Oppanna.com

ಹಾಸ್ಯ ರಸಾಯನ

ಬರದೋರು :   ಅರ್ತಿಕಜೆ ಮಾವ°    on   17/07/2014    8 ಒಪ್ಪಂಗೊ

1. ಸಜ್ಜನ° ಒಬ್ಬ° ಕಾಲುದಾರಿಲಿ ನಡಕ್ಕೊಂಡು ಹೋಯ್ಕೊಂಡಿಪ್ಪಗ ಎದುರಿಂದ ಬಂದ ಮಹಾಶಯ° ದಾರಿ ಬಿಟ್ಟಿದಾ°ಯಿಲ್ಲೆ.
ಆ ಅಸಾಮಿ ಹೇಳಿದ°- “ಆನು ಏವ ಮೂರ್ಖಂಗೂ ಮುಟ್ಟಾಳಂಗೂ ದಾರಿಬಿಡುವ ಕ್ರಮ ಇಲ್ಲೆ”
ಅದಕ್ಕೆ ಆ ಸಜ್ಜನ° “ಆನು ದಾರಿ ಬಿಡುತ್ತೆ” ಹೇಳಿ ಕರೇಂಗೆ ಹೋಗಿ ಆ ಮನುಷ್ಯಂಗೆ ದಾರಿ ಬಿಟ್ಟ° 😀hasya rasayana

2. ಟೊಪ್ಪಿಯ ಅಂಗಡಿಗೆ ಒಬ್ಬ° ಬಂದು ಟೊಪ್ಪಿಯ ಕ್ರಯ ಎಷ್ಟು ಹೇಳಿ ಕೇಳಿದ°.
ಅಂಗಡಿಯ ಮನುಷ್ಯ° ಐವತ್ತು ರುಪಾಯಿ ಹೇಳಿ ಹೇಳಿದ°.
“ಸರಿಯಾಗಿ ನೋಡಿ ಹೇಳು, ಎನಗೆ ಟೊಪ್ಪಿ ಹಾಕೆಡ” – ಹೇಳಿದ° ತೆಕ್ಕೊಂಬಲೆ ಬಂದ ಗಿರಾಕಿ.
ಅದಕ್ಕೆ ಅಂಗಡಿಯವ° – “ಟೊಪ್ಪಿ ಅಂಗಡಿಗೆ ಬಂದು ಟೊಪ್ಪಿ ಹಾಕೆಡ ಹೇಳಿರೆ ಹೇಂಗೆ?! ಆನೇನೂ ಬಂದವಕ್ಕೆ ಟೊಪ್ಪಿ ಹಾಕುತ್ತಿಲ್ಲೆ. ಬಂದವೆಲ್ಲ ಸ್ವತಃ ಅವ್ವವ್ವೇ ಟೊಪ್ಪಿ ಹಾಕಿಗೊಳ್ಳುತ್ತವು. ಮತ್ತೆ ಆನು ಟೊಪ್ಪಿ ಹಾಕುವದೆಂತರ?!!” 😀

3. ಪುಳ್ಳಿ – ಅಜ್ಜೀ, ನಿನಗೆ ಚಕ್ಕುಲಿ ತಿಂಬಲೆ ಎಡಿಗೋ?!
ಅಜ್ಜಿ – ಎನಗೆ ಹಲ್ಲೇ ಇಲ್ಲೆ. ಆನು ಹೇಂಗೆ ಚಕ್ಕುಲಿ ತಿಂಬದು?
ಪುಳ್ಳಿ – ಹಾಂಗಾರೆ ಅಜ್ಜೀ, ಈ ಚಕ್ಕುಲಿ ನಿನ್ನತ್ತರೆ ಮಡಿಕ್ಕೊ. ಆನು ಆಟ ಆಡಿಕ್ಕಿ ಬಂದು ತಿಂತೆ ಆತೋ? 😀

4. ಎರಡ್ನೇ ಸರ್ತಿ ಬಸರಿ ಆದಪ್ಪಗ ಅಬ್ಬೆ ಮಗಳತ್ರೆ ಕೇಳಿತ್ತು – “ಕಾವ್ಯ!, ನಿನ್ನೊಟ್ಟಿಂಗೆ ಆಡ್ಳೆ ನಿನಗೆ ತಮ್ಮ ಬೇಕೋ ಅಲ್ಲ ತಂಗೆ ಬೇಕೋ?
ಅದಕ್ಕೆ ಮಗಳು ಕಾವ್ಯನ ಉತ್ತರ – “ಅಮ್ಮ ಎನಗೆ ಆಡ್ಳೆ ಒಂದು ನಾಯಿ ಕುಂಞಿ ಬೇಕು ” 😀

5. ಒಂದರಿ ಒಬ್ಬ° ಹೆಡ್ಡ° ಒಂದು ಹೆಮ್ಮಕ್ಕಳ ಹತ್ರೆ “ನಿನಗೆ ಮದುವೆ ಆಯ್ದೋ” ಹೇಳಿ ಕೇಳಿದ°
ಅದಕ್ಕೆ ಆ ಹೆಮ್ಮಕ್ಕೊ “ಇಲ್ಲೆ” ಹೇಳಿತ್ತು.
ಹೆಡ್ಡ° “ಮಕ್ಕೊ ಎಷ್ಟು ?” ಕೇಳಿದ°
ಅದರ ಕೇಳಿದ ಆ ಹೆಮ್ಮಕ್ಕೊ ಅವನ ಕೆಪ್ಪಟಗೆ ಒಂದು ಬಿಗುದತ್ತು.
ಇನ್ನೊಂದಾರಿ ಅದೇ ಹೆಡ್ಡ ಇನ್ನೊಂದು ಹೆಮ್ಮಕ್ಕ ಸಿಕ್ಕಿಯಪ್ಪಗ ಈ ಸರ್ತಿ ಆನು ಸೋಲ್ಲಾಗ ಹೇಳಿ ತನ್ನ ಪ್ರಶ್ನೆಯ ತಿರುಗಿಸಿ ಕೇಳಿದ° – “ನಿನಗೆ ಮಕ್ಕೊ ಎಷ್ಟು?”
“ಮೂರು ಮಕ್ಕೊ” – ಹೇಳಿತ್ತು ಆ ಹೆಮ್ಮಕ್ಕೊ.
ಹೆಡ್ಡ° ಕೇಳಿದಾ° – “ನಿನಗೆ ಮದುವೆ ಆಯಿದೋ?”
ರಫಕ್ಕನೆ ಒಂದು ಕೆಪ್ಪಟಗೆ ಬಿದ್ದತ್ತು ಹೇಳಿ ಈಗಿನ್ನು ಹೇಳೆಕು ಹೇಳಿಲ್ಲೆನ್ನೆ 😀

6. ಒಬ್ಬ° ಪ್ರಸಿದ್ಧ ಭಾಷಣಗಾರ° ಭಾಷಣ ಮಾಡ್ಯೊಂಡು “ಇಲ್ಲಿ ಇಪ್ಪವರಲ್ಲಿ ಅರ್ಧದಷ್ಟು ಜೆನ ಕತ್ತೆಗೊ” ಹೇಳಿ ಹೇಳಿದ°
ಸಭೆಲಿ ಕೋಲಾಹಲ ಸುರುವಾತು. “ಈ ಮಾತು ಸರಿಯಲ್ಲ, ಭಾಷಣಗಾರ ಸಭಿಕರತ್ರೆ ಕ್ಷಮೆಕೇಳೆಕ್ಕು, ಹೇಳಿದ ಮಾತಿನ ಹಿಂದೆ ತೆಕ್ಕೊಳ್ಳೆಕು” ಹೇಳಿ ಬೊಬ್ಬೆ ಹಾಕಿದವು.
ಭಾಷಣಗಾರ° ಹೇಳಿದಾ° – “ಆನು ಎಲ್ಲೋರ ಕ್ಷಮೆ ಕೇಳುತ್ತೆ. ಆನು ಹೇಳಿದ ಮಾತಿನ ಹಿಂದೆ ತೆಕ್ಕೊಳ್ತೆ. ಈ ಸಭಾಗೃಹಲ್ಲಿಪ್ಪವರಲ್ಲಿ ಅರ್ಧದಷ್ಟು ಜೆನ ಕತ್ತೆಗೊ ಅಲ್ಲ. ಎನ್ನ ಮಾತಿನ ಆನು ಹಿಂದೆ ತೆಕ್ಕೊಂಡೆ”. 😀

7. ಒಂದು ಹೆಮ್ಮಕ್ಕೊ : ನಿನ್ನ ಹಾಂಗಿಪ್ಪ ಪಾಪಿಗೆ ನರಕ್ಕಲ್ಲಿ ಕೂಡ ಜಾಗೆ ಸಿಕ್ಕ.
ಮತ್ತೊಂದು ಹೆಮ್ಮಕ್ಕೊ : ಅದಪ್ಪು, ನೀನು ಮದಲೇ ಅದರ ರಿಸರ್ವ್ ಮಾಡಿದ್ದೆನ್ನೆ 😀

8. ವಿದ್ಯಾರ್ಥಿಗಳ ಗಲಾಟೆ, ಮೂರ್ಖತನದ ವರ್ತನೆಯ ಕಂಡ ಮಾಷ್ಟ್ರ° – ಮೂರ್ಖಂಗೊ ಇದ್ದರೆ ನಿಲ್ಲಿ”- ಹೇಳಿದ°
ಆರೂ ನಿಂದಿದವೇ ಇಲ್ಲೆ.
ರಜಾಹೊತ್ತು ಕಳುದು ಒಬ್ಬ° ಎದ್ದು ನಿಂದ°.
“ನೀನು ಮೂರ್ಖನೋ?!” ಮಾಷ್ಟ್ರ° ಕೇಳಿದ°
ಅದಕ್ಕೆ ಆ ವಿದ್ಯಾರ್ಥಿಯ ಉತ್ತರ ಹೀಂಗೆ ಇತ್ತು – “ಅಲ್ಲ ಸರ್., ನಿಂಗೊ ಒಬ್ಬನೇ ನಿಂದದು ಕಂಡು ನೋಡ್ಳಾಗದ್ದೆ ಆನುದೆ ನಿಂದೆ., ನಿಂಗೊ ಮಾಂತ್ರ ಅಪ್ಪದು ಬೇಡ ಹೇಳಿ” 😀

9. ಅವ° – “ಆನು ಜೋರಿಲಿ ನಾಲ್ಕು ಮಾತಾಡಿದ್ದಷ್ಟೆ. ಕೋಪಲ್ಲಿ ಅಪ್ಪನ ಮನಗೆ ಹೋದ ಎನ್ನ ಹೆಂಡತ್ತಿ ಇನ್ನುದೆ ಬಯಿಂದಿಲ್ಲೆ. ಎಂತ ಮಾಡೊದು ಹೇಳಿ ಗೊಂತಾವುತ್ತಿಲ್ಲೆ”.
ಇವ° – “ಅದಿರಳಿ.., ನೀನು ಹೇಳಿದ ಆ ನಾಲ್ಕು ಮಾತು ಏವದು? ಎನಗೆ ಹೇಳುವೆಯೊ!. ಆನು ಅದರ ಎನ್ನ ಹೆಂಡತ್ತಿಗೆ ಹೇಳಿ ನೋಡುತ್ತೆ.” 😀

10. ಹೆಂಡತ್ತಿ – ನಿಂಗೊ ಈ ಭೂಮಿಲಿ ಇಪ್ಪದೇ ದೆಂಡ. ಈ ಮನೆಲಿಪ್ಪ ಒಂದೇ ಒಂದು ವಸ್ತುವನ್ನಾರು ನಿಂಗೊ ಗೈದು ತಂದದಿದ್ದೋ? ಎಲ್ಲ ಎನ್ನ ಅಪ್ಪ° ಕೊಟ್ಟದಲ್ಲದೊ!
ಗೆಂಡ° – ಅದು ಹೇಂಗೆ?!! ಹಾಂಗಾರೆ ಆ ತೊಟ್ಳಿಲಿಪ್ಪ ಮಗು ಆರದ್ದು ??! 😀

11. ಹೆಂಡತ್ತಿ – ನೋಡಿ..ನಮ್ಮ ವಾಣಿಗೆ ಇಪ್ಪತ್ತೈದು ತುಂಬಿತ್ತು. ನಿಂಗೊಗೆ ಇನ್ನೂ ಸರಿಯಾದ ಮಾಣಿಯ ಕಂಡುಹುಡುಕ್ಕಲೆ ಆಯಿದಿಲ್ಲೆ.
ಗೆಂಡ° – ಆನೇನು ಸುಮ್ಮನೆ ಕೂಯ್ದಿಲ್ಲೆ. ಕೆಲವು ಮಾಣಿಯಂಗಳ ಹತ್ತರೆ ವಿಚಾರ್ಸಿ ನೋಡಿದೆ. ಆದರೆ ಅವೆಲ್ಲ ಅಯೋಗ್ಯರ ಹಾಂಗೆ ಕಂಡತ್ತು.
ಹೆಂಡತ್ತಿ – ಅಂತ ವಿವೇಚನೆ ಎಚ್ಚರಿಕೆ ಎನ್ನ ಅಪ್ಪ ಅಮ್ಮಂಗೂ ಇತ್ತಿದ್ದರೆ ಎನಗೆ ಈವರೆಗೆ ಮದುವೆ ಅಪ್ಪಲೇ ಇತ್ತಿಲ್ಲೆ. 😀

12. ನವವಿವಾಹಿತ ದಂಪತಿಗಳ ಹೊಸ ಜೀವನ ಆರಂಭ ಆಗಿತ್ತು. ಗೆಂಡಂಗೆ ಊಟ ಬಡಿಸ್ಯೊಂಡು ಹೆಂಡತಿ ಹೇಳಿತ್ತು – “ಆನು ದಿನಾ ಹೀಂಗೆ ಅಡಿಗೆಮಾಡಿ ನಿಂಗೊಗೆ ತಿನ್ಸಿರೆ ಎನಗೆಂತ ಸಿಕ್ಕುತ್ತು?!”
“ಎನ್ನ ಇನ್ಶೂರೆನ್ಸಿನ ಪೈಸೆ” – ಕೂಡ್ಳೆ ಬಂತು ಗೆಂಡನ ಉತ್ತರ 😀

13. ಕೂಸು – ಎನ್ನ ಹೆಸರಿಂಗೆ ಎನ್ನ ಅಪ್ಪಚ್ಚಿ ತುಂಬ ಆಸ್ತಿ, ಪೈಸೆ ಬಿಟ್ಟಿಕ್ಕಿ ಹೋಯಿದ° ಹೇಳಿ ಅಲ್ಲದೊ ನಿಂಗೊ ಎನ್ನ ಮದುವೆ ಅಪ್ಪಲೆ ಒಪ್ಪಿದ್ದು ?
ಮಾಣಿ – ಖಂಡಿತ ಅಲ್ಲ. ಹಸಿ ಲೊಟ್ಟೆ. ನಿನ್ನ ಅಪ್ಪಚ್ಚಿ ಅಲ್ಲದ್ದೆ ಬೇರೆ ಆರೇ ಆಗಿದ್ರೂ ನಿನಗೆ ಆಸ್ತಿ, ಪೈಸೆ ಬಿಟ್ಟು ಹೋಗಿದ್ದರೂ ಆನು ನಿನ್ನನ್ನೇ ಮದುವೆ ಆವುತೀತೆ. 😀

14. ಕೂಸು – ಎನಗೆ ಸೌಂದರ್ಯ, ಚೆಂದ ಹೇಳಿರೆ ತುಂಬಾ ಇಷ್ಟ
ಮಾಣಿ – ಎನಗೆ ಬುದ್ಧಿವಂತರು ಹೇಳಿರೆ ಬಹಳ ಇಷ್ಟ
ಕೂಸು – ಆರ ಹತ್ತರೆ ಏವುದು ಇಲ್ಲೆಯೋ ಅದರನ್ನೇ ಅವ್ವು ಹೆಚ್ಚು ಇಷ್ಟ ಪಡುವದು 😀

15. ಒಂದು ಪಾರ್ಕಿಲ್ಲಿ ಚೆಂದದ ಕೂಸಿನ ಕಂಡ ಒಬ್ಬ ಜವ್ವನಿಗ ಸೀದಾ ಹೋಗಿ ಅದಕ್ಕೆ ಮುತ್ತು ಕೊಟ್ಟ°.
ಕೂಸಿಂಗೆ ಎಲ್ಲಿಲ್ಲದ್ದ ಕೋಪ ಬಂತು.
ಅಂಬಗ ಅವ° ಹೇಳಿದಾ° – “ನೀನೆಂತಕೆ ಇಷ್ಟು ಕೋಪ ಮಾಡುವದು? ನಿನಗೆ ಆನು ಕೊಟ್ಟದರ ಎನಗೇ ಹಿಂದೆ ಕೊಟ್ಟಿಕ್ಕು” 😀

16. ಡಾಕುಟ್ರ° – ನಿಂಗೊ ಕೂದಲ್ಲೇ ಕೂದು ತುಂಬ ಹೊತ್ತು ಕೆಲಸ ಮಾಡುವ ಕಾರಣ ನಿಂಗಳ ದೇಹದ ಭಾರ ಹೆಚ್ಚಿದ್ದು. ಅದಕ್ಕೆಂತ ಮಾಡೆಕು ಹೇಳಿರೆ .. ಕೆಲಸದ ನಡು ನಡುವಿಲ್ಲಿ ಎದ್ದು ರಜ ಹೊತ್ತು ಹೆರ ಓಡಾಡೆಕು. ಅಂಬಗ ನಿಂಗಳ ಭಾರ ರಜ ಕಮ್ಮಿ ಅಕ್ಕು.
ಬಂದವ° – ಅದು ಎಡಿಯಲೇ ಎಡಿಯನ್ನೆ ಡಾಕ್ಟ್ರೇ!
ಡಾಕುಟ್ರ° – ಏಕೆ ಎಡಿಯ?!!
ಬಂದವ° – ಆನು ವಿಮಾನ ಓಡುಸುವ ಪೈಲೆಟು 😀

17. ಮಾಷ್ಟ್ರ° – ಏ ಗಣೇಶ!, ಬಾಬರ ಏವಾಗ ಸತ್ತದು? ಹೇಳು
ಗಣೇಶ° – ಎನಗೆ ಗೊಂತಿಲ್ಲೆ ಸರ್, ಏಕೆ ಹೇಳಿರೆ ಆನು ಅಂಬಗ ಹುಟ್ಟಿದ್ದೇ ಇಲ್ಲೆ. 😀

18. ಒಂದು ಹಳ್ಳಿಲಿ ಎರಡು ಪಾರ್ಟಿ ಇತ್ತಿದ್ದು. ಒಂದು ಪಾರ್ಟಿಯ ನಾಯಕ° ಒಂದು ಮನೆ ಕಟ್ಟುಸಿದ°.
ಆ ಮನೆಯ ಕಟ್ಟುಸಿದ ಕಂಟ್ರಾಕ್ಟರನ ಬಪ್ಪಲೆ ಹೇಳಿ ಮತ್ತೊಂದು ಪಾರ್ಟಿಯ ನಾಯಕ° ಕೇಳಿದ° – ಅವಂಗೆ ಹೇಂಗಿಪ್ಪ ಮನೆ ಕಟ್ಟಿಸಿ ಕೊಟ್ಟದು?
ಕಂಟ್ರಾಕ್ಟರ ಹೇಳಿದ° – ಆರ್ ಸಿ ಸಿ
ಅದಕ್ಕೆ ಆ ನಾಯಕ° ಹೇಳಿದ° – ಆನೂ ಅವಂಗೆ ಏನೂ ಕಮ್ಮಿ ಇಲ್ಲೆ. ಎನಗೊಂದು ಏಳ್ ಸಿ ಸಿ ಮನೆ ಕಟ್ಟುಸಿ ಕೊಡು 😀

19. ಹೆಂಡತ್ತಿ – ಆನೊಂದು ಪುಸ್ತಕ ಆವುತ್ತಿತ್ತರೆ ಎಷ್ಟು ಲಾಯಕ ಇರ್ತಿತ್ತು!!. ಪ್ರತಿನಿಮಿಷವೂ ಆರಾರು ಎನ್ನ ಹಿಡ್ಕೊಂಡು ಓದಿಗೊಂಡು ಇರ್ತಿತ್ತವು.
ಗೆಂಡ – ನೀನು ಪುಸ್ತಕ ಅಪ್ಪ ಬದಲು ಕ್ಯಾಲೆಂಡರ್ ಆವುತೀತ್ತರೆ ಆನು ಪ್ರತಿವರ್ಷವೂ ಬದಲಾಯಿಸಿಗೊಳುತೀತೆ. 😀

20. ಹೆಂಡತ್ತಿ – ಕಾರು ಹೇಳಿರೆ ಹೆಣ್ಣಿನ ಹಾಂಗೆ ಹೇಳುತ್ತವನ್ನೇ.. ಎಂತಕೆ?!
ಗೆಂಡ – ಎಂತಕೆ ಹೇಳಿರೆ…. ಕಾರು ಕೂಡ ಬಣ್ಣ ಹಚ್ಚಿಗೊಂಡೇ ಇದ್ದರೆ ಚೆಂದ ಕಾಣುತ್ತು. ಹೊಸ ಮಾಡೆಲ್ ಗೊಕ್ಕೆ ಬೇಡಿಕೆ ಹೆಚ್ಚು. ಬಾಡಿ ನೋಡಿ ಬೆಲೆ ನಿಘಂಟು ಮಾಡುತ್ತವು. ಮಡಿಕ್ಕೊಂಬಲೆ ಖರ್ಚಿ ಹೆಚ್ಚು. ಏವ ಹೊತ್ತಿಂಗೆ ಹೇಂಗೆ ವರ್ತುಸುತ್ತೋ ದೇವರಿಂಗೇ ಗೊಂತು. ಒಂದಾರಿ ಅಭ್ಯಾಸ ಆದರೆ ಮತ್ತೆ ಅದಿಲ್ಲದ್ದೆ ಕಳಿಯ ಹೇಳಿ ಆವುತ್ತು. 😀

*** ***

[ಹಾಸ್ಯರಸಾಯನ
ಸಂಗ್ರಹ : ಅರ್ತಿಕಜೆ ಮಾವ°]

ಅರ್ತಿಕಜೆ ಮಾವ°
Latest posts by ಅರ್ತಿಕಜೆ ಮಾವ° (see all)

8 thoughts on “ಹಾಸ್ಯ ರಸಾಯನ

  1. ರಸಾಯನವ ಸವಿದುಂಡ ಎಲ್ಲೊರಿಂಗು ಧನ್ಯವಾದಂಗೊ

  2. ಬಾರಿ ಲಾಯ್ಕಿದ್ದು . ಇದು ಹಾಸ್ಯ ರಸ – ಯಾನವೇ…

  3. ರಸಾಯನ ರುಚಿಯಾಯಿದು ಅರ್ತಿಕಜೆ ಅಣ್ಣ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×