- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಬೆಂಡೆಕಾಯಿ ಮೊಸರುಗೊಜ್ಜಿ / ದಹೀ ಭಿಂಡಿ
ಬೇಕಪ್ಪ ಸಾಮಾನುಗೊ:
- 15 ಸಣ್ಣ ಬೆಂಡೆಕಾಯಿ ಅಥವಾ 2 ಕಪ್(ಕುಡ್ತೆ) ಕೊಚ್ಚಿದ ಬೆಂಡೆಕಾಯಿ
- 1 ಸಾಧಾರಣ ಗಾತ್ರದ ನೀರುಳ್ಳಿ ಅಥವಾ 1 ಕಪ್(ಕುಡ್ತೆ) ಕೊಚ್ಚಿದ ನೀರುಳ್ಳಿ
- 2 ಹಸಿಮೆಣಸು
- ಚಿಟಿಕೆ ಅರುಶಿನ ಹೊಡಿ
- 2-3 ಎಳೆ ಕೊತ್ತಂಬರಿ ಸೊಪ್ಪು
- 1.5-2 ಕಪ್(ಕುಡ್ತೆ) ಮೊಸರು
- ರುಚಿಗೆ ತಕ್ಕಸ್ಟು ಉಪ್ಪು
- 1 ಚಮ್ಚೆ ಸಾಸಮೆ (1/2+1/2)
- 1/2 ಚಮ್ಚೆ ಜೀರಿಗೆ (1/4+1/4)
- 3-4 ಬಾಳಕ್ಕು ಮೆಣಸು(ಬೇಕಾದರೆ ಮಾತ್ರ)
- 3-4 ಬೇನ್ಸೊಪ್ಪು
- 2-3 ಎಳೆ ಕೊತ್ತಂಬರಿ ಸೊಪ್ಪು
- ದೊಡ್ಡ ಚಿಟಿಕೆ ಇಂಗು
- 3-4 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಬೆಂಡೆಕಾಯಿಯನ್ನೂ, ನೀರುಳ್ಳಿಯನ್ನೂ ಸಣ್ಣಕೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ ಮಡುಗಿ. ಹಸಿಮೆಣಸಿನ ಸಿಗುದು ಮಡುಗಿ.
ಬಾಣಲೆಲಿ 1/2 ಚಮ್ಚೆ ಸಾಸಮೆ, 1/4 ಚಮ್ಚೆ ಜೀರಿಗೆ, 2-3 ಚಮ್ಚೆ ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ, ಇಂಗು, ಬೇನ್ಸೊಪ್ಪು ಹಾಕಿ, ಅದಕ್ಕೆ ಕೊಚ್ಚಿದ ನೀರುಳ್ಳಿ, ಹಸಿಮೆಣಸು ಹಾಕಿ, 4-5 ನಿಮಿಷ ಸಣ್ಣ ಕಿಚ್ಚಿಲ್ಲಿ ಚಿನ್ನದ ಬಣ್ಣ ಬಪ್ಪನ್ನಾರ ಹದ/ಸಣ್ಣ ಕಿಚ್ಚಿಲ್ಲಿ ಹೊರಿರಿ. ಇದಕ್ಕೆ ಕೊಚ್ಚಿದ ಬೆಂಡೆಕಾಯಿ, ಅರುಶಿನ ಹೊಡಿ, ಉಪ್ಪು ಹಾಕಿ ಸಣ್ಣ/ಹದ ಕಿಚ್ಚಿಲ್ಲಿ ಸಾಧಾರಣ 20-25 ನಿಮಿಷ ಬೆಂಡೆಕಾಯಿ ಬೇವನ್ನಾರ ಹೊರಿರಿ.
ಬೆಂಡೆಕಾಯಿ ಭಾಗ ಪೂರ್ತಿ ತಣುದ ಮೇಲೆ, ಮೊಸರು, ಕೊಚ್ಚಿದ ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ತೊಳಸಿ (ಮೊಸರು ಹುಳಿ ಇದ್ದರೆ ರೆಜ್ಜ ಹಾಲು ಸೇರ್ಸಿ.) ಒಗ್ಗರಣೆ ಸಟ್ಟುಗಿಲ್ಲಿ ಬಾಳಕ್ಕು ಮೆಣಸು, ಎಣ್ಣೆ ಹಾಕಿ ಒಂದೆರಡು ನಿಮಿಷ ಸಣ್ಣ ಕಿಚ್ಚಿಲ್ಲಿ ಹೊರಿರಿ. ಅದು ಚಿನ್ನದ ಬಣ್ಣಕ್ಕೆ ಬಪ್ಪಗ, ಸಾಸಮೆ, ಜೀರಕ್ಕಿ ಹಾಕಿ. ಅದು ಹೊಟ್ಟಿ ಅಪ್ಪಗ, ಇಂಗು, ಬೇನ್ಸೊಪ್ಪು ಹಾಕಿ, ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಗೊಜ್ಜಿಗೆ ಹಾಕಿ ತೊಳಸಿ.
ಇದು ರೋಟಿ/ಪರಾಟ/ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.