Latest posts by ಗಣೇಶ ಮಾವ° (see all)
- ಸಪ್ತಪದಿ - August 1, 2011
- 15-ಜೂನ್-2011: ಖಂಡಗ್ರಾಸ ಚಂದ್ರಗ್ರಹಣ - June 15, 2011
- ಚಾಂದ್ರ ಮಾನ ಯುಗಾದಿಗೆ ನೆರೆಕರೆಯ ಸಂಭ್ರಮ - April 2, 2011
ನಮಸ್ಕಾರ,
ಇಷ್ಟು ದಿನ ಮಂತ್ರ, ಶ್ಲೋಕ ಹೇಳಿ ರಜ್ಜ ವಿವರಣೆ ಕೊಟ್ಟಿದೆ. ಇಂದು ರಜ್ಜ ಅಡಿಗೆ ವಿಷಯದ ಬಗ್ಗೆ ಹೇಳ್ತೆ.
ಆನು ಬೆಂಗುಳೂರಿಂಗೆ ಹೋದಿಪ್ಪಗ ಕೆಲವು ಸರ್ತಿ ಪುರುಸೊತ್ತಿಪ್ಪಗ ಆನು, ಅಜ್ಜಕಾನ ಬಾವ, ಬೀಸ್ರೋಡು ಮಾಣಿ, ಮಾಷ್ಟ್ರುಮಾವನ ಮಗ – ಎಲ್ಲೋರು ಸೇರಿ ಕೆಲವು ಸರ್ತಿ ಪರೋಟ ಮಾಡಿ ತಿಂಬ ಕ್ರಮ ಇದ್ದು..
ಆದರೆ ಸೌಮ್ಯಕ್ಕ, ಬಂಡಾಡಿ ಅಜ್ಜಿ, ಶ್ರೀ ಅಕ್ಕ, ದೀಪಕ್ಕ ಮಾಡಿದ ಹಾಂಗೆ ಆಗ..
ಆದರೂ ಅಡಿಗೆಲಿ ಬೀಸ್ರೋಡು ಮಾಣಿ ಉಷಾರು..
ಎಂಗೋ ಅವಂಗೆ ಅಡಿಗೆ ಮಾಡ್ಲೆ ಸೇರಿಗೊಂಬದು ಮಾತ್ರ..ಹೀಂಗೆ ಎಂಗೊ ಪರೋಟ ಮಾಡಿದ್ದದು ಹೇಂಗೆ ಹೇಳಿ ಬೈಲಿಲಿ ಹೇಳುವ ಹೇಳಿ ಕಂಡತ್ತು.
ಬೇಕಪ್ಪ ಸಾಮಾನುಗ:
ಗೋಧಿ ಹೊಡಿ: ೪ ಕಪ್
ಮೈದಾ ಹೊಡಿ: ೨ ಕಪ್
ಮೆಣಸಿನ ಹೊಡಿ: ಅರ್ಧ ಚಮಚ
ತೆಂಗಿನೆಣ್ಣೆ: ೨೫೦ಗ್ರಾಂ
ನೀರು: ೨೫೦ಮಿ.ಲೀ.
ಉಪ್ಪು: ರುಚಿಗೆ ತಕ್ಕ ಹಾಂಗೆ.
ಮಾಡ್ತ ವಿಧಾನ:
ಗೋಧಿಹೊಡಿ ಮತ್ತೆ ಮೈದಾ ಹೊಡಿಯ ಜೆರಡೆಲಿ ಸರೀ ಗಾಳ್ಸಿಗೊಂಡು ಅದರಒಟ್ಟು ಸೇರ್ಸಿ ಅಗಲ ಬಾಯಿ ಪಾತ್ರಕ್ಕೆ ಹಾಕಿ.
ರಜ್ಜ,ಎಣ್ಣೆ,ಮೆಣಸಿನ ಹೊಡಿ,ಉಪ್ಪು – ಎಲ್ಲವನ್ನೂ ರಜಾ ನೀರಿಲಿ ಗಟ್ಟಿಗೆ ಕಲಸೆಕ್ಕು.
ಮತ್ತೆ ಚಪಾತಿ ಉಂಡೆಯ ಹಾಂಗೆ ಉಂಡೆ ಮಾಡಿ ಮಡುಗೆಕ್ಕು.
ಮತ್ತೆ ಲಟ್ಟಣಿಗೆಗೆ, ಚಪಾತಿ ಮಣೆಗೆ ಲಾಯಿಕ ಎಣ್ಣೆ ಹಾಕಿ ಉದ್ದೆಕ್ಕು.
ಮತ್ತೆ ಹಿಟ್ಟಿನ ಉಂಡೆಯ ಲಟ್ಟುಸಲೆ ಬಪ್ಪ ಹಾಂಗೆ ಎಣ್ಣಗೆ ಅದ್ದಿ ಉರೂಟು ಅಪ್ಪ ಹಾಂಗೆ ಲಟ್ಟುಸೆಕ್ಕು.
ಮತ್ತೆ ಅದರ ಕಾವಲಿಗೆಗೆ ಅಥವಾ ಈಗಾಣ ತವಾಕ್ಕೆ ಹಾಕಿ ನಸೂ ಕೆಂಪು ಅಪ್ಪನ್ನಾರ ಬೇಯಿಷೆಕ್ಕು.
ಇದಕ್ಕೆ ಕೂಡ್ಲೆ ಕಾಯಿ ಚಟ್ನಿ,ಬೆಣ್ಣೆ,ನೀರುಳ್ಳಿತುಂಡು, ಅಥವಾ ಗಸಿ ಮಾಡಿದರೆ ತಿಂಬಲೆ ಲಾಯಿಕ ಆವ್ತು.
ಇನ್ನು ಇದರ್ಲಿ ಬೇರೆ ರೀತಿಲಿ ಮಾಡುವ ವಿಧಾನಂಗ ಇದ್ದರೆ ತಿಳುಶಿ ಆತೋ?
ಆನು ಬೆಂಗುಳೂರಿಂಗೆ ಹೋದಿಪ್ಪಗ ಕೆಲವು ಸರ್ತಿ ಪುರುಸೊತ್ತಿಪ್ಪಗ ಆನು, ಅಜ್ಜಕಾನ ಬಾವ, ಬೀಸ್ರೋಡು ಮಾಣಿ, ಮಾಷ್ಟ್ರುಮಾವನ ಮಗ – ಎಲ್ಲೋರು ಸೇರಿ ಕೆಲವು ಸರ್ತಿ ಪರೋಟ ಮಾಡಿ ತಿಂಬ ಕ್ರಮ ಇದ್ದು..
ಆದರೆ ಸೌಮ್ಯಕ್ಕ, ಬಂಡಾಡಿ ಅಜ್ಜಿ, ಶ್ರೀ ಅಕ್ಕ, ದೀಪಕ್ಕ ಮಾಡಿದ ಹಾಂಗೆ ಆಗ..
ಆದರೂ ಅಡಿಗೆಲಿ ಬೀಸ್ರೋಡು ಮಾಣಿ ಉಷಾರು..
ಎಂಗೋ ಅವಂಗೆ ಅಡಿಗೆ ಮಾಡ್ಲೆ ಸೇರಿಗೊಂಬದು ಮಾತ್ರ..ಹೀಂಗೆ ಎಂಗೊ ಪರೋಟ ಮಾಡಿದ್ದದು ಹೇಂಗೆ ಹೇಳಿ ಬೈಲಿಲಿ ಹೇಳುವ ಹೇಳಿ ಕಂಡತ್ತು.
ಬೇಕಪ್ಪ ಸಾಮಾನುಗ:
ಗೋಧಿ ಹೊಡಿ: ೪ ಕಪ್
ಮೈದಾ ಹೊಡಿ: ೨ ಕಪ್
ಮೆಣಸಿನ ಹೊಡಿ: ಅರ್ಧ ಚಮಚ
ತೆಂಗಿನೆಣ್ಣೆ: ೨೫೦ಗ್ರಾಂ
ನೀರು: ೨೫೦ಮಿ.ಲೀ.
ಉಪ್ಪು: ರುಚಿಗೆ ತಕ್ಕ ಹಾಂಗೆ.
ಮಾಡ್ತ ವಿಧಾನ:
ಗೋಧಿಹೊಡಿ ಮತ್ತೆ ಮೈದಾ ಹೊಡಿಯ ಜೆರಡೆಲಿ ಸರೀ ಗಾಳ್ಸಿಗೊಂಡು ಅದರಒಟ್ಟು ಸೇರ್ಸಿ ಅಗಲ ಬಾಯಿ ಪಾತ್ರಕ್ಕೆ ಹಾಕಿ.
ರಜ್ಜ,ಎಣ್ಣೆ,ಮೆಣಸಿನ ಹೊಡಿ,ಉಪ್ಪು – ಎಲ್ಲವನ್ನೂ ರಜಾ ನೀರಿಲಿ ಗಟ್ಟಿಗೆ ಕಲಸೆಕ್ಕು.
ಮತ್ತೆ ಚಪಾತಿ ಉಂಡೆಯ ಹಾಂಗೆ ಉಂಡೆ ಮಾಡಿ ಮಡುಗೆಕ್ಕು.
ಮತ್ತೆ ಲಟ್ಟಣಿಗೆಗೆ, ಚಪಾತಿ ಮಣೆಗೆ ಲಾಯಿಕ ಎಣ್ಣೆ ಹಾಕಿ ಉದ್ದೆಕ್ಕು.
ಮತ್ತೆ ಹಿಟ್ಟಿನ ಉಂಡೆಯ ಲಟ್ಟುಸಲೆ ಬಪ್ಪ ಹಾಂಗೆ ಎಣ್ಣಗೆ ಅದ್ದಿ ಉರೂಟು ಅಪ್ಪ ಹಾಂಗೆ ಲಟ್ಟುಸೆಕ್ಕು.
ಮತ್ತೆ ಅದರ ಕಾವಲಿಗೆಗೆ ಅಥವಾ ಈಗಾಣ ತವಾಕ್ಕೆ ಹಾಕಿ ನಸೂ ಕೆಂಪು ಅಪ್ಪನ್ನಾರ ಬೇಯಿಷೆಕ್ಕು.
ಇದಕ್ಕೆ ಕೂಡ್ಲೆ ಕಾಯಿ ಚಟ್ನಿ,ಬೆಣ್ಣೆ,ನೀರುಳ್ಳಿತುಂಡು, ಅಥವಾ ಗಸಿ ಮಾಡಿದರೆ ತಿಂಬಲೆ ಲಾಯಿಕ ಆವ್ತು.
ಇನ್ನು ಇದರ್ಲಿ ಬೇರೆ ರೀತಿಲಿ ಮಾಡುವ ವಿಧಾನಂಗ ಇದ್ದರೆ ತಿಳುಶಿ ಆತೋ?
ಓ ಮೊನ್ನೆ ಮೆಡ್ರಾಸಿಲಿಪ್ಪ ನೆಕ್ರಾಜೆ ಕೂಸಿನ ಮನಗೆ ಎಂಗ ಹೋಗಿ ಬಪ್ಪಗ ದಾರಿ ನಡೂಕೆ ಪರೋಟ ಮಾಡುದರ ಅಜ್ಜಕಾನ ಬಾವ ಮೊಬೈಲಿಲಿ ವೀಡ್ಯ ತೆಗದ್ದು…
ಆ ವೀಡ್ಯಲ್ಲಿಪ್ಪ ಪರೋಟಕ್ಕೆ ಉಪ್ಪೇ ಹಾಕದ್ರೂ ಉಪ್ಪುಪ್ಪು ಇರ್ತಡ!
– ಉಮ್ಮ, ಅಜ್ಜಕಾನಬಾವ° ಹೇಳಿದ್ದು.
ಸ್ವಂತ ಅನುಭವವೋ ಎಂತ 🙂 🙂
ನಿಂಗ ಎಂತಕೆ ಹೀಂಗೆ ಜಗಳ ಮಾಡುವದೋ? ಎನ್ನ ಪುಳ್ಳಿ ಪರೋಟ ಮಾಡುತ್ಸು ಹೇಂಗೆ ಹೇಳಿರೆ ನಿಂಗ ಕುಡಿತ್ತ ಸುದ್ದಿ ಮಾತಾಡುವದು ಎಂತಕೆ..
{ಉಪ್ಪೇ ಹಾಕದ್ರೂ ಉಪ್ಪುಪ್ಪು ಇರ್ತಡ!}
ಅಪ್ಪಡ ನಗೆಗಾರಣ್ಣೋ!! ಜಾಸ್ತಿ ಬೆಗರಿ ಅಪ್ಪದ್ದೆ ಉಪ್ಪು ಹಾಕದ್ದರುದೆ ಸುಧಾರ್ಸುಲಾವುತ್ತಡ್ಡ!! 😉
ಏ ಬಲ್ನಾಡು ಮಾಣಿ. ನೀನು ಹೀಂಗೆಲ್ಲಾ ಹೇಳಿರೆ ಜೆಂಬಾರಲ್ಲಿ ಹೋಗಿ ಉಂಬದು ಹೇಂಗೆ? ನೀನು ಬಳುಸಿರೂ ಹಾಂಗೆ ಅವ್ತಡ!!!
ಯಬಾ!! ಪರೋಟ ಭಾರೀ ಲಾಯ್ಕಾಯ್ದು ಗಣೇಶ ಮಾವ !!!!
ವಿಡಿಯೋ ಲಾಯ್ಕ ಇದ್ದು, ಮಾಡಿ ನೋಡ್ತೆ ಮಾವ°
ಕೆಪ್ಪಣ್ಣ ಪರೋಟ ಮಾಡಿದ್ದ ಹೇಳಿ ಕಾಣ್ತು. ಪರೋಟವ ಹಾರಿಸಿದ್ದು ಕಿಂಗ್ ಫಿಶರ್ ವಿಮಾನದ ಅಡಿಲಿ ಸಿಕ್ಕಿದ್ದಡ…
ಪರೊಟ ಲಾಯಿಕ ಅಯಿದು. ಮಾವ ಇದು ದಕ್ಶಿಣ ಭಾರತದ ಫರೊಟ ಅತು. ಉತ್ತರ ಭಾರತದ ಪರೊಟ ಬೆರೆಯೆ ಇದ್ದು. ನಾವು ಹೊಳಿಗೆ ಮಾಡಿದ ಹಾ೦ಗೆ ಮಾಡುದು. ಕಡ್ಲೆಬೇಳೆ / ತೆ೦ಗಿನ ಕಾಯಿ ಚುರ್ಣದ ಬದಲು ಬಟಾಟೆ/ಈರುಳ್ಳಿ/ ಕೊಸು ಬೆಯಿಸಿ ಗೊದಿ ಹೊಡಿ ಕನಕಲ್ಲಿ ತುಮ್ಬುಸಿ ಲಟ್ಟುಸಿ ಭೆಯಿಶಿ ಮೊಸರು ಸೆರ್ಸಿ ತಿಮ್ಬದು. ಸುಪರ್ ಅವುತು. ಮಾಡಿ ನೊಡ್ಲಕ್ಕು.
ಗಣೇಶ ಮಾವ ° ಅಡಿಗೆದೆ ಮಾಡ್ಲೆ ಸುರು ಮಾಡಿದ್ದವೋ? ಅದುದೆ ಈಗಾಣೋರದ್ದು.. ಒಳ್ಳೇದಾತು. ಬೈಲಿಂಗೆ ಬೇರೆ ಬೇರೆ ವಿಷಯಂಗ ಗೊಂತಾಯೇಕ್ಕನ್ನೇ! ಶ್ರೀ ಅಕ್ಕ° ಮಾಡಿದ್ದರಿಂದಲೂ ಲಾಯಕ ಅಕ್ಕಪ್ಪಾ… ಎಂಗ ಒಬ್ಬೊಬ್ಬ° ಅಡಿಗೆ ಕೋಣೆಲಿ ಅಡಿಗೆ ತಯಾರು ಮಾಡ್ಲೆ ಪೇಚಾಡುದು.. ನಿಂಗೊ ನಾಲ್ಕೈದು ಜೆನಂಗ ಸೇರಿ ಮಾಡಿ ಅಪ್ಪಗ ತುಂಬಾ ಲಾಯಕ ಅಕ್ಕು. ಬೈಲಿನೋರಿಂಗೂ ಹೇಳಿ ಎಂಗಳೂ ಬತ್ತೆಯಾ° ತಿಂಬಲೆ !!!
ವೀಡ್ಯ ಲಾಯ್ಕಾಯಿದು ..
ಆದರೂ ಕಾನಾವಿನ ಅತ್ತೆ ಮಾಡಿದ ಕ್ಯಾಪ್ಸಿಕಂ ಪುಳಿಯೋಗರೆಯ ಟೇಸ್ಟು ಬಾರ ಕಾಣ್ತು… ಎನಗೆ ಪೇಕೆಟು ನೋಡಿಯಪ್ಪಗಳೇ ಕೊದಿ ಆಯಿದು ಶ್ರೀ ಅಕ್ಕಾ,
ಗಣೇಶ ಮಾವ°, ಕಾನಾವಿನ ಅತ್ತೆ ಸ್ವೀಟ್ ಕಾರ್ನ್ ರೈಸ್ ಅಲ್ಲದಾ ಮಾಡಿದ್ದು? ಅದು ಪೆಕೆಟಿಲಿ ಇದ್ದ ಕಾರಣ ನಿಂಗೊಗೆ ಗೊಂತಾಯಿದಿಲ್ಲೇ ಆದಿಕ್ಕು. ಅದು ಮಾಷ್ಟ್ರು ಮಾವನ ಮಗ° ಹೋಪ ಅಂಬೇರ್ಪು ಅಲ್ಲದೋ ಹಾಂಗೆ ನಿಂಗೊಗೆ ಕೊಡ್ಲೆ ಮರದತ್ತಡ್ಡ. ಇನ್ನಾಣ ಸರ್ತಿ ಖಂಡಿತಾ ಕೊಡ್ತವಡ್ಡ ನಿಂಗೊಗುದೆ ಹಾಂಗಿಪ್ಪ ಪೇಕೆಟು ಆತೋ? ಬೇಜಾರು ಮಾಡಿಕ್ಕೆಡಿ…
ಎಂತ ಕೂಸೇ?ಎನ್ನ ಪುಳ್ಳಿಗೆ ಬರೇ ಪೇಕೆಟು ಕೊಟ್ಟು ನಿವೃತ್ತಿ ಮಾಡ್ತಾ ಹೇಂಗೆ ಕಾನಾವಿನ ಅತ್ತೆ? ಹಾಂಗೆ ಮಾಡಿಕ್ಕಡ ಆತೋ?..ಮತ್ತೆ ಅವನ ಎನಗೆ ಸಮಾಧಾನ ಮಾಡ್ಲೆ ಎಡಿಯ….
ಹೇಂಗೆ ಗುರಿಕ್ಕಾರ್ರೆ? ಸುಧಾರ್ಸುಲೆ ಎಡಿಗ?
ಪರೋಟ ಮಾಡುವ ವೀಡ್ಯಲ್ಲಿ ಇಪ್ಪವರ ಕ್ರಿಕೆಟ್ ಆಟಕ್ಕೆ ಕಳುಸಿರೆ ಭಾರತ ಸೋಲುವ ಪ್ರಶ್ನೆಯೇ ಇಲ್ಲೆ. ಹಾಂಗಿದ್ದು.
ಪರಾಟ ಮಾಡುವ ಇನ್ನೊಂದು ವಿಧ:
ಮೈದಾ ಹಾಕದ್ದೆ, ಗೋಧಿ ಹೊಡಿಯ ಉಗುರು ಬೆಚ್ಚಂಗೆ ಇಪ್ಪ ನೀರಿಲ್ಲಿ ಕಲಸೆಕ್ಕು. ಮತ್ತೆ ರೆಜಾ ಎಣ್ಣೆ ಹಾಕಿ ಸರೀ ನಾದೆಕ್ಕು. ಚಪಾತಿ ಲಟ್ಟುಸುತ್ತ ಹಾಂಗೆ ತೆಳುಪುಕೆ ಲಟ್ಟಿಸಿ ಅದಕ್ಕೆ ತುಪ್ಪ ಸವರೆಕ್ಕು. ಮತ್ತೆ ಅದರ 4 ಮಡಿಕೆ ಮಾಡೆಕ್ಕು. ಪುನಃ ಲಟ್ಟಿಸೆಕ್ಕು. ತ್ರಿಕೋಣ ಆಕಾರ ಬತ್ತು. ಇದರ ಚಪಾತಿ ಬೇಯುಸವ ಹಾಂಗೆ ಬೇಯಿಸೆಕ್ಕು. ಪದರು ಪದರು ಬಂದು ಲಾಯಿಕ ಆವುತ್ತು.
ಎಂಗಳ ಬೇಚುಲರ್ ಲೈಫ್ ಅನುಭವ. ಲಟ್ಟುಸಲೆ ಮಣೆ, ಲಟ್ಟಣಿಗೆ ಬದಲು, ಊಟದ ಬಟ್ಟಲಿನ ಕವುಂಚಿ ಹಾಕಿ ಸ್ಕ್ವೇಶ್ ಬಾಟ್ಲಿಲಿ ಲಟ್ಟಿಸಿಗೊಂಡು ಇತ್ತಿದ್ದೆಯೊ.
ಚಪಾತಿ ಹಿಟ್ಟು ಕಲಸುವಗ ಮೆಂತೆ ಸೊಪ್ಪಿನ ಸಣ್ಣಕೆ ಕೊಚ್ಚಿ ಸೇರಿಸಿರೆ, ಪರಾಟದ ಹಾಂಗೆ ಲಾಯಿಕ ಆವುತ್ತು. ಆರೋಗ್ಯಕ್ಕೂ ಒಳ್ಳೆದು.
ಖಂಡಿತಾ ಮಾವ!!!! ನಿಂಗ ಹೇಳಿದ ಪಾಕವ ಪ್ರಯೋಗ ಮಾಡಿ ನೋಡ್ತೆಯ…..
{ ಚಪಾತಿ ಹಿಟ್ಟು ಕಲಸುವಗ ಮೆಂತೆ ಸೊಪ್ಪಿನ ಸಣ್ಣಕೆ ಕೊಚ್ಚಿ }
– ಎರಡೆರಡು ಕಾರ್ಯ ಒಟ್ಟಿಂಗೆ ಮಾಡ್ತದು ಹೇಂಗೆ ಅಪ್ಪಚ್ಚಿ? ಅದುದೇ ಬ್ರಮ್ಮಚಾರಿಗೊ? 😉
ಒಟ್ಟಿಂಗೆ ಜೆನ ಇದ್ದರೆ ಎರಡನ್ನೂ ಮಾಡ್ಳೆಡಿಗು!
{ಸ್ಕ್ವೇಶ್ ಬಾಟ್ಲಿಲಿ ಲಟ್ಟಿಸಿಗೊಂಡು }
ಎಂಗಳೂ ಅದರ್ಲೇ ಲಟ್ಟುಸೇಕೋ? 😉
ಏ ನಗೆಗಾರ,
“ಎಂಗಳ” ಬೇಚುಲರ್ ಲೈಫ್ ಹೇಳಿರೆ ಇಬ್ರು (ಮಾಣಿಯಂಗೊ) ಒಂದೇ ರೂಮಿಲ್ಲಿ ಇತ್ತಿದ್ದೆಯೊ.
ಲಟ್ಟಣಿಗೆ ಇಲ್ಲದ್ದವಕ್ಕೆ ಮಾತ್ರ ಆ ಸೂತ್ರ ಅನ್ವಯ ಆಪ್ಪದು. ನಿಂಗೊಗೆ ಅಲ್ಲದೋ ತೋರ್ತು. ಆದರೂ ಒಂದು ಪ್ರಯೋಗ ಮಾಡಿ ನೋಡಿ 🙂 🙂 🙂
ಸ್ಕ್ವೇಶ್ ಬಾಟ್ಲಿ ಸಿಕ್ಕದ್ರೆ, ಪೆಪ್ಸಿ ಬಾಟ್ಲಿಯಾ ಅಥವಾ ಇನ್ಯಾವದಾದರು ಉರುಟಿಂಗೆ ಉದ್ದಕಿಪ್ಪ ಬಾಟ್ಲಿಯೂ ಅಕ್ಕು ಅಲ್ಲದ ಅಪ್ಪಚ್ಚಿ??? 😉
ಭಾವಾ. ಬಾಟ್ಲಿ ಶುದ್ದಿ ಎಂತಗೆ??ಸನ್ಯಾಸಿ ದನ ಸಾಂಕಿದ ಹಾಂಗಕ್ಕೋ ??
ಪರೋಟ ಮಾಡುಲೆ ಹೆರಟು ಬಾಟ್ಲಿ ಸಹವಾಸ.
🙂 ಭಾವ, ಆನು ಪೆಪ್ಸಿಯ ಹಾಂಗಿಪ್ಪ ಬಾಟ್ಲಿ ಹೇಳಿದ್ದು ! 🙂 ನಿಂಗ ಏವ ಬಾಟ್ಲಿ ಗ್ರೇಶಿದಿ?? ಚೆ ಚೆ!! 😉
ಬಲಾಡು ಮಾಣಿಗೆ ಉದಿಯಪ್ಪಗಲೇ ಬಾಟ್ಲಿ ಸವಹಾಸ ಆಯಿದು.. ಜಾಗ್ರತೆ
ಏ ಭಾವ,, ಇದ ರಜ ಮೆಲ್ಲಂಗೆ, ಬಯಲಿಲಿ ಜೆನ ಇದ್ದವು!! 😉
{ಬಯಲಿಲಿ ಜೆನ ಇದ್ದವು}
– ಅದಕ್ಕೆ ಪೊದೆಲೆಡಕ್ಕಿಲಿ ಕೂದಂಡು ಬಾಟ್ಳಿ ಕುಡಿತ್ತದೋ!
ನಾರಾಯಣ ನಾರಾಯಣ!!!
ಅಂಬಗ ಕುಡುದ್ದು ಆರು? ನಾರಾಯಣನೋ?
ಅಲ್ಲ ಶ್ರೀಶಣ್ಣೋ..
ನಾರಾಯಣಜ್ಜನ ಪುಳ್ಳಿ! ಬಲ್ನಾಡುಮಾಣಿ!!
ಪಡ್ಚ ಆತು, ಎನ್ನ ಹೇಸರು ಹೇಳೆಡಿ ಹೇಳಿದ್ದಕ್ಕೆ ಎನ್ನ ಅಜ್ಜನ ಹೆಸರನ್ನೂ ಸೇರ್ಸಿದ್ದಾ!! ಪುಣ್ಣ್ಯಕ್ಕೆ ಎನ್ನ ಮನೆಯವರು ಆರುದೆ ಈ ಬಯಲಿಂಗೆ ಬತ್ತವಿಲ್ಲೆ. ಇಲ್ಲದ್ರೆ ಅಪ್ಪ ಎನ್ನ ಹೆರ ಜಾಲಿಲಿ ಮನುಗಲೆ ಹೇಳುಲೂ ಸಾಕು ನಿಂಗಳ ಮಾತು ಕೇಳಿ,,!!! 🙂
ಹೇಳಿದ ಹಾಂಗೆ ನಗೆಗಾರಣ್ಣೋ, ನಿನ್ನ ಪಟ ನೋಡಿರೆ ಎನ್ನ ಅಜ್ಜನ ನೆಂಪಾವುತ್ತು.. ತಲೆಯ ಜಾಗೆ ಎಲ್ಲ ಹಾಂಗೆ ಇದ್ದತ್ತು ಎನ್ನ ಅಜ್ಜಂದು.. ಖಾಲಿ ಹೇಳಿ ಹೇಳದ್ದ ಹಾಂಗೆ ಕೆಲವೇ ಕೆಲವು ಕೂದಲು.. 🙂
ಮೋರೆ ಪುಟ ನೋಡಿ ಹಾಂಗೊಂದು ಅಂದಾಜು ಆತು.
ಬೈಲಕರೆ ಅಜ್ಜಂಗೆ ಕೋಪ ಬಂದ ಹಾಂಗೆ ಇದ್ದು.
ಮರ್ಲು ಕಟ್ಟುವದರ ರಜಾ ಕಮ್ಮಿ ಮಾಡುವದೋ ಹೇಂಗೆ?
ಏ ಆದರ್ಶ, ನಗೆಗಾರಂಗೆ ತಲೆಲಿ ಎಂತೂ ಇಲ್ಲದ್ದರೆ ಇಷ್ಟೆಲ್ಲಾ ಯೋಚನೆ ಹೊಳಗಾ ಅವಂಗೆ. ತಲೆ ಹೆರಾಂದ ಮಾತ್ರ ಬೋಳು ಆತಾ?
ನೆಗೆಗಾರಣ್ಣ ಹುಟ್ಟೋಗ ಥೇಟ್ ಮುದಿಅಜ್ಜನ ಸಾಜ ಅಡ.ಬೋಳು ಮಂಡೆಯೂ ಬೊಕ್ಕು ಬಾಯಿಯೂ!!
{ ಮುದಿಅಜ್ಜನ ಸಾಜ }
ಬುದ್ದಿವಂತಿಗೆಲಿ ಮುದಿಅಜ್ಜ° ಏನೂ ಸಾಲ ಅಡ!
– ಮುದಿಅಜ್ಜಿ ಯೇವತ್ತೂ ಹೇಳುಗು, ಕೊಂಗಾಟ ಮಾಡುವಗ.. 😉
ಅದರ್ಲಿ ನಾವೇ ಇದಾ, ಉಶಾರಿ. 😛
ಮಾವಾ, ನಿಂಗ ಹೇಳಿದಾಂಗೆ ಇವರ ಕ್ರಿಕೆಟಿಂಗೇ ಕಳ್ಸೆಕ್ಕಷ್ಟೆ. ಫುಟ್ಬಾಲಿಂಗೆ ಕಳ್ಸಿರೆ ಬಾಲ್ ನ ಹಿಡ್ದ್ ಹಿಡ್ದ್ ಗೋಲಿಂಗೇ ಹಾಕುಗೋ ಹೇಳಿ!!
ವಿಡಿಯ ಭಾರಿ ಲೈಕಿದ್ದು ಮಾವ… ವಿಡಿಯಲ್ಲಿ ಜನಂಗ ಪರೋಟ ದಾಂಟಿದ ಮೇಲೆ ಹೋಪದರ ನೋಡುವಾಗ ಬಂಡಾಡಿ ಅಜ್ಜಿ ರಸ್ತೆ ದಾಂಟುದು ಕಣ್ಣಿಂಗೆ ಕಟ್ಟಿದ ಹಾಂಗೆ ಅವುತ್ತು…
ಮಾವಾ! ಅಡುಗೆಲಿ ಬೀಸ್ರೋಡು ಮಾಣಿ ಉಷಾರಿ ಹೇಳಿ ಗೊಂತಾಗಿ ಕುಶಿ ಆತು.. 🙂 ಇನ್ನೊಂದರಿ ಬೆಂಗ್ಳೂರಿಂಗೆ ಬಂದಿಪ್ಪಾಗ ಪರೋಟ ತಿಂಬ ಬಗ್ಗೆ ಯೋಚನೆ ಮಾಡ್ಲಕ್ಕು.. 🙂 (ಖರ್ಚಿಲ್ಲದ್ದೆ) 😀
ಬೀಸ್ರೋಡುಮಾಣಿ ಅಡಿಗೆಮಾಡುವಗ ಹೋದರೆ ಒಂದಲ್ಲದ್ದರೆ ಒಂದು ಕೆಲಸ ಸಿಕ್ಕುತ್ತು – ಬಂಡಾಡಿಅಜ್ಜಿಯ ನಮುನೆ! 🙁
ಖರ್ಚು ಪೈಶೆದಿರ, ಆದರೆ ಕಡವದಾರೂ?
ಎನ್ನತ್ರೆ ಕಡವಲೆಲ್ಲ ಹೇಳವು ನಗೆಗಾರಣ್ಣೋ,, 🙂 ಎನ್ನತ್ರೆ ಎಲ್ಲರೂ ಸರೀ ತಿನ್ನು ಹೇಳಿಯೇ ಹೇಳುದು.. ಕೆಲಸ ಹೇಳ್ತವಿಲ್ಲೆ. ಕಾಂಬಲೆ ಬಾರಿ ಸಪೂರ ಇದ್ದೆ ಇದಾ.. 😉
ಅಂಬಗ ನಾಡ್ತು ಬಪ್ಪ ಶೆನಿವಾರ ಒಂದು ಸೇರು ಗೋದಿ ಹೊಡಿ ತೆಕ್ಕೊಂಡು ಬಾ ಮಿನಿಯಾ!!!
ಸಪುರ ಇದ್ದವು ನೊ೦ಪಾಗಿ ಕಡೆತ್ತವು.
ರುಚಿ ಲಾಯಿಕಾಯಿದು ಗಣೇಶ ಮಾವಾ..ತಿಂಬ ವಿಧಾನ ಮಾತ್ರ ಗೊಂತಿಪ್ಪೋದು !!
ಪಂಜಾಬ್ ಹೊಡೆನ್ಗೆ ಹೋದರೆ ಉದಿಯಪ್ಪಗಳೇ ಆಲೂ ಪರೋಟವೂ ದಪ್ಪ ಕೆನೆಮೊಸರೂ. ಹಲ್ಲಿನೆಡೆನ್ಗೆ ಅಗಿವಲೆ ಬೇಕಾರೆ ಕೊಯಿಮ್ಪುತ್ತ ಹಸಿಮೆಣಸು!!
ಉಂಡೆ ಹವ್ಯಕರ ಮನೆದೇವರಿದ್ದ ಹಾಂಗೆ, ಸರದಾರ್ಜಿಗಳದ್ದು ಆಲೂಪರೋಟ.
ಮನೆ ದೇವರದ್ದು ನಿತ್ಯ ಇದ್ದನ್ನೇ..ಇದು ಅಮಾಸೆಗೆ ಒಂದರಿ ಹುಣ್ಣಮೆಗೆ ಒಂದರಿ…ಏವಗಳೂ ಬೇಡಪ್ಪಾ!!!
ಮೈದಾ ಹೊಟ್ತೆಗೆ ಒಳ್ಳೆದಲ್ಲಾನೆಪಾ…ಆದರು.. ಪರೋಟ ಎನಗೆ ತು೦ಬ ಇಷ್ಟ.. ರಜಾ ಬೆಣೆಯೊ ತುಪ್ಪವೊ ಹಾಕಿ… ಹಾಗಲ ಕಾಯಿ ಪಳ್ಯಾ ಮತೆ ಬದನೆ ಕಾಯಿ ಪಳ್ಯಾ ರಜಾ ಉಪಿನಕಾಯಿ ಇದ್ದರೆ ಸಾಕು.. 😛 😛 ಬೆಶಿ ಬೆಶಿ ಕಾಪಿ ಒಟ್ಟಿ೦ಗೆ, ಇ ಮಳೆಗಾಲಲಿ… ಆಬಾ..!!!! ಹೊಟ್ಟೆತು೦ಬುಗು….. 😛
ಹಾಂಗೆ ಹೊಟ್ಟೆತುಂಬ ತಿನ್ತದು ಒಳ್ಳೆದಲ್ಲದ ಚುಬ್ಬನ್ನೂ… ಹಾಂಗೆ ಡಾಗುಟ್ರಕ್ಕ ಹೇಳಿಗೊಂಡಿತ್ತು.. ಎಂತದೋ ಎನಗರಡಿಯ ನೀನು ತಿನ್ತರೆ ತಿನ್ದುಗ.. ತಿಂದು ಮತ್ತೆ ಎಂತಾರು ಆದರೆ ಮತ್ತೆ ಎನ್ನತ್ರೆ ಹೇಳೆದ ಆನು ಹೇಳುದರ ಹೇಳಿದ್ದೆ… ಎ*
ಹಾಂಗೆ ಹೊಟ್ಟೆತುಂಬ ತಿನ್ತದು ಒಳ್ಳೆದಲ್ಲದ ಚುಬ್ಬನ್ನೋ … ಹಾಂಗೆ ಡಾಗುಟ್ರಕ್ಕ ಹೇಳಿಗೊಂಡಿತ್ತು.. ಎಂತದೋ ಎನಗರಡಿಯ ನೀನು ತಿನ್ತರೆ ತಿನ್ದುಗ.. ತಿಂದು ಮತ್ತೆ ಎಂತಾರು ಆದರೆ ಮತ್ತೆ ಎನ್ನತ್ರೆ ಹೇಳೆದ ಆನು ಹೇಳುದರ ಹೇಳಿದ್ದೆ… ಎ*
ಎಪಿಕ್ ಬ್ರೌಸರ್ ಉಪಯೋಗ ಮಡಿ ನೋಡಿ,ಕನ್ನಡ ಲಿಪಿಲಿ ಬರವಲೆ ಎಡಿತ್ತು.ಎಲ್ಲಿಯೋ ಬರದು ಇಲ್ಲಿ ಅಂಟು ಹಾಕುತ್ತ ಕೆಲಸ ಇಲ್ಲೆ.
ಅಪ್ಪು,, ಆನು ಉಪಯೋಗ ಮಾಡಿದ್ದೆ. ಒಳ್ಳೆದಿದ್ದು.. ಇಲ್ಲದ್ರೆ ಬರಹ ಯುನಿಕೋಡ್ ಉಪಯೋಗಿಸಿ ನೇರವಾಗಿ ಇಲ್ಲಿಯೆ ಕನ್ನಡಲ್ಲಿ ಬರವಲಕ್ಕು. ಡೌನ್‍ಲೋಡ್ ಮಾಡ್ಲೆ ಈ ಸಂಕೋಲೆ ಉಪಯೋಗ್ಸಲಕ್ಕು…
http://www.baraha.com/download.htm ಇದರಲ್ಲಿ ಬರಹ ಯುನಿಕೋಡ್ ನ ಡೌನ್‍ಲೋಡ್ ಮಾಡಿರಾತು.
ಬರಹ ಯುನಿಕೋಡಿನ ಬಗ್ಗೆ ವಿವರ ಕೊಟ್ಟದು ಒಳ್ಳೇದಾತು.
🙂