Oppanna.com

ಬೆಂಡೆಕಾಯಿ ಟೊಮೇಟೋ ಸಾರು

ಬರದೋರು :   ವೇಣಿಯಕ್ಕ°    on   03/02/2015    9 ಒಪ್ಪಂಗೊ

ವೇಣಿಯಕ್ಕ°

ಬೆಂಡೆಕಾಯಿ ಟೊಮೇಟೋ ಸಾರು

ಬೇಕಪ್ಪ ಸಾಮಾನುಗೊ:

  • 4-5 ಸಾಧಾರಣ ಗಾತ್ರದ ಬೆಂಡೆಕಾಯಿ
  • 2 ಸಾಧಾರಣ ಗಾತ್ರದ ಟೊಮೇಟೋ
  • 1-2 ಹಸಿಮೆಣಸು
  • ಚಿಟಿಕೆ ಅರುಶಿನ ಹೊಡಿ
  • ನಿಂಬೆ ಗಾತ್ರದ ಬೆಲ್ಲ
  • ರುಚಿಗೆ ತಕ್ಕಸ್ಟು ಉಪ್ಪು
  • ಚಿಟಿಕೆ ಇಂಗು
  • 5-6 ಬೇನ್ಸೊಪ್ಪು
  • 1 ಚಮ್ಚೆ ಸಾಸಮೆ
  • 1 ಚಮ್ಚೆ ಎಣ್ಣೆ

ಮಾಡುವ ಕ್ರಮ:
ಬೆಂಡೆಕಾಯಿಯ ತೆಳ್ಳಂಗೆ ಉರುಟಿಂಗೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ. ಟೊಮೇಟೋವನ್ನೂ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ. ಹಸಿಮೆಣಸಿನ ಸಿಗುದು ಮಡುಗಿ.

ಇದರ ಒಂದು ಪಾತ್ರಕ್ಕೆ ಹಾಕಿ, ಅದಕ್ಕೆ ಉಪ್ಪು, ಬೆಲ್ಲ, ಅರುಶಿನ ಹೊಡಿ, ಬೇಕಪ್ಪಸ್ಟು(5-6 ಕುಡ್ತೆ) ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ.

ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ, ಇಂಗು, ಬೇನ್ಸೊಪ್ಪು ಹಾಕಿ ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಸಾರಿಂಗೆ ಹಾಕಿ ತೊಳಸಿ. ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವುತ್ತು. ಇದರ ಅಂತೆ ಸೂಪಿನ ಹಾಂಗೆ ಕುಡಿವಲುದೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

9 thoughts on “ಬೆಂಡೆಕಾಯಿ ಟೊಮೇಟೋ ಸಾರು

  1. ಎಂಗಳ ಮನೇಲಿ ಒಂದೊಂದರಿ, ವಾರಲ್ಲಿ ಎಂಟತ್ತು ದಿನ ಈ ಸಾರು ಇರ್ತು.

    1. ಹ್ಹ ಹ್ಹ ಹ್ಹಾ…!
      ವಾರಲ್ಲಿ ಎಂಟತ್ತು ದಿನವೋ..?! ರೈಸಿತ್ತು ಶ್ಯಾಮಣ್ಣ..!!

  2. ಅದೇ ಆಯೆಕ್ಕಪ್ಪದು, ಬೆಳ್ಳುಳ್ಳಿ ಒಗ್ಗರಣೆಂದ ಇಂಗು ಒಗ್ಗರಣೆಯೇ ಒಳ್ಳೆದು

    1. ಈ ಟೀಕೆ ಮಾವ೦ಗೆ ಬೆಳ್ಳುಳ್ಳಿ ಕ೦ಡ್ರೆ ಎ೦ತಪ್ಪೊದಪ್ಪಾ ??

      1. ಟೀಕೆಮಾವ ಕಾಶಿಗೋದರೆ ಬಿಟ್ಟಿಕ್ಕಿ ಬಪ್ಪ ಸಾಮಾನಡ ಅದು.

        ಅಲ್ಲ; ಬೆಳ್ಳುಳ್ಳಿ ಆಗದ್ರೆ ಹೋಗಲಿ, ಹಾಂಗೇಳಿ ಬೆಳ್ಳುಳ್ಳಿ ತಿಂಬವರನ್ನೂ ಟೀಕೆಮಾವ ಟೀಕೆ ಮಾಡುದು ಸಮವೋ ಮುಳಿಯ ಭಾವಾ?

        1. ಹಾಂಗೇಳಿ ಬೆಳ್ಳುಳ್ಳಿ ತಿಂಬೋರ ಟೀಕೆ ಮಾಡಿರೂ, ಬೇಳೆ ಹುಳಿ (ಹಲಸಿನ ಬೇಳೆ ಮೇಲಾರ) ತಿಂಬೋರ ಟೀಕೆ ಮಾಡವು.

  3. ಅತಿ ಸುಲಭಲ್ಲಿ – ಒತ್ತೆಪೋಕನಾಂಗೆ ಬಿಡಾರ ಮಾಡಿಂಡಿಪ್ಪ ಜೆವ್ವನಿಗರು ಸಾನು – ಎಳುಪ್ಪಲ್ಲಿ ಮಾಡ್ಲೆಡಿಗಪ್ಪ ರುಚಿಯಾದ ಅಡುಗೆ ಇದು. ಇದರ ಒಗ್ಗರಣೆಗೆ ಎರಡೆಸಳು ಬೆಳ್ಳುಳ್ಳಿ ಗುದ್ದಿ ಹಾಕಿರೆ ಮತ್ತೂ ಲಾಯ್ಕ ಅಲ್ಲದೋ ವೇಣಿಯಕ್ಕಾ?

    1. ಹುಂ… ಆದರೆ ಟೊಮೇಟೊ ಹಾಕಿದ ಹೀಂಗಿದ್ದ ಬೋಳು ಸಾರುಗೊಕ್ಕೆ ಬೆಳ್ಳುಳ್ಳಿ ಒಗ್ಗರಣೆ ಸಾಮಾನ್ಯ ಅಕ್ಕಸ್ಟೆ. ಇಂಗಿನ ಒಗ್ಗರಣೆ ಒಳ್ಳೆ ಪರಿಮ್ಮಳ ಆವುತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×