Oppanna.com

ದಿಶಾ ಹೆಗಡೆ, ಶಿರಸಿ : SSLC ದ್ವಿತೀಯ ರ‌್ಯಾಂಕ್ ಪ್ರತಿಭೆ

ಬರದೋರು :   ಕೊಳಚ್ಚಿಪ್ಪು ಬಾವ    on   12/05/2015    9 ಒಪ್ಪಂಗೊ

ಕೊಳಚ್ಚಿಪ್ಪು ಬಾವ

ನಮ್ಮೂರು – ನಮ್ಮೋರು ಪ್ರತಿಭೆ – ದಿಶಾ ಹೆಗಡೆ, ಶಿರಸಿ – SSLC 2nd Rank

ಕರ್ನಾಟಕ ರಾಜ್ಯದ ಪ್ರೌಢ ಶಿಕ್ಷಣ ಮಂಡಳಿ (KSEB) ನಡೆಶುವ ಹತ್ತನೇ ತರಗತಿ ಪರೀಕ್ಷೆಲಿ ಕುಮಾರಿ ದಿಶಾ ಹೆಗಡೆ ಅಭೂತಪೂರ್ವ ಸಾಧನೆ ಮಾಡಿ ಹೆತ್ತವಕ್ಕೆ, ಶಾಲೆಗೆ ಹಾಂಗೂ ನಮ್ಮ ಸಮಾಜಕ್ಕೆ ಹೆಮ್ಮೆ ತಂದುಕೊಟ್ಟಿದವು ಹೇಳುಲೆ ಸಂತೋಷ ಆವುತ್ತು.

ಧಾರವಾಡದ ಶಾಂತಿಸದನ ಹೈಸ್ಕೂಲ್ ಲಿ ಆಂಗ್ಲಮಾಧ್ಯಮ ವಿದ್ಯಾರ್ಥಿಯಾಗಿಪ್ಪ ದಿಶಾ, ಇಂಗ್ಲೀಶ್ – 124, ಸಮಾಜ – 98 ಸೇರಿದಂತೆ ಉಳುದ ಎಲ್ಲಾ – ಕನ್ನಡ, ಹಿಂದಿ, ಗಣಿತ, ವಿಜ್ಞಾನ – ವಿಷಯಂಗಳಲ್ಲಿ ನೂರಕ್ಕೆ ನೂರು ಪಡಕ್ಕೊಂಡು ಒಟ್ಟು 622/625 ಪಡದ್ದವು ಹೇಳುದು ಹೆಮ್ಮೆಯ ವಿಷಯ. ಇವು ಶಿರಸಿ ತಾಲೂಕಿನ ಬೂದಿಮುದುರು ಮೂಲದ, ಧಾರವಾಡ ನಾರಾಯಣಪುರ ನಿವಾಸಿ ಸಿವಿಲ್ ಇಂಜಿನಿಯರ್ ಶ್ರೀಕಾಂತ ಹೆಗಡೆ – ಪುಷ್ಪಲತಾ ಹೆಗಡೆ ದಂಪತಿಗಳ ಹೆಮ್ಮೆಯ ಸುಪುತ್ರಿ.

ದಿಶಾಳ ಮುಂದಾಣ ವಿದ್ಯಾಭ್ಯಾಸ ಸಾಂಗವಾಗಿ ನೆರವೇರಲಿ, ಜೀವನಲ್ಲಿ ಜಯಶಾಲಿಯಾಗಲಿ ಹೇಳುದು ನಮ್ಮ ಬೈಲಿನ ಹಾರೈಕೆ.

ಮಾಹಿತಿ: ರೋಹಿತ್ ಕೆ.ಜಿ, ದುಬೈ
(Rohith.Ganapathi@pentair.com)

ಕು.ದಿಶಾ ಹೆಗಡೆ, ಶಿರಸಿ - ಧಾರವಾಡ
ಕು.ದಿಶಾ ಹೆಗಡೆ, ಶಿರಸಿ – ಧಾರವಾಡ

9 thoughts on “ದಿಶಾ ಹೆಗಡೆ, ಶಿರಸಿ : SSLC ದ್ವಿತೀಯ ರ‌್ಯಾಂಕ್ ಪ್ರತಿಭೆ

  1. ಅಭೂತಪೂರ್ವ ಸಾಧನೆಯ ದಿಶಾಗೆ ಅಭಿನಂದನೆಗೊ. ಮುಂದಾಣ ವಿದ್ಯಾಭ್ಯಾಸ ಚೆಂದಕೆ ಸಾಗಲಿ. ಹರೇರಾಮ

  2. ದಿಶಾಂಗೆ ಹೃತ್ಪೂರ್ವಕ ಅಭಿನಂದನೆಗ

  3. ದಿಶಾ೦ಗೆ ಅಭಿನಂದನೆ . ಭವಿಷ್ಯಲ್ಲಿಯೂ ಸಾಧನೆ ಮುಂದುವರಿಯಲಿ , ದಶ ದಿಶೆಲಿ ಹೆಸರು ಹರಡಲಿ . ಶುಭಾಶಯ೦ಗೊ .

  4. ಅಭಿನಂದನೆ. ನಿನ್ನ ಆಶಯದ ಹಾಂಗೆ ಮುಂದೆ ದೊಡ್ಡ ವಿಜ್ಞಾನಿಯಾಗಿ ದೇಶ, ನಾಡು ,ನುಡಿಗೆ ಕೀರ್ತಿ ತಪ್ಪ ಹಾಂಗೆ ಆಗಲಿ.

  5. ದಿಶಾ ನೀನು ಅಂದುಕೊಂಡಂತೇ ಎಲ್ಲವೂ ನಿನ್ನ ಜೀವನದಲ್ಲಿ ನಿನಗೆ ಸಿಗಲಿ. ತಂದೆ ತಾಯಿ ಹಾಗೂ ಬಳಗಕ್ಕೆ ಖುಶಿ ಕೊಟ್ಟ ನಿನಗೆ ಅಭಿನಂದನೆ.

  6. ಅಭಿನಂದನೆಗೊ.
    ವಿದ್ಯಾಕ್ಷೇತ್ರಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಹೇಳಿ ಶುಭ ಹಾರೈಕೆಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×