- ಪ್ರಕೃತಿಂದ ಪಾಠ - September 21, 2017
- ಸುಭಗ ಆರು…? - April 24, 2017
- ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…, (ಭಾಗ-18) - November 1, 2016
ಅರುಂಧತಿ ಕತೆಯ ಪೂರ್ವ ಕಂತುಗೊ:
ಭಾಗ ೧ : ಸಂಕೊಲೆ
ಭಾಗ ೨ : ಸಂಕೊಲೆ
ಭಾಗ ೩ : ಸಂಕೊಲೆ
ಭಾಗ-4:
ಸುರಭಿಯ ಪಿ.ಯೂ.ಸಿ. ಮುಗುದತ್ತು. ಸೆಕೆಂಡು ಕ್ಲಾಸಿಲ್ಲಿ ಪಾಸಾತು. ಮೋಹನ ಕೇಳಿದ,
“ಡಿಗ್ರಿಗೆ ಯೇವ ಸಬ್ಜೆಕ್ಟ್ ತೆಕ್ಕೋಳ್ತೆ ಸುರೀ…”?
“ಆನು ಡಿಗ್ರಿಗೆ ಹೋವುತ್ತ ಅಂದಾಜು ಇಲ್ಲೆ ಅಪ್ಪಾಂ. ಕಾಲೇಜು ಜೀವನ ಹೇಳಿರೆ ಎಂತರ ಹೇಳಿ ನೋಡುವ ಒಂದು ಕುತೂಹಲ ಇತ್ತಿದ್ದು. ಅದಕ್ಕೆ ಬೇಕಾಗಿಯೇ ಆನು ಪಿ.ಯೂ.ಸಿ ಗೆ ಹೋದ್ದದು. ಅದು ಆತನ್ನೇ? ಇನ್ನು ಎನಗೆ ಅದರಲ್ಲಿ ಆಸಕ್ತಿ ಇಲ್ಲೆ. ಎಂತಕೆ ಹೇಳಿದ್ರೆ ಎನಗೆ ಭರತನಾಟ್ಯಲ್ಲಿ ವಿದ್ವತ್ತ್ ಮಾಡೇಕು ಹೇಳಿ ಆಶೆ ಇದ್ದು. ಈಗಾಗಲೇ ಆನು ಭರತನಾಟ್ಯಲ್ಲಿ ಸೀನಿಯರ್ ಪರೀಕ್ಷೆ ಪಾಸಾಯಿದೆ ಅಲ್ದೋ? ಅದು ಡಿಗ್ರಿಗೆ ಸಮಾನವೇ… ವಿದ್ವತ್ತ್ ಪರೀಕ್ಷೆಗೆ ತಕ್ಕ ಕಲಿಶೇಕಾರೆ ಈಗಾಣ ಎನ್ನ ಡ್ಯಾನ್ಸು ಟೀಚರು ಸಾಲ. ಅಂಬಗ ಇಲ್ಲ್ಯಾಣ ಎನ್ನ ಕಮಲಾ ಟೀಚರ ಗುರು ವತ್ಸಲಾ ರಂಗರಾಜನ್ ಹೇಳಿ ಬೆಂಗ್ಳೂರಿಲ್ಲಿ ಇದ್ದಾಡ. ಅಲ್ಲಿ ಆ ಹೆಮ್ಮಕ್ಕಳದ್ದು `ಲಾಸ್ಯ ನೃತ್ಯ ಕಲಾ ಶಾಲೆ’ ಹೇಳ್ತ ಸಂಸ್ಥೆ ಇದ್ದಾಡ. ಅಲ್ಲಿ ಅದು ಕೆಲವೇ ಕೆಲವು ಒಳ್ಳೆ ವಿದ್ಯಾರ್ಥಿಗಳ ಮಾಂತ್ರ ತೆಕ್ಕೋಂಬದು, ಅದರ ಮನೆಯ ಹತ್ರೆಯೇ ಪಿ.ಜಿ. (ಪೇಯಿಂಗ್ ಗೆಸ್ಟ್) ಸೌಕರ್ಯವೂ ಇಪ್ಪದು, ವಾರಲ್ಲಿ ಮೂರು ಕ್ಲಾಸು ಇಪ್ಪದು… ಈ ಎಲ್ಲ ವಿವರವ ಕಮಲಾ ಟೀಚರೇ ಎನ್ನತ್ರೆ ಹೇಳಿದ್ದು. ಕ್ಲಾಸು ಇಪ್ಪಾಗ ಮಾಂತ್ರ ಅಲ್ಲಿ ನಿಂದ್ರಾತು. ಅದು ಹೇಳಿ ಕೊಟ್ಟದ್ರ ವಿಡಿಯೋ ರೆಕಾರ್ಡ್ ಮಾಡಿಯೊಂಡು ಬಂದು ಮುಂದಾಣ ಕ್ಲಾಸಿಂಗಪ್ಪಗ ಗಟ್ಟಿ ಮಾಡಿಯೊಂಡು ಹೋಯೇಕು. ಸಂಶಯ ಇದ್ರೆ ಆನ್ ಲೈನಿಲ್ಲಿ ಅದು ಸಂಪರ್ಕಕ್ಕೆ ಸಿಕ್ಕುತ್ತಾಡ. ನಿನ್ನೆ ಕಮಲಾ ಟೀಚರು ಹೇಳಿತ್ತು, ಆದಷ್ಟು ಬೇಗ ಹೋಗಿ ಸೇರಿಗೊಂಬದು ಒಳ್ಳೇದು ಹೇಳಿ… ನಿಂಗೊ ಒಂದು ಒಳ್ಳೆ ದಿನ ನೋಡಿ ಹೇಳಿ ಅಪ್ಪಾಂ…, ಆನು ಟೀಚರೊಟ್ಟಿಂಗೆ ಹೋಗಿ ಸೇರಿಕ್ಕಿ ಬತ್ತೆ. ಮತ್ತೆ ಕ್ಲಾಸು ಸುರುವಾವ್ತ ಮೊದಲು ನಾವೆಲ್ಲರೂ ಒಂದ್ಸರ್ತಿ ಹೋಗಿಯೊಂಡು ಬಪ್ಪೋಂ… ಆಗದೋ ಅಪ್ಪಾಂ…?”
“ಓ..,ನೀನು ಇಷ್ಟೆಲ್ಲಾ ವಿಷಯ ಸಂಗ್ರಹ ಮಾಡಿ ತೀರ್ಮಾನ ಮಾಡಿಯೂ ಆಯಿದೋ ಹಂಗಾರೆ…?” ಹರಿಣಿ ಕೇಳಿತ್ತು.
“ಇದಾ ಅಬ್ಬೇ, ಹೀಂಗಿರ್ತ ವಿಷಯ ಎಲ್ಲ ತಡವು ಮಾಡಿಯೊಂಡು ಕೂದ್ರೆ ಆಗ…,ನೀನು ಟಿ.ವಿ.ಲಿ ವತ್ಸಲಾ ರಂಗರಾಜನ್ ಕಾರ್ಯಕ್ರಮ ಕೊಡ್ತದ್ರ ನೋಡಿದ್ದಿಲ್ಯೋ…ಪ್ರೈಮ್ ಟೈಮಿಲ್ಲೇ ಹಾಕುತ್ತವದ ಅದರ ಕಾರ್ಯಕ್ರಮವ…ಅಷ್ಟೂದೆ ಫೇಮಸ್ ಅದು…,ಮೊನ್ನೆ ಆಸ್ಟ್ರೇಲಿಯಾದ ರಾಯಭಾರಿ ನಮ್ಮ ದೇಶಕ್ಕೆ ಬಂದಿಪ್ಪಗ ನಮ್ಮ ರಾಷ್ಟ್ರಪತಿ ಅವಕ್ಕೆ ಕೊಟ್ಟ ಔತಣಕೂಟದ ದಿನ ಇದೇ ಹೆಂಗಸಿನ ಡ್ಯಾನ್ಸು ಇತ್ತಾಡ. ಅಷ್ಟು ಮಾಂತ್ರ ಅಲ್ಲ ಭೋಜನ ಕೂಟದ ವಿಷೇಶ ಆಮಂತ್ರಿತರಲ್ಲಿ ಈ ಹೆಮ್ಮಕ್ಕಳೂ ಇತ್ತಿದ್ದಾಡ…,ಅಷ್ಟು ದೊಡ್ಡ ನಾಟ್ಯ ಗುರುವಿನ ಶಾಲೆಲಿ ಎನಗೆ ಸೀಟು ಸಿಕ್ಕಿದ್ದು ಎನ್ನ ಪುಣ್ಯ ಹೇಳಿಯೇ ಹೇಳೇಕು…”
“ಹೇಂ…? ನೀನೀಗ ಅಲ್ಲಿ ಸೇರಿಯೂ ಆತೋ…ಎಂಗೋಗೆ ಗೊಂತೇ ಆಯಿದಿಲ್ಲೆ…?” ಇಬ್ರೂ ಒಟ್ಟಿಂಗೇ ಕೇಳಿದವು.
“ಸೇರಿದ್ದದು ಹೇಳಿದ್ರೆ ಆನ್ ಲೈನಿಲ್ಲಿ ಮಾತಾಡುವ ವ್ಯವಸ್ಥೆ ಮಾಡಿದ್ದದು ಎನ್ನ ಕಮಲಾ ಟೀಚರು. ವತ್ಸಲಾ ಮೇಡಂ ಸುಮಾರು ಒಂದು ಘಂಟೆ ಹೊತ್ತು ಎನ್ನತ್ರೆ ಪ್ರಶ್ನೆ ಕೇಳಿತ್ತಿದ್ದವು. ಎಲ್ಲದಕ್ಕೂ ಆನು ಸರಿಯಾಗಿಯೇ ಉತ್ತರ ಹೇಳಿದ್ದೆ. ಎನ್ನ ಡ್ಯಾನ್ಸುಗಳ ಸಿ.ಡಿ. ಕಳ್ಸು ಹೇಳಿತ್ತಿದ್ದವು…, ಕಳುದ ವಾರ ಕಳ್ಸಿತ್ತಿದ್ದೆ. ಟೀಚರು ಹೇಳಿತ್ತು, ಅವಕ್ಕೆ ಎನ್ನ ಖುಷಿಯಾಗದಿರುತ್ತಿದ್ರೆ ಸಿ.ಡಿ.ಕಳ್ಸಲೆ ಹೇಳ್ತಿತವಿಲ್ಲೆ ಹೇಳಿ…,ಅವರ ಸೆಕ್ರೆಟ್ರಿ ಒಂದು ವಾರಂದೊಳ ಬಂದು ಮೇಡಮ್ಮಿನ ಕಾಣೇಕು ಹೇಳಿ ಆಗ ಎನಗೆ ಮೇಲ್ ಮಾಡಿದ್ದು. ಹಾಂಗಾದ ಕಾರಣ ಎನಗೆ ಸೀಟು ಸಿಕ್ಕುತ್ತದು ಗ್ಯಾರೆಂಟಿ…ಇನ್ನು ಹೋಗಿ ಹೆಸರು ದಾಖಲು ಮಾಡಿ ಫೀಸು ಕಟ್ಟೀರೆ ಆತು. ಪಿ.ಜಿ.ಲಿಯೂ ರೂಮು ಈಗ ಖಾಲಿ ಇದ್ದಾಡ….”
ಹರಿಣಿ, ಮೋಹನ ಇಬ್ರೂ ಮೋರೆ ಮೋರೆ ನೋಡಿಗೊಂಡವು.
`ಮಗಳು ಎಲ್ಲವನ್ನೂ ಸ್ವಯಂ ನಿರ್ಧಾರ ಮಾಡಿ ಆಯಿದು… ಉಪಚಾರಕ್ಕೆ ಬೇಕಾಗಿ ಎಂಗಳ ಒಪ್ಪಿಗೆ ಕೇಳ್ತಾ ಇಪ್ಪದು…, ಈ ಹಂತಲ್ಲಿ ಎಂಗೊ ಎಂತಾರೂ ಹಾಂಗಲ್ಲ ಹೀಂಗೆ ಹೇಳಿರೂ ಬೆಲೆ ಸಿಕ್ಕ…., ಸುಮ್ಮನೇ ಅಡ್ಡ ಮಾತಾಡಿ ನಿಷ್ಟೂರ ಅಪ್ಪದ್ರಿಂದ ಚೆಂದಕೆ ಮಾತಾಡಿ ಅದರ ಪ್ರೋತ್ಸಾಹಿಸುತ್ತದೇ ಒಳ್ಳೇದು….ಹೇಂಗಾರೂ ಅದು ಬೇಡಂಕೆಟ್ಟದು ಮಾಡ್ತಲ್ಲನ್ನೇ… ಎಂಗೊ ಆದ್ರೂ ಎಂತ ಮಾಡ್ತಿತಿಯೋಂ…? ಊರೆಲ್ಲಾ ವಿಚಾರ್ಸಿ…ಹತ್ತಾರು ಜೆನಂಗೊಕ್ಕೆ ಫೋನು ಮಾಡಿ….ಬೆಂಗ್ಳೂರಿಂಗೆ ಹೋಗಿ…,ವಿಳಾಸ ಹುಡ್ಕಿ….ಮಾತಾಡಿ….ಎಲ್ಲ ಅಪ್ಪಗ ಒಂದು ಹದಿನೈದು ಬೆಕಾವುತಿತು ತೀಮರ್ಮಾನ ತೆಕ್ಕೊಂಬಲೆ….ಮಗಳಾದ್ರೂ ಮಾಡಿದ್ದು ಅದ್ರನ್ನೇ ಅಲ್ದೋ….ಮಾಂತ್ರ ಕಂಪ್ಯೂಟರು ಬುಡಲ್ಲಿ ಕೂದೊಂಡು ಕ್ಷಣಲ್ಲಿ ಎಲ್ಲವನ್ನೂ ಮುಗಿಶಿತ್ತದ….ಈಗಾಣ ಮಕ್ಕಳೇ ಹಾಂಗೆ ಪಾದರಸದಷ್ಟು ಚುರುಕು….,
`ವಾರಲ್ಲಿ ಎರಡು ಮೂರು ದಿನ ಅಷ್ಟೇ ಅಲ್ದೋ ಅದು ಎಂಗಳ ಬಿಟ್ಟು ಇಪ್ಪದು….ಸಾರ ಇಲ್ಲೆ…ಹೊಂದಿಯೊಂಡ್ರಾತು….’ ಹೇಳಿ ಯೋಚಿಸಿಯೋಂಡವು.
“ಹೋ…,ಸುರೀ…,ನಿನ್ನ ಜೀವನದ ನಿರ್ಧಾರ ನೀನೇ ತೆಕ್ಕೊಂಬಷ್ಟು ದೊಡ್ಡಾಯಿದೆ ಹೇಳಿ ಗೊಂತಾತದ…. ಜವಾಬ್ದಾರಿ ತಲೆಗೆ ತೆಕ್ಕೋಂಡಪ್ಪದ್ದೆ ಆತ್ಮವಿಶ್ವಾಸವೂ ಬತ್ತು ಹೇಳುವೋಂ….”ಮಾತಾಡಿಯೊಂಡೇ ಮೋಹನ ತಾರೀಖುಪಟ್ಟಿ ನೋಡಿ ಹೇಳಿದ,
“ಇನ್ನಾಣ ಗುರುವಾರ ಒಳ್ಳೆ ದಿನ…ಭರಣಿ ಕೃತ್ತಿಕೆಯೂ ಎಲ್ಲ ಕಳಿತ್ತು…,ಅಂದು ಹೋಗಿ ಸೇರ್ಲಕ್ಕು ಮಿನಿಯಾಂ…?”
“ಸುರೀ…,ಆನು ಬರೇಕೋ ನಿನ್ನೊಟ್ಟಿಂಗೆ….?” ಹರಿಣಿ ಕೇಳಿತ್ತು. ಅದಕ್ಕೆ ಈಗಳೂ ಮಗಳು ಹೇಳಿರೆ ಸಣ್ಣ ಕೂಸು ಹೇಳಿಯೇ ಲೆಕ್ಕ. ಅಷ್ಟು ದೊಡ್ಡ ಪಟ್ಟಣಲ್ಲಿ ಇದಕ್ಕೆ ಎಡಿಗೋಪ್ಪ ಹೇಳ್ತ ಸಂಶಯ, ಹೆದರಿಕೆ.
“ಬೇಡಬ್ಬೇ…ಎನ್ನ ಟೀಚರು ಇರ್ತನ್ನೇ ಒಟ್ಟಿಂಗೆ….,ಈಗ ಎಂಗೊ ಬಸ್ಸಿಲ್ಲಿ ಹೋಗಿ ಬತ್ತ್ಯೋಂ. ನಾವೆಲ್ಲರೂ ಒಟ್ಟಿಂಗೆ ಹೋಪಾಗ ಕಾರಿಲ್ಲಿ ಹೋಪೋಂ. ಎನಗೆ ನಾಡಿದ್ದು ಹೋಪಾಗ ರಜ್ಜ ಸಾಮಾನು ಆಯೇಕು…,ಹಂಗೆ ಆನೀಗ ಒಂದಾರಿ ಪೇಟಗೆ ಹೋಗಿ ಬತ್ತೆ”ಹೇಳಿಕ್ಕಿ ಮಾತು ಮುಗಿಶಿ ಪೇಟಗೆ ಹೆರಟತ್ತು.
ಮಗಳು ತನ್ನತ್ರೆ ಒಂದು ಮಾತನ್ನೂ ಹೇಳದ್ದೆ, ಕೇಳದ್ದೆ ಬೆಂಗ್ಳೂರಿಂಗೆ ಹೋಪ ತೀಮರ್ಾನ ಮಾಡಿಯೋಂಡದು ಹರಿಣಿಗೆ ಒಳ್ಳೇತ ಕಿರಿ ಕಿರಿ ಆತು. ಆಣಿ ಇಪ್ಪ ಕಾಲು ಕಲ್ಲಿಂಗೆ ಒತ್ತಿದ ಹಾಂಗೆ. ಅಂದ್ರೂ ತೋಸರ್ಿಯೋಂಡಿದಿಲ್ಲೆ. ಕಾಲಕ್ಕೆ ತಕ್ಕ ಕೋಲವೂ ಬೇಕನ್ನೇ? ಹೇಳಿಯೋಂಡತ್ತು.
ಸುರಭಿಯ ಮೋರೆಪುಟದ ಜೆಗುಲಿಲಿ(ಫೇಸ್ ಬುಕ್ಕಿನ ವಾಲ್) ಹರಿಣಿಯೂ ಇದ್ದು. ಹಾಂಗಾದ ಕಾರಣ ಸುರಭಿ ಅಲ್ಲಿ ಹಾಕುತ್ತ ಪಟಂಗೊಕ್ಕೆ ಬಪ್ಪ ಲೈಕುಗೊ, ಮೆಚ್ಚುಗೆ ನುಡಿಗೊ ಇತ್ಯಾದಿಗಳೆಲ್ಲ ಹರಿಣಿಗೂ ನೋಡ್ಲೆ ಎಡಿತ್ತು. ಹಾಂಗೆ ಒಂದು ದಿನ ಮಗಳ ಜೆಗಿಲಿಲಿ ತಿರಿಗೇಂಡಿಪ್ಪಾಗ ಒಂದು ಪಟದತ್ರೆ ಹರಿಣಿಯ ಕಣ್ಣು ನಿಂದತ್ತು. ಶ್ರೀ ಕೃಷ್ಣ ಪಾರಿಜಾತದ ಒಂದು ಪ್ರಸಂಗವ ಸುರಭಿ ಆಭಿನಯಿಸಿ ತೋರ್ಸುತ್ತ ಅತಿ ಚೆಂದದ ಪಟ ಅದು. ಹರಿಣಿಗೆ ಮಗಳು ಆ ದೃಶ್ಯವ ಅಭಿನಯಿಸಿ ತೋರ್ಸುವಾಗ ನೋಡ್ಲೆ ನೂರು ಕಣ್ಣಾದ್ರೂ ಬೇಕು ಹೇಳಿ ಕಾಂಬಲಿದ್ದು, ಅಷ್ಟು ಮನೋಜ್ಞ ಅದರ ನೃತ್ಯಾಭಿನಯ. ಆ ಪಟಕ್ಕೆ ಸಾವಿರಾರು ಲೈಕುಗೊ, ನೂರಾರು ಮೆಚ್ಚಿಗೆಯ ನುಡಿಗೊ ಬಂದದು ಕಂಡತ್ತು. ಹೆಮ್ಮೆಂದ ಪ್ರತಿಯೊಂದು ಮೆಚ್ಚುಗೆಯ ನುಡಿಗಳನ್ನೂ ಓದುತ್ತಾ ಹೋತು.
ಒಬ್ಬ ಮಾಣಿ (ಅದರ ಅಭಿಮಾನಿಯೇ ಆದಿಕ್ಕು) ಬರೆದ ಆ ಶಬ್ದಂಗಳ ಮತ್ತೆ ಮತ್ತೆ ಓದಿತ್ತು. ದೊಂಡೆಲಿ ಎಂತದೋ ಸಿಕ್ಕಿ ಹಾಕಿಯೋಂಡ ಹಾಂಗಾತು. ಪುನಃ ಓದಿತ್ತು. ಛೇ..,ಇದೆಂತ ಇಂವ ಹೀಂಗೆ ಬರದ್ದದು..? ಆ ಬರೆಹಕ್ಕೆ ಸುರಭಿ ಎಂತಾರೂ ಪ್ರತ್ತ್ಯುತ್ತರ ಕೊಟ್ಟಿದೋ ಹೇಳಿ ಹುಡ್ಕಿ ನೋಡಿತ್ತು. ಬೇರೆ ನೂರಾರು ಜೆನಂಗೊ ಬರೆದ ಮೆಚ್ಚುಗೆ ಮಾತುಗೊಕ್ಕೆ ಅದು ಉತ್ತರ್ಸುವ ಗೋಜಿಗೇ ಹೋಗಿತ್ತಿದ್ದಿಲ್ಲೆ. ಆದರೆ ಆ ಹುಡುಗನ ಮಾತಿಂಗೆ ಅದೇ ಧ್ವನಿಲಿ ಅದಕ್ಕೆ ಪೂರಕವಾಗಿಯೇ ಉತ್ತರ್ಸಿತ್ತಿದ್ದು. ಒಂದು ಸ್ತ್ರೀಯ ಆರಾಧಿಸುವ ಪುರುಷ ಹೇಂಗೆ ಮಾತಾಡುಗೋ ಆ ರೀತೀಲಿತ್ತಿದ್ದು ಅಂವನ ಬರೆಹ. ಅಂವ ನೃತ್ಯ ಕಲಾವಿದೆಯ ಆರಾಧಕ ಅಲ್ಲ. ಸುರಭಿಯ ಆರಾಧಕ ಹೇಳ್ತದು ಹರಿಣಿಗೆ ಗೊಂತಾತು. ಸುರಭಿಗೂ ಅದು ಇಷ್ಟವೇ ಇದ್ದು ಹೇಳ್ತದು ಅದರ ಬರೆಹಲ್ಲಿಯೂ ಸ್ಪಷ್ಟವಾಗಿ ಕಂಡೊಂಡಿತ್ತಿದ್ದು. ಮುಂದೆ ಯೇವ ಪಟವನ್ನೂ ನೋಡ್ತದು ಬೇಡ ಕಂಡತ್ತು ಹರಿಣಿಗೆ. ಕಂಪ್ಯೂಟರು ಮುಚ್ಚಿ ಮಡುಗಿ ಕಣ್ಣು ಮುಚ್ಚಿ ಕೂದತ್ತು. ತಲೆಯೊಳ, ಎದೆಯೊಳ ಬತ್ತ ಮೆರಿವಲೆ ಸುರುವಾತದ…ಎಷ್ಟು ಹೊತ್ತು ಹಾಂಗೆ ಕೂಯಿದೋ ದೇವರೇ ಬಲ್ಲ.
“ಹರಿಣೀ…ಹರಿಣೀ…,ಇದೆಂತ ಮಾರಾಯ್ತಿ ಬಾಗಿಲೆಲ್ಲ ತೆಗದು ಹಾಕಿಯೊಂಡೇ ಇದ್ದು…? ಮಗಳು ಎಲ್ಲಿದ್ದು? ಇಲ್ಲಿ ಎಂತಕೆ ಹೀಂಗೆ ಮನುಗಿದ್ದದು…? ಎಂತ ನಿನ್ನ ಮೋರೆ ಚೆಪ್ಪೆ? ಸೊಂಟ ಬೇನೆ ಸುರುವಾಯಿದೋ..?” ಮೋಹನ ಒಂದೇ ಪೆಟ್ಟಿಂಗೆ ಸುಮಾರು ಪ್ರಶ್ನೆ ಹಾಕಿದ. ಯೇವಾಗಳೂ ಮೋಹನ ಕೆಲಸ ಮುಗುಶಿಕ್ಕಿ ಬಪ್ಪಾಗ ಬೆಶಿ ಬೆಶಿ ತಿಂಡಿ ಕಾಪಿ ತಾಯಾರಿಕ್ಕು. ಇಂದು ಅಂವ ಒಳ ಬಂದು, ಕೈಕ್ಕಾಲು ತೊಳದು, ಊಟದ ಕೋಣೆಗೆ ಬಪ್ಪಾಗಳೂ ಹರಿಣಿಯ ಶುದ್ದಿಯೇ ಇಲ್ಲೆ. ಹುಡ್ಕೇಂಡು ಆಪೀಸು ರೂಮಿಂಗೆ ಬಂದಂ. ಅಲ್ಲಿ ಕಂಪ್ಯೂಟರು ಮೇಜಿನ ಮೇಲೆ ತಲೆ ಮಡುಗಿ ಮನುಗಿದ ಹೆಂಡತ್ತಿಯ ನೋಡಿ ಅಂವಂಗೆ ರಜಾ ಬೇಜಾರಾತು.
“ಓ, ಬಾಗಿಲು ತೆಗದು ಹಾಕಿಯೊಂಡಿತ್ತಿದ್ದೋ…? ಮಗಳು ಟೀಚರ ಮನೆಗೆ ಹೋವುತ್ತೆ ಹೇಳಿತ್ತಿದ್ದು. ಎನಗೆ ಇಲ್ಲಿ ಕೂದೋಳಿಂಗೆ ಹಾಂಗೇ ಕಣ್ಣಡ್ಡಾತದ. ಅದು ಹೋದ್ದೇ ಗೊಂತಾಯಿದಿಲ್ಲೆ…, ಪ್ರಾಯ ಆತಲ್ದೋ ಹೇಳಿ…ಕಂಪ್ಯೂಟರು ಹೆಚ್ಚೊತ್ತ ನೋಡೀರೆ ಕಣ್ಣು ಬೇನೆ ಅಪ್ಪಲೆ ಸುರುವಾಯಿದೀಗ….ಸೊಂಟಬೇನೆ ಎಲ್ಲ ಎಂತ ಇಲ್ಲೆ…ಬನ್ನಿ ಕಾಪಿ ಕುಡಿವೋಂ….” ಹೇಳಿಯೊಂಡೇ ಹರಿಣಿ ಒಳ ಹೋತು.
(ಇನ್ನೂ ಇದ್ದು)
ಎನಗೆ ಎರಡು ದಿನಂದ ಬೈಲಿಂಗೆ ಬಪ್ಪಲಾಯಿದಿಲ್ಲೆ . ಬೊಳುಂಬು ಅಣ್ಣ, ನಿಂಗಳ ಅಭಿಪ್ರಾಯ ಈಗ ನೋಡಿದೆಯಷ್ಟೆ. ನಿಂಗಳ ಕಾಳಜಿಗೆ ಧನ್ಯವಾದಂಗೊ.
ಸುರಭಿಯ ಆರಾಧಕ ವ್ಯಕ್ತಿ ಆರಾರು ನಮ್ಮವೇ ಆಗಿಕ್ಕು ಹೇಳಿ ಗ್ರೇಶುವೊ. ಸುರಭಿಗೆ ವಿದ್ವತ್ತಿನೊಟ್ಟಿಂಗೆ ಒಂದು ಡಿಗ್ರೀಯುದೆ ಮಾಡಿಕ್ಕಲಾವ್ತಿತು.
ಅಕ್ಕಾ, ಕತೆ ಮನ್ನೆಯೇ ಓದಿತ್ತಿದ್ದೆ. ಕತೆಗೆ ಒಪ್ಪ ಕೊಡ್ಳೆ ಸಮಯ ಈಗ ಕೂಡಿ ಬಂತಷ್ಟೆ.
ಹರೇರಾಮ ಶೀಲ, ಹರಿಣಿಯ ಮಗಳು ಟೀಚರ ಮನಗೆ ಹೋದೋಳು ಇನ್ನು ಎಲ್ಲಿಗೆಲ್ಲಾ ಹೋಗೆಂಡು ಬತ್ತೋ!!!.