Oppanna.com

“ಅಕ್ಕಿಲಿ ಆಶೆ,ಅಕ್ಕನತ್ರೆ ಪ್ರೀತಿ”-{ಹವ್ಯಕ ನುಡಿಗಟ್ಟು-52}

ಬರದೋರು :   ವಿಜಯತ್ತೆ    on   26/03/2016    4 ಒಪ್ಪಂಗೊ

“ಅಕ್ಕಿಲಿ ಆಶೆ ಅಕ್ಕನತ್ರೆ ಪ್ರೀತಿ”-{ಹವ್ಯಕ ನುಡಿಗಟ್ಟು-52}

ಸತ್ಯಣ್ಣ ಮಗಳ ಮದುವಗೆ ನಿಜ ಮಾಡಿದ.ಮದುವಗೆ ತಯಾರಿ ಆಗೆಡದೊ?.ಒಂದೊಂದೇ ಕೆಲಸ ಮಾಡ್ತಾ ಹೋದಂ.ಅಕ್ಕ-ತಂಗೆಕ್ಕೊಗೆ,ಅತ್ತಿಗೆ-ನಾದಿನಿಯಕ್ಕೊಗೆ,ಮನೆವಕ್ಕೆಲ್ಲ ಜವುಳಿ ತೆಗೆಕಿದ.ಅಕ್ಕ-ತಂಗೆಕ್ಕಳ ಒಟ್ಟಿಂಗೆ  ಅಬ್ಬೆಯನ್ನೂ  ಜವುಳಿ ಮಳಿಗ್ಗೆ ಕರಕ್ಕೊಂಡೋದ.ಅಕ್ಕನತ್ರೆ

“ನಿಂಗೊಗೆಲ್ಲ ಬೇಕಾದಾಂಗಿದ್ದ ಸೀರೆ ತೆಗೆಯಿ.ಆದರೆ ಒಬ್ಬೊಬ್ಬನ ಲೆಕ್ಕಲ್ಲಿ ಸಾವಿರ ರೂಪಾಯಿಂದ ಮೇಗೆ ಹೋಪಲಾಗ ಹೇಳಿದಂ.ಒಂದಕ್ಕಂ ಸೀರೆ ಕೊಶಿ ಕಂಡು ಆಯ್ಕೆ ಮಾಡಿದ್ದರ ಕ್ರಯ ನೋಡೀರೆ ಒಂದೂವರೆ ಸಾವಿರ!.ಅದೇ ಜಾತಿ ಕೋಟನ್ ಸಿಲ್ಕು ಸೀರೆ ತಂಗಗೂ ಅತ್ತಿಗ್ಗೂ ಕೊಶಿ ಆದ್ದು.ಅಬ್ಬೆತ್ರೆ ಪಿಸು-ಪಿಸುನೆ “ಈ ಸೀರೆ ಆನು ತೆಗೆತ್ತೆ. ತಮ್ಮನ ಲೆಕ್ಕಲ್ಲಿ ಕೊಡ್ತಷ್ಟು ಕೊಡ್ಳಿ.ಮತ್ತೆ ಆನು ಸೇರ್ಸುವೆ”. ಹೇಳುವಗ ತಮ್ಮ ಅಕ್ಕು ಹೇಳೆಕ್ಕೊ!.ಅಂಬಗ ಅಬ್ಬೆ-

“ಅಕ್ಕ ಕೊಡುದು ಬೇಡ ಮಗನೆ, ಹೇಂಗೂ ಜವುಳಿಗೆ ಹೆರಟಾಯಿದು. ಅಕ್ಕಿಲಿ ಆಶೆ ಅಕ್ಕನತ್ರೆ ಪ್ರೀತಿ  ಹೇಳುವಾಂಗೆಂತರ”. ಅಬ್ಬೆಯ ಮಾತಿಂಗೆ ಮಗ ಹುಳಿ-ಹುಳಿ ಮೋರೆ ಮಾಡಿಂಡು ಒಪ್ಪಿದ.

ಹಿಂದಾಣ ಕಾಲಲ್ಲಿ ಕೊಟ್ಟ ಮಗಳಕ್ಕಳ ವರ್ಷಲ್ಲಿ ಒಂದೆರಡು ಸರ್ತಿ ಅವರ ಮನಗೆ ಹೋಗಿ ಕರಕ್ಕೊಂಡು ಬರೆಕು ಅಪ್ಪನ ಮನೆವು.ಈಗಾಣಾಂಗೆ ಅವೇಬಪ್ಪದೂ ಅಲ್ಲ.ಒಂದೇ ದಿನ ಇದ್ದು ಹೋಪದೂ ಅಲ್ಲ. ಬಂದರೆ ಎಂಟ್ಟತ್ತು ದಿನ ನಿಂಗಿದ. ಮಕ್ಕಳೂ ಅಬ್ಬೆ ಒಟ್ಟಿಂಗೆ ನಿಂಬೊವು ಕಡಮ್ಮೆಲಿ ಏಳೆಂಟುಜೆನ ಇಕ್ಕು.ಅಂಬಗ ಬಡತನವೂ ಹೆಚ್ಚಿಗೆ!.ಈಗಾಣಾಂಗೆ ಗವರ್ಮೆಂಟು ಕೆಲಸವೋ ಮನೆಂದ ಹೆರ ದುಡಿವ ಕೆಲಸವೋ ಇರ. ಅಣ್ಣ-ತಮ್ಮಂದ್ರಿಂಗೆ; ಅಕ್ಕ,ಅದರ ಮಕ್ಕೊ ಬರೆಕು, ನಿಲ್ಲೆಕ್ಕೂಳಿ ಇದ್ದರೂ ಅಕ್ಕಿಗೂ ಇತರ ಖರ್ಚಿಗೂ ತಾಪತ್ರಯ ಹೇಳಿ ಮನಸ್ಸಿಲ್ಲಿ ಇಕ್ಕು. ಆ ಭಾವನಗೆ ಉಂಟಾದ ನುಡಿಗಟ್ಟಿದು.  ಇದು ಅಕ್ಕ-ತಂಗೆಕ್ಕೊಗೆ ಮಾಂತ್ರ ಅಲ್ಲ, ಯಾವುದೇ ವಸ್ತುವಿನ ಆತ್ಮೀಯರಿಂಗೆ; ಕೊಡೆಕೂಳಿ ಇದ್ದರೂ ಕೈತಪ್ಪಿ ಹೋವುತ್ತನ್ನೆ! ಖರ್ಚಿ ಆವುತ್ತನ್ನೆ ಹೇಳಿ ಮನಸ್ಸಿಲ್ಲಿ ಅಪ್ಪಗ ಈ ನುಡಿಯ ಉಪಯೋಗುಸುತ್ತೊವು.

 

4 thoughts on ““ಅಕ್ಕಿಲಿ ಆಶೆ,ಅಕ್ಕನತ್ರೆ ಪ್ರೀತಿ”-{ಹವ್ಯಕ ನುಡಿಗಟ್ಟು-52}

  1. ಆರಾಮ, ಹರೇರಾಮ ಲಲಿತಾ,ಎಂತ ಮಾಡ್ತೆ? ಇತ್ತೀಚೆಗೆ ನಂಗೊಎಲ್ಲಾ ಒಳ್ಳೆ ಸಂತೋಷಲ್ಲಿದ್ದಲ್ಲೋ . ಹೀಂಗೆ ಒಂದೊಂದರಿ ಬಯಲಿಂಗೆ ಬಾರೇ .

  2. ಹರೇರಾಮ..ಓಹೋಯ್ ವಿಜಯಕ್ಕ…..ಆರಾಮಾ? ರಾಶಿ ದಿನಾದ ಮೇಲೆ ಒಪ್ಪಣ್ಣನ ಮಾತಾಡ್ಸುಲೆ ಬಂಜೆ. ಚೆಂದಾಜು ಬರ್ದದ್ದು. ಶಂಕರಪಂಚಮಿಗೆ ಎಲ್ಲರ್ನೂ ಕರ್ಕಂಡು ಬಾರೇ…ಈ ಸಲ ಭಾರೀ ಜೋರು ಶಂಕರಪಂಚಮಿ..( ಹೋದ್ವರ್ಷ ಮಾವಿನಹಣ್ಣು ತಂದಿದ್ಯಲ್ದಾ? ಈ ವರ್ಷನೂ….ಮಾವಿನಹಣ್ಣು ತೆಕಂಡ್ಬಾ ಹೇಳ್ತಾ ಇಲ್ಲೆ ಮತ್ತೆ!)

  3. ಅಕ್ಕಿಲಿ ಆಶೆ,ನೆಂಟ್ರ ಮೇಗೆ ಪ್ರೀತಿ ಹೇದೂ ಇದ್ದಲ್ಲದೋ?ಲಾಯಕಾಯಿದು ವಿಜಯಕ್ಕ.

  4. ಈಗಳೂ ಕೆಲವು ಸರ್ತಿ ಆವುತ್ತಪ್ಪ ಹಾಂಗೆ . ವಿವರಣೆ ಪಷ್ಟಾಯ್ದದಾ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×