ಪ್ರತಿ ಘಟನೆಗೂ ಒಂದು ಪ್ರತಿಕ್ರಿಯೆ ಇದ್ದೇ ಇರ್ತು – ಹೇದು ಹಳಬ್ಬರು ಹೇಳಿಗೊಂಡು ಇತ್ತಿದ್ದವು.
ಕೆಲವು ಜೆನ ಅದರ ಕರ್ಮ ಹೇದವು, ಮತ್ತೆ ಕೆಲವು ಅದರ ನ್ಯೂಟನ್ನನ ನಿಯಮ ಹೇದವು – ಎಂತದೇ ಆದರೂ ಕೊಟ್ಟದಕ್ಕೆ ಸರಿಯಾದ್ದು ಪುನಾ ಸಿಕ್ಕದ್ದೆ ಇತ್ತಿಲ್ಲೆ.
ಅದೇ ಪ್ರಕಾರ, ಕಳುದ ವಾರ ಆದ ಒಂದು ಘಟನೆಗೂ ಈ ವಾರ ಉತ್ತರ ಸಿಕ್ಕಿ ಮೇಲಾಣ ಮಾತಿನ ಸರಿ ಮಾಡುಸಿದವು. ಗೊಂತಾಯಿದೋ.
~
ಕಳುದವಾರ ಉರಿ ಹೇಳ್ತಲ್ಲಿ ಹೊತ್ತಿದ ಉರಿಯ ಸಂಗತಿ ಬಗ್ಗೆ ನಾವು ಮಾತಾಡಿದ್ದು ಅಲ್ದೋ.
ಈ ವಾರ ಅದಕ್ಕೆ ಉತ್ತರದ ಉರಿ ಬಿಟ್ಟಿದಡ ನಮ್ಮ ಮೋದಿ ಅಜ್ಜ°.
ಅದುವೇ ಈ ವಾರದ ಗೌಜಿಯ ಶುದ್ದಿ.
ಪಾತಕಿಸ್ತಾನದವು ಕದ್ದು ತೆಕ್ಕೊಂಡ ಕಾಶ್ಮೀರದ ಹೊಡೆಲಿ ಕೂದ ಕಳ್ಳಂಗೊ ಉಪಾಯಲ್ಲಿ ಬಂದು ಕಲ್ಲಿಡ್ಕಿಕ್ಕಿ ಹೋವುಸ್ಸು ನವಗೆ ಗೊಂತಿಪ್ಪದೇ.
ಮೊನ್ನೆಯೂ ಹಾಂಗೇ ಆತು. ನೆಡಿರುಳು ಅಲ್ಲಿಂದ ಹೆರಟ ಪಾತಕಿಗೊ ನಿಧಾನಕ್ಕೆ ಹೆರಟು ಸೀತ ನಮ್ಮ ಊರೊಳ ಬಂದು ಸೇನಾನೆಲೆಲಿ ಉರಿ ಹೊತ್ತುಸಿದವು ಅಪ್ಪೋ.
ಅದಕ್ಕೆ ಅಲ್ಯಾಣ ಸೈನಿಕರ ಹತ್ರೆ ಕೇಳುವಾಗ – “ಎಂಗೊ ಅಲ್ಲನ್ನೆ, ಎಂಗೊ ಎಂತೂ ಮಾಡ್ಳೆಡಿಯಾ” – ಹೇದು ಕೈತೊಳಕ್ಕೊಂಡವಾಡ.
ಆ ಪ್ರಕಾರ, ಈ ಸರ್ತಿ ಮಾಡ್ತೆ ನಿನಗೆ ಬಗೆ – ಹೇದು ನಮ್ಮ ಸರಕಾರ ಅಂದೇ ಆಲೋಚನೆ ಮಾಡಿದ್ದತ್ತು ಕಾಣ್ತು. ಆರತ್ರೂ ಎಂತ್ಸೂ ಹೇಳಿತ್ತಿದ್ದವಿಲ್ಲೆ.
ಆದರೆ, ಇಂದು ಎಲ್ಲೋರ ಎದುರು ಬಂದು ಹೇಳುವಾಗಳೇ ಗೊಂತಾದ್ದು – ಹೋ, ಮಾಡಿದ ಉಪಾಯ ಅಪ್ಪಾದ್ದೇ ಹೇದು.
ನಿನ್ನೆ ಇರುಳು ನೆಡದತ್ತಾಡ ಉಪಾಯದ ಯುದ್ಧ.
ಹೇಂಗೆ?
~
ನಿಂಗೊಗೆ ಡಾಗುಟ್ರು ಓಪ್ರೇಶನು ಮಾಡ್ಸು ಗೊಂತಿದ್ದಲ್ಲದೋ?
ಎಲ್ಲಿ ಗಾಯವೋ, ಅಲ್ಲಿಗೆ ಮಾಂತ್ರ ಸೂಜಿ ಇಳುಸಿ, ಅಲ್ಯಾಣ ವ್ರಣವ ತೆಗವ ಓಪ್ರೇಶನು. ಒಳುದ ಭಾಗಕ್ಕೆ ಗೊಂತೇ ಆವುತ್ತಿಲ್ಲೆ.
ಹಾಂಗಿಪ್ಪ ಕಾರ್ಯಕ್ಕೆ ಸರ್ಜಿಕಲ್ ಆಪರೇಶನ್ ಹೇಳ್ತದಾಡ.
ಆ ನಮುನೆದೇ ಇಂದು ನೆಡದತ್ತು ಅಡ.
ಪಾತಕಿಸ್ತಾನದ ವಶಲ್ಲಿಪ್ಪ ಕಾಶ್ಮೀರಲ್ಲಿ ಹುಗ್ಗಿ ಕೂದೊಗೊಂಡು ಬಿರಿಯಾನಿ ತಿಂತಾ ಇದ್ದಿದ್ದ ಜಾಗೆಗೆ ಸೀತ ಹೋಗಿ ಬೋಂಬು ಬೋಂಬು ಬೋಂಬು ಬೋಂಬು – ಹೇದು ಇಡ್ಕಿಕ್ಕಿ, ಎಲ್ಲ ಹೊಟ್ಟುಸಿ-ಹೊತ್ತುಸಿ ಗೌಜಿ ಮಾಡಿಕ್ಕಿ ಬಂತಡ ಭಾರತೀಯ ಸೇನೆ.
ಇದರಿಂದಾಗಿ ಅಲ್ಲಿ ಸ್ವರ್ಗದ ಹಾಂಗೆ ಹುಗ್ಗಿ ಕೂದ ಹಂದಿಗೊ ಸೀದ ಅವರ ಸ್ವರ್ಗಕ್ಕೇ ಹೋದವಾಡ.
ಅವು ಸಾವಲೆ ಬೇಕಾಗಿ ಭಾರತಕ್ಕೆ ಬರೆಕ್ಕು ಹೇದು ಏನಿಲ್ಲೆ, ಅವು ಇದ್ದಲ್ಲಿಗೇ ಸಾವಿನ ಪಾರ್ಸೆಲ್ ಮಾಡಿತ್ತು ಭಾರತೀಯ ಸೇನೆ.
~
ಅಷ್ಟೂ ಅಲ್ಲದ್ದೇ – ಮೊನ್ನೆವರೇಗೆ ಭಾರತ ದೇಶ ಅಮಾಸೆ ನಮುನೆ ಮೋಡಲ್ಲಿ ಇದ್ದತ್ತಪ್ಪೋ – ಅವು ಗೌಜಿಯ ಹಬ್ಬ ಮಾಡಿಗೊಂಡು ಇತ್ತಿದ್ದವು.
ಈಗ? – ನವಗೆ ನವರಾತ್ರಿ, ಅವಕ್ಕೆ ಅಮವಾಸ್ಯೆ ಸುರು ಆತು.
ಬೇಕೋ ಆಟ?
~
ನವಗೆ ಕೊಟ್ಟ ಕಷ್ಟ ಅವಕ್ಕೂ ಬಂದೇ ಬತ್ತು, ಇಂದಲ್ಲದ್ದರೆ ಒಂದಲ್ಲ ಒಂದು ದಿನ.
ನವರಾತ್ರಿಯ ದೀಪವೋ, ದೀಪಾವಳಿಯ ಪಟಾಕಿಯೋ – ಅಂತೂ ಅದೊಂದು ಗೌಜಿ ಅಪ್ಪೇ ಅಪ್ಪು ನಮ್ಮ ಹೊಡೇಂಗೆ.
~
ಅಭೂತಪೂರ್ವ ಯಶಸ್ಸಿನ ನಾವು ಅಭಿನಂದಿಸುವೊ°.
ಪಾತಕಿಗಳ ಹಾಂಕಾರವ ಅವರ ಊರಿಲೇ ಜೆಪ್ಪಿರೆ ಅದಕ್ಕೊಂದು ಗೌಜಿ ಇರ್ತು. ನಾಯಿಯ ಮನೆ ಜಾಲಿಲೇ ನಾಯಿಗೆ ಬಡುದ ಹಾಂಗೆ.
~
ಅವರ ದೇಶವೇ ಒಂದು ಯಮಾಲಯ ಆಯಿದು.
ಅಲ್ಲಿ ಅಮವಾಸ್ಯೆಯ ಸಂಭ್ರಮ ಆದರೆ,
ನಮ್ಮ ಕಾಶ್ಮೀರದ ಹಿಮಾಲಯಲ್ಲಿ ಗೌಜಿಯ ನವರಾತ್ರಿ ಸಂಭ್ರಮ ಸುರು ಆತು.
ದೇಶಕಾವ ಭಾರತ ಮಾತೆ ಭದ್ರಕಾಳಿಯಾಗಿ ನವರಾತ್ರಿಲಿ ಎಲ್ಲೋರಿಂಗೂ ಒಳ್ಳೆದು ಮಾಡ್ಳಿ.
~
ಒಂದೊಪ್ಪ: ಹಿಮಾಲಯಲ್ಲಿ ಮಹಾಲಯ ಕಳುದು ನವರಾತ್ರಿ ಬಂತು. ಯಮಾಲಯಲ್ಲಿ ಮಹಾಲಯ. cheap air max 90 uk
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಸಕಾಲಿಕ ಸುದ್ದಿಯೂ ಅಪ್ಪು. ಸಂತೋಷದ ಸುದ್ದಿಯೂ ಅಪ್ಪು. ಅದು ಬರಿಯ ಕೆಡಂದೇಲು ಅಲ್ಲ…ಮಂಡೇಲಿ ಜಾತಿಯವು….
ಕಡಂದಲಿನ ಗೂಡಿಂಗೆ ಇರುಳು ಕಿಚ್ಚು ಕೊಡ್ತ ಹಾಂಗೆ ಇರುಳು ಅವರ ಹೊಡಿ ತೆಗದ್ದದು ಲಾಯಕಾಯಿದು. ಸಕಾಲಿಕ ಶುದ್ದಿಯುದೆ ಲಾಯಕಾಯಿದು.
ಹರೇ ರಾಮ, ಲಾಯಿಕ ಆಯ್ದು ಲೇಖನ 🙂
ಹರೇ ರಾಮ, ಸಾಂದರ್ಭಿಕ ಸಂತೋಷ ಶುದ್ದಿ. ಉಪಾಯದ ಯುದ್ಧ ಫಲ ಕೊಟ್ಟತ್ತು.
ಒಳ್ಳೇದು. ಯಾರೋ ಬರೆದ್ದವು ಹನುಮಂತ ಸುರು ಸರ್ಜಿಕಲ್ ಒಪರೇಷನ್ ಮಾಡಿದವ ಹೇಳಿ.ಅವ ಮಾಡಿದಷ್ಟು ದೊಡ್ಡಕ್ಕೆ ಅಲ್ಲದ್ದರೂ ಸಣ್ಣಕೆ ಮಾಡಿದ್ದು ಒಳ್ಳೆ ಸಂದೇಶ ಕೊಟ್ಟತ್ತು