ಪುತ್ತೂರುಬಾವನ ಗುರ್ತ ಮಾಡ್ಳೆ ಕಷ್ಟ ಏನಿಲ್ಲೆ! ಈಗ ಇಪ್ಪದು ಅಷ್ಟು ದೂರದ ಅಮೇರಿಕಲ್ಲಿ ಆದರೂ ಅವರ ಮೂಲ ಪುತ್ತೂರು. ಮಯೂರ ಟಾಕೀಸಿನ ಒರಿಂಕಿನ ಮಾರ್ಗಲ್ಲಿ ಹೋಗಿ, ಉರುಳಾಂಡಿಲಿ ಗುಡ್ಡೆಹತ್ತಿ ಇಳುದರೆ ಪೊಟ್ಟುಬಾವಿಯ ಕರೆಲಿ ಇಪ್ಪದೇ ಇವರ ಮನೆ! ಬಾಳೆಕಾನದ ಬಾಳೆಸೆಸಿ ಬಗ್ಗಿರೆ ಇವರ ಒಳಚ್ಚಲಿಂಗೇ ಬೀಳುದು! ಅರೆವಾಶಿ ಬಾಳೆಗೊನೆ ಇದೇ ಪುತ್ತೂರುಬಾವಂಗೆ ಸಿಕ್ಕಿಗೊಂಡಿತ್ತು! ಇದೇ ಕಾರಣಕ್ಕೆ ಅವಕ್ಕೆ ಯೇವತ್ತುದೇ ಜಗಳ ಆಯ್ಕೊಂಡಿತ್ತಿದ್ದು, ಮದಲಿಂಗೆ . (ಇಬ್ರಮನೆಲಿಯೂ ಬೈದಕಾರಣ ಒಬ್ಬ° ಅಮೇರಿಕಕ್ಕುದೇ, ಇನ್ನೊಂದು ಹಾಸನಕ್ಕುದೇ ಪದುರಾಡು!, ಅದು ಬಿಡಿ!) ಅಮೇರಿಕಕ್ಕೆ ಎತ್ತುವ ಮದಲು ಹತ್ತೂರು ಕಂಡಿದವು. ಸುರೂವಿಂಗೆ ಪುತ್ತೂರು, ಮತ್ತೆ ಕಲುಮಡ್ಕ, ಮತ್ತೆ ಮಾಡಾವು, ಅದಾಗಿ ಮಯಿಸೂರು, ಅದರ ಸುತ್ತುಮುತ್ತ ಹಲವಾರು ಊರುಗೊ 😉 , ಅದಾಗಿ ಬೆಂಗುಳೂರು- ಮತ್ತೂ ಯೇವದೇವದೋ ಊರುಗೊ! – ಈಗ ಅಮೇರಿಕ, ಮಾಷ್ಟ್ರುಮಾವನ ಮಗನ ಊರು!! (ಮಯಿಸೂರಿಲಿಪ್ಪಗ ಕೊಳಚ್ಚಿಪ್ಪು ಬಾವ ಕೆಲಾವುಸರ್ತಿ ಕಾಂಬಲೆ ಹೋಗಿಯೊಂಡಿತ್ತಿದ್ದನಾಡ! ) ಅದೆಲ್ಲ ಇರಳಿ, ಓ ಮೊನ್ನೆಪುತ್ತೂರತ್ತೆಮನಗೆ ಹೋಗಿಪ್ಪಗ ಈ ಪುತ್ತೂರುಬಾವಂಗೆ ಪೋನು ಮಾಡಿತ್ತಿದ್ದವು. ಬಾವ° ತೆರಕ್ಕಿಲಿದ್ದರುದೇ ಒಂದು ಗಳಿಗೆ ಮಾತಾಡ್ಳೆ ಸಿಕ್ಕಿದವು – ಅವಕ್ಕೆ ಒಳ್ಳೆತ ಮಾತಾಡೆಕ್ಕಿದಾ.. ಸುಮಾರು ಊರು ಅರಡಿಗು, ಸುಮಾರು ಸಂಗತಿಗೊ ಅರಡಿಗು, ಸುಮಾರು ಪುಸ್ತಕ ಅರಡಿಗು, ಸುಮಾರು ಸಿನೆಮಂಗೊ ಅರಡಿಗು, ಸುಮಾರು ಬಾಶೆ ಅರಡಿಗು! ಇವೆಲ್ಲದರನ್ನುದೇ ಸೇರುಸಿ ಶುದ್ದಿ ಬರವಲೆಡಿಗೋ ಹೇಳಿ ಒಪ್ಪಣ್ಣ ಕೇಳಿಯಪ್ಪಗ ಸಂತೋಷಲ್ಲಿ ಅಕ್ಕು – ಹೇದವು. ಕೊಳಚ್ಚಿಪ್ಪು ಬಾವಂದು ಚಿಪ್ಪಿನ ಒಳಾಣ ಮುತ್ತುಗೊ ಆದರೆ ಪುತ್ತೂರು ಬಾವಂದು ಹತ್ತೂರ ಮುತ್ತುಗೊ. ದೂರದ ಅಮೇರಿಕಲ್ಲಿ ನೆಡಿರುಳು ನೋಡಿಗೊಂಡು ಬರದು ಕೊಡ್ತದು ನೋಡಿರೆ ಸಂತೋಷ ಅಪ್ಪದು! ಆಗಲಿ, ಅವಕ್ಕೆ ಇಷ್ಟಬಂದ ವಿಶಯಂಗಳ ಮೇಲೆ ಶುದ್ದಿಗಳ ಚೆಂದಲ್ಲಿ ಹೇಳ್ತವು, ಆತಾ? ಪುತ್ತೂರುಬಾವನ ಶುದ್ದಿಗಳ ಓದುವ, ನಮ್ಮ ನಮ್ಮ ಅನಿಸಿಕೆಗಳ ಹಂಚಿಗೊಂಬ, ಹತ್ತೂರ ಮುತ್ತುಗಳ ತಿಳುಕ್ಕೊಂಬ. ಆಗದೋ? ಏ°?
ಚೆಂದದ ಪಟ೦ಗೋ. ಆ ವಿಮಾನಂಗೋ ರೇಸು ಮಾಡಿದ್ದೆಂತಗೆ?ಏವದಾರು ಕಟ್ಟೋಣ ಹೊಡಿ ತೆಗವಲೆಯೋ?? ಒಂದರಿ ಅಮೇರಿಕ ನೋಡಿದ ಅನುಭವ ಆತು.ಧನ್ಯವಾದ.
ಪಟಂಗೊ ಎಲ್ಲಾ ಒಂದರಿಂದ ಒಂದು ಲಾಯ್ಕಿದ್ದು!
ರೂಪತ್ತೆಯ ಪಟ್ಟೆ ಸೀರಿ ಇಸ್ತ್ರಿ ಹಾಕಿದ ನಮುನೆಲಿ ಕಾಣ್ತು. ಎಲ್ಲ ಮನಾರ-ಮನಾರ!
{ಒಬಾಮನ ಗೊ೦ತಿದ್ದಲ್ಲದೊ? ಓ ಮೊನ್ನೆ ಸಿಕ್ಕಿತ್ತಿದ್ದ….. }
– ಅವನ ಮಕ್ಕೊ ಎಲ್ಲಿರ್ತವು? ಶಾಲೆ ಇತ್ತಾಯಿಕ್ಕು ಅಲ್ಲದೋ? – ಪಾಪ! 😉
ಪಟಂಗೊ ಲಾಯಿಕ ಬಯಿಂದು.
ಇದಕ್ಕೆ contrast ಪಟಂಗೊ ಬೇಕಾರೆ ನಮ್ಮ ರೋಡ್ ಗಳದ್ದು ಹಾಕಿರೆ ಆತು. 🙂
{ಸಿನೆಮ ನೋಡ್ಲೆ ಬ೦ದ ಕಾರು!}
ಆ ಕಾರು ನಮ್ಮಲಿಯಾಣ ಸಿನೆಮ ತಿಯೇಟರಿನಶ್ಟು ದೊಡ್ಡವೇ ಇದ್ದನ್ನೆ!