Oppanna.com

2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ

ಬರದೋರು :   ವಿಜಯತ್ತೆ    on   23/07/2022    1 ಒಪ್ಪಂಗೊ

ಶ್ರೀಮತಿ ಸತ್ಯವತಿ ಕೊಳಚ್ಚಪ್ಪು, ತೃತೀಯ ಬಹುಮಾನ ವಿಜೇತೆ
ಶ್ರೀಮತಿ ಸತ್ಯವತಿ ಕೊಳಚ್ಚಪ್ಪು, ತೃತೀಯ ಬಹುಮಾನ ವಿಜೇತೆ
ಶ್ರೀಮತಿ ಸಂಧ್ಯಾ ಭಟ್, ದ್ವಿತೀಯ ಬಹುಮಾನ ವಿಜೇತೆ
ಶ್ರೀಮತಿ ಸಂಧ್ಯಾ ಭಟ್, ದ್ವಿತೀಯ ಬಹುಮಾನ ವಿಜೇತೆ
ಶ್ರೀಮತಿ ಲತಾ ಹೆಗಡೆ, ಪ್ರಥಮ ಪ್ರಶಸ್ತಿ
ಶ್ರಿಮತಿ ಲತಾ ಹೆಗಡೆ, ಪ್ರಥಮ ಪ್ರಶಸ್ತಿ ವಿಜೇತೆ

2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ ಶ್ರೀಮತಿ ಲತಾಹೆಗಡೆ ಹುಬ್ಬಳ್ಳಿ ಇವರ ಪಾಲಿಗೆ:-

    ಸ್ನಾತಕೋತ್ತರ ಪದವಿ ಪಡೆದ ಶ್ರೀಮತಿ ಲತಾಹೆಗಡೆ ಉತ್ತಮ ಗೃಹಿಣಿಯಾಗಿ ; ಬಿ.ಎಸ್.ಎನ್.ಎಲ್ ನ ನಿವೃತ್ತ ಡೆಪ್ಯುಟಿ ಜನರಲ್ ಮೆನೇಜರ್ ಶ್ರೀಯುತ ಉದಯಶಿವರಾಮ ಹೆಗಡೆಯವರ ಪತ್ನಿ. ಇಬ್ಬರು ಗಂಡುಮಕ್ಕಳ ತಾಯಿ. ಅಪರಂಜಿ ಮಾಸಪತ್ರಿಕೆಯಲ್ಲಿ;ನಗೆ ಲೇಖನದಲ್ಲಿ ಪ್ರಥಮ, ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಪ್ರೇಮಾಭಟ್ ದತ್ತಿನಿಧಿ ಬಹುಮಾನ,ಪ್ರಜಾವಾಣಿ ಹಾಗೂ ಉತ್ಥಾನಮಾಸಪತ್ರಿಕೆಯಲ್ಲಿ ವೈಚಾರಿಕ ಲೇಖನಗಳಿಗೆ ಬಹುಮಾನ ಬಂದಿರುವ ಇವರು ಅಡುಗೆ ಸ್ಪರ್ಧೆಯಲ್ಲೂ ಬಹುಮಾನಗಳನ್ನು ಪಡೆದಿರುತ್ತಾರೆ.
ಸಾಹಿತ್ಯ ಕೃಷಿಯೊಂದಿಗೆ ಸಂಗೀತ, ಚಿತ್ರಕಲೆ,ರಂಗೋಲಿ ಕಲೆಗಳಲ್ಲೂ ಸಾಧಕರಾಗಿರುವ ಇವರಿಗೆ ಅಭಿನಂದನೆಗಳು.
ದ್ವಿತೀಯ ವಿಜೇತೆ ಶ್ರೀಮತಿ ಸಂಧ್ಯಾ ಭಟ್ ಅರಂತಾಡಿ.
ಗೃಹಿಣಿಯಾದ ಈಕೆ  ಶಿಕ್ಷಕ ಶ್ರೀ ಗಣಪತಿ ಭಟ್ ಅರಂತಾಡಿಯವರ ಪತ್ನಿ.ಪ್ರಸ್ತುತ ಮಂಗಳೂರಲ್ಲಿ ವಾಸಿಸುವ ಇವರು ಮಗಳುಅಪೂರ್ವ ಹಾಗೂ ಮಗ ಅಖಿಲೇಶ, ಇಬ್ಬರು ಮಕ್ಕಳ ತಾಯಿಯಾದ ಇವರು ಸಣ್ಣಕತೆ,ಲೇಖನಗಳನ್ನು ಬರೆದು ಪ್ರತಿಲಿಪಿ ಬ್ಲಾಗ್ ಹಾಗೂ ಗ್ರೂಪುಗಳಲ್ಲಿ ಕಳುಹಿಸುವ ಹವ್ಯಾಸಿ.
ತೃತೀಯ ವಿಜೇತೆ  ಶ್ರೀಮತಿ ಸತ್ಯವತಿ ಕೊಳಚ್ಚಿಪ್ಪು.
ಎಳವೆಯಲ್ಲೇ ಸಾಹಿತ್ಯಾಸಕ್ತೆಯಾಗಿದ್ದ ಇವರು ಅನುಭವಿ ಹಿರಿಯರು.
 ಸಂಸಾರ ಜವಾಬ್ದಾರಿಗಳಿಂದ  ನಿವೃತ್ತಿ ಹೊಂದಿದ ನಂತರ ಸಂಪೂರ್ಣವಾಗಿ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡು ಹಲವು ಪ್ರಕಾರಗಳಲ್ಲಿ ಬರೆಯುವ ಸಾಮರ್ಥ್ಯ ಹೊಂದಿರುವುದಲ್ಲದೆ ಅಲ್ಲದೆ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ ಅನುಭವವಿದೆ. ಕೆಲವಾರು ಸಾಹಿತ್ಯ ಬಳಗದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದುಉನ್ನತ ಮಟ್ಟದ ಸ್ಥಾನ ದೊರಕಿಸಿಗೊಂಡಿದ್ದಾರೆ.ಇವರ ನಾಲ್ಕು ಕವನ ಸಂಕಲನ ಬಿಡುಗಡೆಯಾಗಿದೆ.’ಕಾಮನಬಿಲ್ಲು’ ಮಕ್ಕಳ ಕವನ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದವರು ಕೊಡಮಾಡಲ್ಪಟ್ಟ ಪ್ರತಿಷ್ಠಿತ ನಾ ಡಿಸೋಜ ಮತ್ತು ರಾಜರತ್ನಂ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆಯಲ್ಲದೆ ಹಿರಿಯ ಸಾಹಿತಿ ಎಂಬ ಗೌರವಾನ್ವಿತದ ವೈದೇಹಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.
 ಮೌಲ್ಯಮಾಪನ ಮಾಡಿದ ಮಹನೀಯರು ಕ್ರಮವಾಗಿ ಶ್ರೀಯುತ ಬೇ.ಸಿ.ಗೋಪಾಲಕೃಷ್ಣ ಭಟ್ ಬದಿಯಡ್ಕ, ಡಾ| ಹರಿಕೃಷ್ಣ ಭರಣ್ಯ ಕುಂಬಳೆ, ಶ್ರೀಮತಿ ಲಲಿತಾಲಕ್ಷ್ಮಿ ಸಿದ್ದಾಪುರ. ಇವರುಗಳು ಸಹಕರಿಸಿರುತ್ತಾರೆ.
—- ವಿಜೇತರೆಲ್ಲರಿಗೆ ಅಭಿನಂದನೆಗಳೊಂದಿಗೆ ಗೌರಮ್ಮ ಕಥಾಸ್ಪರ್ಧೆಯ ಸಂಚಾಲಕಿ ವಿಜಯಾಸುಬ್ರಹ್ಮಣ್ಯ ಕುಂಬಳೆ.

One thought on “2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ

  1. ವಿಜೇತರಿಂಗೆ ಅಭಿನಂದನೆಗೊ. ಸಂಚಾಲಕಿ ವಿಜಯತ್ತಿಗೆಗೆ ಧನ್ಯವಾದಂಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×