Oppanna.com

ಗೆಂದೆಯ ನೊರೆಹಾಲು- (ಹವ್ಯಕ ಕವನ)

ಬರದೋರು :   ವಿಜಯತ್ತೆ    on   30/11/2016    6 ಒಪ್ಪಂಗೊ

ಗೆಂದೆಯ ನೊರೆಹಾಲು-(ಹವ್ಯಕ ಕವನ)

ಕ್ಷೀರಾಸ್ವಾದನೆ

ಮಲೆನಾಡ ಗೆಂದೆ ದನ ಹಟ್ಟಿಲಿಪ್ಪಾಗ|
ನೋಡೆಕ್ಕದರ ಎನ್ನಬ್ಬೆ ಕಂಜಿ ಬಿಡುವಾಗ||
ಜಿಗಿಜಿಗಿದು ಓಡಿಯೊಂಡು ಬಂದಬ್ಬೆ ಹತ್ರಂಗೆ|
ಹಾಕಿತ್ತದರ ಪುಟ್ಟುಬಾಯಿ ಅಬ್ಬೆ ಕೆಚ್ಚಲಿಂಗೆ||೧||

ಗುದ್ದಿಯೊಂಡು ಎಳದೆಳದು ಸೊರೆಶಿತ್ತು ಹಾಲು|
ಕರದತ್ತೆನ್ನಬ್ಬೆ ಎರಡು ಮಲೆ  ಪಾಲು||
ದೊಡ್ಡಚೆಂಬು ತುಂಬ ನೊರೆಹಾಲು ತುಂಬಿತ್ತು|
ಬೆಶಿಹಾಲು ಕುಡಿವಾಶೆ ಎನ್ನೊಳಾಂದ ಬಂತು||೨||

ನೋಡಿತ್ತಬ್ಬೆ ಎನ್ನ ಮೋರೆ,ಹೇಳಿತ್ತೆನಗೆ|
ಒಂದಿಷ್ಟು ಸುರಿತ್ತೆ ಒಡೆ ದೊಡ್ಡ ಬಾಯಿ||
ಕುಡಿಶಿಕ್ಕಿ ಹೇಳಿತ್ತಬ್ಬೆ ಎನ್ನ ಕೆಮಿಲಿ|
ನೋಡು, ನಿನ್ನಾ ಹೊಟ್ಟೆ ಬೇನೆ ನಾಳೆ ಖಾಲಿ||೩||

ಹೊಟ್ಟೆಬೇನೆ ಕಮ್ಮಿಯಾತು ರಜ ಹೊತ್ತಿಲ್ಲಿ|
ಅಂದಿರುಳು ಬಂತು ಒಳ್ಳೇತ ಒರಕ್ಕಲ್ಲಿ||
ರಕ್ತ  ಭೇದಿಗೆ  ಹಿಡುದತ್ತದ ಅಬ್ಬೆಯ ಸೂತ್ರ|
ಇದಕ್ಕೆ ನಮ್ಮ ಗೆಂದೆ ದನದ್ದೆ ದೊಡ್ಡ ಪಾತ್ರ||೪||

——-೦——-

ಫೋಟೋ: ಅಂತರ್ಜಾಲಂದ

6 thoughts on “ಗೆಂದೆಯ ನೊರೆಹಾಲು- (ಹವ್ಯಕ ಕವನ)

  1. ದನ ಕಂಜಿಯ ಪಟ ಹಾಕಿ ಸೆಟ್ ಮಾಡಿದ ಶರ್ಮಭಾವಂಗೂ ಒಪ್ಪಕೊಟ್ಟ ಏತಡ್ಕ ನರಸಿಂಹಣ್ಣಂಗೂ ಧನ್ಯವಾದಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×