- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಬಾಸುಂದಿ
ಬೇಕಪ್ಪ ಸಾಮಾನುಗೊ:
- 18 ಕಪ್(ಕುಡ್ತೆ) / 3 ಲೀಟರು ಹಾಲು
- 2-2.5 ಕಪ್(ಕುಡ್ತೆ) ಸಕ್ಕರೆ
- 3 ಚಮ್ಚೆ ಬೀಜದಬೊಂಡು
- 6-7 ಪಿಸ್ತ
- 8-10 ಬಾದಮಿ
- 4-5 ಏಲಕ್ಕಿ
- ರೆಜ್ಜ ಕೇಸರಿ
ಮಾಡುವ ಕ್ರಮ:
ಪಿಸ್ತ ಮತ್ತೆ ಬಾದಾಮಿದು ಹೆರಾಣ ಚೋಲಿಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೆರಸಿ ಮಡುಗಿ.
ಏಲಕ್ಕಿಯ ರೆಜ್ಜ ಹೊಡಿ ಮಾಡಿಕ್ಕಿ, ಬೀಜ, ಬಾದಮಿ, ಪಿಸ್ತವ ಮಿಕ್ಸಿಗೆ ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹೊಡಿ ಮಾಡಿ ಮಡಿಕ್ಕೊಳ್ಳಿ.
2-3 ಚಮ್ಚೆ ಬೆಶಿ ಹಾಲಿನ ಒಂದು ಗಿಣ್ಣಾಲಿಲ್ಲಿ ಹಾಕಿ ಅದಕ್ಕೆ ಕೇಸರಿಯ ಹೊಡಿ ಮಾಡಿ ಹಾಕಿ ಮಡಿಕ್ಕೊಳ್ಳಿ.
ಹಾಲಿನ ದಪ್ಪ ತಳದ ಪಾತ್ರಲ್ಲಿ ಹಾಕಿ ಕೊದುಶಿ. ಅದರ ಸಣ್ಣ/ಹದ ಕಿಚ್ಚಿಲ್ಲಿ ಸಾಧಾರಣ 20 ನಿಮಿಷ ಮಡುಗಿ, ಅಂಬಗಂಬಗ ತೊಳಸುತ್ತಾ ಇರಿ.
ಇದಕ್ಕೆ ಸಕ್ಕರೆ ಹಾಕಿ ತೊಳಸಿ, ಹದ ಕಿಚ್ಚಿಲ್ಲಿ ಸಾಧಾರಣ 30-40 ನಿಮಿಷ, ಮಜ್ಜಿಗೆಯಸ್ಟು ಮಂದ(ದಪ್ಪ) ಬಪ್ಪನ್ನಾರ ಕಾಸಿ.
ಇದಕ್ಕೆ ಹೊಡಿ ಮಾಡಿದ ಏಲಕ್ಕಿ, ಪಿಸ್ತ, ಬಾದಾಮಿ, ಬೀಜವ ಹಾಕಿ ತೊಳಸಿ.
ಇದಕ್ಕೆ ಕೇಸರಿ ಹಾಲಿನ ಹಾಕಿ, 5 ನಿಮಿಷ ಸಣ್ಣ ಕಿಚ್ಚಿಲ್ಲಿ ಕಾಸಿ.
ಪೂರ್ತಿ ತಣುದ ಮೇಲೆ ಪ್ರಿಡ್ಜಿಲ್ಲಿ ಮಡುಗಿ, ತಣ್ಣಂಗೆ ಕುಡಿವಲೆ ಕೊಡಿ.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.