Oppanna.com

ಗಿಳಿ ಬಾಗಿಲಿಂದ -ಕಾಡ ಸೊಪ್ಪು ತೋಡ ನೀರು

ಬರದೋರು :   ಲಕ್ಷ್ಮಿ ಜಿ.ಪ್ರಸಾದ    on   23/07/2014    11 ಒಪ್ಪಂಗೊ

ಮೊನ್ನೆ ಒಂದಿನ ಪೇಪರ್ ಓದುವಾಗ ಒಂದು ವಿಷಯ ಗಮನಕ್ಕೆ ಬಂತು .ಅದರಲ್ಲಿ ಒಂದಷ್ಟು ವಿಜ್ಞಾನಿಗಳ ಸಂಶೋಧನೆ ಬಗ್ಗೆ ಮಾಹಿತಿ ಇತ್ತು .
ನಾವು ಇಷ್ಟರತನಕ ಶುದ್ಧಗೊಳಿಸಿದ ಆಹಾರ ತಿನ್ನಕ್ಕು ,ಆಹಾರಲ್ಲಿ ಬ್ಯಾಕ್ಟೀರಿಯಂಗ ಇದ್ದರೆ ಆರೋಗ್ಯಕ್ಕೆ ಹಾನಿ ಹೇಳುದರ ಕೇಳಿಗೊಂಡು ಬಂದದು ಅನ್ನೇ.ಆದರೆ ಅದರಲ್ಲಿ ವಿಜ್ಞಾನಿಗ ಆಹಾರಲ್ಲಿ ಒಂದಷ್ಟು ಜೀವಿಗಳ ಸೇರಿಸಿ ತಿ೦ಬದು ಒಳ್ಳೇದು ,ಆರೋಗ್ಯಕ್ಕೆ ಸಣ್ಣ ಪ್ರಮಾಣದ ಬ್ಯಾಕ್ಟೀರಿಯಂಗ ಬೇಕು .ಅದರಂದಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾವುತ್ತು ಇತ್ಯಾದಿ ಮಾಹಿತಿಗಳ ಸಂಶೋಧನೆಯ ಆಧಾರಲ್ಲಿ ಕೊಟ್ಟಿದವು .ಅದಕ್ಕೆ ಸಾಕ್ಷಿಯಾಗಿ ಯೋಗರ್ಟ್ (ಹಾಲಿನ ಕಿಣ್ವನಕ್ಕೆ ಒಳಪಡಿಸಿದ ಪೇಯ ) ಇಂದಾಗಿ ಆರೋಗ್ಯದ ಮತ್ತ ಹೆಚ್ಚು ಅಪ್ಪದರ ಬಗ್ಗೆ ವಿವರಿಸಿದ್ದವು .ಇದರ ಓದುವಗ ಎಂಗಳ ಭಾರೀ ಪ್ರೀತಿಯ ಪೆಲತ್ತಡ್ಕ ಅಜ್ಜಿ (ಎನ್ನ ಅಪ್ಪನ ಕಿರಿಯಬ್ಬೆ,ಅಮ್ಮನ ಸೋದರತ್ತೆ ಕೂಡಾ ) ಹೇಳುತ್ತಾ ಇದ್ದ ಒಂದು ಮಾತು ನೆನಪ್ಪಾತು .

ಎನ್ನ ಅಜ್ಜಂಗೆ ಅಮ್ಮಂದೆ ದೊಡ್ದಮ್ಮಂದೆ ಇಬ್ರು ಕೂಸುಗ ಮಾತ್ರ.ಹಾಂಗಾಗಿ ಅಜ್ಜನ ಮನೆಲಿ ಹತ್ತು ಜನ (ದೊಡ್ಡಮ್ಮನ ಮಕ್ಕ ಐದು ಜನ ,ಎಂಗ ಐದು ಜನ) ಪುಳ್ಳಿಯಕ್ಕಳದ್ದೆ ಕಾರ್ಬಾರು .ಎಂಗ ಕಲ್ಲು ಇಡ್ಕದ್ದ ಬೀಜದ ಮರ/ಮಾವಿನ ಮರಂಗ ಆ ಊರಿಲಿ ಒಂದುದೆ ಇತ್ತಿಲ್ಲೆ.ಬೇಸಗೆ ರಜೆಲಿ ಉದಿಯಪ್ಪಗ ಅಜ್ಜಿ ಮಾಡಿದ ದೋಸೆಯೋ ಸೆಖೆಗೆರದ್ದೋ ತಿಂದಿಕ್ಕಿ ಕೊಕ್ಕೆದೆ ಬಟ್ಟಿದೆ ಹಿಡ್ಕೊಂಡು ಬೀಜ ಕೊಯ್ವ ನೆಪಲ್ಲಿ ಮನೆಂದ ಎಲ್ಲರೂ ಪರಾರಿ ಅಪ್ಪದು ,ನಾಲ್ಕು ಬೀಜ ಕೊಯ್ದ ಹಾಂಗೆ ಮಾಡಿಕ್ಕಿ ಎಂಗಳ ಕಲ್ಲು ಇಡ್ಕುವ ಗುರಿಯ ಪ್ರದರ್ಶನ ,ಕಲ್ಲು ಇಡ್ಕಿ ಬೀಜ ಹಣ್ಣಿನ ಬೀಳ್ಸುದು,ಮತ್ತೆ ಹತ್ತರೆ ಇಪ್ಪ ಮಾವಿನ ಮರಕ್ಕೆ ಕಲ್ಲು ಇಡುಕ್ಕಿ ಮಾವಿನಕಾಯಿ ಬೀಳ್ಸುದು,ಮನೆಂದ ಬಪ್ಪಗಳೇ ಉಪ್ಪು ಖಾರ ಅಜ್ಜಿಯ ಕಣ್ಣಿಂಗೆ ಬೀಳದ್ದ ಹಾಂಗೆ ತಂದುಗೊಂಡು ಇತ್ತಿದೆಯ° .ಅದರ ಹಾಕಿ ಮಾವ್ನಕಾಯಿ ತಿಂದು ಬೀಜ ಹಣ್ಣು ತಿಂದು ,ಬೆಟ್ಟು ಗೆದ್ದೆಲಿ ಪಿಲೆ(ಚಿನ್ನಿ ದಾಂಡು ?)ಆಡಿಕ್ಕಿ ಮಧ್ಯಾಹ್ನ ಎರಡು ಗಂಟೆಗೆ ಮನೆಗೆ ಬಪ್ಪದು.ಹೋಪಗಳೇ ಅಜ್ಜಿ ಬೇಗ ಬನ್ನಿ ಹೊತ್ತು ಮಾಡ್ದಿ ಹೇಳುತ್ತ.ಆದರೂ ಎಂಗ ಬಪ್ಪದು ಎರಡು ಗಂಟೆ ಮೇಲೆಯೇ !ಎನ್ನ ಅಜ್ಜನ ಮನೆಲಿ ಪುಳ್ಳಿಯಕ್ಕಳಲ್ಲಿ ಕೂಸು ಮಾಣಿ ಹೇಳಿ ಬೇಧ ಇತ್ತಿಲ್ಲೆ,ಹಾಂಗಾಗಿ ಈ ಗುಂಪಿಲಿ ಆನುದೆ ಇತ್ತಿದೆ .

ಬೆಶಿಲಿಂಗೆ ಮನೆಗೆ ಬಂದು ಮೀವಲೆ ಹೋಪದು ರಜ್ಜವೇ ರಜ್ಜ ಹೊತ್ತು ಹೇಳಿ ಅಜ್ಜಿಯ ಪುಸಲಾಯಿಸಿ ತೋಡಿ೦ಗೆ ಈಜುಲೆ ಹೋಗಿಕೊಂಡು ಇತ್ತಿದೆಯ°.(ಅಂಬಗ ಬೇಸಗೆಲಿ ಕೂಡಾ ಆ ತೋಡಿನ ಗುಂಡಿಲಿ ಈಜುವಷ್ಟು ನೀರು ಇತ್ತು ,ಈಗ ಮಾರ್ಚ್ ಬರಕ್ಕಾದರೆ ನೀರು ಹರಿವದು ನಿಲ್ಲುತ್ತು )ಅಷ್ಟೊತ್ತಿಂಗೆ ಎನ್ನ ಅಜ್ಜಿ ಎಂಗೊಗೆ ವಿಶೇಷವಾಗಿ ಎನಗೂ ದೊಡ್ಡಮ್ಮನ ಮಗಳು ತಂಗೆಗೂ ತಲೆ ಚೆಂಡಿ ಮಾಡಡಿ ಹೇಳಿ ಹೇಳಿಗೊಂದು ಇತ್ತಿದ.ಎಂಗ ಹೂ0ಕುಟ್ಟಿಕ್ಕಿ ಆಚೊಡೆ ಹೋಗಿ ಈಜುವ ಮೀವ ನೆಪಲ್ಲಿ ನೀರಿಲಿ ಮುಳುಗಿಕೊಂಡು ಇತ್ತಿದೆಯ°.

ಎಂಗ ಗಂಟೆ ಮೂರು ಆದರೂ ಮಿಂದು ಬಾರದ್ದೆ ಅಪ್ಪಗ ಅಜ್ಜಿ ಕೋಲು ಹಿಡುಕ್ಕೊಂಡು ಬಂದಪ್ಪಗ ಓಡಿ ಹೋಗಿ ಮನೆ ಸೇರಿ ಕೊಂಡು ಇತ್ತಿದೆಯ° .

ಕೆಲವು ಸರ್ತಿ ಎಂಗೊಗೆ ಶೀತ ಜ್ವರ ಎಲ್ಲ ಬಂದುಕೊಂಡು ಇತ್ತಿದು. ಎನ್ನ ಪೆಲತ್ತಡ್ಕ ಅಜ್ಜಿ ಬಂದಿಪ್ಪಗಳುದೆ ಹೀಂಗೆ ಆಗಿಕೊಂಡು ಇತ್ತು.ಒಂದು ಸರ್ತಿ ಎಂಗೊಗೆ ಎಲ್ಲೊರಿಂಗೂ ಜ್ವರ ಬಂತು .ಅಂಬಗ ಎನ್ನ ಅಜ್ಜಿ ಪೆಲತ್ತಡ್ಕ ಅಜ್ಜಿ ಹತ್ರೆ ಈ ಮಕ್ಕ ಒಂದುದೆ ಹೇಳಿದ್ದು ಕೇಳ್ತವಿಲ್ಲೇ,ಬೆಶಿಲಿಂಗೆ ಸೊಕ್ಕಿಕ್ಕಿ ಬಂದು ತೋಡ ನೀರಿಲಿ ಆಡುತ್ತವು .ಅಜ್ಜ ನೋಡಿಯೂ ನೋಡದ್ದ ಹಾಂಗೆ ಸುಮ್ಮನಿದ್ದವು (ಅಜ್ಜಂದು ಅಪರೊಕ್ಷವಾಗಿ ಎಂಗೊಗೆ ಬೆಂಬಲ ಇತ್ತು !)ಇತ್ಯಾದಿಯಾಗಿ ದೂರು ಹೇಳಿಗೊಂಡು ಇತ್ತಿದ.ಅಂಬಗ ಪೆಲತ್ತಡ್ಕ ಅಜ್ಜಿ “ಮಕ್ಕ ಹಾಂಗೆ ಇರಕ್ಕು ಲಕ್ಷ್ಮೀ (ಎನ್ನ ಅಜ್ಜಿಯ ಹೆಸರು ಲಕ್ಷ್ಮೀ ಹೇಳಿ ,ಹಾಂಗಾಗಿಯೇ ಎನ್ನ ಹೆಸರು ಕೂಡ ಅದೇ)ಮಕ್ಕ ” ಕಾಡ ಸೊಪ್ಪು ತೋಡ ನೀರು” ಹೇಳಿ ಬೆಳೆಯಕ್ಕು.ಹಾಂಗೆ ಬೆಳದರೆ ಅವಕ್ಕೆ ಎಲ್ಲವನ್ನು ತಡಕ್ಕೊಂಬ ಶಕ್ತಿ ಬಪ್ಪದು .ಮಕ್ಕಳ ಅತೀ ಜಾಗ್ರತೆ ಮಾಡುಲಾಗ ,ರಜ್ಜ ಮಳೆಲಿ ನೆನೆಯಕ್ಕು ,ಬೆಶಿಲಿಂಗೆ ಹೊಯಕ್ಕು ಸಿಕ್ಕಿದ್ದು ತಿನ್ನಕ್ಕು ಒಂದೆರಡು ಸರ್ತಿ ರಜ್ಜ ಶೀತ ಅಕ್ಕು .ಆದರೆ ಅವು ಗಟ್ಟಿ ಮುಟ್ಟಾಗಿ ಬೆಳೆತ್ತವು,ಶೀತ ಆದರೆ ಕುಂಕುಮ ಬೆಶಿ ಮಾಡಿ ನೆತ್ತಿಗೆ ಹಾಕಿ,ಮತ್ತೆ ಬೆಶಿ ಹಾಲಿನಗೆ ಒಂದು ಚಿಟಿಕೆ ಅರಿಶಿನ ಹಾಕಿ ಕುಡಿವಲೆ ಕೊಡು .ಅರ್ಧ ಗಂಟೆಲಿ ಕಮ್ಮಿ ಅವುತ್ತಿದ ಹೇಳಿ” ಅಜ್ಜಿಗೆ ಸಮಾಧಾನ ಮಾಡಿಕೊಂಡು ಇತ್ತಿದವು .

ನಮ್ಮ ಹಿರಿಯರು ಶಾಲೆ ಮೆಟ್ಲು ಹತ್ತದ್ದರೂ ,ಯಾವ ಸಂಶೋಧನೆ ಮಾಡದ್ದರೂ ಅವರಲ್ಲಿ ತುಂಬಾ ಅನುಭವ ಇತ್ತು ,ಜ್ಞಾನ ಇತ್ತು ,ಹಾಂಗಾಗಿ ಈಗ ವಿಜ್ಞಾನಿಗ ಹೇಳಿದ ವಿಚಾರ ಅವಕ್ಕೆ ಅಂದೇ ಗೊಂತಿತ್ತು ,ಹಾಂಗಾಗಿಯೇ “ಕಾಡ ಸೊಪ್ಪು ತೋಡ ನೀರು” ಹೇಳುವ ಮಾತು ಬಳಕೆಗೆ ಬಂದಿರೆಕ್ಕು ಅಲ್ಲದ ?

11 thoughts on “ಗಿಳಿ ಬಾಗಿಲಿಂದ -ಕಾಡ ಸೊಪ್ಪು ತೋಡ ನೀರು

  1. ಹೀ೦ಗೆ —
    ಗಿಳಿಬಾಗಿಲಿಲಿ ಕ೦ಡಪ್ಪಗ ನಿ೦ಗ ವಾರವಾರ ಬರೆಯಕ್ಕಾದ ೨ನೇ ನಾಮಿನೇಡಟ್ ಬೈಲ ಸದ್ಯಸ್ಯಾರಾಗಿ ಬಿಗೊಪ್ಪಣ್ಣ ಆಯಿಕ್ಕೆ ಮಾಡಿರೆಕ್ಕು ಹೇಳಿ ಕ೦ಡತ್ತು.

    1. ಅಪ್ಪಾ ?! ಎಂತದು ಹೀಂಗೆ ಹೇಳಿರೆ ೨ನೇ ನಾಮಿನೇಡಟ್ ಬೈಲ ಸದ್ಯಸ್ಯಾರಾಗಿ ಆಯ್ಕೆ ಮಾಡುದು ಹೇಳಿರೆ ?ಎನಗೆ ಅರ್ಥ ಆಯಿದಿಲ್ಲೇ ಯಂ ಕೆ ಅಣ್ಣ ,ಓದಿ ಪ್ರೋತ್ಸಾಹಿಸುತ್ತಿಪ್ಪ ನಿಂಗೋಗೆ ಧನ್ಯವಾದಂಗ

  2. ಸಣ್ಣಾದಿಪ್ಪಾಗ ಆಡಿಗೊಂಡಿದ್ದದು ಎಲ್ಲಾ ಒಂದರಿ ನೆನಪ್ಪಾತು. ತುಂಬಾ ಕೊಶಿ ಆತು.ಎಂಗಳುದೆ ದೊಡ್ಡಪ್ಪಂದಿರ ಮಕ್ಕಳೂ ಸೇರಿ ಹೀಂಗೆ ಆಡಿಗೊಂಡು ಇತ್ತೆಯೋ. ಹೀಂಗೆ ತೋಡು ಗುಡ್ಡೆ, ಮತ್ತೆ ಹಾಳೆಯ ಕಿರೀಟ ಮಾಡಿ ಕಟ್ಟಿಗೊಂಡು ಯಕ್ಷಗಾನ ಕೊಣಿವದು, ತೋಟಲ್ಲಿ ಮಾಳ ಮಾಡಿ ಅಲ್ಲಿ ಪಾಯಸ ಎಲ್ಲ ಮಾಡಿಗೊಂಡು ಇತ್ತೆಯೋ. ಪಾಯಸ ತಿಂಬಲೆ ಮನೆಯ ಹೆರಿಯೋರು ಎಲ್ಲ ಬಕ್ಕು. ಎಲ್ಲೋರು ಆರೋಗ್ಯಲ್ಲಿ ಇತ್ತಿದ್ದೆಯೋ.

    1. ಅಪ್ಪು ಮಾಲಕ್ಕ ನಮ್ಮ ಬಾಲ್ಯದ ಗಮ್ಮತ್ತು ಇಂದಿನ ಮಕ್ಕೊಗೆ ಇಲ್ಲೆ ,ಎಂಗಳ ಅಜ್ಜನ ಮನೇಲಿ ಹೀಂಗೆ ಆಟ ಶಾಲೆ ವಾರ್ಷಿಕೋತ್ಸವದ ಆಟವ ಆಡುವಾಗ ಅಭಿನಯಿಸುವ ಸಲುವಾಗಿ ಬರದ ನಾಟಕ ಸುಬ್ಬಿ ಇಂಗ್ಲಿಷ್ ಕಲ್ತದು ಆನು ಆಟ ನಮ್ಮ ಮನೆ ಮಕ್ಕೋ ಆಡಿಗೊಂಡು ಇದ್ದ ಕಾರಣ ಆ ನಾಟಕದ ಭಾಷೆ ಅಯಾಚಿತವಾಗಿ ನಮ್ಮ ಭಾಷೆಲಿಯೇ ಇತ್ತು ಅದು ಹೆಮ್ಮಕ್ಕ ಬರದ ಮೊದಲ ನಾಟಕ ಹೇಳುವ ದಾಖಲೆ ಪಡೆಗು ಹೇಳಿ ಊಹೆ ಮಾಡುಲೂ ಎಡಿಯದ್ದ ಸಣ್ಣ ಪ್ರಾಯ ಎನಗೆ ,ಎಂಗಳ ನಾಟಕ ಆಟದ ಸಂಗತಿ ಕೇಳಿದ ಎಂಗಳ ಮೀಯಪದವು ಶಾಲೆ ವಸಂತ ಮಾಷ್ಟ್ರು ಅದರ ತಪ್ಪಲೆ ಹೇಳಿ ಓದಿ ಲಾಯ್ಕ ಇದ್ದು ಹೇಳಿ ಪ್ರೋತ್ಸಾಹಿಸಿದವು ಎನ್ನ ,ಹಾಂಗಾಗಿ ಮರು ವರ್ಷ ಅದರ ಅಭಿನಯಿಸಿ ಬಹುಮಾನ ಪದೆದೆಯ .ಅಂಬಗ ಏಳನೇ ಕ್ಲಾಸ್ ಲಿ ಇತ್ತಿದೆ .2007 ರಲ್ಲಿ ಹವ್ಯಕ ಸಭೆಯ ಪರವಾಗಿ ಹವ್ಯಕ ಅಧ್ಯಯನ ಕೇಂದ್ರದ ಪ್ರಧಾನ ನಿರ್ದೇಶಕರಾಗಿದ್ದ ನಾರಾಯಣ ಶಾನುಭಾಗ ಅವರ ಸೂಚನೆಯ ಮೇರೆಗೆ ರಾಜಗೋಪಾಲಣ್ಣ ಎನ್ನ ಹುಡುಕಿಗೊಂಡು ಬಂದು ಹೇಳಿ ಅಪ್ಪಗಲೇ ಅದು ಮಹಿಳೆ ಬರದ ಮೊದಲ ಹವಿಗನ್ನಡ ನಾಟಕ ಹೇಳಿ ಎನಗೆ ಗೊಂತಾದ್ದು ,ನಮ್ಮ ಬಾಲ್ಯಲ್ಲಿ ಸೃಜನಶೀಲತೆಯ ವಿಕಸನಕ್ಕೆ ತುಂಬಾ ಅವಕಾಶಂಗ ಇತ್ತು ಅಲ್ಲದ ?

  3. ಕಾಡ ಸೊಪ್ಪು ಮೇದು ತೋಡ ನೀರು ಕುಡುದ ನಾಡ ಹಸುಗಳ ಹಾಲು ತುಂಬಾ ರುಚಿ.ಸಗಣಲ್ಲಿಯೂ ಔಷಧೀಯ ಗುಣ ಹೆಚ್ಚು.ಇಂದು ನಾಡ ತಳಿ ಅಪೂರ್ವ.ಮಿಶ್ರ ತಳಿ ಹೆಚ್ಚು.ವಿಷಯುಕ್ತ ಬೈಹುಲ್ಲು, ಯೂರಿಯಾ ಸೇರ್ಸಿದ ಹಿಂಡಿ ತಿನುಸಿ ದನಗಳ ಸಾಂಕುವದು.ಅವುಗಳ ಹಾಲಿಲ್ಲಿಯೂ ವಿಷದ ಅಂಶ ಇರದ್ದೆ ಇರ.ಈ ಸಂದರ್ಭಲ್ಲಿ ‘ಗದ್ದೆ ಕೆಸರನು ಕುಡಿದು ಕಾಡು ಮುಳ್ಳನು ಕಡಿದು’ ಹೇಳಿ ಸುರುವಪ್ಪ ಕಯ್ಯಾರರ ಪದ್ಯ ನೆಂಪಾವುತ್ತು.’ಹಿತ್ತಿಲ ಗಿಡ ಮದ್ದಲ್ಲ’ ಹೇಳಿ ತಿಳುದವೇ ಹೆಚ್ಚಿನ ಜೆನ.ಹಿರಿಯರ ಅನುಭವದ ಸಂಪತ್ತಿನ ನಮ್ಮ ಕೈವಶ ಮಾಡಿದರೆ ನವಗೂ ಆರೋಗ್ಯ ಭಾಗ್ಯ ಬಕ್ಕು.

    1. ಅಪ್ಪು ನರಸಿಂಹಣ್ಣ ,ಓದಿ ಪ್ರೋತ್ಸಾಹಿಸಿದ ನಿಂಗೊಗೆ ಧನ್ಯವಾದಂಗ

  4. ಒಳ್ಳೆ ವಿವರಣೆ. ಕಾಡ ಸೊಪ್ಪು ತೋಡ ನೀರು ಹೇಳಿ ಬೆಳೆದರೆ ಕೆಲವೊಮ್ಮೆ ದೊಡ್ಡ ರೋಗ ಏನಾದರೂ ಬಂದರೆ ಮಾತ್ರ ತಾಪತ್ರಯ! ಆದ್ದರಿಂದ ಈ ಹೇಳಿಕೆ ಅರ್ಧ ಸತ್ಯ.

    1. ಅದು ಅಪ್ಪು ಗೋಪಾಲಣ್ಣ

  5. ಹರೇರಾಮ, ಒಳ್ಳೆ ಸುದ್ದಿ ನೈಸರ್ಗಿಕದ ಉದಾಹರಣೆ.

    ಹರೇರಾಮ, ಒಳ್ಳೆಸುದ್ದಿ. ನೈಸರ್ಗಿಕವಾಗಿ ಬದುಕ್ಕೀರೆ ಆರೋಗ್ಯಕ್ಕೆ ತೊಂದರೆ ಇಲ್ಲೇ ಹೇಳುಗಲ್ಲೊ? ಉದಾಃ ಬೇಡುವವು ಅವು ಮಾರ್ಗದಕರೆಲಿ ಹೆತ್ತಿಕ್ಕಿ ಅಲ್ಲೇ ಬಾಳಂತನವೂ ಅಕ್ಕು. ಹೇಳುಗು ಎನ್ನಬ್ಬೆ. ಆದರೆ ಅಷ್ಟು ನೈಸರ್ಗಿಕವ ,ನಾವು ಮೈಗೂಡಿಸಿಗೊಂಡಿದಿಲ್ಲೆ ಹೇಳುಗು.
    l

    1. ಅಪ್ಪು ನಾವು ನಾಜೂಕುತನ ರೂಡಿಸಿಕೊಂಡಷ್ಟು ಪ್ರತಿರೋಧ ಶಕ್ತಿ ಕಮ್ಮಿ ಆವುತ್ತು ,ಹಾಂಗೆ ಹೇಳಿ ತೀರ ಅವಗಣನೆ ಮಾಡಿರೆ ಗೋಪಾಲಣ್ಣ ಹೇಳಿದ ಹಾಂಗೆ ದೊಡ್ಡ ರೋಗಂಗ ಎಂತಾರು ಬಪ್ಪ ಸಾಧ್ಯತೆದೆ ಇದ್ದು ಅಲ್ಲದ ? ಧನ್ಯವಾದಂಗ ವಿಜಯಕ್ಕ

  6. ಹರೇರಾಮ, ಓ

    ಹರೇರಾಮ, ಒಳ್ಳೆಸುದ್ದಿ. ನೈಸರ್ಗಿಕವಾಗಿ ಬದುಕ್ಕೀರೆ ಆರೋಗ್ಯಕ್ಕೆ ತೊಂದರೆ ಇಲ್ಲೇ ಹೇಳುಗಲ್ಲೊ? ಉದಾಃ ಬೇಡುವವು ಅವು ಮಾರ್ಗದಕರೆಲಿ ಹೆತ್ತಿಕ್ಕಿ ಅಲ್ಲೇ ಬಾಳಂತನವೂ ಅಕ್ಕು. ಹೇಳುಗು ಎನ್ನಬ್ಬೆ. ಆದರೆ ಅಷ್ಟು ನೈಸರ್ಗಿಕವ ,ನಾವು ಮೈಗೂಡಿಸಿಗೊಂಡಿದಿಲ್ಲೆ ಹೇಳುಗು.
    l

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×