ಬನ್ನಿ ಮುಂದೆ ಬನ್ನಿ ಮುಂದೆ ಬನ್ನಿ ಮುಂದೆ ಮುಂದೆ
ನಿಲ್ಲೆಡಿ ನಿಂಗೊ ಆರುದೆ ಹಿಂದೆ ಬನ್ನಿ ಬೇಗ ಮುಂದೆ
ನಿಂದರೆ ಹಿಂದೆ ನಿಂಗೊಗೆ ಮತ್ತೆ ಬಪ್ಪಲೆ ಕಷ್ಟ ಮುಂದೆ
ಎಲ್ಲ ಕ್ಷೇತ್ರಲ್ಲು ಬರೆಕು ಮುಂದೆ ಅದರ ತಿಳ್ಕೊಳ್ಳಿ ಇಂದೆ
ಎಲ್ಲದರಲ್ಲು ಬರೆಕ್ಕು ಮುಂದೆ ಅದರ ತಿಳ್ಕೊಳ್ಳಿ ನಿಂಗೊ ಇಂದೆ
ಅತ್ತೆ ಇತ್ತೆ ನೋಡೆಡಿ ಹಿಂದೆ ಮುಂದೆ ಬಗ್ಗೆಡಿ
ಮೇಲೆ ಕೆಳ ತಿರುಗೆಡಿ ಸಂಕೋಚ ಏನೂ ಮಾಡೆಡಿ
ನಿಂಗೊ ರಜವೂ ಹೆದರ್ಲಾಗ ಹೆದರಿರೆ ನಮ್ಮ ಕೆಲಸ ಸಾಗ
ಮನಸ್ಸು ಗಟ್ಟಿ ಮಾಡಿ ನಾವು ಹೋಯೆಕ್ಕು ಮುಂದೆ ಬೇಗ
ಎಲ್ಲಿ ಹೋದರು ಮುಂದೆಯೇ ಕೂಪೋ° ಹಿಂದಾಣ ಬೆಂಚಿ ಬೇಡ
ಕಷ್ಟದ ಹೊಳೆಯ ದಾಂಟುಲೆ ಸಂಕ ಗಟ್ಟಿ ಇದ್ದರೆ ಆಡ
ಮುಂದೆ ಇಪ್ಪೋರ ದೂಡುಗು ಹಿಂದೆ ಹೋಪಲೆ ಮುಂದೆ ಬಿಡವು
ಹಿಂದೆ ಇಪ್ಪೋರ ಮುಂದೆ ತಪ್ಪಲೆ ಪ್ರಯತ್ನವ ಆರುದೆ ಮಾಡವು
ತಡವು ಮಾಡಿರೆ ಮತ್ತೆ ನವಗೆ ಕೂಪಲೆ ಜಾಗೆಯೆ ಸಿಕ್ಕ
ಹೊತ್ತಿಂಗೆ ಸರಿಯಾಗಿ ಹೋಗದ್ದರೆ ಮತ್ತೆ ನವಗೆ ಏನೂ ದಕ್ಕ
ಆಚಮನೆ ಶಂಭಟ್ಟ ಭಾವ° ಈಚಮನೆ ಸುಬ್ರಾಯ ಭಾವ°
ಮೇಗಾಣ ಮನೆ ನರಸಿಂಹ ಭಾವ° ಕೆಳಾಣ ಮನೆ ಕಿಟ್ಟಣ್ಣ ಭಾವ°
ಮೂಡುಮನೆ ಗೋಪಾಲ ಭಾವ° ತೆಂಕಮನೆ ವೆಂಕಪ್ಪ ಭಾವ°
ಭೇದಭಾವ ಏನೇ ಇದ್ದರು ಒಂದೇ ಆಗಿರಲಿ ಮನಸಿನ ಭಾವ
ಸಿಕ್ಕಿದ್ದಕ್ಕೆ ಮುಟ್ಟಿದ್ದಕ್ಕೆ ಲಡಾಯಿ ಮಾಡಿ ಕೋರ್ಟು ಮೆಟ್ಳು ಹತ್ತೆಡಿ
ಸಣ್ಣ ಸಣ್ಣ ವಿಷಯಕ್ಕೆ ನಂಬ್ರ ಮಾಡುವ ಕೆಟ್ಟ ಅಭ್ಯಾಸವ ಬಿಟ್ಟುಬಿಡಿ
ಒಬ್ಬಂಗೊಬ್ಬಂಗೆ ತಾಂಟ್ಸಿ ಹಾಕಿ ಚೆಂದ ನೋಡುಗು ಕೆಲವು ಜೆನ
ಏನಾರು ಕಾರಣ ಹುಡುಕ್ಕಿ ನೆರೆಕರೆಲಿ ಹರ್ಕತ್ತು ಮಾಡುಗು ಪ್ರತಿದಿನ
ಕೂಪಲೆ ಬಿಡವು ನಿಂಬಲೆ ಬಿಡವು ಉಂಬಲೆ ಬಿಡವು ಈ ಶಕುನಿಗೊ
ಹೋಪಲೆ ಬಿಡವು ಬಪ್ಪಲೆ ಬಿಡವು ಒರಗಲೆ ಬಿಡವು ಈ ಶೆನಿಗೊ
ನಾವುದೆ ಮನುಷ್ಯರು ಉಂಬದು ಅಶನ ಹೇಳ್ವದು ಇವಕ್ಕೆ ಗೊಂತಿಲ್ಲೆ
ಈ ಶೆನಿಗಳ ಕಾಟವ ತಪ್ಪುಸಿ ನಾವು ನಡದರೆ ಮತ್ತೆ ಚಿಂತಿಲ್ಲೆ
ನಮ್ಮ ಸಂಸ್ಕಾರ ಗುಣವಿದ್ವತ್ತೆಲ್ಲ ಬೆಲೆಯಿಪ್ಪದು ಹೇಳಿ ತಿಳಿಯೆಕ್ಕು
ತಗ್ಗದ್ದೆ ಬಗ್ಗದ್ದೆ ತಲೆನೆಗ್ಗಿ ನಾವು ಬಪ್ಪ ಕಷ್ಟವ ಎದುರುಸೆಕ್ಕು
ತಾರತಮ್ಯ ಎಷ್ಟೇ ಇದ್ದರೂ ನಮ್ಮ ಯೋಚನೆ ಒಂದೇ ಆಯೆಕ್ಕು
ನಮ್ಮ ಸಮಾಜದ ಸಂಸ್ಕ್ಟತಿ ಒಳುಶೆಕ್ಕಾದರೆ ಒಂದಾಗಿ ನಾವು ಗೈಯೆಕ್ಕು
[ ಬನ್ನಿ ಮುಂದೆ
ರಚನೆ: ಅರ್ತಿಕಜೆ ಮಾವ]
- ಹಾಸ್ಯ ತರಂಗ - September 4, 2014
- ಗೆಣವತಿಗೆ ನಮನ - August 28, 2014
- ಸುಖ ಜೀವನದ ದಾರಿ - August 21, 2014
ನಮ್ಮ ಸಂಸ್ಕಾರ ಗುಣವಿದ್ವತ್ತೆಲ್ಲ ಬೆಲೆಯಿಪ್ಪದು ಹೇಳಿ ತಿಳಿಯೆಕ್ಕು
ತಗ್ಗದ್ದೆ ಬಗ್ಗದ್ದೆ ತಲೆನೆಗ್ಗಿ ನಾವು ಬಪ್ಪ ಕಷ್ಟವ ಎದುರುಸೆಕ್ಕು!!!
ವಾಹ್!
ಎಂಥಾ ಮಾತು…! ಒಪ್ಪ 🙂