ಬಹುಮುಖ ಪ್ರತಿಭೆಯ “ಗೌತಮ ಡಿ.ಕೆ.”
ಪ್ರಸ್ತುತ ಸುರತ್ಕಲ್ NITK ಆಂಗ್ಲ ಮಾಧ್ಯಮ ಶಾಲೆಯ ೭ ನೇ ತರಗತಿಲಿ ಕಲಿತ್ತಾ ಇಪ್ಪ ಗೌತಮ್ ಡಿ.ಕೆ, ದೇಂತಾಜೆ ಕೃಷ್ಣ ಭಟ್, ರಾಜೇಶ್ವರಿ ದಂಪತಿಯ ಸುಪುತ್ರ.
ಶಾಲೆಯ ಪಠ್ಯ, ಪಠ್ಯೇತರ ಹಾಂಗೂ ಆಟೋಟಗಳಲ್ಲಿ ಅತ್ಯುತ್ತಮ ಸಾಧನೆಗಾಗಿ ಕೊಡುವ “ಬೆಸ್ಟ್ ಆಲ್ ರೌಂಡರ್” ಪ್ರಶಸ್ತಿ ತೆಕ್ಕೊಂಡ ಪ್ರತಿಭಾವಂತ ವಿದ್ಯಾರ್ಥಿ ಅಲ್ಲದ್ದೆ, ಸಾಂಸ್ಕೃತಿಕ ಕಾರ್ಯಕ್ರಮಂಗಳಲ್ಲಿಯೂ ಭಾಗವಹಿಸಿ ಹಲವಾರು ಪ್ರಶಸ್ತಿಗಳ ತನ್ನದಾಗಿಸಿಗೊಂಡಿದ.
ಸಂಗೀತ, ಯಕ್ಷಗಾನ, ನೃತ್ಯ ಮತ್ತೆ ಏಕ ಪಾತ್ರಾಭಿನಯ ಇವನ ಇತರ ಆಸಕ್ತಿಯ ಸಾಧನಾ ಕ್ಷೇತ್ರಂಗೊ.
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೆಡೆಸುವ “ಕಲಾ ಪ್ರತಿಭೋತ್ಸವ” ಸ್ಪರ್ಧೆಗಳ ಏಕಪಾತ್ರಾಭಿನಯ ವಿಭಾಗಲ್ಲಿ ಜಿಲ್ಲಾ ಮಟ್ಟಲ್ಲಿ ಪ್ರಥಮ ಸ್ಥಾನವ ನಿರಂತರ ಮೂರು ವರ್ಷ ಕಾಯ್ದುಗೊಂಡು ಬಯಿಂದ.
“ಸ್ಪಿಕ್ ಮೆಕೇ” ಯವು ನಡೆಸುವ “ಆರಾಧನಾ” ಸ್ಪರ್ಧೆಗಳ ಛದ್ಮವೇಷ, ದೇಶಭಕ್ತಿ ಗೀತೆ ಮತ್ತೆ ಏಕಪಾತ್ರಾಭಿನಯ ವಿಭಾಗಂಗಳಲ್ಲಿಯೂ ಪ್ರಥಮ ಸ್ಥಾನವ ಪಡಕ್ಕೊಂಡ ಬಾಲ ಪ್ರತಿಭೆ.
ಹಲವಾರು ಅಂತರ್ ಶಾಲಾ ಸಂಗೀತ, ಜನಪದ ನೃತ್ಯ, ಹಾಂಗೂ ಭಾಷಣ ಸ್ಪರ್ಧೆಗಳಲ್ಲಿಯೂ ಪ್ರಥಮ/ದ್ವಿತೀಯ ಬಹುಮಾನ ತೆಕ್ಕೊಂಡಿದ.
ಕಳೆದ ಎರಡು ವರ್ಷಂದ ಯಕ್ಷಗಾನ ತರಬೇತಿಯ ತೆಕ್ಕೊಳ್ತಾ ಇದ್ದು, ಜಿಲ್ಲೆಯ ಹಲವಾರು ಕಡೆ ಯಕ್ಷಗಾನ ಪ್ರದರ್ಶನಲ್ಲಿ ವಿವಿಧ ಪೌರಾಣಿಕ ಪಾತ್ರ ಮಾಡಿ ಜೆನ ಮೆಚ್ಚುಗೆ ಗಳಿಸಿದ್ದ.
ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಲ್ಲಿ ಫೆಬ್ರುವರಿ ೨೨/೨೦೧೪ ರಂದು ಕರ್ನಾಟಕ ಸರಕಾರದ “ಕನ್ನಡ ಮತ್ತು ಸಂಸ್ಕೃತಿ ಇಲಾಖೆ”ಯ ಪ್ರಾಯೋಜಕತ್ವದ “ಚಿಗುರು” ಕಾರ್ಯಕ್ರಮಲ್ಲಿ ಏಕವ್ಯಕ್ತಿ ಯಕ್ಷನಾಟ್ಯ ಪ್ರದರ್ಶನ ನೀಡಿ, ತನ್ನ ಗುರು ರವಿ ಅಲೆವೂರಾಯರಿಂದ “ಭೇಷ್” ಹೇಳಿಸಿಗೊಂಡಿದ.
“ಜ್ಞಾನ ಮಂದಿರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಬೆಂಗಳೂರು” ಇವು ಈ ಮಾಣಿಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಕೊಡುಗೆಯ ಗುರುತಿಸಿ ಮೊನ್ನೆ ಜೂನ್ ಒಂದರಂದು ಮಂಗಳೂರಿನ ಪುರಭವನಲ್ಲಿ ನಡೆದ ಕಾರ್ಯಕ್ರಮಲ್ಲಿ “ವಚನ ಮಂದಾರ ರಾಜ್ಯ ಪುರಸ್ಕಾರ” ಪ್ರಶಸ್ತಿಯ ಕೊಟ್ಟು ಗೌರವಿಸಿದ್ದವು.
ಡಿ.ಕೆ.ಗೌತಮ ಇನ್ನು ಮುಂದೆಯೂ ತನಗೆ ಇಷ್ಟವಾದ ಕಲಾಕ್ಷೇತ್ರಲ್ಲಿಯೂ ಸೇವೆ ಸಲ್ಲಿಸಿ, ಹತ್ತು ಹಲವಾರು ಪ್ರಶಸ್ತಿಯ ತನ್ನದಾಗಿಸಿಗೊಂಡು, ತಾನು ಕಲಿತ್ತ ಶಾಲೆಗೆ, ತನ್ನ ಹೆತ್ತವರಿಂಗೆ ಹಾಂಗೂ ಸಮಾಜಕ್ಕೆ ಒಳ್ಳೆಯ ಕೀರ್ತಿ ತಂದು ಕೊಡಲಿ ಹೇಳಿ ನಾವು ಆಶೀರ್ವಾದ ಮಾಡುವೊ°
~~~~***~~~~
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಎಲ್ಲಾ ಪ್ರಕಾರದ ಬೆಳವಣಿಗೆ ಗೌತಮನ ಸಾಧನೆ. ಎತ್ತರ ಬೆಳೆಯಲಿ
ಅಭಿನಂದನೆ .ಅವನ ಕಾರ್ಯಕ್ರಮ ನೋಡಿದ್ದೇ. ಭಾರೀ ಲಾಯಕ ಆಯಿದು .
ಬಹುಮುಖಪ್ರತಿಭೆ ಗೌತಮಂಗೆಅಭಿನಂದನೆಗೊ.
ಶರ್ಮಪ್ಪಚ್ಚಿ, ಒಬ್ಬ ಪ್ರತಿಭೆ ತುಂಬಿದ ಮಾಣಿಯ ಪರಿಚಯ ಬೈಲಿನ ಮೂಲಕ ಮಾಡಿದ್ದಕ್ಕೆ ಧನ್ಯವಾದಂಗೊ.
ಮಾಣಿಯ ಭವಿಷ್ಯ ಬೆಳಗಲಿ..
ಗೌತಮ೦ಗೆ ಶುಭಾಹಾರೈಕೆಗೋ. ಪಾಠ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮುಂದುವರಿಯಲಿ . ಗುರುಹಿರಿಯರ ಆಶೀರ್ವಾದ ಸದಾ ಇರಲಿ.
ದೇಂತಾಜೆ ಗೌತಮ೦ಗೆ ಅಭಿನಂದನೆ.