- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಖಾರದ ರೊಟ್ಟಿ / ಕಾವಲಿಗೆ ರೊಟ್ಟಿ
ಬೇಕಪ್ಪ ಸಾಮಾನುಗೊ:
- 2 ಕಪ್(ಕುಡ್ತೆ) ಕೊಯಿಶಕ್ಕಿ
- 1/2 ಕಪ್(ಕುಡ್ತೆ) ಬೆಣ್ತಕ್ಕಿ
- 1/2-1 ಕಪ್(ಕುಡ್ತೆ) ಅಕ್ಕಿ ಹೊಡಿ (ಬೇಕಾದರೆ ಮಾತ್ರ)
- 1 ಕಪ್(ಕುಡ್ತೆ) ಕಾಯಿ ತುರಿ
- 8-10 ಒಣಕ್ಕು ಮೆಣಸು
- 1/2 ಇಂಚು ಗಾತ್ರದ ಶುಂಠಿ
- 4-5 ಕಣೆ ಬೇನ್ಸೊಪ್ಪು
- 2 ದೊಡ್ಡ ನೀರುಳ್ಳಿ
- ಎಣ್ಣೆ / ತುಪ್ಪ
- 20 ಬಾಳೆ ಎಲೆ
ಮಾಡುವ ಕ್ರಮ:
ಕೊಯಿಶಕ್ಕಿ ಬೆಣ್ತಕ್ಕಿಯ ಒಟ್ಟಿಂಗೆ 5-6 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ, ಲಾಯಿಕಲಿ ತೊಳದು ಮಡುಗಿ.ಬಾಳೆ ಕೀತುಗಳ ಲಾಯಿಕ ಉದ್ದಿ ಮಡುಗಿ.
ಅಕ್ಕಿ, ಕಾಯಿ, ಬೇನ್ಸೊಪ್ಪು, ಶುಂಠಿ, ರೆಜ್ಜ ನೀರಿನ ಗ್ರೈಂಡರಿಂಗೆ ಹಾಕಿ ಗಟ್ಟಿಗೆ ನೊಂಪಿಂಗೆ ಕಡೆರಿ. (ನೀರು ಹೆಚ್ಚಾದರೆ ಅಕ್ಕಿ ಹೊಡಿ ಹಾಕಿ ಬೆರುಸಿ.)
ನೀರುಳ್ಳಿಯ ಚೋಲಿ ತೆಗದು, ತೊಳದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ.
ಕೊಚ್ಚಿದ ನೀರುಳ್ಳಿಯ ಹಿಟ್ಟಿಂಗೆ ಹಾಕಿ ಲಾಯಿಕಲಿ ಬೆರುಸಿ. ರೆಜ್ಜ ಹಿಟ್ಟಿನ ತೆಕ್ಕೊಂಡು ಬಾಳೆ ಕೀತಿಲ್ಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತೆಳ್ಳಂಗೆ ಹತ್ಸಿ.
ಕಾವಲಿಗೆಯ ಬೆಶಿ ಅಪ್ಪಲೆ ಮಡುಗಿ. ಕಾವಲಿಗೆ ಕಾದಪ್ಪಗ ಹತ್ಸಿ ಮಡುಗಿದ ರೊಟ್ಟಿಯ ಕವುಂಚಿ ಹಾಕಿ ಮುಚ್ಚಲು ಮುಚ್ಚಿ
ಸಾಧಾರಣ ಒಂದು ನಿಮಿಷ ಬೇಶಿ.(ಬಾಳೆ ಕೀತು ಬಾಡುವನ್ನಾರ.)
ಬಾಳೆ ಕೀತಿನ ತೆಗದು, 1 ಸಕ್ಕಣ ತುಪ್ಪ/ಎಣ್ಣೆ ಹಾಕಿ ಕವುಂಚಿ ಹಾಕಿ ಸಣ್ಣ/ಹದ ಕಿಚ್ಚಿಲ್ಲಿ ಬೇಶಿ.
ಬೆಶಿ ಬೆಶಿ ರೊಟ್ಟಿಯ ತುಪ್ಪ ಅಥವಾ ಸಾಂಬಾರು/ಬೆಂದಿ/ಚಟ್ನಿ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 15 ರೊಟ್ಟಿ ಆವುತ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.