Oppanna.com

ನೆಗೆ ಮಿಂಚು

ಬರದೋರು :   ಅರ್ತಿಕಜೆ ಮಾವ°    on   07/08/2014    6 ಒಪ್ಪಂಗೊ

1. ಜೋಯಿಶ° : ಎಂತ ನಿಂಗಳ ಗೆಂಡನ ಭವಿಷ್ಯದ ಬಗ್ಗೆ ತಿಳಿವಲೆ ಬಂದದಾ?

ಹೆಮ್ಮಕ್ಕ : ಗೆಂಡನ ಭವಿಷ್ಯ ಎನ್ನ ಕೈಲೇ ಇದ್ದು. ಅವರ ಭೂತವ (ಹಿಂದಾಣದ್ದರ) ತಿಳಿವಲೆ ಬಂದದು ಆನು. 😀

2. ಕೋರ್ಟಿಲಿ ಸಾಕ್ಷಿ ಹೇಳ್ಳೆ ಬಂದ ತಿಮ್ಮಪ್ಪನ ಹತ್ತರೆ ವಕೀಲ° ಕೇಳಿದ° – “ರಂಗಣ್ಣ° ಎಂತ ಹೇಳಿ ನಿನ್ನ ಬೈದ?”nege minchu

ತಿಮ್ಮಪ್ಪ° – ಸ್ವಾಮಿ, ಅದು ನಿಂಗಳ ಹಾಂಗಿಪ್ಪೋರು ಕೇಳುವ ಮಾತಲ್ಲ

ವಕೀಲ° – ಹಾಂಗಾರೆ ಜಡ್ಜನ ಹತ್ತರೆ ಹೋಗಿ ಅವಕ್ಕೆ ಕೇಳುವ ಹಾಂಗೆ ಹೇಳು 😀

3. ಒಬ್ಬ° ಭಾಷಣಗಾರ° ಭಾಷಣ ಮಾಡುವಾಗ ಗೆಡ್ಡವ ಉದ್ದಿಗೊಂಡು “ಈ ಪ್ರಶ್ನೆಯ ಬಗೆಹರುಸಲೆ …. ಹೇಳಿ ತಡವರಿಸಿದ°.

ಅಂಬಗ ಒಬ್ಬ° ಸಭಿಕ° ಎದ್ದು ನಿಂದು – “ಬರೇ ಇಪ್ಪತ್ತು ರುಪಾಯಿ ಸಾಕು” 😀

4. ನಾಲ್ಕು ಜೆನ ಚೆಂಙಾಯಿಗೊ ಒಂದು ಔತಣಕೂಟಲ್ಲಿ ಸರೀ ಕುಡುದು ರೈಲ್ವೇ ಸ್ಟೇಶನಿಂಗೆ ಹೋದವು. ರೈಲೂ ಬಂತು.

ಮೂರು ಜೆನ ರೈಲಿಂಗೆ ಹತ್ತಿದವು. ರೈಲು ಹೆರಟತ್ತು.

ಕೆಳ ಇದ್ದವ° ನೆಗೆ ಮಾಡ್ಳೆ ಸುರುಮಾಡಿದ°.

ಅವನ ನೋಡಿ ಸ್ಟೇಶನ್ ಮಾಸ್ಟ್ರ° “ಎಂತಕೆ ನೆಗೆ ಮಾಡ್ತೆ” ಹೇಳಿ ಕೇಳಿದ°.

ಅದಕ್ಕೆ ಅವ° – ರೈಲಿಲಿ ಹೋಯೇಕ್ಕಾದವ° ಆನು. ಎನ್ನ ಬೀಳ್ಕೊಡ್ಳೆ ಬಂದ ಅವ್ವೇ ರೈಲು ಹತ್ತಿ ಹೋಯಿದವು!. 😀

5. ಗೆಂಡ° – ನಿನ್ನ ಹುಟ್ಟಿದ ಹಬ್ಬಕ್ಕೆ ನಿನ್ನ ಬೆಂಗಳೂರಿಂಗೆ ಕರಕ್ಕೊಂಡು ಹೋಗಲಿಯೋ ಅಲ್ಲ ಒಂದು ಒಳ್ಳೆ ಸೀರೆ ತಂದು ಕೊಡ್ಳಿಯೋ?

ಹೆಂಡತ್ತಿ – ಬೆಂಗಳೂರಿಂಗೆ ಕರಕ್ಕೊಂಡು ಹೋಗಿ ಅಲ್ಲಿ ಒಂದು ಸೀರೆ ತೆಗದುಕೊಡಿ ಅಗದಾ!. 😀

6. ಗೆಂಡ° – ಹೊತ್ತೋಪಗ ಆನು ಮನಗೆ ಬಂದ ಕೂಡ್ಳೆ ನೀನು ಲಡಾಯಿಗೆ ಸುರುಮಾಡುತ್ತೆನ್ನೆ!

ಹೆಂಡತ್ತಿ – ಮತ್ತೆಂತ ಮಾಡುದು., ಹಗಲೆಲ್ಲ ನಿಂಗೊ ಆಫೀಸಿಲ್ಯೇ ಇರ್ತೀರನ್ನೇ! 😀

7. ಸುರುವಾಣವ° – ಒಂದು ಇರುಳು ನೀನು ದರೋಡೆಕೋರರ ಕೈಲಿ ಸಿಕ್ಕಿ ಬಿದ್ದೆ ಆಡ. ಅವು ನಿನ್ನ ವಾಚು, ಉಂಗಿಲು, ಪೈಸೆ ಎಲ್ಲ ರಟ್ಟಿಸಿಗೊಂಡು ಹೋದವಾಡ. ಅಪ್ಪೋ?!

ಮತ್ತಾಣವ° – ಅಪ್ಪು.

ಸುರುವಾಣವ° – ಆದರೆ ನಿನ್ನತ್ರೆ ರಿವಾಲ್ವರ್ ಇತ್ತನ್ನೆ?!

ಮತ್ತಾಣವ° – ಇದ್ದತ್ತು., ಆದರೆ ಅವರ ಕಣ್ಣು ಅದರ ಮೇಗೆ ಬಿದ್ದಿದಿಲ್ಲೆ. ಎನ್ನ ಪುಣ್ಯ! 😀

8. ಕೂಸು – ಆನು ಆರನ್ನೂ ಮದುವೆ ಆವುತ್ತಿಲ್ಲೆ. ಏವ ಬುದ್ಧಿಕೆಟ್ಟವನ ಹೆಂಡತ್ತಿಯೂ ಆವುತ್ತಿಲ್ಲೆ.

ಮಾಣಿ – ಹಾಂಗಾರೆ ಎನ್ನ ಮದುವೆ ಆವುತ್ತೆಯೋ? 😀

9. ಹೆಂಡತ್ತಿ – ಸಾಕು ಬಿಡಿ ನಿಂಗಳ ಬುದ್ಧಿವಂತಿಕೆ ಪ್ರದರ್ಶನ. ಮದುವೆಯ ಪ್ರಸ್ತಾಪ ಮಾಡಿಪ್ಪಗ ಶುದ್ಧ ಮೂರ್ಖನ ಹಾಂಗೆ ಕಂಡೊಂಡು ಇತ್ತಿದ್ದಿ.

ಗೆಂಡ° – ಮೂರ್ಖನ ಹಾಂಗೆ ಕಂಡೊಂಡು ಇತ್ತಿದ್ದೆ ಹೇಳಿ ಎಂತಕೆ ಹೇಳುವದು., ಆನು ಶುದ್ಧ ಮೂರ್ಖನೇ ಆದಕಾರಣ ನಿನ್ನ ಮದುವೆ ಆದ್ದು ಹೇಳ್ಳಕ್ಕು. 😀

10. ಅಪ್ಪ° – ನೋಡು ವ್ಯಾಪರಲ್ಲಿ ಏವಾಗಳೂ ಪ್ರಾಮಾಣಿಕತೆ ಮತ್ತೆ ವಿವೇಚನೆ ಮುಖ್ಯ.

ಮಗ° – ಹಾಂಗೆ ಹೇಳಿರೆ ಎಂತರಪ್ಪ?!

ಅಪ್ಪ° – ಪ್ರಾಮಾಣಿಕತೆ ಹೇಳಿರೆ ಎಂಥದೇ ಸಂದರ್ಭಲ್ಲಿಯೂ ಕೊಟ್ಟ ಮಾತಿಂಗೆ ತಪ್ಪಲಾಗ.

ಮಗ° – ವಿವೇಚನೆ ಹೇಳಿರೆಂತರ?

ಅಪ್ಪ° – ವಿವೇಚನೆ ಹೇಳಿರೆ ಏವ ಸಂದರ್ಭಲ್ಲಿಯೂ ಮಾತು ಕೊಡ್ಳಾಗ. 😀

 

11. ಗೆಂಡ° – ಅಲ್ಲ.., ನೋಡು ನಿನ್ನತ್ತರೆ ಆನು ಎಷ್ಟು ಸರ್ತಿ ಹೇಳಿದ್ದೆ ಈ ಜಗತ್ತಿಲ್ಲಿ ಆನು ಪ್ರೀತಿಸುವ ಹೆಣ್ಣು ಒಂದೇ ಒಂದು ಹೇಳಿ . ಇದರ ನಿನ್ನತ್ರೆ ಆನು ಒಂದು ಸಾವಿರ ಸರ್ತಿಯಾದರೂ ಹೇಳಿಪ್ಪೆ ಗೊಂತಾತೋ?!

ಹೆಂಡತ್ತಿ – ಅದಪ್ಪು, ಎನಗೆ ಗೊಂತಿದ್ದು. ಆದರೆ ಆ ಹೆಣ್ಣು ಆರು ಹೇಳಿ ಇನ್ನೂ ಎನಗೆ ಗೊಂತಾಯಿದಿಲ್ಲೆ!. 😀

 

12. ಕೋಪ ಮಾಡಿದ ಹೆಂಡತ್ತಿಯ ಸಮಾಧಾನ ಮಾಡ್ಳೆ ಹೇಳಿ ಒಬ್ಬ° ಕವಿ ಮಹಾಶಯ ಹೀಂಗೆ ಹೇಳಿದ° – ವ್ಹಾ! ನೀನು ಎಷ್ಟೊಂದು ಒಳ್ಳೆಯ ಕಾಫಿ ಮಾಡಿದ್ದೆ!. ಎಷ್ಟು ರುಚಿಯಾಗಿದ್ದು!

ಕೂಡ್ಳೆ ಹೆಂಡತ್ತಿ ಹೇಳಿತ್ತು – ನಿಂಗೊ ಬರದ ಕವನಂಗಳ ಹಸ್ತಪ್ರತಿಯ ಒಲಗೆ ಹಾಕಿ ಕಿಚ್ಚು ಹೊತ್ತಿಸಿ ಈ ಕಾಫಿ ತಯಾರಿ ಮಾಡಿದ್ದೆ. ಹಾಂಗಾಗಿ ಅದು ರುಚಿಯಾಗದ್ದೆ ಇಕ್ಕೋ?! 😀

 

13. ಹೆಂಡತ್ತಿ – ನೋಡಿ!, ನಿಂಗಳ ಹುಟ್ಟುಹಬ್ಬಕ್ಕೆ ಆನು ಎಷ್ಟು ಚೆಂದದ ಉಡುಗೊರೆ ತಯಿಂದೆ ಗೊಂತಿದ್ದೋ?!

ಗೆಂಡ° – ಅಪ್ಪೋ!, ಎಲ್ಲಿ ತೋರುಸು ನೋಡ್ವೋ.

ಹೆಂಡತ್ತಿ – ರಜ ನಿಲ್ಲಿ, ಬೇಗ ಸುತ್ತಿಗೊಂಡು ಬತ್ತೆ. 😀

14. ಅಪರಾಧಿ ಕಳ್ಳ° – (ಬಿಡುಗಡೆ ಆಯಿಕ್ಕಿ) ಆನು ಕೆಲವು ದಿನ ಬಿಟ್ಟು ನಿಂಗಳ ಮನಗೆ ಬತ್ತೆ ವಕೀಲರೆ.

ವಕೀಲ° (ಮೆಲ್ಲಂಗೆ) – ಹಗಲಿನ ಹೊತ್ತು ಬಂದರೆ ಒಳ್ಳೆದು. 😀

15. ಜೈಲಿಲಿ ತುಂಬ ಸಮಯ ಕೊಳೆತ್ತ ಇತ್ತಿದ್ದ ಕೈದಿಯ ಹತ್ತರೆ ಜೈಲು ವಾರ್ಡನ್ ಒಂದು ದಿನ ಕೇಳಿದ° – ಅಲ್ಲ ಇಲ್ಲಿಪ್ಪವರ ನೋಡ್ಳೆ ವಾರಕ್ಕೆ ಒಬ್ಬ ಇಬ್ರಾದರೂ ಬಂದುಗೊಂಡೇ ಇರ್ತವು. ನಿನ್ನ ನೋಡ್ಳೆ ಇಷ್ಟರವರೆಂಗೆ ಆರುದೆ ಬಯಿಂದವೇ ಇಲ್ಲೆನ್ನೆ ಏಕೆ?

ಅದಕ್ಕೆ ಕೈದಿ – ಅದು ಹೇಂಗೆ ಬಪ್ಪದು. ಎನಗೆ ಬೇಕಾದವು ಎಲ್ಲ ಇಲ್ಲೇ ಇದ್ದವು 😀

16. ಕೂಸು – ಅಪ್ಪಾ°!, ಆನು ಮದುವೆ ಆವುತ್ತರೆ ಒಬ್ಬ° ಸೈನಿಕನನ್ನೇ ಮದುವೆ ಅಪ್ಪದು.

ಅಪ್ಪ° – ಅದೆಂತಕ್ಕೆ?

ಕೂಸು – ಏವ ಅಪ್ಪಣೆಯನ್ನಾರು ಸೈನಿಕ° ತಪ್ಪದ್ದೆ ಪಾಲುಸುತ್ತ° ಅಲ್ಲದ?. ಅದಕ್ಕೆ!. 😀

17. ಹತ್ತರಾಣಮನೆ ಸೀತಕ್ಕ ಹಿತ್ತಿಲಿಲಿ ಪಾತ್ರ ತೊಳಕ್ಕೊಂಡು ಇತ್ತಿದ್ದ ಸುಬ್ಬಕ್ಕಂಗೆ ಹೇಳಿತ್ತು – ಎಂತ ಇದು ನೀನೇ ಪಾತ್ರ ತೊಳೆತ್ತ ಇದ್ದೆ. ನಿಂಗಳ ಕೆಲಸದ್ದು ಇಲ್ಲೆಯ?

ಅದಕ್ಕೆ ಸುಬ್ಬಕ್ಕ° – ಆನೇ ಅದರ ಕಳ್ಸಿಬಿಟ್ಟೆ

ಸೀತಕ್ಕ° – ಚುರುಕಾಗಿ ಕಾಂಬಲೂ ಚೆಂದ ಇತ್ತನ್ನೇ!

ಸುಬ್ಬಕ್ಕ° – ಅಪ್ಪು., ಎನ್ನ ಎಜಮಾನ್ರೂ ಹಾಂಗೇ ಹೇಳ್ಳೆ ಸುರುಮಾಡಿದವು. ಅದಕ್ಕೆ. 😀

 

18. ಪ್ರಿಯತಮ° – ಆನು ನಿನ್ನ ಬಿಟ್ಟಿಕ್ಕಿ ಹೇಂಗೆ ಮನಗೆ ಹೋಪದು?

ಪ್ರಿಯತಮೆ – 11 ನಂಬ್ರದ ಬಸ್ಸಿಲ್ಲಿ ಅಥವಾ ನಡಕ್ಕೊಂಡು 😀

***

ನೆಗೆ ಮಿಂಚು
(ಸಂಗ್ರಹ : ಅರ್ತಿಕಜೆ ಮಾವ°)

ಅರ್ತಿಕಜೆ ಮಾವ°
Latest posts by ಅರ್ತಿಕಜೆ ಮಾವ° (see all)

6 thoughts on “ನೆಗೆ ಮಿಂಚು

  1. ಇಲ್ಲಿ ಮಿ೦ಚಿ ಅಪ್ಪಗ ನೆಗೆಯೂ ಗುಡುಗಿತ್ತು..

  2. ನೆಗೆಮಿಂಚಿನ ಗೊಂಚಲು ಸೂಪರಾಗಿತ್ತು. ಮಾವ, ಮಿಂಚು ಮಿಂಚುತ್ತಾ ಇರಳಿ.

  3. ನೆಗೆ ಮಿಂಚುಗೋ ಇನ್ನೂ ಬತ್ತಾ ಇರಲಿ ಮಾವ.

  4. ಒಂದರ ಓದಿಯಪ್ಪಗಳೇ ಕಿಸುದ ಬಾಯಿ ಅಖೇರಿಯಪ್ಪನ್ನಾರ ಮುಚ್ಚಿದ್ದಿಲ್ಲೆ, ಒಳ್ಳೆದಾಯಿದಣ್ಣ. ನಗುವು ಸಹಜದ ಧರ್ಮ …….. ಡಿವಿಜಿ ಯವರ ಪದ್ಯ nenppaathu .

  5. ಮಾವ, ಭಾರೀ ಲಾಯ್ಕಿದ್ದು… ನೆಗೆ ಮಿಂಚು !!

  6. ನೆಗೆ ಮಿಂಚು ಫಳಫಳನೆ ಹೊಳದು ಧಾರಾಳ ನೆಗೆಯ ಕೊಟ್ಟತ್ತು ಅರ್ತಿಕಜೆ ಅಣ್ಣ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×