕ್ಕೆ ಬರೆತ್ತಿ.
ಧನ್ಯವಾದಂಗ
ಒಂದು ದಿಟ್ಟ ಸರ್ಕಾರ ಕೇಂದ್ರಲ್ಲಿ ಬಯಿಂದು ಹೇಳುವದೇ ಶುಭ ಸಮಾಚಾರ.
ಜೆನಂಗೊಕ್ಕೆ ನಿರೀಕ್ಷೆ ತುಂಬಾ ಇದ್ದು. ಎಲ್ಲರ ಸಹಕಾರಂದ ದೇಶವ ಬಲಿಷ್ಠವಾಗಿ ಮಾಡಲಿ ಹೇಳಿ ಹಾರೈಸುವೊ°
ಭರವಸೆ ತುಂಬ. ನಿರೀಕ್ಶೆ ಅಪಾರ. ಒಳ್ಲೆದಾಗ್ಲಿ
ಮೋದಿಯ ಮೇಲೆ ಅಪಾರ ಭರವಸೆ ಮಡುಗಿದ್ದವು ಜೆನಂಗ .ಆದರೆ ಇಷ್ಟು ಹದಗೆಟ್ಟ ಪರಿಸ್ತಿತಿಯ ಒಮ್ಮಿಂದೊಮ್ಮೆಗೆ ಬದಲಾಯಿಸುದು ಸುಲಭ ಇಲ್ಲೇ .ಎಲ್ಲ ನಾಯಕರು ಮೋದಿ ಹಾಂಗೆ ನಿಸ್ವಾರ್ಥ ವಾಗಿ ಸಮರ್ಥವಾಗಿ ಕೆಲಸ ಮಾಡಕ್ಕು ಹಾಂಗಾದರೂ ಅದಕ್ಕೂ ಸುಮಾರು ಸಮಯ ಬೇಕು .ಗುಜರಾತ್ ಒಂದು ರಾಜ್ಯವ ಇಷ್ಟು ಮುಂದಕ್ಕೆ ತಪ್ಪಲೆ ಮೊದಿಯಂಥ ಸಮರ್ಥರಿಗೆ 15 ವರ್ಷ ಬೇಕಾತು .ಅಲ್ಲಿ ಮೋದಿ ಕೆಲ್ಸಕ್ಕೆ ಅಡ್ಡಕಾಲು ಹಾಕುವೋರು ಇಲ್ಲವೇ ಇಲ್ಲೆ.ಆದರೆ ಇಡೀ ದೇಶವ ಗುಜರಾತ್ ಮಾದರಿಲಿ ಮುನ್ನಡೆಸುವುದು ಸುಲಭದ ವಿಚಾರ ಅಲ್ಲ .5-10 ವರ್ಷಂಗ ಆದರೂ ಬೇಕಕ್ಕುಆದರೂ ಪ್ರಗತಿಯ ದಾರಿ ಸುರುವಿಂದಲೇ ಕಾಂಗು .ಮೋದಿ ಯ ಮೂಲಕ ಭಾರತಕ್ಕೆ ಮತ್ತೊಂದರಿ ಸುವರ್ಣ ಯುಗ ಬರಲಿ (ಈ ಹಿಂದೆ ಗುಪ್ತರ ಕಾಲ ಭಾರಕ್ಕೆ ಸುವರ್ಣ ಯುಗ ಆಗಿತ್ತು ) ಹೇಳಿ ದೇವರಲ್ಲಿ ಪ್ರಾರ್ಥಿಸುವ
ಬಾರಿ ಲಾಯಕಿದ್ದು ಚುಟುಕುಗೊ.ಅಭಿನ೦ದನಗೊ ಕೃಷ್ಣಣ್ಣ,
ಸುಧಾರಣೆ ಆಗಲೇಬೇಕು. ಬೆಲೆಬಿಸಿ ಇಳಿಯೆಕ್ಕೆ.ಇಲ್ಲದ್ರೆ ಕ0ಜಿ ಹಾಕಿದರೆ ಸಾಲ ಹೇಳಿ ಮಾತ್ ಬಪ್ಪಲೂ ಸಾಕು.
ಅಪ್ಪು ಕ0ಜಿ ಹಾಕಿದರೆ ಸಾಲ ನಕ್ಕುಲೂ ಅರಡಿಯಕ್ಕು ಅಲ್ಲದ ?
ಅನುಮೋದನೆ/ತಿದ್ದುಪಡಿ ಇದ್ದರೆ ಹಳೇಮೆಡ್ರಾಸ್ ಭಾವನ ಕಡ0ಗೆ ಸೇರಿದ್ದು !
ನಿಂಗ ಕಂಜಿ ಹಾಕಿರೆ ಸಾಲ ನಕ್ಕುಲೂ ಅರಡಿಯಕ್ಕು ಹೇಳುವ ನುಡಿಗಟ್ಟಿನ ಅನ್ವಯ ಮಾಡಿದ ವಿಧಾನ ಲಾಯಕ ಆಯಿದು ಯಮ್.ಕೆ. ಅಣ್ಣ ,ನಿಂಗಳ ಎಲ್ಲರ ಪ್ರೋತ್ಸಾಹಕ್ಕೆ ಆನು ಋಣಿ ,ಧನ್ಯವಾದಂಗ