Oppanna.com

ಖಾರ ತುಕ್ಕುಡಿ

ಬರದೋರು :   ವೇಣಿಯಕ್ಕ°    on   23/12/2014    0 ಒಪ್ಪಂಗೊ

ವೇಣಿಯಕ್ಕ°

ಖಾರ ತುಕ್ಕುಡಿ

ಬೇಕಪ್ಪ ಸಾಮಾನುಗೊ:

  • 1.5 ಕಪ್(ಕುಡ್ತೆ) ಮೈದಾ ಹೊಡಿ
  • 1/2 ಕಪ್(ಕುಡ್ತೆ) ಗೋಧಿ ಹೊಡಿ
  • 2 ಚಮ್ಚೆ ಅಕ್ಕಿ ಹೊಡಿ
  • ದೊಡ್ಡ ಚಿಟಿಕೆ ಇಂಗು
  • ರುಚಿಗೆ ತಕ್ಕಸ್ಟು ಉಪ್ಪು
  • 3/4-1 ಚಮ್ಚೆ ಮೆಣಸಿನ ಹೊಡಿ
  • 2 -3 ಚಮ್ಚೆ ಬೆಶಿ-ಬೆಶಿ ಎಣ್ಣೆ / ತುಪ್ಪ
  • 1/4 ಚಮ್ಚೆ ಜೀರಿಗೆ
  • 1/2 ಚಮ್ಚೆ ಎಳ್ಳು
  • ಎಣ್ಣೆ

ಮಾಡುವ ಕ್ರಮ:

ಒಂದು ಪಾತ್ರಲ್ಲಿ ಮೈದಾ ಹೊಡಿ, ಗೋಧಿ ಹೊಡಿ, ಅಕ್ಕಿ ಹೊಡಿ, ಇಂಗು, ಉಪ್ಪು, ಮೆಣಸಿನ ಹೊಡಿ, ಜೀರಿಗೆ, ಎಳ್ಳು ಹಾಕಿ ಅದಕ್ಕೆ ಬೆಶಿ-ಬೆಶಿ ಎಣ್ಣೆಯ ಹಾಕಿ ಲಾಯಿಕಲಿ ತೊಳಸಿ.
ಇದಕ್ಕೆ ಬೇಕಾದಸ್ಟು ನೀರು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಗಟ್ಟಿಗೆ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.

ರೆಜ್ಜ ಹಿಟ್ಟಿನ ತೆಕ್ಕೊಂಡು ಉಂಡೆ ಮಾಡಿ. ಉಂಡೆಯ ಚಪಾತಿಯ ಹಾಂಗೆ ಲಟ್ಟುಸಿ.

ಚಪಾತಿಯ ತುಕ್ಕುಡಿಯ ಆಕಾರಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕತ್ತರುಸಿ.

ಅದರ ಬೇರೆ ಬೇರೆ ಮಾಡಿ ಒಂದು ಪೇಪರು/ತಟ್ಟೆಗೆ ಹಾಕಿ.

ಬಾಣಲೆಲಿ ಎಣ್ಣೆ ಮಡುಗಿ ಬೆಶಿ ಮಾಡಿ. ಎಣ್ಣೆ ಬೆಶಿ ಆದಪ್ಪಗ, ಕತ್ತರಿಸಿದ ತುಕ್ಕುಡಿಯ ಎಣ್ಣೆಗೆ ಹಾಕಿ. ಚಿನ್ನದ ಬಣ್ಣ ಬಪ್ಪನ್ನಾರ /ಕರು ಕುರು ಅಪ್ಪನ್ನಾರ ಹೊರಿರಿ.
ತಣುದ ಮೇಲೆ ಕರಡಿಗೆಲಿ ತೆಗದು ಮಡುಗಿ, ಚಾ, ಕಾಫಿ ಒಟ್ಟಿಂಗೆ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×