ಒಪ್ಪಣ್ಣನ ಬೈಲಿಲಿ ಹೊತ್ತೋಪಗ ಮಾಡ್ತ ಕಟ್ಟೆಪುರಾಣಲ್ಲಿ ಸಕ್ರಿಯವಾಗಿ ಇಪ್ಪ ಕೆಲವು ಪುಳ್ಳರುಗಳಲ್ಲಿ ಅಜ್ಜಕಾನ ಬಾವನೂ ಒಬ್ಬ. ಆಚಕರೆಮಾಣಿಯತ್ರೆ ಯೇವತ್ತೂ ಜಗಳ ಮಾಡಿಗೊಂಡು,ಪುಟ್ಟಕ್ಕ, ಒಪ್ಪಕ್ಕ ಇವರತ್ರೆಲ್ಲ ಕುಶಾಲು ಮಾತಾಡಿಗೊಂಡು, ತಿರುಗಿಗೊಂಡು, ಎಲ್ಲೊರತ್ರೂ ಕುಶಾಲು ಮಾತಾಡಿಗೊಂಡು ನೆಗೆಮೋರೆಲಿ ಇಪ್ಪದು ಈ ಭಾವನ ವಿಶೇಷತೆ. ಎಂತಾರು ಕಷ್ಟಕಾಲಲ್ಲಿಉಪಕಾರಕ್ಕೆ ಸಿಕ್ಕೆಕ್ಕಾರೆ ತೆಯಾರು. ಅಡಿಗೆಲಿ ಒಂದು ಕೈ ಮೇಲೆ! ಓ ಮೊನ್ನೆ ಬೆಂಗ್ಳೂರಿಂಗೆ – ಪೆರ್ಲದಣ್ಣನ ಮನೆಗೆ- ಹೋಗಿಪ್ಪಗ ಅಲ್ಲಿ ತೆಳ್ಳವು ಮಾಡಿ ಎಲ್ಲೊರಿಂಗುದೇ ಕುಶಿ ಆಯಿದಡ. ’ನಿನ್ನ ಮದುವೆ ಅಪ್ಪ ಕೂಸಿಂಗೆ ಚಾನ್ಸು ಮಾರಾಯ’ ಹೇಳಿ ಪೆರ್ಲದಣ್ಣ ಹೇಳಿದ್ದಕ್ಕೆ ಎರಡು ದಿನ ನಾಚಿಗೆ ಮಾಡಿದ್ದನಡ. ಹತ್ತರಾಣೋರತ್ರೆ ಎಷ್ಟುದೇ ಮಾತಾಡುಗು. ರೂಪತ್ತೆಯ ಹಾಂಗೆ ’ಹೇಳಿಗೊಂಬವು’ ಸಿಕ್ಕಿರೆ ಎಷ್ಟುದೇ ಹೇಳುಸುಗು. ಬಾಯಿ ಬಿಡುಸುಗು. ಗುಣಾಜೆಮಾಣಿಗೆ ಎಂತಾರು ಟೋಂಟು ಮಡುಗೆಕ್ಕಾರೆ, ಪಕ್ಕನೆ ಬದಿಯಡ್ಕಂದ ಎಂತಾರು ತರೆಕ್ಕಾರೆ, ದೊಡ್ಡಭಾವಂಗೆ ಬೈಕ್ಕು ಬೇಕಾರೆ, ಶೇಡಿಗುಮ್ಮೆ ಭಾವಂಗೆ ಎರಡು ಹೆಟ್ಟೆಕ್ಕಾರೆ - ಎಲ್ಲ ಈ ಅಜ್ಜಕಾನಭಾವನೇ ಆಯೆಕ್ಕು. ಈ ಭಾವನತ್ರೆ ಎಂತಾರು ಶುದ್ದಿ ಹೇಳು, ಶುದ್ದಿ ಹೇಳು – ಹೇಳಿ ಎಂಗೊ ಎಲ್ಲ ಒತ್ತಾಯ ಮಾಡಿದ್ದಕ್ಕೆ ಮತ್ತೆ ಶುರು ಮಾಡಿದ.
ಹರೇ ರಾಮ. ಬಪ್ಪಲೆ ಎಡಿಗಾಗದ್ದೋರಿಂಗೆ ಈ ವೀಡಿಯೋ ನೋಡುವ ಅವಕಾಶ ಒದಗಿಸಿದ್ದಕ್ಕೆ ಧನ್ಯವಾದ.
ಹರೇ ರಾಮ; ದೂರದ ರಾಜ್ಯಲ್ಲಿ ಅನಿವಾರ್ಯ ಇದ್ದದರಿ೦ದ ನೀರ್ಚಾಲಿ೦ಗೆ ಬಪ್ಪಲಾಗದ್ದೆ ನಮ್ಮ ಬೈಲಿನ ಕಾರ್ಯಕ್ರಮ ತಪ್ಪಿ ಹೋತನ್ನೇ ಹೇದು ಸ೦ಕಟಪಟ್ಟುಕೊ೦ಡಿತ್ತಿದ್ದೆ.ಆ ಬೇಜಾರ ಈಗ ಎನಗೆ ಈ ವಿಡಿಯೋ ನೋಡಿ ರಜಾ ಸಮಾಧಾನ ಮಾಡಿಗೊ೦ಬ ಹಾ೦ಗಾತು. ಈ ಸಕಾಯವ ಒದಗಿಸಿದ ಅಜ್ಜಕಾನ ಭಾವ ಹಾ೦ಗೂ ಸಮ್ಮ೦ದ ಪಟ್ಟವಕ್ಕೆಲ್ಲರಿ೦ಗೂ ತು೦ಬು ಹೃದಯದ ಧನ್ಯವಾದ೦ಗೊ.
ಎಲ್ಲರಿಂಗೂ ಧನ್ಯವಾದಂಗೊ
ಎಲ್ಲ ಬಂಧುಗಕ್ಕೆ ಅಭಿನಂದನೆಗೋ . ಎಂಗಳ ಊರಿಲ್ಲಿ ಆದ ಕಾರ್ಯಕ್ರಮವ ವೀಡಿಯೊ ಮೂಲಕ ನೋಡಿ ತುಂಭಾ ಕುಶಿ ಆತು. ದೂರದೂರಿಲ್ಲಿದ್ದರೂ ನೀರ್ಚಾಲಿನ್ಗೆ ಬಂದ ಹನ್ನ್ಗಾತು. ವೀಡಿಯೊ ಅಪ್ಲೋಡ್ ಮಾಡಿದ್ದಕ್ಕೆ ದನ್ಯವಾದನ್ಗೋ.
ಇಂದು ಬೈಲಿನ್ಗೆ ಇಳಿದೆ