- ನೀರುಳ್ಳಿ ಕ್ರಯ ಏರಿದ್ಸಕ್ಕೆ ಬೈಲಿನೋರ ಪ್ರತಿಕ್ರೊಯೆಗೊ: - August 25, 2015
- ನೆಗೆ ಬಪ್ಪದು ಖಂಡಿತಾ!! - September 9, 2012
- ನೆಗೆ ಸೋಬಾನೆ : ’ಎಲ್ಲೋರು ಬನ್ನಿ ಬೈಲಿಂಗೆ’ - March 12, 2012
Yelloringu Gud Morningu!!
ಹ್ಮ್, ನಾವು ಇಂಗ್ಳೀಶು ಕಲಿತ್ತದು ಹೇಂಗೆ ಹೇಳಿ ಮೊನ್ನೆಂದಲೇ ಎಲ್ಲೋರಿಂಗೂ ಒಂದು ಗಮನ ಇತ್ತಿದ್ದು.
ಒಂದೇ ಸರ್ತಿ ಪೂರ ಕಲಿವದರ ಬದಲು ರಜರಜವೇ ಕಲ್ತರೆ ಒಳ್ಳೆದಡ, ಮಾಷ್ಟ್ರುಮಾವ ಹೇಳಿತ್ತಿದ್ದವು.
ಯೇವದೇ ಒಂದು ಶಬ್ದ ಕೇಳಿರೂ, ಮೊದಾಲು ಹೋಗಿ ಆ ಹೊಸಾ ಡಿಕಿಶ್ನರಿ ನೋಡಿತ್ತು.
ಆ ಶಬ್ದ ಇರದ್ರೆ ಅದರ ತುಂಡು ತುಂಡು ಬರಕ್ಕೊಂಡತ್ತು, ಆ ತುಂಡುಗೊ ಆದರೂ ಇದ್ದೋ – ನೋಡಿತ್ತು.
ಹಾಂಗೆ ತುಂಡುತುಂಡು ಇಂಗ್ಳೀಶಿನ ನೋಡಿ ನೋಡಿ ಕಲಿತ್ತಾ ಇದ್ದೆ. 🙁 🙂
—————
ಇಂದ್ರಾಣ ಪಾಟ:
ಗೆಣವತಿಯ ಸ್ಮರಣೆಂದಲೇ ನಮ್ಮ ಕಲಿವಿಕೆ ಆರಂಭ ಆಗಲಿ!
1. ಗಣಪತಿ
Gun-Apathy
ಡಿಕಿಶ್ನರಿಯ ಅರ್ತಂಗೊ:
Gun = ಬೆಡಿ
Apathy = ಇಷ್ಟ ಇಲ್ಲದ್ದೆ ಅಪ್ಪದು
ನೆಗೆಗಾರನ ಅರ್ತ : ಬೆಡಿಯ ಕಂಡ್ರೆ ಇಷ್ಟ ಇಲ್ಲದ್ದೆ ಅಪ್ಪದಕ್ಕೆ ಗಣಪತಿ ಹೇಳುಲಕ್ಕು.
ಲೋಕಲ್ಲಿ ಶಾಂತಿ ನಿಂಬಲೆ ಬೇಕಾಗಿ ನಾವೆಲ್ಲರೂ ಗೆಣವತಿಗೊ ಅಪ್ಪೊ.
(ಅಜ್ಜಕಾನಬಾವ ಹೊಟ್ಟೆಬೆಳೆಶಿ ಗೆಣವತಿ ಆವುತ್ತಾ ಇದ್ದ°, ಅದು ಬೇರೆ! 😉 )
—————
2. ಗಣೇಶ್ವರ:
Gun-Ash-War-a
ಡಿಕಿಶ್ನರಿಲಿ ನೋಡಿ ಅಪ್ಪಗ ಈ ಅರ್ತಂಗೊ ಗೊಂತಾತು:
Gun=ಬೆಡಿ
Ash=ಬೂದಿ
War=ಜಗಳ
a= ಒತ್ತೆ
ನೆಗೆಗಾರನ ಅರ್ತ: ಒತ್ತೆ ಬೆಡಿಗೆ ಬೇಕಾಗಿ ಜಗಳ ಮಾಡಿ ಬೂದಿ ಮಾಡಿದವು – ಹೇಳಿಯೋ ಮತ್ತೊ ಆದಿಕ್ಕು! 🙁
—————
3. ಹಟ್ಟಿ
Hut-Tea
ಡಿಕಿಶ್ನರಿ ಅರ್ತಂಗೊ:
Hut= ಗುಡಿಚ್ಚೆಲು
Tea= ಚಾಯ!
ನೆಗೆಗಾರನ ಅರ್ತ: ಚಾಯ ಮಾಡಿ ಕುಡಿವಲೆಡಿಗಾದ ಗುಡಿಚ್ಚೆಲು!!!
—————
ಈ ಶಬ್ದಂಗಳ ಸರಿಯಾದ ಅರ್ತ ಎಂತರ ಹೇಳಿ ಮಾಷ್ಟ್ರುಮಾವನತ್ರೆ ಕೇಳಿ ಆಯೆಕ್ಕಟ್ಟೆ. 😉
ನೆಗೆಗಾರ° ಹೀಂಗೆ ಶಬ್ದ ಶಬ್ದಲ್ಲಿ ಇಂಗ್ಳೀಶು ಕಲ್ತರೆ ಹೇಂಗೆ? ಅಕ್ಕಲ್ಲದೋ?
ಏ°?
ಇನ್ನೂ ಬೇಕು
ಬರಲಿ ಬೇಗ ಬೇಗ.
ayyayayyo ee nagarabethavu eddo.ambaga englishu kalitha aalochaneye bidekakko heli.mastrumavana huli adringo naagarabethakko navu ottinge bennu torsalakku heliyadare ondu kai nooduvon.Mohananna oppangalottinge.
ಇದು ಲಾಯ್ಕಿದ್ದು. 😀
ನವಗೆಂತ ಆ ಆಕ್ಸುಫರ್ಡಿಂಗೇ ತಲೆತಿರುಗುಗು ಈ ಇಂಗ್ಳೀಶಿಂಗೆ.
engo ella raja madale englishu kalivale surumaadekaatu heli kaanuttu.englishilli estella kalivalaavuttu kalthare hingella oppango sikkuttu heli gontittille.aa huli adarina elliyaru pakkasina edeliyo devarakoneliyo huggusi madagire aanu englishu kalivale battadu heli nischaya maadidde.oppangalottinge.
{ pakkasina edeliyo devarakoneliyo huggusi madagire aanu englishu kalivale battadu }
– ಮೋಹನಮಾವಾ°,
ಹುಳಿಅಡರು ಪಕಾಸಿಲಿ ಇದ್ದರೆ ನಾಗರಬೆತ್ತ ಮಾಷ್ಟ್ರುಮಾವನ ಕೈಲಿ ಇದ್ದು ಹೇಳಿ ಅರ್ತ!
ಕಷ್ಟವೇ.
ಯೇವದೊಳ್ಳೆದು, ನಿಂಗೊ ಆಲೋಚನೆ ಮಾಡಿ.
ಒಪ್ಪ ಕಂಡತ್ತು, ಕೊಶೀ ಆತು.
ಬನ್ನಿ, ಒಟ್ಟಿಂಗೆ ಕಲಿವ°…
[ಓದಿ ತಲೆ ತಿರುಗಿತ್ತು …!!!]
ರೆಜಾ ನಿಂಗಳ ಬೆನ್ನು ಕೂಡಾ ಕಂಡತ್ತೋ ಮಾವಂಗೆ
{ಬೆನ್ನು ಕೂಡಾ ಕಂಡತ್ತೋ}
ಕಾಂಬದೆಲ್ಲಿಗೆ, ಬೆನ್ನು ಹೊಡಿಹೊಡಿ ಆಯಿದಿಲ್ಲೆಯೋ!! 😉
ನಗೆಗಾರ ಅವನೆ ಅಕ್ಕೊ ನೆಗೆ ಮಾಡುಸುವವನೆ..ಅವ ಇಪ್ಪದೆ ಅದಕ್ಕೆ ಆಟಲ್ಲಿ ಹಾಸ್ಯಗಾರ ಇಪ್ಪಹಾಂಗೆ…ನೆಗೆಗಾರನ ಇಂಗ್ಲಿಶ್ ಓದಿ ತಲೆ ತಿರುಗಿತ್ತು …!!!
{ ಇಂಗ್ಲಿಶ್ ಓದಿ ತಲೆ ತಿರುಗಿತ್ತು …!!!}
ಅದಕ್ಕೆಯೋ ಅಂಬಗ ಮಾಷ್ಟ್ರುಮಾವ° ಕೂದಂಡು ಪಾಟ ಮಾಡುದು????!!! 😉
ಓ!
ಬೈಲಿಲಿ ಇಂಗ್ಳೀಶು ಕ್ಲಾಸುದೇ ಸುರು ಆತೋ – ಅದೂ ನಿನ್ನದು!!
ಇನ್ನು ಎಲ್ಲೋರುದೇ ಮಾಷ್ಟ್ರುಮಾವನ ಕೈಂದ ಪೆಟ್ಟು ತಿನ್ನೆಕ್ಕಷ್ಟೆಯೋ!
ಆಗಲಿ, ಒಳ್ಳೆ ಕೆಲಸ.
ಮೂರು ಶಬ್ದದ ಅರ್ತಂಗಳುದೇ ನೆಂಪೊಳಿವ ಹಾಂಗೆ ವಿವರುಸಿದ್ದೆ. ಗಟ್ಟಿಗ°.
entha oppanna…
negegaara helire aaru enage raja doubt battu.
kelire oppanna nege maadi haarsi bidutta allada oppanna…
nodo oppanna negegaarana english kalivale edigo heli.
{ nodo oppanna negegaarana english kalivale edigo heli }
ಎಡಿಗಪ್ಪಾ ಎಡಿಗು.
ಒಪ್ಪಣ್ಣನೇ ಕಲಿವಲೆಡಿಗಾರೆ ನಿಂಗೊಗೆ ಎಡಿಯದೋ! 😉
ನಗೆಗಾರ ಅಣ್ಣ ಕಲಿವಾಗ್ಲುದೆ ಇಷ್ಟು ಆಳವಾಗಿ ಕಲಿತ್ತವು ಹೇಳಿ ಎನಗೆ ಇಂದೇ ಗೊಂತಾದ್ದು!!!!! . ತುಂಬಾ ತುಂಬಾ ಕಲಿಯೆಕ್ಕು ನಗೆಗಾರಣ್ಣ ಜೀವನಲ್ಲಿ ಮುಂದೆ ಬರೆಕ್ಕಾರೆ. ನಿಂಗಳು ಕಲಿವದಲ್ಲದ್ದೆ ಎಂಗಳ ಜ್ಞಾನವನ್ನು ಹೆಚ್ಚುಸುತ್ತ ಇದ್ದಿ, ಖುಶಿ ಆತು.
ನೆಗೆಗಾರೋ, ನಿನ್ನ ಈ ಇಂಗ್ಳಿಶಿನ ತಲಗೆ ಎಂತಾರು ಕೊಡೆಕ್ಕು. ಎಂತರ(ಲ್ಲಿ) ಅಕ್ಕು ಹೇಳಿ ಗೊಂತಾವುತ್ತಾ ಇಲ್ಲೆ ನೋಡು. ಲಾಯಕ ಪದವಿಸ್ತಾರ.. ಏವ ಪಂಡಿತಕ್ಕೊಗೂ ಸುಲಾಬಲ್ಲಿ ಮಾಡಿಕ್ಕಲೆಡಿಯ ಈ ನಮೂನೆ!!!
ಪುಣ್ಯ! ಮಾಣಿ ‘ಮಧೂರು ಮಹಾ ಗಣಪತಿ’ ಹೇಳಿ ಸುರು ಮಾಡಿದ್ದಾ° ಇಲ್ಲೆ… ಇಲ್ಲದ್ದರೆ ಇನ್ನೆಂತ ಬರ್ತಿತ್ತಾ? 😉
ಹ ಹ ಹ ಹ …ನೆಗೆಗಾರ ಒಳ್ಳೆ ಪ್ರಯತ್ನ. ಒಪ್ಪಂಗಳೂ ಲಾಯ್ಕ ಇದ್ದು….ನಮ್ಮ vocabulary ಬೆಳಗು…..
vocabulary—-ಓ ಕೇಬು ಇಲ್ಲಾರಿ …ಇವತ್ತು ಬಸ್ಸಲ್ಲೇ ಹೋಗೋಣಾರಿ..
ನೆಗೆಗಾರಣ್ಣಾ, ಹೀಂಗೆ ಈ ಭಾಷೆ ಬೆಳದರೆ ಇಂಗ್ಲಿಶ್ ಸಪಾಯಿ ಅಕ್ಕೋ ಹೇಳಿ..
ನಮ್ಮ ಕನ್ನಡ ಭಾಷೆಯ ಅವಸ್ಥೆ ಬೆಂಗ್ಳೂರಿಲಿ ಎಲ್ಲ ಈಗ ಇಪ್ಪದು ನೋಡಿದರೆ, ಈ ಇಂಗ್ಲಿಷ್ ಎಷ್ಟೋ ಅಕ್ಕಪ್ಪಾ. ಭಾಷೆಯ ಕೊಲ್ಲುತ್ತಾ ಇಲ್ಲೆನ್ನೆ ನಾವು.
ಪದ ಮಾತ್ರ ರಜ್ಜ ನವಗೆ ಬೇಕಾದ ಹಾಂಗೆ ತಿರುಗುತ್ತು ಅಷ್ಟೇ ಅಲ್ಲದಾ? 😉
ನೂರು ವರ್ಷ ಹಿಂದೆಯೇ ಹೀಂಗಿಪ್ಪ ಇಂಗ್ಲಿಷ್ ಪಾಠ ಶುರು ಆಗಿದ್ದರೆ.. ಬ್ರಿಟಿಷರ ಓಡ್ಸುವ ಕೆಲಸ ಇತ್ತಿಲ್ಲೆ ;).. ಅವ್ವೇ ಎದ್ದು ಬಿದ್ದು ಓಡ್ತಿತವು !!
{ ಇಂಗ್ಲಿಶ್ ಸಪಾಯಿ ಅಕ್ಕೋ ಹೇಳಿ }
ಅಂಬಗ ಬಾಶೆ ಹಾಳಾವುತ್ತು ಹೇಳಿಗೊಂಡು ಆನು ಕಲಿವಲೇ ಆಗದೋ? 🙁 🙁 🙁 🙁 🙁
ಹೇಳಿರೆ ಇಂಗು ಹಾಕುಲೆ ಕಾವೊದೋ?
ಅಪ್ಪು
ವೈಟ್ ಇಂಗು ಹಾಕಿರೆ ಆತು
ಅಪ್ಪಪ್ಪು 🙂
ಇನ್ನಾಣ ವಾರದ ಹೊಸ ಪಾಠಕ್ಕೆ waitingu..!!
ನಗೆಗಾರ, ಎಂಗೊ ಎಲ್ಲಾ ಕಲಿತ್ತೆಯೊ. (ಪೆರಟ್ಟು ಕಲಿವಲೆ ಸುಲಾಭ ಅಲ್ಲದ)
ಹೀಂಗಿಪ್ಪ ಇಂಗ್ಲೀಶ್ ಶಭ್ದಂಗಳ ಡಿಕ್ಶ್ನರಿ ಮಾಡಿ ಮಾಷ್ಟ್ರು ಮಾವನ ನಣ್ಣ ಮಗನ ಮದುವೆಗೆ ಉಡುಗೊರೆ ಕೊಟ್ಟರೆ ಹೇಂಗೆ ತಮ್ಮ?.
ಎಂಗೊ ಕಲ್ತದರ ಮಾತ್ರ ಅಲ್ಲಿ ಬಾಯಿ ಬಿಡ್ತಿಲ್ಲೆಯೊ.
ಹುಳಿ ಅಡರು ಎಷ್ಟು ಗಟ್ಟಿ ಇದ್ದು ಗೊಂತಿಲ್ಲೆ ಇದ
ಎಂಗಳ ಕಾಲೇಜಿಂಗೆ ಆರೋ ಒಂದು ನಾಕು ಜೆನ ಬೈಂದವು..ಮಕ್ಕೊಗೆಲ್ಲಾ ಇಂಗ್ಲೀಷ್ ಕಲುಶುತ್ತವಡ !! ..ಎಷ್ಟು ಕಲುಶುತ್ತವೋ..ಈ ಮಕ್ಕೊ ಎಷ್ಟು ಕಲಿತ್ತವೋ ಗೊಂತಿಲ್ಲೆ..ಆದರೆ ಕಲುಶುಲೆ ಬಂದವರ ಕಿಸೆ ತುಂಬುತ್ತು, ಕಿಸೆಲಿ ಜಾಗೆ ಸಾಲದ್ದೆ ಗೋಣಿಚೀಲ ತಪ್ಪಲೂ ಸಾಕು (11 ಸಾವಿರ ಮಕ್ಕೊ ಇದ್ದವನ್ನೆ) !!
{ಗೋಣಿಚೀಲ}
-Go-Nitch-Chee-law!! ??
ಹಾಂಗೆ ಹೇಳಿರೆ ಎಂತರ?
ಮಾಷ್ಟ್ರುಮಾವನತ್ರೆ ಕೇಳಿಕ್ಕಿ ಬಪ್ಪೊ° ಹೇಳಿ ಮನಗೆ ಹೋದೆ, ಕಂಡಿಗೆ ದೊಡ್ಡಪ್ಪನಲ್ಲಿ ಪೂಜಗೆ ಹೋಗಿತ್ತಿದ್ದವು. 🙁
ಹ್ಞಾ..ನಾಳೆ ಕೇಳಿರಾತು ಅಂಬಗ 🙂
ಹೀಂಗೂ ಅಕ್ಕಾ ಹೇಳಿ
gone-itchy-law
ವಿವರಣೆ ಕೊಡ್ಲೆ ನೆಗೆಗಾರಣ್ಣನೇ ಬರೆಕ್ಕು 🙂
Newton’s law ಇಪ್ಪ ಹಾಂಗೆ !!
negegaara ee kramalli english kalthare yavaga kalthappadu.
huli adarili beshi maadiru salado heli kaanthu.
sari kaliva manasiddo heli negegaaranatre kelutte.
alladre edigadastu kalivadu heli maadudu.
100kke etthuvagaadaru akkanne…!
{alladre edigadastu kalivadu heli maadudu}
ಮಾಷ್ಟ್ರುಮಾವಂಗೆ ಪುರುಸೊತ್ತಿದ್ದರೆ ಕಲಿವದೇ.
ಎಡಿಗಾದಷ್ಟು ಕಲಿಯೇಕು ಎನಗುದೇ.
ಜೋಗಿಮೂಲಗೋ, ಮೂಡಬಿದ್ರಗೋ, ಉರುಳಾಂಡಿಗೋ, ಪರ್ಲಡ್ಕಕ್ಕೋ, ಬದಿಯಡ್ಕಕ್ಕೋ ಮಣ್ಣ ಹೋಗಿದ್ದರೆ ಆ ದಿನ ರಜೆ!
ಸೂಪರ್ ಇಂಗ್ಲೀಸ್ !!
ನಿಂಗಳೂ ಕಲಿತ್ತಿರೋ?
ಡಿಕಿಶ್ನರಿ ಒಂದೇ ಇಪ್ಪದು. ನಿಂಗೊ ಇಲ್ಲಿ ಓದಿಯೇ ಕಲೀರಿ. ಆತೋ?
ಏ°? 😉
ಅಕ್ಕು 🙂
ಪಷ್ಟಾಯಿದು.
ನೀನು ಹೀಂಗುದೆ ಇಂಗ್ಲಿಷು ಕಲಿವದು ಮಾಷ್ಟ್ರುಮನೆ ಅತ್ತಗೆ ಗೊಂತಾದರೆ ಹುಳಿ ಅಡರಿಲಿ ಬೀಳುಗು !!!!.
{ಮಾಷ್ಟ್ರುಮನೆ ಅತ್ತ ಅಡರಿಲಿ ಬೀಳುಗು..}
ಮಾಷ್ಟ್ರು ಮನೆ ಅತ್ತೆಯ ಹುಳಿ ಆಡರಿಂಗೆ ನೆಗೆಗಾರ ಹೇಳಿರೆ ತುಂಬಾ ಪ್ರೀತಿ ಆಡ
{ತುಂಬಾ ಪ್ರೀತಿ ಆಡ }
ಕೊಳಚ್ಚಿಪ್ಪುಭಾವ° ಅಪುರೂಪಕ್ಕೆ ಸತ್ಯ ಹೇಳಿದ°.
ಅಪ್ಪು, ಆನು ಹೇಳಿರೆ ಆತು ಆ ಬೆತ್ತಕ್ಕೆ ತುಂಬಾ ಪ್ರೀತಿ.
ಅದೇ ಕೊಳಚ್ಚಿಪ್ಪುಭಾವನೋ, ಕಲ್ಮಡ್ಕ ಭಾವನೋ, ಮಯಿಸೂರು ಮಾಣಿಯೋ – ಮಣ್ಣ ಬಂದರೆ ಬಯಂಕರ ಪಿಸುರು ಬಪ್ಪದು ಆ ಕೋಲಿಂಗೆ. ತಾರಾಮಾರಾ ಬೀಸುಲೆ ಸುರು ಆವುತ್ತು, ಬೆನ್ನು ಹೊಡಿ ಅಪ್ಪ ಒರೆಂಗೆ.
{ ತಾರಾಮಾರಾ ಬೀಸುಲೆ ಸುರು ಆವುತ್ತು, ಬೆನ್ನು ಹೊಡಿ ಅಪ್ಪ ಒರೆಂಗೆ }
ಅಪ್ಪ್ಪಪ್ಪು ,ಆನು ಹೋಗಿಪ್ಪಾಗ ಸುಮಾರು ಸರ್ತಿ ಅಡರು ತಾರಾಮಾರ ಬೀಸಿ ನೆಗೆಗಾರನ ಬೆನ್ನು ಹೊಡಿ ಆಯಿದು.
ಹುಳಿ ಅಡರಿಂಗೆ ಇಂಗ್ಲೀಷಿಲ್ಲಿ ಎಂತ ಹೇಳುದು?
ಹುಳಿ ಅಡರು ಇಂಗ್ಲಿಶಿಲಿ ಸರಸ್ವಿತ ಹೇಳಿ ಹೇಳುಗು , ನೆಗೆಗಾರಣ್ಣನ ಡಿಕಿಶ್ನರಿಲಿ.
{ ನೆಗೆಗಾರಣ್ಣನ ಡಿಕಿಶ್ನರಿಲಿ }
– ಇಲ್ಲೆ ಭಾವ.
ಮೊನ್ನೆ ಮಳಗೆ ನೀರು ಬಿದ್ದು ಆ ಪುಟದ ಶಾಯಿ ಕರಡಿದ್ದು. ಎಂತ ಬರಕ್ಕೊಂಡಿದ್ದು ಹೇಳಿ ಕಾಣ್ತಿಲ್ಲೆ. 🙁
ಆ ಶಬ್ದದ ಅರ್ತ ಸಿಕ್ಕಿದ ಮತ್ತೆ ನೋಡೊ°. ಆಗದೋ?
who lia dar
ಹಿಂದಿ ಎನಗೆ ಗೊಂತಿದ್ದು. ಇಂಗ್ಲೀಶ್ ಅರಡಿಯ
who: ओ
lia: लिय
dar: डर
ಇದು ಲಾಯ್ಕಾಯ್ದು !!
ಒಳ್ಳೆದಾತದ ನೆಗೆಗಾರಣ್ಣನ ಡಿಕಿಶ್ನರಿ ಕೋಪಿ ಮಾಡಿಗೊಂಡದು..
ಸರಸ್ವಿತ ಹೇಳಿರೆ ,
ಸರ = SOUR=ಹುಳಿ
ಸ್ವಿತ = SWITCH=ಅಡರು
ಅಲ್ಲದೋ ಮಾಷ್ಟ್ರುಮಾವಂ?
ಮುಳಿಯ ಭಾವಾ..
ಯಬ್ಬ! ಅರ್ತ ಬಾರೀ ಲಾಯಿಕಿದ್ದು.
ಇದರ ಕಲಿಶಲೆ ನಿಂಗೊಗೆ ಅಂದು ಮುಳಿಯದಜ್ಜ ಅದರ್ಲೇ ಎರಾಡು ಬಿಗುದ್ದವಡ, ಅಪ್ಪೋ?
ಶುರುವಿಂಗೆ ಹೇಳಿದ yelloringu ಹೇಳಿರೆ ಅರಶಿನ ಉಂಗಿಲ ಹೇಳಿ ಅಲ್ಲದೋ? ಅಪ್ಪಟ ಚಿನ್ನದ್ದೆ..
ಆಗಲಿ ,ಇಂಗ್ಲಿಷು ಬಾಯಿಪಾಟ ಮಾದೆಕ್ಕದ ಅಗತ್ಯ ಇಲ್ಲೇ ಹೇಳಿ ಇಂದು ಗೊಂತಾತು.ಇನ್ನಾಣ ಪುಟ ಬಿಡುಸಿ ಅರ್ಥ ಹೇಳಿ ನೆಗೆಗಾರಣ್ಣ ..
{ yelloringu ಹೇಳಿರೆ ಅರಶಿನ ಉಂಗಿಲ }
ರಘುಭಾವಾ..
ಮಾಷ್ಟ್ರುಮಾವಂಗೆ ಪುರುಸೊತ್ತಿಲ್ಲದ್ದ ದಿನ ನಿಂಗಳಲ್ಲಿಗೆ ಬಂದರೆ ಹೇಂಗೆ? 😉
ನಿಂಗಳ ಶಬ್ಧರ್ಥಂಗ ಭಾರೀ ಲಾಯ್ಕಾಯ್ದು!!! ನಾ.ಕಸ್ತೂರಿ ಯವರ “ಅನರ್ಥ ಕೋಶ”ವೂ ಹೀಂಗೆ ಲಾಯ್ಕಿದ್ದು!! ಒಂದುಸರ್ತಿ ಓದ್ಲಕ್ಕು!!!
{ ಒಂದುಸರ್ತಿ ಓದ್ಲಕ್ಕು }
ಒಂದರಿ ಆದರೂ ಓದಿದರನ್ನೆ ಪುಟ್ಟಭಾವಾ..
ಕೊಶಿ ಆತು.
[ಒಂದರಿ ಆದರೂ ಓದಿದರನ್ನೆ ಪುಟ್ಟಭಾವಾ..] ಏ ಭಾವ!! ಆನು ಹೇಳಿದ್ದು “ಅನರ್ಥ ಕೋಶ”ವ !!!