- ಸಣ್ಣ ಸಂಗತಿ - February 13, 2018
- ದೇಶಸೇವೆ - August 15, 2017
- ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ - August 15, 2017
ಎನ್ನ ಅಪ್ಪ ಶೇಡಿಗುಮ್ಮೆ ಕೃಷ್ಣ ಭಟ್ಟರು [ಜನನ-೧೨-೧೦-೧೯೨೫; ನಿಧನ -೧೬-೦೭-೧೯೮೨] ಹವ್ಯಾಸಿ ಯಕ್ಷಗಾನ ಭಾಗವತರಾಗಿ ಕುಂಬಳೆ ಆಸುಪಾಸಿಲಿ ಹೆಸರು ಮಾಡಿದ್ದವು.ಯಾವುದೇ ರೋಗ ಇಲ್ಲದ್ದೆ ಸಕ್ರಿಯವಾಗಿ ಇದ್ದರೂ ದುರದೃಷ್ಟವಶಾತ್ ಅವರ ಆಕಸ್ಮಿಕ ಅಂತ್ಯ ಮಿದುಳಿನ ರಕ್ತಸ್ರಾವಂದ ಆತು. ಅವರ ಜೀವನಾವಧಿಲಿ ಅವಕ್ಕೆ ಯಾವ ಪ್ರಶಸ್ತಿಯೂ ಸಿಕ್ಕಿದ್ದಿಲ್ಲೆ. ಆದರೆ ಜನಂಗಳ ಪ್ರೀತಿ ಬೇಕಾದಷ್ಟು ಸಿಕ್ಕಿದ್ದು. ಈಗಾಣ ಜನಂಗೊಕ್ಕೆ ತೋರಿಸಲೆ ಅವರ ಕಾರ್ಯಕ್ರಮಂಗಳ ಯಾವ ರೆಕಾರ್ಡುಗಳೂ ಇಲ್ಲೆ-ಇದು ಬಹಳ ಬೇಜಾರದ ಸಂಗತಿ.ನಮ್ಮ ಬೈಲಿಲಿ ಅವರ ಪರಿಚಯ ಕಮ್ಮಿ. ಶರ್ಮಪ್ಪಚ್ಚಿಗೆ ,ಭರಣ್ಯ ಹರಿಕೃಷ್ಣ ಭಟ್ರಿಂಗೆ,ಮತ್ತೆ ಕೆಲವೇ ಕೆಲವರಿಂಗೆ ಅವರ ಗೊಂತಿಕ್ಕು.
ಅವರ ಹಾಡು ತೆಂಕುತಿಟ್ಟಿನ ಸಾಂಪ್ರದಾಯಿಕ ಶೈಲಿದು.ಹಳೆಯ ಬಲಿಪ ನಾರಾಯಣ ಭಾಗವತರು ಮತ್ತೆ ಪುತ್ತಿಗೆ ರಾಮಕೃಷ್ಣ ಜೋಯಿಸ ಭಾಗವತರ ಅಭಿಮಾನಿ ಅವು .ಹಲವು ಪ್ರಸಂಗಂಗೊ ಅವಕ್ಕೆ ಬಾಯಿಪಾಠ ಇತ್ತು. ಇಡೀ ಇರುಳು ಯಾವುದೇ ಫಲಾಪೇಕ್ಷೆ ಇಲ್ಲದೆ ಬಯಲಾಟ ,ತಾಳಮದ್ದಳೆ ಸುಧಾರಿಸಿಕೊಂಡು ಇತ್ತಿದ್ದವು.ಕಾಸರಗೋಡು, ಎಡನೀರು,ಮಧೂರು, ಬದಿಯಡ್ಕ,ನೀರ್ಚಾಲು ಹೊಡೆಂಗೆ ಹೋಗಿ ಅವು ಅನೇಕ ಕಾರ್ಯಕ್ರಮಂಗಳಲ್ಲಿ ಪದ ಹೇಳಿದ್ದವು.ಮಂಗಳೂರು ಹೊಡೆಂಗೆ ಬಂದದು ಕಮ್ಮಿ. ಆ ಕಾಲಲ್ಲಿ ತಕ್ಕಷ್ಟು ಕೃಷಿಭೂಮಿ ಇದ್ದ ಕಾರಣ,ಎನ್ನ ಅಜ್ಜನ ಆರೋಗ್ಯವೂ ಸರಿ ಇಲ್ಲದ್ದ ಕಾರಣ , ಅವು ತುಂಬು ಸಂಸಾರದ ಹಿರಿಯಣ್ಣ ಆಗಿ ಮನೆವಾರ್ತೆ ನೋಡಿಕೊಂಡು ಶೇಡಿಗುಮ್ಮೆಲೇ ಇತ್ತಿದ್ದವು.ವೃತ್ತಿಪರ ಮೇಳಕ್ಕೆ ಅವು ಹೋಯಿದವಿಲ್ಲೆ.೧೯೫೪-೫೫ ರಲ್ಲಿ ಮುಜುಂಗಾವು ಮೇಳಲ್ಲಿ ರಜ ತಿರುಗಾಟ ಮಾಡಿದ್ದವಡ.
ಇದೇ ಡಿಸಂಬರ್ ೧೩ ಕ್ಕೆ ಅವರ ಸಂಸ್ಮರಣೆ ,ಎನ್ನ ಮತ್ತೆ ಎನ್ನ ಅಕ್ಕನ ಹೊಸ ಕೃತಿ ಬಿಡುಗಡೆ ,ಎನ್ನ ಅಣ್ಣನ ಮಗಳ ಕಥಕ್ ನೃತ್ಯ ಮತ್ತೆ ತಾಳಮದ್ದಲೆ-ಇಷ್ಟು ಕಾರ್ಯಕ್ರಮ ಹಮ್ಮಿಕೊಂಡಿದೆಯೊ. ಎಲ್ಲರೂ ಬಂದು ಸುಧಾರಿಸಿ ಕೊಡೆಕ್ಕು.
INV[click here]
ಶೇಡ್ಯಮ್ಮೆ ಭಾಗವತರು ಹೇದು ಹಳಬ್ಬರು ಹೇಳ್ಸು ಕೇಟಿದೆ. ಗೊಂತಿತ್ತಿಲ್ಲೆ. ಶುದ್ದಿ ಓದಿ ಕೊಶಿ ಆತು. ಸಂಸ್ಮರಣಾ ಕಾರ್ಯಕ್ರಮಕ್ಕೆ ಶುಭಾಶಯಂಗೊ. ಹರೇ ರಾಮ.
ಕಾರ್ಯಕ್ರಮಕ್ಕೆ ಶುಭಹಾರೈಕೆ . ಸುಸೂತ್ರವಾಗಿ ನಿರ್ವಿಘ್ನವಾಗಿ ನಡೆಯಲಿ