Oppanna.com

“ಎಬ್ಬಿದಲ್ಲೆ ಹೋಗದ್ರೆ, ಹೋದಲ್ಲೆ ಎಬ್ಬುದು”-{ಹವ್ಯಕ ನುಡಿಗಟ್ಟು-41}

ಬರದೋರು :   ವಿಜಯತ್ತೆ    on   08/11/2015    3 ಒಪ್ಪಂಗೊ

“ಎಬ್ಬಿದಲ್ಲೆ ಹೋಗದ್ರೆ, ಹೋದಲ್ಲೆ ಎಬ್ಬುದು” {ಹವ್ಯಕ ನುಡಿಗಟ್ಟು-41}

ಸುಬ್ಬಮ್ಮ, ಮನೆ ಹೆರಿಯೋಳ್ತಿ. ಕೂಡು ಕುಟುಂಬಲ್ಲಿ ಒಂದು ಮನೆ ನೆಡೆಶುತ್ತ; ಸಾಮಾರ್ತಿಗೆಇಪ್ಪಹೆಮ್ಮಕ್ಕೊ. ಹತ್ತಿಪ್ಪತ್ತು ಜೆನ ಇದ್ದ ಆ ಮನೆಲಿ ಅದು ಹೇಳಿದ ಮಾತಿಂಗೆ ಬೆಲೆ ಇಕ್ಕು.ಹಾಂಗೆ ಹೇಳ್ಯೊಂಡು ಪ್ರತಿಯೊಬ್ಬನೂ ಅದರ ಗೆರೆ ಮೀರವು ಹೇಳಿ ಅಲ್ಲ. ಕೆಲವು ಸರ್ತಿ ಹೇಳಿದಾಂಗೆ ಕೇಳೆಕ್ಕಾರೆ ಅದೇಂಗೆ?.ಜಗಳ, ವಾದಾಂಟ ಆಗದ್ದಾಂಗೆ ಒರ್ಮೆಲಿ ಹೋವುತ್ತು!?. ಅದರ ಮಾತಿಲ್ಲೆ ಹೇಳ್ತರೆ…, ಕೆಲವು ಸರ್ತಿ “ಎಬ್ಬಿದಲ್ಲೆ ಹೋಗದ್ರೆ, ಹೋದಲ್ಲೆ ಎಬ್ಬೆಕ್ಕಾವುತ್ತು”.ಒಂದೊಂದಾರಿ ಸಣ್ಣ ಮಕ್ಕೊ ಗೆಂಟು ಪಿಟ್ಕಾಯಿಗಳ ಹಾಂಗೆ ಮಾಡ್ತವು. ಹಾಂಗೆ ಹೇಳ್ಯೊಂಡು ಅವಕ್ಕೆ ಮಿತಿಮೀರಿ ಶಿಕ್ಷೆ ಕೊಡ್ಳೂ ಎಡಿಯಯಿದ. ಅಷ್ಟಪ್ಪಗ ರಜ್ಜಹೊತ್ತಿಂಗೆ ಅವು ಹೇಳಿದಾಂಗೆ ಕೇಳೆಕ್ಕಾವುತ್ತು. ಆ ಸಮೆಲಿ ನಾವು “ಎನ್ನ ಕೆಮಿ ಕಾಶಿಗೆ ಹೋಯಿದು”[ಈ ನುಡಿಗಟ್ಟಿನ ಲಿಸ್ಟಿಲ್ಲಿ ಸುರುವಿಂಗೆ ಬರದ್ದೆ] ಹೇಳಿ ಕೂರೆಕ್ಕಾವುತ್ತು.ಈ ನುಡಿಗಟ್ಟು ಹೇಂಗೆ ಹುಟ್ಟಿತ್ತೂಳಿರೆ; ದನಗಳ ಗುಡ್ಡಗೆ ಬಿಡುವಗ ನಾವು ಹೇಳಿದ ಜಾಗೆಲೇ ಮೇದುಗೊ ಹೇಳಿರೆ ಅವು ಕೇಳ್ತವೊ?. ಅವು ಹೋದಲ್ಲೆ ಎಬ್ಬಿ ಬಿಡುವದು.ಗುಡ್ಡೆಂದ ಬಂದಪ್ಪಗ ನಮ್ಮ ಸುಪರ್ದಿಗೆ ಸಿಕ್ಕಿಪ್ಪಗ;  ಅವಕ್ಕಿದ್ದ ಜಾಗೆಲೇ ಕಟ್ಟಿಹಾಕುದು. ಹಾಂಗೇ ನವಗೆ ಸಂಬಂಧ ಪಟ್ಟ ದೊಡ್ಡವಕ್ಕೂ ಇದು ಅನ್ವೈಸುತ್ತು. ಎಂತ ಹೇಳ್ತಿ?.

3 thoughts on ““ಎಬ್ಬಿದಲ್ಲೆ ಹೋಗದ್ರೆ, ಹೋದಲ್ಲೆ ಎಬ್ಬುದು”-{ಹವ್ಯಕ ನುಡಿಗಟ್ಟು-41}

  1. ಶರ್ಮ ಭಾವನೂ ಬೊಳುಂಬು ಗೋಪಾಲನೂ ಹೇಳುತ್ತು ಸರಿ. ಅವು ಹೋದಲ್ಲೆ ಎಬ್ಬೀರೂ ಗಮನ ನಾವು ಮಡಿಕ್ಕೊಳೆಕ್ಕು. ಏಕ್ಷನ್ ಮಾಡೆಕ್ಕಪ್ಪದೂ ಸರಿ. ಆ ಸಮಯ ಕಳಿವಗ ನಮ್ಮ ಹಿಡಿತಕ್ಕೆ ಸಿಕ್ಕೆಡದೊ?

  2. ಹಿಡಿತಕ್ಕೆ ಸಿಕ್ಕದ್ರೆ ಎಂತ ಮಾಡುವದು, ಎಬ್ಬಿದ ಹಾಂಗೆ ಏಕ್ಷನ್ ಮಾಡಿರೆ ಆತು. ಅದರ ಪಾಡಿಂಗೆ ಹೋವ್ತಾ ಇರ್ತು !
    ಗಟ್ಟಿಯಾದ ನುಡಿಗಟ್ಟು, ಸರಿಯಾದ ಮಾತು.

  3. ಅರ್ಥಗರ್ಭಿತ ನುಡಿಗಟ್ಟು.
    ಎಬ್ಬಿದಲ್ಲೇ ಹೋಗದ್ರೆ ಹೋದಲ್ಲಿ ಎಬ್ಬೆಕ್ಕಾವ್ತು. ಆದರೂ ಒಂದು ನೋಟ ಅಲ್ಲಿಯೇ ಇರೆಕು.
    ಇಲ್ಲದ್ರೆ ಹೋದಲ್ಲೇ ಹೋಗಿ ನಮ್ಮ ಕೈ ತಪ್ಪುಗು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×